IRCTC Kerala Hills and Water Tour: ಹಸಿರು ಬೆಟ್ಟಗಳು ಹಾಗೂ ನೈಸರ್ಗಿಕ ಸೌಂದರ್ಯವನ್ನು ವೀಕ್ಷಿಸಲು ಹೇಳಿ ಮಾಡಿಸಿದ ರಾಜ್ಯ ಅಂದ್ರೆ, ಅದು ಕೇರಳ. ಅದಕ್ಕಾಗಿಯೇ ಅನೇಕ ಜನರು ಈ ದೇವರ ನಾಡಿಗೆ ಭೇಟಿ ನೀಡಲು ಇಷ್ಟಪಡುತ್ತಾರೆ. ವಿಶೇಷವಾಗಿ ಚಳಿಗಾಲದಲ್ಲಿ ಜಲಪಾತ ಹಾಗೂ ಹಸಿರು ಬೆಟ್ಟಗಳಿಗೆ ಆವರಿಸಿರುವ ಮಂಜನ್ನು ಕಣ್ತುಂಬಿಕೊಳ್ಳಲು ಜನರು ಹಂಬಲಿಸುತ್ತಾರೆ. ಈ ಆಲೋಚನೆಯಲ್ಲಿ ನೀವು ಕೂಡ ಇದ್ದೀರಾ? ಹಾಗಾದ್ರೆ ನಿಮಗೆ ಇಲ್ಲೊಂದು ಗುಡ್ ನ್ಯೂಸ್ ಇದೆ..
ಇಂಡಿಯನ್ ರೈಲ್ವೆ ಕ್ಯಾಟರಿಂಗ್ ಮತ್ತು ಟೂರಿಸಂ ಕಾರ್ಪೊರೇಷನ್ ಕೇರಳದ ಸೌಂದರ್ಯವನ್ನು ಆನಂದಿಸಲು ಅದ್ಭುತ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ರವಾಸದ ಪ್ಯಾಕೇಜ್ ಎಷ್ಟು ದಿನಗಳನ್ನು ಹೊಂದಿದೆ? ಯಾವೆಲ್ಲಾ ಪ್ರದೇಶಗಳಿಗೆ ಭೇಟಿ ನೀಡಬಹುದು ಎಂಬುದರ ವಿವರಗಳನ್ನು ತಿಳಿಯೋಣ..
IRCTCಯು 'ಕೇರಳ ಹಿಲ್ಸ್ & ವಾಟರ್ಸ್' ಎಂಬ ಹೆಸರಿನಲ್ಲಿ ಈ ಪ್ಯಾಕೇಜ್ ಘೋಷಣೆ ಮಾಡಿದೆ. ಈ ಪ್ಯಾಕೇಜ್ 5 ರಾತ್ರಿಗಳು ಮತ್ತು 6 ಹಗಲುಗಳನ್ನು ಒಳಗೊಂಡಿದೆ. ಮುನ್ನಾರ್, ಅಲೆಪ್ಪಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ಈ ಪ್ರವಾಸದಲ್ಲಿ ವೀಕ್ಷಿಸಬಹುದು. ಈ ಪ್ಯಾಕೇಜ್ನಲ್ಲಿ ಹೈದರಾಬಾದ್‌ನಿಂದ ರೈಲು ಪ್ರಯಾಣದ ಮೂಲಕ ನಿಗದಿಪಡಿಸಿದ ದಿನಾಂಕಗಳಲ್ಲಿ ಪ್ರವಾಸವು ಪ್ರತಿ ಮಂಗಳವಾರ ಲಭ್ಯವಿದೆ.
1ನೇ ದಿನ: ಮೊದಲ ದಿನ ಶಬರಿ ಎಕ್ಸ್‌ಪ್ರೆಸ್ (ಟ್ರೈನ್ ನಂ: 17230) ಸಿಕಂದರಾಬಾದ್ ರೈಲು ನಿಲ್ದಾಣದಿಂದ ಮಧ್ಯಾಹ್ನ 12.20ಕ್ಕೆ ಹೊರಡಲಿದೆ. ಆ ರಾತ್ರಿ ಇಡೀ ಪ್ರಯಾಣ ಮುಂದುವರಿಯುತ್ತದೆ.
2ನೇ ದಿನ: ಎರಡನೇ ದಿನ ಮಧ್ಯಾಹ್ನ 1 ಗಂಟೆಗೆ ಎರ್ನಾಕುಲಂ ರೈಲು ನಿಲ್ದಾಣ ತಲುಪಲಿದೆ. ಅಲ್ಲಿಂದ ಮುನ್ನಾರ್‌ಗೆ ಹೋಗಲಾಗುವುದು. ಅಲ್ಲಿ ಪ್ರವಾಸಿಗರು ಮುಂಚಿತವಾಗಿ ಕಾಯ್ದಿರಿಸಿದ ಹೋಟೆಲ್ನಲ್ಲಿ ಚೆಕ್ ಇನ್ ಮಾಡಬೇಕಾಗುತ್ತದೆ. ಅದಾದ ನಂತರ, ಸಂಜೆ ಮುನ್ನಾರ್ ಪಟ್ಟಣದಲ್ಲಿ ಹಲವು ಸ್ಥಳಗಳಿಗೆ ಭೇಟಿ ನೀಡಲಾಗುವುದು. ಆ ರಾತ್ರಿ ಅಲ್ಲಿಯೇ ತಂಗಬೇಕಾಗುತ್ತದೆ.
3ನೇ ದಿನ: ಮೂರನೇ ದಿನದ ಬೆಳಗ್ಗೆ, ಎರವಿಕುಲಂ ರಾಷ್ಟ್ರೀಯ ಉದ್ಯಾನಕ್ಕೆ ಭೇಟಿ ನೀಡಲಾಗುವುದು. ನಂತರ ಅವರು ಟೀ ಮ್ಯೂಸಿಯಂ, ಮೆಟ್ಟುಪೆಟ್ಟಿ ಅಣೆಕಟ್ಟು ಪ್ರದೇಶಕ್ಕೆ ಭೇಟಿ ಕೊಡಲಾಗುವುದು. ಅಂದು ರಾತ್ರಿಯೂ ಮುನ್ನಾರ್ನಲ್ಲಿ ಉಳಿದುಕೊಳ್ಳಲಾಗುವುದು.
4ನೇ ದಿನ: ನಾಲ್ಕನೇ ದಿನ, ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ಅಲ್ಲೆಪ್ಪಿಗೆ ಹೋಗಲಾಗುವುದು. ಹೋಟೆಲ್ನಲ್ಲಿ ಚೆಕ್ ಇನ್ ಮಾಡಿ.. ಪ್ರವಾಸಿಗರು ಹಿನ್ನೀರಿನ ಪ್ರದೇಶಕ್ಕೆ ಹೋಗುತ್ತಾರೆ. ಅಲ್ಲಿ ಅವರು ಇಡೀ ದಿನವನ್ನು ಆನಂದಿಸುತ್ತಾರೆ. ಆ ರಾತ್ರಿ ಅಲೆಪ್ಪಿಯಲ್ಲಿ ತಂಗಬೇಕಾಗುತ್ತದೆ.
5ನೇ ದಿನ: ಐದನೇ ದಿನ ಹೋಟೆಲ್‌ನಿಂದ ಚೆಕ್ ಔಟ್ ಮಾಡಿ ಎರ್ನಾಕುಲಂಗೆ ಹೋಗಲಾಗುವುದು. ಬೆಳಗ್ಗೆ 11.20 ಗಂಟೆಗೆ ಶಬರಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ 17229) ಹೈದರಾಬಾದ್‌ಗೆ ಹಿಂದಿರುಗುವ ಪ್ರಯಾಣ ಆರಂಭಿಸಲಾಗುವುದು.
6ನೇ ದಿನ: ಆರನೇ ದಿನ, ಮಧ್ಯಾಹ್ನ 1ಕ್ಕೆ ಗಂಟೆಗೆ ಸಿಕಂದರಾಬಾದ್ ರೈಲು ನಿಲ್ದಾಣವನ್ನು ತಲುಪುವ ಮೂಲಕ ಪ್ರವಾಸವು ಕೊನೆಗೊಳ್ಳುತ್ತದೆ.
ಬೆಲೆ ವಿವರ ನೋಡೋಣ:
- ನೀವು ಒಂದರಿಂದ ಮೂರು ಪ್ರಯಾಣಿಕರಿಗೆ ಬೆಲೆಗಳನ್ನು ನೋಡಿದರೆ..
- ಕಂಫರ್ಟ್ನಲ್ಲಿ ಸಿಂಗಲ್ ಹಂಚಿಕೆ (ವ್ಯಕ್ತಿಯೊಬ್ಬರಿಗೆ) ₹34,480
- ಡಬಲ್ ಹಂಚಿಕೆ ₹19,910
- ಟ್ರಿಪಲ್ ಹಂಚಿಕೆ ₹16,260 ಶುಲ್ಕ ಪಾವತಿಸಬೇಕಾಗುತ್ತದೆ.
- 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ, ಹಾಸಿಗೆ ಸಹಿತ ₹10,730
- ಸ್ಟ್ಯಾಂಡರ್ಡ್ ಸಿಂಗಲ್ ಹಂಚಿಕೆ (ವ್ಯಕ್ತಿಯೊಬ್ಬರಿಗೆ) ₹31,750
- ಡಬಲ್ ಹಂಚಿಕೆ ₹17,180
- ಟ್ರಿಪಲ್ ಹಂಚಿಕೆ ₹13,530
- 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ, ಹಾಸಿಗೆ ಸಹಿತ ₹8,000
- ಗ್ರೂಪ್ ಬುಕ್ಕಿಂಗ್ನಲ್ಲಿ ದರ ಕಡಿಮೆಯಾಗುತ್ತದೆ.
ಟೂರ್ ಪ್ಯಾಕೇಜ್ ಏನೆಲ್ಲಾ ಇರುತ್ತದೆ?
- ಹೈದರಾಬಾದ್ - ಎರ್ನಾಕುಲಂ - ಹೈದರಾಬಾದ್ ರೈಲು ಟಿಕೆಟ್‌ಗಳು
- ಪ್ಯಾಕೇಜ್ ಆಧರಿಸಿ ಸ್ಥಳೀಯ ಸಾರಿಗೆಗೆ ವಾಹನ ವ್ಯವಸ್ಥೆ ಮಾಡಲಾಗುವುದು.
- ಬೆಳಗಿನ ಉಪಹಾರದೊಂದಿಗೆ 3 ದಿನಗಳ ಹೋಟೆಲ್ ವಸತಿ.
- ಪ್ರಯಾಣ ವಿಮೆ ಲಭ್ಯವಿದೆ.
- ಪ್ರಸ್ತುತ ಈ ಟೂರ್ ಪ್ಯಾಕೇಜ್ ಡಿಸೆಂಬರ್ 10 ರಂದು ಲಭ್ಯವಿದೆ.
- ಈ ಪ್ಯಾಕೇಜ್‌ನ ಸಂಪೂರ್ಣ ವಿವರಗಳು ಹಾಗೂ ಬುಕ್ಕಿಂಗ್ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ಹೆಚ್ಚಿನ ಮಾಹಿತಿಗಾಗಿ ಐಆರ್ಸಿಟಿಸಿ ವೆಬ್ಸೈಟ್ನ್ನು ವೀಕ್ಷಿಸಬಹುದು:
https://www.irctctourism.com/pacakage_description?packageCode=SHR092
ಇದನ್ನೂ ಓದಿ: ಐಆರ್ಸಿಟಿಸಿಯಿಂದ 'ಮಹಾ ಕುಂಭಮೇಳ'ಕ್ಕೆ ಟೂರ್ ಪ್ಯಾಕೇಜ್: ಅಗ್ಗದ ದರದಲ್ಲಿ ಅಯೋಧ್ಯೆ, ವಾರಣಾಸಿ ನೋಡಿ