ETV Bharat / sports

ಆಸ್ಟ್ರೇಲಿಯಾಗೆ ಆಘಾತ ನೀಡಿದ ಅಫ್ಘಾನಿಸ್ತಾನ; ಫಲ ನೀಡದ ಕಮ್ಮಿನ್ಸ್‌, ಮ್ಯಾಕ್ಸ್‌ವೆಲ್‌ ಹೋರಾಟ - Afghanistan Beat Australia

author img

By ETV Bharat Karnataka Team

Published : Jun 23, 2024, 9:47 AM IST

Updated : Jun 23, 2024, 12:02 PM IST

ಟಿ20 ವಿಶ್ವಕಪ್​ನ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ತಂಡವು ಬಲಿಷ್ಠ ಆಸ್ಟ್ರೇಲಿಯಾವನ್ನು ಬಗ್ಗು ಬಡಿದು ದಾಖಲೆ ಬರೆಯಿತು.

ಆಸ್ಟ್ರೇಲಿಯಾ ವಿರುದ್ದ ಅಪ್ಘಾನಿಸ್ತಾನಕ್ಕೆ ಐತಿಹಾಸಿಕ ಗೆಲುವು
ಆಸ್ಟ್ರೇಲಿಯಾ ವಿರುದ್ದ ಅಫ್ಘಾನಿಸ್ತಾನಕ್ಕೆ ಐತಿಹಾಸಿಕ ಗೆಲುವು (AP)

ಸೈಂಟ್‌ ವಿನ್ಸೆಂಟ್‌ (ಕಿಂಗ್ಸ್ಟನ್‌): ಕೆರಿಬಿಯನ್ನರ ನಾಡಿನಲ್ಲಿ ಅಫ್ಘಾನಿಸ್ತಾನ ಕ್ರಿಕೆಟ್ ತಂಡ ಐತಿಹಾಸಿಕ ದಾಖಲೆ ಬರೆದಿದೆ. ಟಿ20 ವಿಶ್ವಕಪ್‌ನಲ್ಲಿ ಇದೇ ಮೊದಲ ಬಾರಿಗೆ ಆಸ್ಟ್ರೇಲಿಯಾದಂತಹ ಬಲಿಷ್ಠ ತಂಡದ ವಿರುದ್ದ ಗೆದ್ದು ಬೀಗಿದೆ.

ಕಿಂಗ್ಸ್ಟನ್‌ನ ಅರ್ನೋಸ್ ವೇಲ್ ಮೈದಾನದಲ್ಲಿ ಭಾನುವಾರ ನಡೆದ ಸೂಪರ್ 8ರ ಪಂದ್ಯದಲ್ಲಿ ಅಫ್ಘಾನಿಸ್ತಾನ ಮೊದಲು ಬ್ಯಾಟ್​ ಮಾಡಿತು. ತಂಡದ ಆರಂಭಿಕ ಬ್ಯಾಟರ್‌ಗಳಾದ ಗುರ್ಬಾಝ್​ ಮತ್ತು ಝದ್ರಾನ್​ ಅವರ ಆಕರ್ಷಕ ಅರ್ಧಶತಕದ ನೆರವಿನಿಂದ 148 ರನ್​ಗಳ ಸಾಧಾರಣ ಮೊತ್ತ ಕಲೆಹಾಕಿತು. ಇದಕ್ಕುತ್ತರವಾಗಿ ಆಸ್ಟ್ರೇಲಿಯಾ ತಂಡ ಅಫ್ಘಾನ್​ ಬಿಗು ಬೌಲಿಂಗ್​ ದಾಳಿಗೆ ನಲುಗಿ 127 ರನ್​ಗಳಿಗೆ ಸರ್ವಪತನ ಕಂಡು 21 ರನ್​ಗಳಿಂದ ಹೀನಾಯ ಸೋಲನುಭವಿಸಿತು. ಇದರೊಂದಿಗೆ ಕಳೆದ ವರ್ಷ ನಡೆದ ಏಕದಿನ ವಿಶ್ವಕಪ್‌ ಪಂದ್ಯದ ಸೋಲಿಗೆ ಸೇಡು ತೀರಿಸಿಕೊಂಡಿತು.

ಮ್ಯಾಕ್ಸ್‌ವೆಲ್ ಹೋರಾಟ ವ್ಯರ್ಥ: ಏಕದಿನ ವಿಶ್ವಕಪ್​ನಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್ ದ್ವಿಶತಕ ಸಿಡಿಸಿ ಅಫ್ಘಾನಿಸ್ತಾನದಿಂದ ಗೆಲುವು ಕಸಿದುಕೊಂಡಿದ್ದರು. ಇದೀಗ ಈ ಪಂದ್ಯದಲ್ಲೂ ಅಫ್ಘಾನಿಸ್ತಾನದಿಂದ ಗೆಲುವು ಕಸಿದುಕೊಳ್ಳಲು ಮ್ಯಾಕ್ಸ್‌ವೆಲ್‌ ಪ್ರಯತ್ನಿಸಿದ್ದಾರೆ. ಆದರೆ ಗುಲ್ಬದಿನ್ ಕೊನೆಯ ಕ್ಷಣದಲ್ಲಿ ಅವರ ವಿಕೆಟ್ ಪಡೆಯುವ ಮೂಲಕ ಆಸ್ಟ್ರೇಲಿಯಾ ಗೆಲುವಿನ ಓಟಕ್ಕೆ ಬ್ರೇಕ್​ ಹಾಕಿದರು. ಮ್ಯಾಕ್ಸ್‌ವೆಲ್ 41 ಎಸೆತಗಳಲ್ಲಿ 3 ಸಿಕ್ಸರ್​ ಹಾಗೂ 6 ಬೌಂಡರಿ ನೆರವಿನಿಂದ 59 ರನ್ ಗಳಿಸಿದರು.

ಆಸೀಸ್‌ ತಂಡದ 4 ವಿಕೆಟ್‌ ಉರುಳಿಸಿದ ಗುಲ್ಬದಿನ್!: ಇದರ ಹೊರತಾಗಿ, ಮಾರ್ಕಸ್ ಸ್ಟೊಯಿನಿಸ್ (11) ಮತ್ತು ಮಿಚೆಲ್ ಮಾರ್ಷ್ (12) ಮಾತ್ರ ಎರಡಂಕಿ ರನ್‌ ಗಳಿಕೆ ಮಾಡಿದರು. ಉಳಿದ ಬ್ಯಾಟರ್​ಗಳು ಪೆವಿಲಿಯನ್​ ಪರೇಡ್​ ನಡೆಸಿದರು. ಅಫ್ಘಾನ್​ ಪರ ಗುಲ್ಬದಿನ್ ನೈಬ್ 4, ನವೀನ್ ಉಲ್ ಹಖ್ 3, ಉಮರ್ಜಾಯ್, ಮೊಹಮ್ಮದ್ ನಬಿ ಮತ್ತು ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದರು.

ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟ್​ ಮಾಡಿದ್ದ ಅಫ್ಘಾನಿಸ್ತಾನ 6 ವಿಕೆಟ್‌ ನಷ್ಟಕ್ಕೆ 148 ರನ್ ಗಳಿಸಿತ್ತು. ವಿಕೆಟ್‌ಕೀಪರ್ ಕಮ್​ ಬ್ಯಾಟರ್ ರಹಮಾನುಲ್ಲಾ ಗುರ್ಬಾಜ್ 49 ಎಸೆತಗಳಲ್ಲಿ 60 ರನ್‌ಗಳ ಅತ್ಯಧಿಕ ಇನಿಂಗ್ಸ್‌ ಆಡಿದರು. ಇಬ್ರಾಹಿಂ ಜದ್ರಾನ್ 48 ಎಸೆತಗಳಲ್ಲಿ 51 ರನ್ ಗಳಿಸಿದರು. ಗುರ್ಬಾಜ್-ಇಬ್ರಾಹಿಂ ಜೋಡಿ 15.5 ಓವರ್‌ಗಳಲ್ಲಿ 118 ರನ್‌ಗಳ ಜೊತೆಯಾಟವಾಡಿದರು.

ಮತ್ತೆ ಪ್ಯಾಟ್​ ಕಮ್ಮಿನ್ಸ್ ಹ್ಯಾಟ್ರಿಕ್‌ ವಿಕೆಟ್‌ ಸಾಧನೆ!: ಆಸ್ಟ್ರೇಲಿಯಾ ಪರ ಪ್ಯಾಟ್​ ಕಮ್ಮಿನ್ಸ್​ ಹ್ಯಾಟ್ರಿಕ್ ವಿಕೆಟ್​ ಪಡೆದು ಹೊಸ ದಾಖಲೆ ಬರೆದರು. ಕಮ್ಮಿನ್ಸ್ ಸತತ ಮೂರು ಎಸೆತಗಳಲ್ಲಿ ರಶೀದ್ ಖಾನ್, ಕರೀಂ ಜನತ್ ಮತ್ತು ಗುಲ್ಬದಿನ್ ನೈಬ್ ಅವರ ವಿಕೆಟ್​ ಉರುಳಿಸಿದರು. ಇದರೊಂದಿಗೆ ಟಿ20 ವಿಶ್ವಕಪ್‌ನಲ್ಲಿ ಸತತ ಎರಡು ಪಂದ್ಯದಲ್ಲಿ ಹ್ಯಾಟ್ರಿಕ್ ಸಾಧನೆ ಮಾಡಿದ ವಿಶ್ವದ ಏಕೈಕ ವೇಗಿ ಎಂಬ ದಾಖಲೆ ಬರೆದರು. ಇದಕ್ಕೂ ಮುನ್ನ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ಹ್ಯಾಟ್ರಿಕ್ ವಿಕೆಟ್‌ ಸಾಧನೆ ಮಾಡಿದ್ದರು.

ನಾಳೆ ಭಾರತದ ವಿರುದ್ಧ ಗೆಲ್ಲಲೇಬೇಕಾದ ಸಂಕಷ್ಟದಲ್ಲಿ ಆಸೀಸ್: ಸೂಪರ್​ 8ರ ಪಂದ್ಯಗಳಲ್ಲಿ ತಾನಾಡಿರುವ ಎರಡು ಪಂದ್ಯಗಳಲ್ಲಿ 1ರಲ್ಲಿ ಸೋತು ಒಂದರಲ್ಲಿ ಗೆದ್ದಿರುವ ಆಸ್ಟ್ರೇಲಿಯಾ ನಾಳೆ ನಡೆಯಲಿರುವ ಭಾರತ ವಿರುದ್ಧದ ಪಂದ್ಯವನ್ನು ಗೆಲ್ಲಲೇಬೇಕಿದೆ. ಒಂದು ವೇಳೆ ಸೋತರೆ, ಅಫ್ಘಾನಿಸ್ತಾನ ತನ್ನ ಮುಂದಿನ ಬಾಂಗ್ಲಾದೇಶದ ವಿರುದ್ಧ ಗೆದ್ದಿದ್ದೇ ಆದಲ್ಲಿ ಕಾಂಗಾರು ಪಡೆ ಟೂರ್ನಿಯಿಂದ ಹೊರಬೀಳುತ್ತದೆ.

ಇದನ್ನೂ ಓದಿ: ಹಾರ್ದಿಕ್​ ಆಲ್ರೌಂಡರ್​ ಆಟಕ್ಕೆ ಮಣಿದ ಬಾಂಗ್ಲಾ: ಸೆಮಿಫೈನಲ್​ಗೆ ಭಾರತ ಮತ್ತಷ್ಟು ಸನಿಹ - India Beat Bangladesh

Last Updated : Jun 23, 2024, 12:02 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.