ETV Bharat / sports

ಚೆಪಾಕ್​ನಲ್ಲಿ ಹೈದರಾಬಾದ್​ಗೆ ಆಲೌಟ್​ ಸೋಲಿನ ಮುಖಭಂಗ: ಗೆದ್ದು ಮೂರನೇ ಸ್ಥಾನಕ್ಕೇರಿದ ಸಿಎಸ್​ಕೆ - CSK vs SRH match - CSK VS SRH MATCH

ಚೆಪಾಕ್​ ಕ್ರೀಡಾಂಗಣದಲ್ಲಿ ಹೈದರಾಬಾದ್​ ಸೋಲಿನ ಸರಣಿ (5-0) ಮುಂದುವರಿಯಿತು. ಈ ಋತುವಿನಲ್ಲಿ ಮೊದಲ ಬಾರಿಗೆ ಆಲೌಟ್​ ಆಯಿತು.

ಚೆಪಾಕ್​ನಲ್ಲಿ ಹೈದರಾಬಾದ್​ಗೆ ಆಲೌಟ್​ ಸೋಲಿನ ಮುಖಭಂಗ

author img

By PTI

Published : Apr 29, 2024, 7:03 AM IST

ಚೆನ್ನೈ: ಐಪಿಎಲ್​ ಟೂರ್ನಿಯ ಡೇಂಜರಸ್​ ತಂಡ ಎನಿಸಿಕೊಂಡಿದ್ದ ಸನ್​ರೈಸರ್ಸ್​ ಹೈದರಾಬಾದ್​, ಚೆಪಾಕ್​ ಕ್ರೀಡಾಂಗಣದಲ್ಲಿ ಮಕಾಡೆ ಮಲಗಿತು. ಚೆನ್ನೈ ಸೂಪರ್​ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ 78 ರನ್​ಗಳ ಹೀನಾಯ ಸೋಲು ಕಂಡಿತು. ಇದಕ್ಕೆ ಕಾರಣವಾಗಿದ್ದು, ಸಿಎಸ್​ಕೆ ನಾಯಕ ಋತುರಾಜ್​ ಗಾಯಕ್ವಾಡ್​ ಮತ್ತು ತುಷಾರ್​ ದೇಶಪಾಂಡೆ.

ದೈತ್ಯ ಬ್ಯಾಟಿಂಗ್​ ಪಡೆಯೊಂದಿಗೆ ಈ ಋತುವಿನ ಐಪಿಎಲ್​ನಲ್ಲಿ ದಾಖಲೆಗಳ ಮೇಲೆ ದಾಖಲೆ ಬರೆದ ತಂಡ 134 ರನ್​ಗೆ ಆಲೌಟ್​ ಆಗಿ ಅಚ್ಚರಿ ಮೂಡಿಸಿತು. ಇದು 17ನೇ ಆವೃತ್ತಿಯಲ್ಲಿ ತಂಡವೊಂದು ದಾಖಲಿಸಿದ ಎರಡನೇ ಅತಿ ಕಡಿಮೆ ಮೊತ್ತವಾಗಿದೆ. ಸಿಎಸ್​​ಕೆಗೆ ಭಾರಿ ಸವಾಲಿನ ಬೆದರಿಕೆ ಹಾಕಿದ್ದ ತಂಡ, ತಾಳ - ಮೇಳ ಕಳೆದುಕೊಂಡು, ಟೂರ್ನಿಯಲ್ಲಿ 4 ಸೋಲು ಅನುಭವಿಸಿ ಪಾಯಿಂಟ್​ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಜಾರಿತು.

ಬ್ಯಾಟಿಂಗ್​ ಪಡೆಯೇ ಧ್ವಂಸ: ಹೈದರಾಬಾದ್​ ತಂಡವು ಬೌಲಿಂಗ್​ ಮತ್ತು ಬ್ಯಾಟಿಂಗ್​ನಲ್ಲಿ ಬಲಿಷ್ಠವಾಗಿದೆ. ಆಡಿದ 9 ಪಂದ್ಯಗಳಲ್ಲಿ ಎರಡು ಬಾರಿ ಐಪಿಎಲ್​ ಸಾರ್ವಕಾಲಿಕ ದಾಖಲೆ ಸೃಷ್ಟಿಸಿ, ಸಂಚಲ ಮೂಡಿಸಿದೆ. ಇಂತಹ ದೈತ್ಯ ಬ್ಯಾಟಿಂಗ್​ ಪಡೆಯನ್ನು ಹೊಂದಿರುವ ತಂಡ ಕೇವಲ 134 ರನ್​ಗೆ ಮೊದಲ ಬಾರಿಗೆ ಆಲೌಟ್​ ಆಗಿದ್ದಲ್ಲದೇ, ಸತತ ಎರಡನೇ ಮುಖಭಂಗ ಅನುಭವಿಸಿತು. ಟ್ರಾವಿಸ್ ಹೆಡ್​ 13, ಅಭಿಷೇಕ್​ ಶರ್ಮಾ 15, ಅನ್​ಮೋಲ್​ ಪ್ರೀತ್​ ಸಿಂಗ್​ 0, ನಿತೀಶ್​ ರೆಡ್ಡಿ 15, ಹೆನ್ರಿಕ್​ ಕ್ಲಾಸಿನ್​ 20, ಅಬ್ದುಲ್​ ಸಮದ್​ 19, ಆ್ಯಡಂ ಮಾರ್ಕ್ರಮ್​ 32 ರನ್​ ಮಾತ್ರ ಗಳಿಸಿದರು. ಕನಿಷ್ಠ 10 ರಿಂದ 15 ರನ್​ಗಳ ಅಂತರದಲ್ಲಿ ಒಂದು ಅಥವಾ 2 ವಿಕೆಟ್​ ಕಳೆದುಕೊಳ್ಳುತ್ತಾ ಸಾಗಿ ಪತನಗೊಂಡಿತು.

ತುಷಾರ್​ ಬಿರುಗಾಳಿ: ಹೈದರಾಬಾದ್​ ಪಡೆಯನ್ನು ಛಿದ್ರ ಮಾಡಿದ್ದು ತುಷಾರ್​ ದೇಶಪಾಂಡೆ ಬಿರುಗಾಳಿ ಬೌಲಿಂಗ್​. ಕೇವಲ 3 ಓವರ್​ಗಳಲ್ಲಿ 27 ರನ್​ ನೀಡಿ 4 ವಿಕೆಟ್​ ಕಬಳಿಸಿದರು. ಇದು ತಂಡವು ಮೇಲೇಳದಂತೆ ಮಾಡಿತು. ಇವರ ಜೊತೆಗೆ ಮತೀಶ್​ ಪತಿರಾನ, ಮುಸ್ತಾಫಿಜರ್​ ರಹಮಾನ್​ ತಲಾ ವಿಕೆಟ್​ ಪಡೆದರೆ, ರವೀಂದ್ರ ಜಡೇಜಾ, ಶಾರ್ದೂಲ್​ ಠಾಕೂರ್​ ತಲಾ 1 ವಿಕೆಟ್​ ಕಬಳಿಸಿ ಗೆಲುವಿನ ಪಾಲು ಹಂಚಿಕೊಂಡರು.

ಗಾಯಕ್ವಾಡ್​ಗೆ ತಪ್ಪಿದ ಶತಕ: ವಿಶ್ವಕಪ್​ಗೆ ಆಯ್ಕೆ ಗುರಿ ಇಟ್ಟುಕೊಂಡಿರುವ ಸಿಎಸ್​ಕೆ ನಾಯಕ ಋತುರಾಜ್​ ಗಾಯಕ್ವಾಡ್​ ಭರ್ಜರಿ ಬ್ಯಾಟಿಂಗ್​ ಲಯದಲ್ಲಿದ್ದಾರೆ. ಈಗಾಗಲೇ ಶತಕ ಬಾರಿಸಿರುವ ಅವರು ಎರಡನೇ ಶತಕದಂಚಿನಲ್ಲಿ ಎಡವಿದರು. 54 ಎಸೆತಗಳಲ್ಲಿ 98 ರನ್​ ಗಳಿಸಿದ್ದಾಗ ಇನಿಂಗ್ಸ್​ನ ಕೊನೆಯ ಓವರ್​ನಲ್ಲಿ ನಟರಾಜನ್​ಗೆ ವಿಕೆಟ್​ ನೀಡಿ ಹಂಡ್ರೆಡ್​ ತಪ್ಪಿಸಿಕೊಂಡರು. ಡ್ಯಾರೆಲ್​ ಮಿಚೆಲ್​ 52, ಶಿವಂ ದುಬೆ 39 ರನ್​ ಗಳಿಸಿದರು.

ಪಂದ್ಯದಲ್ಲಿ ಸಿಎಸ್​ಕೆ 212 ರನ್​ ಗಳಿಸುವ ಮೂಲಕ 35ನೇ ಬಾರಿಗೆ 200+ ರನ್​ ಗಳಿಸಿತು. ಇದು ಟಿ20 ಇತಿಹಾಸದಲ್ಲೇ ಯಾವುದೇ ತಂಡ ಮಾಡದ ಸಾಧನೆಯಾಗಿದೆ. ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ಆಟಗಾರನಾಗಿ 150ನೇ ಪಂದ್ಯದ ಗೆಲುವು ಅನುಭವಿಸಿದರು. ಚೆಪಾಕ್​ ಕ್ರೀಡಾಂಗಣದಲ್ಲಿ ಸನ್​ರೈಸರ್ಸ್​ ಹೈದರಾಬಾದ್​ ಆಡಿದ ಐದೂ ಪಂದ್ಯಗಳಲ್ಲಿ ಸೋಲುವ ಮೂಲಕ ಚೋಕರ್ಸ್​ ಆಗಿ ಮುಂದುವರೆಯಿತು.

ಇದನ್ನೂ ಓದಿ: IPL: ವಿಲ್​ ಜಾಕ್ಸ್ ಸಿಡಿಲಬ್ಬರದ ಬ್ಯಾಟಿಂಗ್​: ಆರ್​ಸಿಬಿಗೆ ಶರಣಾದ ಟೈಟಾನ್ಸ್​ - RCB BEATS GT

ETV Bharat Logo

Copyright © 2024 Ushodaya Enterprises Pvt. Ltd., All Rights Reserved.