ETV Bharat / sports

ಪ್ಯಾರಿಸ್​ ಒಲಿಂಪಿಕ್ಸ್​: 13ನೇ ದಿನದ ಭಾರತದ ವೇಳಾಪಟ್ಟಿ; ಇಂದು ಚಿನ್ನದ ಹುಡುಗ ನೀರಜ್​ ಚೋಪ್ರಾ ಆಟ - PARIS OLYMPICS DAY 13 SCHEDULE

author img

By ETV Bharat Sports Team

Published : Aug 7, 2024, 8:02 PM IST

Updated : Aug 8, 2024, 12:01 AM IST

August 8, India Olympics Schedule: ಪ್ಯಾರಿಸ್​ ಒಲಿಂಪಿಕ್ಸ್​ನ 13ನೇ ದಿನವಾದ ಇಂದು ಭಾರತಕ್ಕೆ ಎರಡು ಪದಕ ಪಂದ್ಯಗಳಿವೆ. ಪುರುಷರ ಜಾವೆಲಿನ್​ ಥ್ರೋ ಫೈನಲ್‌ನಲ್ಲಿ ನೀರಜ್​ ಚೋಪ್ರಾ ಚಿನ್ನಕ್ಕೆ ಗುರಿ ಇಡಲಿದ್ದು, ಹಾಕಿ ತಂಡ ಕಂಚಿನ ಪದಕಕ್ಕಾಗಿ ಸೆಣಸಲಿದೆ.

ಪ್ಯಾರಿಸ್​ ಒಲಿಂಪಿಕ್ಸ್​  2024
ಪ್ಯಾರಿಸ್​ ಒಲಿಂಪಿಕ್ಸ್​ 2024 (ETV Bharat)

ಹೈದರಾಬಾದ್​: ಪ್ಯಾರಿಸ್ ಒಲಿಂಪಿಕ್ಸ್‌ನ 2024ರ 13ನೇ ದಿನ ಭಾರತದ ಪಾಲಿಗೆ ಕರಾಳ ದಿನವಾಗಿತ್ತು. ಮಹಿಳೆಯರ 50 ಕೆ.ಜಿ ಕುಸ್ತಿ ಪಂದ್ಯದಲ್ಲಿ ಫೈನಲ್​ ತಲುಪಿದ್ದ ಸ್ಟಾರ್​ ಕುಸ್ತಿಪಟು ವಿನೇಶ್​ ಫೋಗಟ್​ ದೇಹ ತೂಕ ಹೆಚ್ಚಾದ ಕಾರಣ ಅಂತಿಮ ಸುತ್ತಿನಿಂದ ಅನರ್ಹಗೊಂಡಿದ್ದರು. ಇದರಿಂದ ಕುಸ್ತಿಯಲ್ಲಿ ಚಿನ್ನದ ನಿರೀಕ್ಷೆಯಲ್ಲಿದ್ದ ಭಾರತೀಯರ ಕನಸು ನುಚ್ಚುನೂರಾಯಿತು. ಆದರೆ 13ನೇ ದಿನವಾದ ಇಂದು ನೀರಜ್​ ಚೋಪ್ರಾ ಮತ್ತು ಭಾರತ ಹಾಕಿ ತಂಡದ ಮೇಲೆ ಪದಕ ನಿರೀಕ್ಷೆಗಳು ಗರಿಗೆದರಿವೆ.

ಭಾರತದ ಸ್ಪರ್ಧೆಗಳ ವೇಳಾಪಟ್ಟಿ:

ಗಾಲ್ಫ್​

ಮಹಿಳೆಯರ ಸಿಂಗಲ್ಸ್ ರೌಂಡ್-2 (ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್) - ಮಧ್ಯಾಹ್ನ 12:30ಕ್ಕೆ

ಗಾಲ್ಫ್ ಆಟಗಾರರಾದ ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ರೌಂಡ್-2 ಈವೆಂಟ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಇಬ್ಬರು ಪ್ರತಿಭಾವಂತ ಮಹಿಳಾ ಗಾಲ್ಫ್ ಆಟಗಾರರಿಂದ ಪ್ರಭಾವಶಾಲಿ ಪ್ರದರ್ಶನವನ್ನು ದೇಶ ಎದುರು ನೋಡುತ್ತಿದೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿ 4ನೇ ಸ್ಥಾನ ಗಳಿಸಿದ್ದ ಅದಿತಿ, ಈ ಬಾರಿ ಪ್ರಶಸ್ತಿಗೆ ಮುತ್ತಿಡಲಿ ಎನ್ನುವುದು ಕ್ರೀಡಾಭಿಮಾನಿಗಳ ಆಶಯ.

ಅಥ್ಲೆಟಿಕ್ಸ್:​

ಮಹಿಳೆಯರ 100 ಮೀಟರ್ ಹರ್ಡಲ್ಸ್​ ರಿಪೆಚೇಜ್​ ಸುತ್ತು (ಜ್ಯೋತಿ ಯರ್ರಾಜಿ) - ಮಧ್ಯಾಹ್ನ 02:05ಕ್ಕೆ

ಕುಸ್ತಿ

  • ಪುರುಷರ ಫ್ರೀಸ್ಟೈಲ್ A ಗುಂಪಿನ 57 ಕೆ.ಜಿ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯ (ಭಾರತ Vs ನಾರ್ತ್​ ಮ್ಯಾಸಿಡೋನಿಯಾ) - ಮಧ್ಯಾಹ್ನ 2:30ಕ್ಕೆ

A ಗುಂಪಿನ ಪುರುಷರ ಫ್ರೀಸ್ಟೈಲ್​ 57 ಕೆ.ಜಿ ವಿಭಾಗದ ಪ್ರೀ-ಕ್ವಾರ್ಟರ್​ ಫೈನಲ್​ ಕುಸ್ತಿ ಪಂದ್ಯದಲ್ಲಿ ಭಾರತದ ಅಮನ್​ ಅಮನ್​ ಮತ್ತು ಮ್ಯಾಸಿಡೋನಿಯಾದ ಎಗೊರೊವ್ ವ್ಲಾಡಿಮಿರ್ ನಡುವೆ ನಡೆಯಲಿದೆ.

  • ಮಹಿಳೆಯರ ಫ್ರೀಸ್ಟೈಲ್ B ಗುಂಪಿನ 57 ಕೆ.ಜಿ ಪ್ರಿ-ಕ್ವಾರ್ಟರ್ ಫೈನಲ್ ಪಂದ್ಯ (ಭಾರತ Vs ಯುಎಸ್​ಎ) - ಮಧ್ಯಾಹ್ನ 2:30ಕ್ಕೆ

B ಗುಂಪಿನ ಮಹಿಳಾ ಫ್ರೀಸ್ಟೈಲ್​ 57 ಕೆ.ಜಿ ವಿಭಾಗದ ಪ್ರೀ-ಕ್ವಾರ್ಟರ್​ ಫೈನಲ್​ ಕುಸ್ತಿ ಪಂದ್ಯದಲ್ಲಿ ಭಾರತದ ಅನ್ಶು ಮತ್ತು ಯುಎಸ್​ನ ಹೆಲೆನ್ ಲೂಯಿಸ್ ಮರೂಲಿಸ್ ಮುಖಾಮುಖಿಯಾಗಲಿದ್ದಾರೆ.

ಹಾಕಿ

  • ಪುರುಷರ ಹಾಕಿ ಕಂಚಿನ ಪದಕ ಪಂದ್ಯ (ಭಾರತ Vs ಸ್ಪೇನ್​): ಸಂಜೆ 5:30ಕ್ಕೆ

ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದಲ್ಲಿ ಭಾರತ ಹಾಕಿ ತಂಡ ಜರ್ಮನಿ ವಿರುದ್ಧ ಸೆಮಿಫೈನಲ್ ಪಂದ್ಯದಲ್ಲಿ ಮಂಗಳವಾರ ಸೋಲನುಭವಿಸಿತ್ತು. ಇದರಿಂದಾಗಿ ಫೈನಲ್​ಗೇರಲು ಸಾಧ್ಯವಾಗದ ಕಾರಣ ಚಿನ್ನ ಮತ್ತು ಬೆಳ್ಳಿ ಪದಕಗಳು ಕೈತಪ್ಪಿವೆ. ಇದೀಗ ಕಂಚು ಗೆಲ್ಲುವ ಅವಕಾಶವಿದೆ.

ಜಾವೆಲಿನ್​ ಥ್ರೋ

  • ಪುರುಷರ ಜಾವೆಲಿನ್​ ಥ್ರೋ ಫೈನಲ್​ ಪಂದ್ಯ (ನೀರಜ್​ ಚೋಪ್ರಾ): ರಾತ್ರಿ 11:55ಕ್ಕೆ

ಪುರುಷರ ಜಾವೆಲಿನ್​ ಥ್ರೋ ಗ್ರೂಪ್​-ಬಿ ಅರ್ಹತಾ ಸುತ್ತಿನ ಪಂದ್ಯದಲ್ಲಿ ನೀರಜ್​ ಚೋಪ್ರಾ 89.34 ಮೀಟರ್​ ದೂರ ಭರ್ಜಿ ಎಸೆದು ಫೈನಲ್​ಗೆ ಅರ್ಹತೆ ಪಡೆದಿದ್ದು, ಚಿನ್ನದ ನಿರೀಕ್ಷೆ ಮೂಡಿಸಿದ್ದಾರೆ.

ಇದನ್ನೂ ಓದಿ: ಟೇಬಲ್​ ಟೆನ್ನಿಸ್​: ಕ್ವಾರ್ಟರ್​ ಫೈನಲ್​ ಪಂದ್ಯದಲ್ಲಿ ಭಾರತ ಮಹಿಳಾ ತಂಡಕ್ಕೆ ಸೋಲು - Olympics Womens Table Tennis

Last Updated : Aug 8, 2024, 12:01 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.