ETV Bharat / sports

ಈ ಮೂರು ಕೆಲಸ ಮಾಡಿದ್ರೆ ಆಸ್ಟ್ರೇಲಿಯಾ ವಿರುದ್ಧ ಗೆಲುವು ಖಚಿತ: ಭಾರತಕ್ಕೆ ದಿಗ್ಗಜ ಕ್ರಿಕೆಟರ್​ ಟಿಪ್ಸ್​ - HARBHAJAN SINGH TIPS FOR INDIA

ಆಸ್ಟ್ರೇಲಿಯಾ ವಿರುದ್ಧ ಗಬ್ಬಾದಲ್ಲಿ ನಡೆಯಲಿರುವ 3ನೇ ಟೆಸ್ಟ್​ ಗೆಲ್ಲಬೇಕಾದರೆ ತಪ್ಪದೆ ಈ ಮೂರು ಕೆಲಸ ಮಾಡಬೇಕೆಂದು ದಿಗ್ಗಜ ಕ್ರಿಕೆಟರ್​ ಟೀಂ ಇಂಡಿಯಾಗೆ ಸಲಹೆ ನೀಡಿದ್ದಾರೆ.

IND VS AUS 3RD TEST  BORDER GAVASAKAR TROPHY  INDIA AUSTRALIA TEST SERIES  HARBAJAN SINGH TIPS
ಭಾರತ ಕ್ರಿಕೆಟ್ ತಂಡ (AP)
author img

By ETV Bharat Sports Team

Published : Dec 10, 2024, 4:53 PM IST

Ind vs Aus, 3rd Test: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಪ್ರತಿಷ್ಠಿತ ಬಾರ್ಡರ್​-ಗವಾಸ್ಕರ್​ ಟ್ರೋಫಿ ಟೆಸ್ಟ್​ ಸರಣಿ ನಡೆಯುತ್ತಿದೆ. ಪರ್ತ್​ನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಟೀಂ ಇಂಡಿಯಾ, ಅಡಿಲೇಡ್​ನಲ್ಲಿ ನಡೆದ ಎರಡನೇ ಟೆಸ್ಟ್​ನಲ್ಲಿ ಹೀನಾಯವಾಗಿ ಸೋಲನುಭವಿಸಿತ್ತು. ಇದರೊಂದಿಗೆ ಉಭಯ ತಂಡಗಳ ನಡುವಿನ ಐದು ಪಂದ್ಯಗಳ ಟೆಸ್ಟ್ ಸರಣಿ ಪ್ರಸ್ತುತ 1-1ರಲ್ಲಿ ಸಮಬಲವಾಗಿದೆ.

ಸರಣಿಯ ಮೂರನೇ ಟೆಸ್ಟ್ ಪಂದ್ಯ ಶನಿವಾರ (ಡಿಸೆಂಬರ್ 14) ಬ್ರಿಸ್ಬೇನ್​ನ ಗಬ್ಬಾ ಮೈದಾನದಲ್ಲಿ ನಡೆಯಲಿದೆ. ಭಾರತ ವಿಶ್ವ ಟೆಸ್ಟ್​ ಚಾಂಪಿಯನ್ಸ್​ ಫೈನಲ್​ ಪ್ರವೇಶಿಸಬೇಕಾದರೆ ಉಳಿದ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ. ಇದರ ನಡುವೆ ಮಾಜಿ ಅನುಭವಿ ಸ್ಪಿನ್ನರ್ ಟೀಂ ಇಂಡಿಯಾಗೆ ಕೆಲ ಟಿಪ್ಸ್​ ನೀಡಿದ್ದಾರೆ. ಭಾರತ ತಂಡ ಗಬ್ಬಾದಲ್ಲಿ ನಡೆಯುವ 3ನೇ ಟೆಸ್ಟ್​ ಗೆಲ್ಲಲು ಬಯಸಿದರೆ ಈ ಮೂರು ಕೆಲಸಗಳನ್ನು ಚಾಚು ತಪ್ಪದೇ ಮಾಡಬೇಕು ಎಂದು ತಿಳಿಸಿದ್ದಾರೆ.

ಹೌದು, ಟೀಂ ಇಂಡಿಯಾದ ಮಾಜಿ ಸ್ಪಿನ್ನರ್​ ಹರ್ಭಜನ್​ ಸಿಂಗ್​ ತಂಡಕ್ಕೆ ಕೆಲ ಸಲಹೆಗಳನ್ನು ನೀಡಿದ್ದಾರೆ. ಮೂರನೇ ಟೆಸ್ಟ್​ನಲ್ಲಿ ಒಂದು ಅಥವಾ ಮೂರು ಬದಲಾವಣೆಗಳನ್ನು ಮಾಡಿದರೆ, ಭಾರತ ಸರಣಿಯಲ್ಲಿ ಪುಟಿದೇಳಬಹುದು ಎಂದು ತಿಳಿಸಿದ್ದಾರೆ.

ಮೊದಲ ವಿಷಯವೆಂದರೆ, ಗಬ್ಬಾದಲ್ಲಿ ಭಾರತದ ಬ್ಯಾಟ್ಸ್‌ಮನ್‌ಗಳು ಕ್ರೀಸ್‌ನಲ್ಲಿ ತಾಳ್ಮೆಯಿಂದಿರಬೇಕು. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಉತ್ತಮ ರನ್‌ಗಳ ಜೊತೆಯಾಟ ಆಡಲು ಪ್ರಯತ್ನಿಸಬೇಕು. ಒಮ್ಮೆ ಕ್ರೀಸ್‌ಗೆ ಬಂದರೆ ಸ್ಕೋರ್​ ಬಗ್ಗೆ ಮಾತ್ರ ಯೋಚಿಸಿ. ಮೊದಲ ಟೆಸ್ಟ್‌ನಲ್ಲಿ ಮಾತ್ರ ಒಳ್ಳೆಯ ಜೊತೆಯಾಟವನ್ನು ನೋಡಿದ್ದೇವೆ. ಗಬ್ಬಾದಲ್ಲಿ ಗೆಲ್ಲಲು, ಮೊದಲ ಇನ್ನಿಂಗ್ಸ್‌ನಲ್ಲಿ ಕನಿಷ್ಠ 300-350 ರನ್​ಗಳಿಸಬೇಕು ಎಂದು ಹೇಳಿದರು.

ಎರಡನೇಯ ವಿಷಯವೆಂದರೆ, ಅಡಿಲೇಡ್​ನಲ್ಲಿ ಶತಕ ಸಿಡಿಸಿದ ಟ್ರಾವಿಸ್ ಹೆಡ್ ಬೌನ್ಸರ್​ಗಳನ್ನು ಪರಿಣಾಮಕಾರಿಯಾಗಿ ಆಡಲಾರರು. ಅಲ್ಲದೆ ಅವರು ಹೆಚ್ಚಾಗಿ ಪಾಯಿಂಟ್ ಮತ್ತು ಕವರ್‌ಗಳಲ್ಲಿ ರನ್​ ಕಲೆಹಾಕುತ್ತಾರೆ. ಹಾಗಾಗಿ ಬೌನ್ಸರ್‌ ಜೊತೆಗೆ ಲೆಗ್ ಸೈಡ್ ಆಡುವಂತೆ ಅವರಿಗೆ ಪ್ರಚೋದಿಸಬೇಕು. ಇದರಿಂದ ಹೆಡ್​ ಗೊಂದಲಕ್ಕೀಡಲಾಗಲ್ಲಿ ಆಗ ಸುಲಭವಾಗಿ ಅವರ ಉರುಳಿಸಬಹುದ ಎಂದು ಭಜ್ಜಿ ತಿಳಿಸಿದ್ದಾರೆ.

ಮೂರನೇಯ ವಿಷಯವೆಂದರೆ, ಬೌಲಿಂಗ್ ವಿಭಾಗದಲ್ಲಿ ಕೆಲ ಬದಲಾವಣೆಗಳನ್ನು ಮಾಡಬೇಕು. ವೇಗಿಗಳಾದ ಪ್ರಸಾದ್ ಕೃಷ್ಣ ಮತ್ತು ಆಕಾಶ್ ದೀಪ್ ಅವರಿಗೆ ಗಬ್ಬಾದಲ್ಲಿ ಅವಕಾಶ ನೀಡಬೇಕು. ಹಾಗಂತ ಹರ್ಷಿತ್ ರಾಣಾ ಸರಿಯಾಗಿ ಬೌಲಿಂಗ್ ಮಾಡುತ್ತಿಲ್ಲ ಎಂದು ಹೇಳುತ್ತಿಲ್ಲ. ಬೌಲಿಂಗ್ ವಿಭಾಗಕ್ಕೆ ಹೊಸಬರನ್ನು ಸೇರಿಸಿದರೆ ಒಳ್ಳೆಯದು. ಗಬ್ಬಾ ಪಿಚ್ ಕೂಡ ವೇಗ ಮತ್ತು ಬೌನ್ಸ್​ರ್​ಗೆ ಹೆಸರುವಾಸಿಯಾಗಿದೆ. ಹಾಗಾಗಿ, ಬೌನ್ಸ್ ಬೌಲಿಂಗ್​ ಮಾಡುವ ಸಾಮರ್ಥ್ಯ ಪ್ರಸಿದ್ಧ್​ ಕೃಷ್ಣಗಿದೆ. ಅವರು ಆಸ್ಟ್ರೇಲಿಯನ್​ ಬ್ಯಾಟ್ಸ್ಮನ್​ಗಳನ್ನು ಕಾಡಬಹುದು ಎಂದು ಹರ್ಭಜನ್ ಸಿಂಗ್ ಟಿಪ್ಸ್​ ನೀಡಿದ್ದಾರೆ.

ಇದನ್ನೂ ಓದಿ: ಜಯ್​ ಶಾ ICC ಅಧ್ಯಕ್ಷರಾಗ್ತಿದ್ದಂತೆ ಈ ದೇಶದ ಕ್ರಿಕೆಟ್​ ಲೀಗ್ ಬ್ಯಾನ್​​!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.