ಶಾಂಘೈ (ಚೀನಾ): ಇಲ್ಲಿ ನಡೆಯುತ್ತಿರುವ ವಿಶ್ವಕಪ್‌ನ ಮೊದಲ ಹಂತದಲ್ಲಿ ಟೀಮ್ ಈವೆಂಟ್‌ಗಳಲ್ಲಿ ಕ್ಲೀನ್ ಸ್ವೀಪ್ ಮತ್ತು ಹ್ಯಾಟ್ರಿಕ್ ಚಿನ್ನದ ಪದಕಗಳೊಂದಿಗೆ ಭಾರತವು ಒಲಿಂಪಿಕ್ ಅಲ್ಲದ ಸಂಯುಕ್ತ ಆರ್ಚರಿಯಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರೆಸಿದೆ. ಸೀಸನ್ನ ಈ ಮೊದಲ ಜಾಗತಿಕ ಟೂರ್ನಿಯಲ್ಲಿ ಭಾರತದ ಮಹಿಳಾ ಕಾಂಪೌಂಡ್ ತಂಡ ಇಟಲಿಯನ್ನು 236-225 ಅಂಕಗಳಿಂದ ಸೋಲಿಸಿತು. ಜ್ಯೋತಿ ಸುರೇಖಾ ವೆನ್ನಮ್, ಅದಿತಿ ಸ್ವಾಮಿ ಮತ್ತು ಪ್ರಣೀತ್ ಕೌರ್ ಅವರಿದ್ದ ಭಾರತದ ತಂಡ 24 ಬಾಣಗಳಲ್ಲಿ ಕೇವಲ ನಾಲ್ಕು ಅಂಕಗಳನ್ನು ಕಳೆದುಕೊಂಡು ಆರನೇ ಶ್ರೇಯಾಂಕದ ಇಟಲಿಯನ್ನು ಭಾರಿ ಅಂತರದಿಂದ ಸೋಲಿಸಿ ಚಿನ್ನದ ಪದಕದೊಂದಿಗೆ ತಮ್ಮ ಖಾತೆ ತೆರೆಯಿತು.
ಒಂದೇ ದಿನದಲ್ಲಿ ಭಾರತಕ್ಕೆ ಮೂರು ಚಿನ್ನ: ಪುರುಷರ ತಂಡದಲ್ಲಿ ಅಭಿಷೇಕ್ ವರ್ಮಾ, ಪ್ರಿಯಾಂಶ್ ಮತ್ತು ಪ್ರಥಮೇಶ್ ಎಫ್ 238-231ರಲ್ಲಿ ನೆದರ್ಲೆಂಡ್ಸ್ ತಂಡವನ್ನು ಸೋಲಿಸಿದರು. ನೆದರ್ಲ್ಯಾಂಡ್ಸ್ ತಂಡದಲ್ಲಿ ಮೈಕ್ ಸ್ಕ್ಲೋಸರ್, ಸಿಲ್ ಪೀಟರ್ಸ್ ಮತ್ತು ಸ್ಟೆಫ್ ವಿಲ್ಲೆಮ್ಸ್ ಸೇರಿದ್ದಾರೆ. ಇದಾದ ಬಳಿಕ ಕಾಂಪೌಂಡ್ ವಿಭಾಗದಲ್ಲಿ ಭಾರತದ ಮಿಶ್ರ ತಂಡ ಮೂರನೇ ಚಿನ್ನದ ಪದಕ ಗೆಲ್ಲುವ ಮೂಲಕ ಕ್ಲೀನ್ ಸ್ವೀಪ್ ಮಾಡಿದೆ. ಎರಡನೇ ಶ್ರೇಯಾಂಕದ ಜ್ಯೋತಿ ಮತ್ತು ಅಭಿಷೇಕ್ ಜೋಡಿಯು ರೋಚಕ ಪಂದ್ಯದಲ್ಲಿ 158-157 ರಲ್ಲಿ ಎಸ್ಟೋನಿಯಾದ ಲಿಸೆಲ್ ಜತ್ಮಾ ಮತ್ತು ರಾಬಿನ್ ಜತ್ಮಾ ಅವರ ಮಿಶ್ರ ಜೋಡಿಯನ್ನು ಸೋಲಿಸಿತು.
ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಜ್ಯೋತಿಗೆ ಇದು ಎರಡು ಚಿನ್ನದ ಪದಕವಾಗಿದೆ. ಅವರು ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿದ್ದು, ಇಂದು ನಡೆಯುವ ಸೆಮಿಫೈನಲ್‌ನಲ್ಲಿ ತಮ್ಮ ಆಟ ಪ್ರದರ್ಶಿಸಲಿದ್ದಾರೆ. ಕಾಂಪೌಂಡ್ ವಿಭಾಗದಲ್ಲಿಯೂ ಪ್ರಿಯಾಂಶ್ ವೈಯಕ್ತಿಕ ಪದಕದ ರೇಸ್ನಲ್ಲಿದ್ದಾರೆ. ರಿಕರ್ವ್ ವಿಭಾಗದಲ್ಲಿ ಪದಕ ಸುತ್ತುಗಳು ಭಾನುವಾರ ನಡೆಯಲಿದ್ದು, ಒಲಿಂಪಿಕ್ ವಿಭಾಗದಲ್ಲಿ ಭಾರತ ಎರಡು ಚಿನ್ನದ ಪದಕಗಳ ಮೇಲೆ ಕಣ್ಣಿಟ್ಟಿದೆ. ಚಿನ್ನದ ಪದಕಕ್ಕಾಗಿ ಭಾರತ ಪುರುಷರ ತಂಡ ಒಲಿಂಪಿಕ್ ಚಾಂಪಿಯನ್ ದಕ್ಷಿಣ ಕೊರಿಯಾವನ್ನು ಎದುರಿಸಲಿದೆ.
ಫೈನಲ್ ರೇಸ್ನಲ್ಲಿ ದೀಪಿಕಾ: ದೀಪಿಕಾ ಕುಮಾರಿ ವೈಯಕ್ತಿಕ ಪದಕಕ್ಕಾಗಿ ತಮ್ಮ ಹೋರಾಟ ಮುಂದುವರಿಸಿದ್ದಾರೆ. ಮಹಿಳೆಯರ ರಿಕರ್ವ್ ವಿಭಾಗದಲ್ಲಿ ಅವರು ದಕ್ಷಿಣ ಕೊರಿಯಾದ ಎದುರಾಳಿಯ ವಿರುದ್ಧ ಸೆಮಿಫೈನಲ್ ಆಡಲಿದ್ದಾರೆ. ನಾಲ್ಕನೇ ಶ್ರೇಯಾಂಕದ ಪುರುಷರ ತಂಡವು 60 ಅಂಕ ಗಳಿಸುವ ಮೂಲಕ ಉತ್ತಮ ಆರಂಭ ಪಡೆಯಿತು. ಬಳಿಕ ಮುಂದಿನ ಎರಡು ಸೆಟ್‌ಗಳಲ್ಲಿ ಕೇವಲ ಎರಡು ಅಂಕಗಳನ್ನು ಕಳೆದುಕೊಂಡಿತು. ಇದರ ನಂತರ, ಅವರು ಅಂತಿಮ ಸೆಟ್‌ನಲ್ಲಿ 60 ಅಂಕ ಗಳಿಸುವ ಮೂಲಕ ಪಂದ್ಯವನ್ನು ಗೆದ್ದರು. ಕಾಂಪೌಂಡ್ ಮಿಶ್ರ ತಂಡ ಸ್ಪರ್ಧೆಯಲ್ಲಿ ಜ್ಯೋತಿ ಮತ್ತು ಅಭಿಷೇಕ್ 40 ಅಂಕಗಳೊಂದಿಗೆ ಉತ್ತಮ ಆರಂಭ ಪಡೆದರು. ಬಳಿಕ ಪಂದ್ಯದಲ್ಲಿ ಮುನ್ನಡೆ ಪಡೆದು ಚಿನ್ನಕ್ಕೆ ಮುತ್ತಿಕ್ಕಿದ್ದರು.
ಓದಿ: ಟಿ-20 ವಿಶ್ವಕಪ್ 2024ರ ಬ್ರಾಂಡ್ ಅಂಬಾಸಿಡರ್ ಆಗಿ ಯುವರಾಜ್ ಸಿಂಗ್ ನೇಮಕ - Yuvraj Singh