ETV Bharat / opinion

ತೈವಾನ್​ ಸುತ್ತ ಸಮರಾಭ್ಯಾಸ: ಚೀನಾದ ಉದ್ದೇಶವೇನು? ಯುದ್ಧದ ಸಾಧ್ಯತೆಗಳೆಷ್ಟು? - China Threatening Taiwan - CHINA THREATENING TAIWAN

ಚೀನಾ ತೈವಾನ್ ಸುತ್ತಲೂ ಸಮರಾಭ್ಯಾಸ ನಡೆಸಿ ತನ್ನ ಮಿಲಿಟರಿ ಸಾಮರ್ಥ್ಯವನ್ನು ಪ್ರದರ್ಶಿಸಿದೆ.

Taiwan
ಚೀನಾ, ತೈವಾನ್ (ETV Bharat)
author img

By ETV Bharat Karnataka Team

Published : Jun 10, 2024, 10:05 PM IST

ತೈವಾನ್​ನ ಹೊಸ ಅಧ್ಯಕ್ಷ ಲೈ ಚಿಂಗ್-ಟೆ 2024 ರ ಮೇ 19 ರಂದು ಪ್ರಮಾಣವಚನ ಸ್ವೀಕರಿಸಿದರು. ಆ ಸಂದರ್ಭದಲ್ಲಿ ಉದ್ಘಾಟನಾ ಭಾಷಣ ಮಾಡಿದ ಅವರು, "ಚೀನಾ ತೈವಾನ್​ ಸ್ವತಂತ್ರ ದೇಶವಾಗಿ ಅಸ್ತಿತ್ವದಲ್ಲಿದೆ ಎಂಬ ವಾಸ್ತವತೆಯನ್ನು ಒಪ್ಪಿಕೊಳ್ಳುತ್ತದೆ, ತೈವಾನ್ ಜನರ ಆಶಯಗಳನ್ನು ಗೌರವಿಸುತ್ತದೆ ಮತ್ತು ಸಂಘರ್ಷಕ್ಕಿಂತ ಸಂವಾದವನ್ನು ಆಯ್ಕೆ ಮಾಡುವುದರಲ್ಲಿ ನಂಬಿಕೆ ಇಡಲಿದೆ ಎಂದು ನಾನು ಭಾವಿಸುತ್ತೇನೆ." ಎಂದು ಹೇಳಿದ್ದರು.

ತೈವಾನ್​ ಅನ್ನು ಚೀನಾದೊಂದಿಗೆ ವಿಲೀನಗೊಳಿಸುವ ಪ್ರಯತ್ನಗಳಿಗೆ ಲೈ ಚಿಂಗ್-ಟೆ ವಿರೋಧಿಸುತ್ತಿರುವುದರಿಂದ ಚೀನಾ ಸರ್ಕಾರವು ಇವರನ್ನು ಇಷ್ಟಪಡುವುದಿಲ್ಲ. ಚೀನಾದೊಂದಿಗೆ ತಮ್ಮ ದೇಶವು ಶಾಂತಿಯುತ ಸಂಬಂಧವನ್ನು ಹೊಂದಲು ಬಯಸುವುದಾಗಿ ತಿಳಿಸಿದ ಅವರು, ಚೀನಾದ ಬೆದರಿಕೆಗಳಿಗೆ ಎಂದಿಗೂ ಮಣಿಯುವುದಿಲ್ಲ ಎಂದು ಲೈ ಚಿಂಗ್-ಟೆ ತಮ್ಮ ಭಾಷಣದಲ್ಲಿ ಭರವಸೆ ನೀಡಿದರು.

ತೈವಾನ್ ಕರಾವಳಿಯಲ್ಲಿ ನಿಯೋಜಿಸಲಾದ ಚೀನೀ ನೌಕಾಪಡೆಯು 'ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ಚೀನಾದ ಏಕೈಕ ಕಾನೂನುಬದ್ಧ ಸರ್ಕಾರವಾಗಿದೆ ಮತ್ತು ತೈವಾನ್ ಚೀನಾದ ಬೇರ್ಪಡಿಸಲಾಗದ ಭಾಗವಾಗಿದೆ.' ಎಂಬ ರೇಡಿಯೊ ಸಂದೇಶಗಳನ್ನು ನಿಯಮಿತವಾಗಿ ತೈವಾನ್​​ನಲ್ಲಿ ಪ್ರಸಾರವಾಗುವಂತೆ ತೈವಾನ್​ನ ರೇಡಿಯೊ ಫ್ರಿಕ್ವೆನ್ಸಿಗಳಲ್ಲಿ ಪ್ರಸಾರ ಮಾಡಿತು. ಆದರೆ ತೈವಾನ್ ಜನರಿಗೆ ಈ ರೀತಿಯ ಎಚ್ಚರಿಕೆಗಳು 1996 ರಿಂದ ಸಾಮಾನ್ಯ ಘಟನೆಯಾಗಿವೆ.

ಲೈ ಅವರ ಪ್ರಮಾಣವಚನ ಸ್ವೀಕಾರವು ಚೀನಾದ ಪಾಲಿಗೆ ಆಕ್ಷೇಪಾರ್ಹ ಬೆಳವಣಿಗೆಯಾಗಿದೆ. ಹೀಗಾಗಿ ಚೀನಾ ಕೆಲ ದಿನಗಳ ನಂತರ ತೈವಾನ್ ಕರಾವಳಿಯಲ್ಲಿ ತನ್ನ Joint Sword-2024A ಹೆಸರಿನ ಮಿಲಿಟರಿ ಡ್ರಿಲ್​ಗಳನ್ನು (ಸಮರಾಭ್ಯಾಸ) ನಡೆಸಿತ್ತು. ಈ ವರ್ಷ ಇಂಥ ಮತ್ತಷ್ಟು ಮಿಲಿಟರಿ ಡ್ರಿಲ್​ಗಳು ನಡೆಯಬಹುದು ಎಂದು ಇದರ ಹೆಸರೇ ಸೂಚಿಸುತ್ತದೆ. ಇತ್ತೀಚಿನ ವರ್ಷಗಳಲ್ಲಿ ಚೀನಾ ತನ್ನ ಅಸಮಾಧಾನದ ಸಂಕೇತವಾಗಿ ತೈವಾನ್ ಕರಾವಳಿಯಲ್ಲಿ ಮಿಲಿಟರಿ ಡ್ರಿಲ್​ಗಳನ್ನು ನಡೆಸುತ್ತಿದೆ.

ಈ ಸಮರಾಭ್ಯಾಸವು ತೈವಾನ್ ಸ್ವಾತಂತ್ರ್ಯ ಪ್ರತ್ಯೇಕತಾವಾದಿ ಶಕ್ತಿಗಳನ್ನು ಬೆಚ್ಚಿಬೀಳಿಸಿದೆ ಎಂದು ಚೀನಾ ಸರ್ಕಾರದ ಮುಖವಾಣಿ ದಿ ಗ್ಲೋಬಲ್ ಟೈಮ್ಸ್ ತನ್ನ ಸಂಪಾದಕೀಯದಲ್ಲಿ ಪ್ರತಿಪಾದಿಸಿದೆ. "ಸ್ವಾತಂತ್ರ್ಯವನ್ನು ಬಯಸುವುದು ಕೈಗೂಡಲಾರದ ಕನಸು ಎಂದು ಲೈ ಸರ್ಕಾರದ ಅಧಿಕಾರಿಗಳಿಗೆ ಸ್ಪಷ್ಟವಾಗಿ ಎಚ್ಚರಿಸುವುದು ಈ ಸಮರಾಭ್ಯಾಸದ ಗುರಿಯಾಗಿದೆ" ಎಂದು ಅದು ಹೇಳಿದೆ.

ಪಿಎಲ್ಎ ನೌಕಾಪಡೆ ಮತ್ತು ಅದರ ಕೋಸ್ಟ್ ಗಾರ್ಡ್​​ನ ಒಟ್ಟು 111 ವಿಮಾನಗಳು ಮತ್ತು 46 ಹಡಗುಗಳನ್ನು ಸಮರಾಭ್ಯಾಸದಲ್ಲಿ ನಿಯೋಜಿಸಲಾಗಿತ್ತು ಎಂದು ಗ್ಲೋಬಲ್ ಟೈಮ್ಸ್ ಹೇಳಿಕೊಂಡಿದೆ. ಆದರೆ ವಾಸ್ತವವು ಬಹಳ ಭಿನ್ನವಾಗಿತ್ತು.

ಮುನ್ನೆಚ್ಚರಿಕೆಯಾಗಿ ತೈವಾನ್ ತನ್ನ ಸಶಸ್ತ್ರ ಪಡೆಗಳನ್ನು ಸಜ್ಜುಗೊಳಿಸಿದೆ. ಏತನ್ಮಧ್ಯೆ ಯುಎಸ್ ಮತ್ತು ಜಪಾನ್ ಈ ಬಗ್ಗೆ ಹೆಚ್ಚೇನೂ ಕಾಳಜಿ ತೋರಿಸದೆ ಚೀನಾದ ಚಟುವಟಿಕೆಯನ್ನು ಮೇಲ್ವಿಚಾರಣೆ ಮಾತ್ರ ಮಾಡುತ್ತಿರುವಂತರ ಕಂಡು ಬಂದಿತು. ಅಂದರೆ ಚೀನಾದ ಸಮರಾಭ್ಯಾಸವು ಕೇವಲ ಬಲಪ್ರದರ್ಶನವಾಗಿತ್ತು ಹಾಗೂ ಇದು ನೈಜವಾದ ಯುದ್ಧವಾಗುವ ಸಾಧ್ಯತೆಯಿರಲಿಲ್ಲ. ಸೇನೆಯ ನಿಯೋಜನೆಯ ಸ್ವರೂಪ ಮತ್ತು ನಿಯೋಜಿಸಲಾದ ಹಡಗುಗಳ ಪ್ರಕಾರಗಳಿಂದ ಇದು ಸ್ಪಷ್ಟವಾಗುತ್ತದೆ.

ಯುಎಸ್ ಸರ್ಕಾರದ ಪ್ರತಿನಿಧಿಗಳ ಉಪಸ್ಥಿತಿಯ ನಡುವೆ ಲೈ ಅಧ್ಯಕ್ಷ ಸ್ಥಾನವನ್ನು ವಹಿಸಿಕೊಂಡಾಗ ಚೀನಾ ಹೀಗೆ ಪ್ರತಿಕ್ರಿಯಿಸಬಹುದು ಎಂದು ನಿರೀಕ್ಷಿಸಲಾಗಿತ್ತು. ಪಿಎಲ್ಎ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ದೊಡ್ಡ ಮಿಲಿಟರಿ ಕಾರ್ಯಾಚರಣೆಗೆ ಸಿದ್ಧಗೊಂಡಿಲ್ಲ ಎಂಬುದು ಯುಎಸ್​ಗೆ ತಿಳಿದಿತ್ತು. ಈ ಸಮರಾಭ್ಯಾಸವು ತೈವಾನ್ ಮೇಲೆ ಚೀನಾ ಅಧಿಕಾರ ಸ್ಥಾಪಿಸಲಿದೆ ಎಂದು ತನ್ನ ಸ್ಥಳೀಯ ನಾಗರಿಕರಿಗೆ ಸಂದೇಶ ರವಾನಿಸುವ ಗುರಿಯನ್ನು ಮಾತ್ರ ಹೋಂದಿತ್ತು ಎಂಬುದು ಇದರಿಂದ ತಿಳಿಯುತ್ತದೆ.

2020 ರಲ್ಲಿ ಲಡಾಕ್​ನಲ್ಲಿ ಮಾಡಿದಂತೆ ಸಮರಾಭ್ಯಾಸದ ನೆಪದಲ್ಲಿ ಚೀನಾ ದುಷ್ಕೃತ್ಯಕ್ಕೆ ಪ್ರಯತ್ನಿಸಬಹುದು ಎಂಬ ಶಂಕೆಯಿಂದ ತೈವಾನ್ ಚೀನಾದ ಸಮರಾಭ್ಯಾಸವನ್ನು ಗಂಭೀರವಾಗಿ ಪರಿಗಣಿಸಿತು. ತೈವಾನ್​ಗೆ ಪ್ರಮುಖ ಭೂಭಾಗದ ಮೇಲಿನ ಅಪಾಯಕ್ಕಿಂತ ಅದರಾಚೆಗೆ ಹರಡಿರುವ ದ್ವೀಪಗಳಿಗೆ ಹೆಚ್ಚಿನ ಅಪಾಯವಾಗಬಹುದು ಎಂಬ ಆತಂಕವಿದೆ. ಬೀಜಿಂಗ್​ನ ನಿಜವಾದ ಉದ್ದೇಶವನ್ನು ತಿಳಿಯಲು ತೈವಾನ್ ಚೀನಾದ ಎಲ್ಲಾ ಮಿಲಿಟರಿ ಚಟುವಟಿಕೆಗಳನ್ನು ಗಮನಿಸುತ್ತಿದೆ.

ಈ ಸಮರಾಭ್ಯಾಸಗಳು ಜಂಟಿ ಸಮುದ್ರ ಮತ್ತು ವಾಯು ಯುದ್ಧ ಸನ್ನದ್ಧ ಗಸ್ತುಗಳಾಗಿದ್ದು, ಯುದ್ಧಭೂಮಿಯಲ್ಲಿ ನಿಯಂತ್ರಣ ಪಡೆಯುವುದು ಮತ್ತು ಜಂಟಿ ನಿಖರ ದಾಳಿಗಳನ್ನು ನಡೆಸುವುದರ ಮೇಲೆ ಕೇಂದ್ರೀಕರಿಸಿವೆ ಎಂದು ಚೀನಾ ಸರ್ಕಾರ ಹೇಳಿದೆ. ತೈವಾನ್ ಮೇಲೆ ದಿಗ್ಬಂಧನ ಕ್ರಮವನ್ನು ಪ್ರಯೋಗಿಸಿದ್ದಾಗಿಯೂ ಅದು ಹೇಳಿಕೊಂಡಿದೆ. ಇತ್ತೀಚಿನ ವರ್ಷಗಳಲ್ಲಿ ಚೀನಾ ಇಂತಹ ದೊಡ್ಡ ಪ್ರಮಾಣದ ಸಮರಾಭ್ಯಾಸಗಳನ್ನು ನಡೆಸುತ್ತಿರುವುದು ಇದು ಮೂರನೇ ಬಾರಿ. ವರದಿಗಳ ಪ್ರಕಾರ, ಪ್ರಸ್ತುತ ಸಮರಾಭ್ಯಾಸಗಳು ಈ ಹಿಂದಿನ ಸಮರಾಭ್ಯಾಸಗಳಿಗಿಂತ ತೈವಾನ್ ಗೆ ತೀರಾ ಹತ್ತಿರದಲ್ಲಿ ನಡೆದಿವೆ. ಚೀನಾ ಏನಾದರೂ ಮಾಡಿದೆ ಎಂದರೆ ಅದಕ್ಕೆ ವಿಭಿನ್ನ ಅರ್ಥಗಳಿರುತ್ತವೆ.

ಸಾಮಾನ್ಯ, ವಾಡಿಕೆಯ ಮತ್ತು ಪ್ರಜಾಪ್ರಭುತ್ವದ ಪರಿವರ್ತನೆಯನ್ನು ಮಿಲಿಟರಿ ಪ್ರಚೋದನೆಗಳಿಗೆ ನೆಪವಾಗಿ ಬಳಸುವುದರಿಂದ ಯುದ್ಧ ಭೀತಿ ಉಲ್ಬಣಗೊಳ್ಳುವ ಅಪಾಯವಿದೆ ಮತ್ತು ಇದು ದಶಕಗಳಿಂದ ತೈವಾನ್ ಜಲಸಂಧಿಯಾದ್ಯಂತ ಶಾಂತಿ ಮತ್ತು ಸ್ಥಿರತೆಯು ಹಾಳಾಗುವ ಸಾಧ್ಯತೆ ಇರುತ್ತದೆ' ಎಂದು ಅಮೆರಿಕದ ಸ್ಟೇಟ್ ಡಿಪಾರ್ಟ್​ಮೆಂಟ್​ ಹೇಳಿಕೆಯಲ್ಲಿ ತಿಳಿಸಿದೆ. ಸಮರಾಭ್ಯಾಸ ನಡೆಯುತ್ತಿರುವ ಪ್ರದೇಶದ ಹತ್ತಿರದಲ್ಲಿರುವ ಯುಎಸ್ ಮಿಲಿಟರಿ ನೆಲೆಗಳಲ್ಲಿ ಹೆಚ್ಚುವರಿ ಸಿದ್ಧತೆ ಮಾಡಿರಲಿಲ್ಲ.

ಯುಎಸ್ ಇಂಡೋ-ಪೆಸಿಫಿಕ್ ಕಮಾಂಡರ್ ಅಡ್ಮಿರಲ್ ಸ್ಯಾಮ್ಯುಯೆಲ್ ಪಾಪರೊ ಅವರು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಈ ಸಮರಾಭ್ಯಾಸವು 'ಪೂರ್ವಾಭ್ಯಾಸದಂತೆ ಕಾಣುತ್ತಿದೆ' ಎಂದು ಉಲ್ಲೇಖಿಸಿದ್ದಾರೆ. 'ನಾವು ಅದನ್ನು ನೋಡಿದ್ದೇವೆ, ಗಮನಿಸಿದ್ದೇವೆ, ಅದರಿಂದ ಕಲಿತಿದ್ದೇವೆ ಮತ್ತು ಭವಿಷ್ಯಕ್ಕಾಗಿ ತಯಾರಾಗಲು ಅವು ನಮಗೆ ಸಹಾಯ ಮಾಡಿದವು. ಎದುರಾಳಿಯ ಪ್ರತಿಯೊಂದು ಸಮರಾಭ್ಯಾಸವು ನಮಗೆ ಹೊಸ ಪಾಠಗಳನ್ನು ಕಲಿಸುತ್ತದೆ' ಎಂದು ಅವರು ಹೇಳಿದರು.

ಕಳೆದ ವಾರ ಸಿಂಗಾಪುರದಲ್ಲಿ ನಡೆದ ಶಾಂಗ್ರಿ-ಲಾ ಸಂವಾದದ ಸಂದರ್ಭದಲ್ಲಿ ಯುಎಸ್ ವಿದೇಶಾಂಗ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಮತ್ತು ಚೀನಾದ ಸಹವರ್ತಿ ಅಡ್ಮಿರಲ್ ಡಾಂಗ್ ಜುನ್ ನಡುವಿನ ಸಭೆಯ ನಂತರ, ಯುಎಸ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿತು. 'ತೈವಾನ್ ಜಲಸಂಧಿಯ ಸುತ್ತಲೂ ಇತ್ತೀಚಿನ ಪ್ರಚೋದನಕಾರಿ ಪಿಎಲ್ಎ ಚಟುವಟಿಕೆಗಳ ಬಗ್ಗೆ ಕಾರ್ಯದರ್ಶಿ ಕಳವಳ ವ್ಯಕ್ತಪಡಿಸಿದರು ಮತ್ತು ಚೀನಾ ತೈವಾನ್​ನ ರಾಜಕೀಯ ಪರಿವರ್ತನೆಯನ್ನು ಬಳಸಬಾರದು ಎಂದು ಪುನರುಚ್ಚರಿಸಿದರು." ಆದರೆ ತೈವಾನ್ ನಮ್ಮ ಆಂತರಿಕ ವಿಷಯ ಎಂದು ಚೀನಾ ಮತ್ತೊಮ್ಮೆ ಹೇಳಿತು.

ಚೀನಾದ ರಕ್ಷಣಾ ಸಚಿವರು ಶಾಂಗ್ರಿ-ಲಾ ಸಂವಾದದಲ್ಲಿ 'ತೈವಾನ್ ಅನ್ನು ಚೀನಾದಿಂದ ವಿಭಜಿಸುವ ಧೈರ್ಯ ಮಾಡುವವರನ್ನು ತುಂಡು ತುಂಡಾಗಿ ಕತ್ತರಿಸಿ ನಾಶ ಮಾಡಲಾಗುವುದು' ಎಂದು ಹೇಳಿದರು. "ಕಾನೂನಿಗೆ ಅನುಗುಣವಾಗಿ ತೈವಾನ್ ಪ್ರಶ್ನೆಯನ್ನು ಚೀನಾ ನಿರ್ವಹಿಸುವುದು ಸಂಪೂರ್ಣವಾಗಿ ಚೀನಾದ ಆಂತರಿಕ ವ್ಯವಹಾರಗಳ ವಿಷಯವಾಗಿದೆ. ಇದರಲ್ಲಿ ಅದು ಯಾವುದೇ ವಿದೇಶಿ ಹಸ್ತಕ್ಷೇಪವನ್ನು ಸಹಿಸುವುದಿಲ್ಲ" ಎಂದು ಅವರು ಪುನರುಚ್ಚರಿಸಿದರು.

ತೈವಾನ್ ಜಲಸಂಧಿಯಲ್ಲಿ ಚೀನಾದ ಕ್ರಮಗಳ ಬಗ್ಗೆ ಸುಳಿವು ನೀಡಿದ ಲಾಯ್ಡ್ ಆಸ್ಟಿನ್, 'ವಿವಾದಗಳ ಶಾಂತಿಯುತ ಪರಿಹಾರವು ಮಾತುಕತೆಯ ಮೂಲಕ ಇರಬೇಕು - ಬಲಾತ್ಕಾರ ಅಥವಾ ಸಂಘರ್ಷವಲ್ಲ. ಮತ್ತು ಖಂಡಿತವಾಗಿಯೂ ಶಿಕ್ಷೆ ಎಂದು ಕರೆಯಲ್ಪಡುವ ಮೂಲಕ ಅಲ್ಲ.'

ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕಾಗಿ ತೈಪೆಯಲ್ಲಿದ್ದ ಯುಎಸ್ ಸೆನೆಟರ್ ಮತ್ತು ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷ ಮೈಕೆಲ್ ಮೆಕ್ಕಾಲ್ ಮಾತನಾಡಿ, "ಯುಎಸ್ ಭರವಸೆ ನೀಡಿದಂತೆ ಮಿಲಿಟರಿ ನೆರವು ಶೀಘ್ರದಲ್ಲೇ ತೈವಾನ್​ಗೆ ತಲುಪಲಿದೆ. ಇದು ತೈವಾನ್ ರಕ್ಷಣೆಯನ್ನು ಬಲಪಡಿಸುತ್ತದೆ" ಎಂದು ಹೇಳಿದರು. ನಿರೀಕ್ಷಿಸಿದಂತೆ, ಇದನ್ನು ಬೀಜಿಂಗ್ ತನ್ನ ಆಂತರಿಕ ವಿಷಯಗಳಲ್ಲಿ ಹಸ್ತಕ್ಷೇಪ ಎಂದು ಟೀಕಿಸಿತು.

ಚೀನೀ ಸಮರಾಭ್ಯಾಸಗಳ ಪರಿಣಾಮವೇನು? ತನ್ನ ಮಿಲಿಟರಿ ಶಕ್ತಿಯಿಂದ ತೈವಾನ್ ಜನರನ್ನು ಮಣಿಸಬಹುದು ಎಂದು ಚೀನಾ ಭಾವಿಸಿದ್ದರೆ, ಅದು ಬಹುತೇಕ ತಪ್ಪು. ಚೀನಾ ಏನೇ ಕಸರತ್ತು ಮಾಡಿದರೂ ತೈವಾನ್​ನಲ್ಲಿ ನಡೆದ ಚುನಾವಣೆಗಳಲ್ಲಿ ಹಸ್ತಕ್ಷೇಪ ಮಾಡಲು ವಿಫಲವಾಗಿದೆ.

ಸಮರಾಭ್ಯಾಸದ ಬಗ್ಗೆ ಎರಡೂ ಕಡೆಗಳಿಂದ ವಾಕ್ಸಮರ ನಡೆಯಿತು. 'ಬೆಂಕಿಯೊಂದಿಗೆ ಆಡುವವರು ತಮ್ಮನ್ನು ತಾವು ಸುಟ್ಟುಕೊಳ್ಳುತ್ತಾರೆ. ತೈವಾನ್ ಸ್ವಾತಂತ್ರ್ಯ ನಮ್ಮನ್ನು ಪ್ರಚೋದಿಸುತ್ತದೆ. ತಾಯ್ನಾಡಿನ ಸಂಪೂರ್ಣ ಏಕೀಕರಣವನ್ನು ಸಾಧಿಸುವವರೆಗೆ ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸುತ್ತೇವೆ" ಎಂದು ಚೀನಾ ಹೇಳಿದೆ. ಇದಕ್ಕೆ ಪ್ರತಿಕ್ರಿಯಿಸಿದ ತೈವಾನ್, "ಚೀನಾದ ಕಮ್ಯುನಿಸ್ಟ್ ಪಕ್ಷವು ತೈವಾನ್ ಮೇಲೆ ದಾಳಿ ಮಾಡಿದರೂ ತೈವಾನ್ ಅನ್ನು ವಶಪಡಿಸಿಕೊಳ್ಳುವುದು ಸುಲಭವಲ್ಲ. ತೈವಾನ್ ಜನ ಯುದ್ಧಕ್ಕೆ ಹೆದರುವುದಿಲ್ಲ." ಎಂದು ಹೇಳಿತು.

ಸುಳ್ಳು ಸುದ್ದಿಗಳನ್ನು ಪ್ರಸಾರ ಮಾಡುವುದಕ್ಕೆ ಹೆಸರುವಾಸಿಯಾದ ಗ್ಲೋಬಲ್ ಟೈಮ್ಸ್, ಪ್ರಸ್ತುತ ಸಮರಾಭ್ಯಾಸದ ಬಗ್ಗೆ ಚರ್ಚಿಸುತ್ತಾ, ತೈವಾನ್ ಫೈಟರ್ ಪೈಲಟ್ ಎಂದು ಹೇಳಲಾದವರನ್ನು ಉಲ್ಲೇಖಿಸಿ, 'ಈ ವರ್ಷದಿಂದ, ತೈವಾನ್ ವಾಯುಪಡೆಯ ಅನೇಕ ಪೈಲಟ್​ಗಳು ನಿವೃತ್ತರಾಗಲು ಬಯಸಿದ್ದಾರೆ. ಕೆಲವು ಯುವ ಪೈಲಟ್​ಗಳು ಕೆಲಸ ಬಿಡುವುದಕ್ಕೆ ಪ್ರತಿಯಾಗಿ ಪರಿಹಾರ ಪಾವತಿಸಲು ಸಹ ಸಿದ್ಧರಿದ್ದಾರೆ ಎಂದು ಬರೆದಿದೆ. ಆದರೆ ವಾಸ್ತವ ಇದಕ್ಕೆ ತದ್ವಿರುದ್ಧವಾಗಿತ್ತು. ಚೀನಾದ ದುಷ್ಕೃತ್ಯಗಳನ್ನು ತಡೆಯಲು ತೈವಾನ್ ಪಡೆಗಳು ಉತ್ತಮವಾಗಿ ಕೆಲಸ ಮಾಡುತ್ತಿವೆ.

ಈ ಸಮರಾಭ್ಯಾಸದ ಭಾಗವಾಗಿ ಚೀನಾ ಮೊದಲ ಬಾರಿಗೆ ತೈವಾನ್ ಪೂರ್ವ ಕರಾವಳಿಯಲ್ಲಿ ತನ್ನ ನೌಕಾಪಡೆಯನ್ನು ನಿಯೋಜಿಸಿದೆ. ಇದು ಯುಎಸ್ ಮತ್ತು ತೈವಾನ್ ಗೆ ದೀರ್ಘ-ಶ್ರೇಣಿಯ ಹಡಗು ವಿರೋಧಿ ಕ್ಷಿಪಣಿಗಳು ಸೇರಿದಂತೆ ತೈವಾನ್ ನ ಮಿಲಿಟರಿ ಅಗತ್ಯವನ್ನು ಮರುಪರಿಶೀಲಿಸಲು ಅನುವು ಮಾಡಿಕೊಟ್ಟಿತು. ಇದು ಖರೀದಿಯ ಕಾರ್ಯಸೂಚಿಯಲ್ಲಿ ಮುಂದಿನ ಆದ್ಯತೆಯಾಗಿರುತ್ತದೆ. ಇಂಥ ಸಂದರ್ಭಕ್ಕಾಗಿ ತೈವಾನ್ ಈಗಾಗಲೇ ತನ್ನ ಹೊರಗಿನ ದ್ವೀಪಗಳನ್ನು ಬಲಪಡಿಸಿದೆ. ಯುಎಸ್ ಕಾಂಗ್ರೆಸ್ ಇತ್ತೀಚೆಗೆ ತೈವಾನ್ ಗೆ 8.1 ಬಿಲಿಯನ್ ಡಾಲರ್ ನೆರವನ್ನು ಅನುಮೋದಿಸಿದೆ. ಆದಾಗ್ಯೂ, ಚೀನಾ ಯಾವುದೇ ಆಕ್ರಮಣಕ್ಕೆ ಮುಂಚಿತವಾಗಿ ತೈವಾನ್ ಅನ್ನು ದಿಗ್ಬಂಧನಗೊಳಿಸುವ ಸಾಮರ್ಥ್ಯವನ್ನು ಹೊಂದಿದೆ ಎಂದು ಪ್ರದರ್ಶಿಸಿತು. ಇದು ಎಷ್ಟು ಪರಿಣಾಮಕಾರಿಯಾಗಿರುತ್ತದೆ ಎಂಬುದು ತಿಳಿದಿಲ್ಲ.

ಚೀನಾ ತನ್ನ ಮಿಲಿಟರಿ ಶಕ್ತಿಯನ್ನು ಪ್ರದರ್ಶಿಸುವ ಮೂಲಕ ತೈವಾನ್ ಮೇಲೆ ಮಾನಸಿಕ ಯುದ್ಧಕ್ಕೆ ಪ್ರಯತ್ನಿಸಿತು. ಇದಕ್ಕೆ ಪ್ರತೀಕಾರವಾಗಿ, ತೈವಾನ್ ತನ್ನ ಸೈನ್ಯದ ಸಿದ್ಧತೆಗಳು, ನೈತಿಕ ಸ್ಥೈರ್ಯ ಮತ್ತು ಚೀನಾದ ಯಾವುದೇ ಆಕ್ರಮಣವನ್ನು ನಿಗ್ರಹಿಸುವ ಸಂಕಲ್ಪದ ವೀಡಿಯೊಗಳು ಮತ್ತು ಚಿತ್ರಗಳನ್ನು ಬಿಡುಗಡೆ ಮಾಡಿತು. ತೈವಾನ್ ನ ಮಿಲಿಟರಿ ವಿಶ್ಲೇಷಕ ಸು ತ್ಸು-ಯುನ್ ಮಾತನಾಡಿ, 'ತೈವಾನ್ ಅಧಿಕಾರಿಗಳು ದ್ವೀಪದ ಸುತ್ತಲೂ ಚೀನಾದ ಮಿಲಿಟರಿ ಚಟುವಟಿಕೆಗಳನ್ನು ಪತ್ತೆಹಚ್ಚುವ ವೀಡಿಯೊಗಳನ್ನು ಬಿಡುಗಡೆ ಮಾಡುವ ಮೂಲಕ ಚೀನಾದ ಮಾನಸಿಕ ಯುದ್ಧದ ಪರಿಣಾಮವನ್ನು ತಟಸ್ಥಗೊಳಿಸಿದ್ದಾರೆ' ಎಂದು ಹೇಳಿದ್ದಾರೆ.

ಯುದ್ಧ ಆರಂಭಿಸುವುದು ಎಂದಿಗೂ ಚೀನೀಯರ ಉದ್ದೇಶವಾಗಿಲಿಲ್ಲ. ಕೇವಲ ಬೆದರಿಸುವುದು ಅವರ ತಂತ್ರವಾಗಿತ್ತು. ಆದರೆ ಅದು ಯಶಸ್ವಿಯಾಗಲಿಲ್ಲ. ಇದು ಬೇರೆ ಉದ್ದೇಶಗಳನ್ನು ಹೊಂದಿದ್ದರೆ, ಸೈನ್ಯ ವಾಹಕ ನೌಕೆಗಳ ನಿಯೋಜನೆ, ಕರಾವಳಿಯುದ್ದಕ್ಕೂ ನಿವಾಸಿಗಳನ್ನು ಸ್ಥಳಾಂತರಿಸುವುದು, ಜಾಗತಿಕ ಹಡಗು ಮತ್ತು ವಿಮಾನ ಮಾರ್ಗಗಳನ್ನು ಮುಚ್ಚುವುದು ಸೇರಿದಂತೆ ವಿಭಿನ್ನ ವಿಧಾನವನ್ನು ಅಳವಡಿಸಿಕೊಳ್ಳಲಾಗುತ್ತಿತ್ತು. ಇದು ತೈವಾನ್ ತಿಳಿದಿತ್ತು ಮತ್ತು ಅದಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸಿತು.

ಹಾಂಗ್ ಕಾಂಗ್ ಜೊತೆಗಿನ ಒಪ್ಪಂದವನ್ನು ಚೀನಾ ಭಂಗ ಮಾಡಿರುವುದನ್ನು ತೈವಾನ್ ಜನರು ನೋಡಿದ್ದಾರೆ. ಹೀಗಾಗಿ ಬೀಜಿಂಗ್ ನೀಡುವ ಯಾವುದೇ ಭರವಸೆಗೆ ಅದು ಎಂದಿಗೂ ಮಣಿಯುವುದಿಲ್ಲ. ಚೀನಾ ಹಾಂಗ್ ಕಾಂಗ್ ಗೆ 'ಒಂದು ರಾಷ್ಟ್ರ ಎರಡು ವ್ಯವಸ್ಥೆ' ಭರವಸೆ ನೀಡಿತ್ತು, ಆದರೆ ಶೀಘ್ರದಲ್ಲೇ ಅದರಿಂದ ವಿಮುಖವಾಯಿತು. ಈಗ ತೈವಾನ್ ಗೆ ಚೀನಾ ಅದೇ ಭರವಸೆ ನೀಡುತ್ತಿದೆ. ಚೀನಾವು ತೈವಾನ್ ಅನ್ನು ವಶಪಡಿಸಿಕೊಳ್ಳುವುದು ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಬೇಕಾಗಿಲ್ಲ. ಜಪಾನ್​ನ ಭದ್ರತೆಗೆ ಮತ್ತು ಸೆಮಿಕಂಡಕ್ಟರ್​ಗಳ ಜಾಗತಿಕ ಪೂರೈಕೆ ಸರಪಳಿಗೆ ಅಡ್ಡಿಯಾಗಬಹುದು ಎಂಬುದು ಇದಕ್ಕೆ ಕಾರಣವಾಗಿದೆ.

ಲೈ ಚಿಂಗ್-ಟೆ ತೈವಾನ್ ಅಧ್ಯಕ್ಷರಾಗುವುದರೊಂದಿಗೆ ಎರಡೂ ರಾಷ್ಟ್ರಗಳ ನಡುವಿನ ಉದ್ವಿಗ್ನತೆಯು ಇನ್ನಷ್ಟು ಉಲ್ಬಣಿಸಬಹುದು. ಚೀನಾ ಹೊಸ ಅಧ್ಯಕ್ಷರನ್ನು ಸ್ವತಂತ್ರ ತೈವಾನ್ ಪರವಾಗಿದ್ದಾರೆ ಎಂದು ಪರಿಗಣಿಸುತ್ತದೆ. ಈ ಬಗ್ಗೆ ಮಾತನಾಡಿದ ಫುಡಾನ್ ವಿಶ್ವವಿದ್ಯಾಲಯದ ತೈವಾನ್ ಅಧ್ಯಯನ ಕೇಂದ್ರದ ನಿರ್ದೇಶಕ ಕ್ಸಿನ್ ಕಿಯಾಂಗ್, 'ಗಡಿಯಾಚೆಗಿನ ಉದ್ವಿಗ್ನತೆ ಉಲ್ಬಣವಾಗಲಿದೆ. ಭವಿಷ್ಯದಲ್ಲಿ, ತ್ಸೈ ಇಂಗ್-ವೆನ್ (ಲೈ ಅವರ ಪೂರ್ವಾಧಿಕಾರಿ) ಅಧಿಕಾರದಲ್ಲಿದ್ದ ಅವಧಿಗೆ ಹೋಲಿಸಿದರೆ ತೈವಾನ್ ಜಲಸಂಧಿ ಇನ್ನೂ ಹೆಚ್ಚಿನ ಪ್ರಕ್ಷುಬ್ಧತೆಯನ್ನು ಕಾಣಬಹುದು.' ಎಂದು ಹೇಳಿದರು.

ಇದು ಭಾರತದ ಮೇಲೆ ಹೇಗೆ ಪರಿಣಾಮ ಬೀರುತ್ತದೆ? ಏನೇ ಆದರೂ ನವದೆಹಲಿ ಈ ವಿವಾದದಲ್ಲಿ ಭಾಗಿಯಲ್ಲ. ಆದಾಗ್ಯೂ, ಚೀನಾದ ಕ್ರಮಗಳನ್ನು ಭಾರತವು ನಿಕಟವಾಗಿ ಗಮನಿಸುತ್ತಿದೆ. ಚೀನಾಕ್ಕೆ, ತೈವಾನ್ ಮತ್ತು ಅರುಣಾಚಲ ಪ್ರದೇಶಗಳು ದಕ್ಷಿಣ ಮತ್ತು ಪೂರ್ವ ಚೀನಾ ಸಮುದ್ರದ ದ್ವೀಪಗಳ ಜೊತೆಗೆ ಅಪೂರ್ಣ ಕಾರ್ಯಸೂಚಿಗಳಾಗಿವೆ.

ಈ ಬಗ್ಗೆ ಸಿಂಗಾಪುರದಲ್ಲಿ ಮಾತನಾಡಿದ ಆಸ್ಟಿನ್, 'ಏಷ್ಯಾ ಸುರಕ್ಷಿತವಾಗಿದ್ದರೆ ಮಾತ್ರ ಯುನೈಟೆಡ್ ಸ್ಟೇಟ್ಸ್ ಸುರಕ್ಷಿತವಾಗಿರಲು ಸಾಧ್ಯ' ಎಂದು ಹೇಳಿದರು. ಚೀನಾದ ದುಷ್ಕೃತ್ಯಗಳನ್ನು ತಡೆಗಟ್ಟುವುದು ಅದರ ಉದ್ದೇಶವಾಗಿದೆ ಎಂಬುದನ್ನು ಇದು ಸೂಚಿಸುತ್ತದೆ. "ಭಾರತದೊಂದಿಗೆ ನಾವು ಈಗ ಹೊಂದಿರುವ ಸಂಬಂಧವು ಈ ಹಿಂದಿನ ಸಂಬಂಧಕ್ಕಿಂತ ಗಟ್ಟಿಯಾಗಿದೆ ಅಥವಾ ಉತ್ತಮವಾಗಿದೆ" ಎಂದು ಆಸ್ಟಿನ್ ಹೇಳಿದರು. ಅಮೆರಿಕದ ನಿಕಟ ಮಿತ್ರ ರಾಷ್ಟ್ರವಾಗಿ ಭಾರತವು ಸ್ವಾಭಾವಿಕವಾಗಿ ಕಳವಳಗೊಳ್ಳುತ್ತದೆ. ದೆಹಲಿ ಈಗಾಗಲೇ ಈ ಪ್ರದೇಶದ ರಾಷ್ಟ್ರಗಳಿಗೆ ಶಸ್ತ್ರಾಸ್ತ್ರಗಳು ಮತ್ತು ತರಬೇತಿಯನ್ನು ನೀಡುವ ಮೂಲಕ ಪಾಲುದಾರಿಕೆ ಹೊಂದಿದೆ.

ಏತನ್ಮಧ್ಯೆ ಯುಎಸ್ ಮತ್ತು ಜಪಾನ್​ಗಳು ಚೀನಾ-ತೈವಾನ್ ಉದ್ವಿಗ್ನತೆಯ ಬಗ್ಗೆ ಸೂಕ್ಷ್ಮವಾಗಿ ಗಮನಿಸಬೇಕಿದೆ. ಚೀನಾದ ಯಾವುದೇ ದುಷ್ಕೃತ್ಯಗಳನ್ನು ತಡೆಯಲು ತೈವಾನ್ ಸಾಕಷ್ಟು ಶಸ್ತ್ರಸಜ್ಜಿತವಾಗಿರುವುದನ್ನು ಅದು ಖಚಿತಪಡಿಸಿಕೊಳ್ಳಬೇಕಿದೆ.

ಲೇಖನ: ಹರ್ಷ ಕಾಕರ್, ಮೇಜರ್ ಜನರಲ್ (ನಿವೃತ್ತ)

ಇದನ್ನೂ ಓದಿ : ರಷ್ಯಾ - ಉಕ್ರೇನ್ ಯುದ್ಧ: ಭಾರತದ ಪಾತ್ರವೇನು? ದೇಶದ ಮೇಲಾಗುವ ಪರಿಣಾಮಗಳೇನು? - Russia Ukraine war

ETV Bharat Logo

Copyright © 2024 Ushodaya Enterprises Pvt. Ltd., All Rights Reserved.