ETV Bharat / sports

ಭಾರತದ ತೆಕ್ಕೆಗೆ ಮತ್ತೊಂದು ಪದಕ: ಶೂಟಿಂಗ್​​ನಲ್ಲಿ ಮನು ಭಾಕರ್, ಸರಬ್ಜೋತ್​ ಸಿಂಗ್​ ಕಮಾಲ್​​ - Paris Olympics 2024

ಭಾರತದ ತೆಕ್ಕೆಗೆ ಮತ್ತೊಂದು ಪದಕ ಗರಿ: 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಶೂಟಿಂಗ್​ ಪಂದ್ಯದಲ್ಲಿ ಮನು ಭಾಕರ್ ಮತ್ತು ಸರಬ್ಜೋತ್​ ಸಿಂಗ್​ ಜೋಡಿ ಕಂಚಿನ ಪದಕಕ್ಕೆ ಕೊರಳೊಡ್ಡಿದ್ದಾರೆ. ​​

ಮನು ಭಾಕರ್​, ಸರಬ್ಜೋತ್​ ಸಿಂಗ್​
ಮನು ಭಾಕರ್​, ಸರಬ್ಜೋತ್​ ಸಿಂಗ್​ (AFP)
author img

By ETV Bharat Sports Team

Published : Jul 30, 2024, 1:25 PM IST

Updated : Jul 30, 2024, 2:06 PM IST

ಪ್ಯಾರಿಸ್​: ಪ್ಯಾರಿಸ್ ಒಲಿಂಪಿಕ್​ 2024ರ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಪಂದ್ಯದಲ್ಲಿ ಭಾರತೀಯ ಶೂಟರ್‌ಗಳಾದ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅದ್ಭುತ ಪ್ರದರ್ಶನ ತೋರಿ ಕಂಚಿನ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಭಾರತಕ್ಕೆ ಶೂಟಿಂಗ್​ನಲ್ಲಿ ಎರಡನೇ ಪದಕ ಬಂದಿದೆ. ಇದರೊಂದಿಗೆ ಒಲಿಂಪಿಕ್​​ನ ಮಿಶ್ರ ಪಂದ್ಯದಲ್ಲಿ ಭಾರತಕ್ಕೆ ಇದು ಮೊದಲ ಪದಕವಾಗಿದೆ.

ಕೊರಿಯಾ ವಿರುದ್ಧದ ಫೈನಲ್​ ಪಂದ್ಯದಲ್ಲಿ ಭಾರತದ ಸ್ಟಾರ್​ ಜೋಡಿ ಕೊರಿಯನ್​ ​ 16-10 ಅಂತರದಿಂದ ಗೆಲುವು ಸಾಧಿಸಿತು. ಈ ಗೆಲುವಿನೊಂದಿಗೆ 22 ವರ್ಷದ ಮನು ಭಾಕರ್ ಇತಿಹಾಸವನ್ನು ಸೃಷ್ಟಿಸಿದ್ದಾರೆ. ಒಲಿಂಪಿಕ್ ಆವೃತ್ತಿ ಒಂದರಲ್ಲೇ ಎರಡು ಪದಕ ಗೆದ್ದ ಭಾರತದ ಮೊದಲ ಶೂಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸಿಂಗಲ್ಸ್​​ನಲ್ಲೂ ಮನು ಭಾಕರ್​ಗೆ ಕಂಚು; ಇದಕ್ಕೂ ಮೊದಲು ಭಾನುವಾರ ನಡೆದಿದ್ದ ಸ್ಪರ್ಧೆಯಲ್ಲಿ ಮನು ಭಾಕರ್ ಅವರು 10 ಮೀಟರ್ ಏರ್ ಪಿಸ್ತೂಲ್ ಮಹಿಳೆಯರ ಸಿಂಗಲ್ಸ್ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಭಾರತಕ್ಕೆ ಪ್ಯಾರಿಸ್ ಒಲಿಂಪಿಕ್​ನ ಮೊದಲ ಪದಕವನ್ನು ನೀಡಿದ್ದರು. ಇದೇ ವೇಳೆ ಸರಬ್ಜೋತ್ ಸಿಂಗ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಪದಕ ಗೆದ್ದ ಆರನೇ ಭಾರತೀಯ ಶೂಟರ್ ಎನಿಸಿಕೊಂಡರು.

ಪ್ರಧಾನಿ ಮೋದಿ ಅಭಿನಂದನೆ: ಅದ್ಭುತ ಪ್ರದರ್ಶನ ತೋರಿ ವಿಜಯ ಸಾಧಿಸಿದ ಭಾರತದ ಜೋಡಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರನ್ನು ಪ್ರಧಾನಿ ಮೋದಿ ಅಭಿನಂದಿಸಿದ್ದಾರೆ. " ನಮ್ಮ ಶೂಟರ್‌ಗಳು ನಿರಂತರವಾಗಿ ನಮ್ಮನ್ನು ಹೆಮ್ಮೆ ಪಡಿಸುತ್ತಿದ್ದಾರೆ ಎಂದು ಪ್ರಧಾನಿ ಮೋದಿ ಎಕ್ಸ್‌ನಲ್ಲಿ ಬರೆದಿದ್ದಾರೆ. ಒಲಿಂಪಿಕ್​ನಲ್ಲಿ 10 ಮೀಟರ್ ಏರ್ ಪಿಸ್ತೂಲ್ ಮಿಶ್ರ ಡಬಲ್ಸ್​ ತಂಡ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದಕ್ಕಾಗಿ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್ ಅವರಿಗೆ ಅಭಿನಂದನೆಗಳು. ಇಬ್ಬರೂ ಉತ್ತಮ ಕೌಶಲ್ಯ ಮತ್ತು ಟೀಮ್ ವರ್ಕ್ ತೋರಿದ್ದಾರೆ. ಇದು ಭಾರತಕ್ಕೆ ಖುಷಿಯನ್ನು ತಂದಿದೆ ಎಂದು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಸೋಮವಾರ ಮನು ಭಾಕರ್ ಮತ್ತು ಸರಬ್ಜೋತ್ ಸಿಂಗ್​ ಅರ್ಹತಾ ಪಂದ್ಯದಲ್ಲಿ ಕೊರಿಯಾದ ಶೂಟರ್‌ಗಳನ್ನು ಹಿಂದಿಕ್ಕಿ ಕಂಚಿನ ಪದಕ ಸುತ್ತಿಗೆ ಅರ್ಹತೆ ಪಡೆದಿದ್ದರು. 3 ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಜೋಡಿ 580 ಅಂಕಗಳನ್ನು ಕಲೆಹಾಕಿ ಅರ್ಹತಾ ಸುತ್ತಿನಲ್ಲಿ ಮೂರನೇ ಸ್ಥಾನ ಪಡೆದಿದ್ದರು.

ಇದನ್ನೂ ಓದಿ: ಪ್ಯಾರಿಸ್ ಒಲಿಂಪಿಕ್ಸ್: ಟೇಬಲ್ ಟೆನ್ನಿಸ್​ನಲ್ಲಿ ಇತಿಹಾಸ ಸೃಷ್ಟಿಸಿದ ಮಣಿಕಾ ಬಾತ್ರಾ! - Manika Batra

Last Updated : Jul 30, 2024, 2:06 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.