ETV Bharat / international

ಅಮೆರಿಕ ಮಾಧ್ಯಮಗಳ ಇಬ್ಬಗೆ ನೀತಿ: ಒಳ್ಳೆಯ ಉಗ್ರರು, ಕೆಟ್ಟ ಉಗ್ರರೆಂಬ ವಿಂಗಡಣೆ! - US Media Terrorist Bias

ಅಮೆರಿಕದ ಮಾಧ್ಯಮಗಳು ಜಾಗತಿಕ ಉಗ್ರ ಸಂಘಟನೆಗಳ ನಡುವೆ ಭಿನ್ನ ನಿಲುವು ಹೊಂದಿವೆ. ಉಗ್ರವಾದದಲ್ಲಿ ಒಳ್ಳೆಯದು, ಕೆಟ್ಟದ್ದೆಂದು ವಿಂಗಡಿಸಿ ವರದಿ ಮಾಡುತ್ತವೆ ಎಂಬ ಅಂಶ ಅಧ್ಯಯನದಿಂದ ತಿಳಿದುಬಂದಿದೆ.

author img

By PTI

Published : Jun 2, 2024, 6:19 PM IST

ಉಗ್ರ ಸಂಘಟನೆಗಳ ಬಗ್ಗೆ ಅಮೆರಿಕದ ಮಾಧ್ಯಮಗಳಲ್ಲಿ ಭಿನ್ನ ನಿಲುವು
ಉಗ್ರ ಸಂಘಟನೆಗಳ ಬಗ್ಗೆ ಅಮೆರಿಕದ ಮಾಧ್ಯಮಗಳಲ್ಲಿ ಭಿನ್ನ ನಿಲುವು (ETV Bharat)

ವಾಷಿಂಗ್ಟನ್(ಅಮೆರಿಕ): ಭಯೋತ್ಪಾದನೆಯನ್ನು ತೊಡೆದು ಹಾಕುವ ವಿಚಾರದಲ್ಲಿ ವಿಶ್ವವೇ ಒಮ್ಮತ ಹೊಂದಿರಬೇಕು. ಆದರೆ, ಅಮೆರಿಕದ ಮಾಧ್ಯಮಗಳು ಈ ಬಗ್ಗೆ ದ್ವಿಮುಖ ನೀತಿ ಅನುಸರಿಸುತ್ತಿವೆ. ಅವುಗಳು ದೇಶದ ವಿದೇಶಾಂಗ ನೀತಿಗೆ ಅನುಗುಣವಾಗಿ 'ಒಳ್ಳೆಯ' ಮತ್ತು 'ಕೆಟ್ಟ ಭಯೋತ್ಪಾದನೆ' ಎಂದು ಪ್ರತ್ಯೇಕಿಸಿ ನೋಡುತ್ತವೆ ಎಂಬ ಆತಂಕಕಾರಿ ಅಂಶ ಅಧ್ಯಯನದಲ್ಲಿ ಗೊತ್ತಾಗಿದೆ.

ಅನಿವಾಸಿ ಭಾರತೀಯರ ನೇತೃತ್ವದಲ್ಲಿ ನಡೆದ "ಅಮೆರಿಕನ್​ ಫಾರಿನ್ ಪಾಲಿಸಿ ಆ್ಯಂಡ್ ಇಂಡೆಕ್ಸಿಂಗ್ ಥಿಯರಿ: ಎ ಸ್ಟಡಿ ಆಫ್ ಯುಎಸ್ ಪ್ರೆಸ್ ಕವರೇಜ್ ಆಫ್ ದಿ ತಾಲಿಬಾನ್ ಮತ್ತು ಐಸಿಸ್​​" ಎಂಬ ಸಂಶೋಧನೆಯು ಈ ಅಪಾಯಕಾರಿ ಅಂಶವನ್ನು ಬಯಲು ಮಾಡಿದೆ. ಈ ವರದಿಯು ಇಂಟರ್ನ್ಯಾಷನಲ್ ಕಮ್ಯುನಿಕೇಶನ್ ರಿಸರ್ಚ್ ಜರ್ನಲ್‌ನಲ್ಲಿ ಪ್ರಕಟವಾಗಿದೆ.

ತಾಲಿಬಾನ್​-ಐಸಿಸ್​ ಬಗ್ಗೆ ಭಿನ್ನ ನಿಲುವು: ಈ ಬಗ್ಗೆ ಹೆಚ್ಚಿನ ಮಾಹಿತಿ ಹಂಚಿಕೊಂಡಿರುವ ಸಂಶೋಧನೆಯ ಭಾಗವಾಗಿದ್ದ ಅಮೆರಿಕದ ಪಾರ್ಕ್ ವಿಶ್ವವಿದ್ಯಾಲಯದ ಪತ್ರಿಕೋದ್ಯಮದ ಸಹಾಯಕ ಪ್ರಾಧ್ಯಾಪಕ ಮತ್ತು ಲೇಖಕರಾದ ಅಭಿಜಿತ್ ಮಜುಂದಾರ್, 2014ರಿಂದ 2019 ನಡುವಿನ 5 ವರ್ಷಗಳ ಅವಧಿಯಲ್ಲಿ ಐಸಿಸ್ ಮತ್ತು ತಾಲಿಬಾನ್ ಕುರಿತು ನ್ಯೂಯಾರ್ಕ್ ಟೈಮ್ಸ್ ಮತ್ತು ವಾಷಿಂಗ್ಟನ್ ಪೋಸ್ಟ್ ಪ್ರಕಟಿಸಿದ ನೂರಾರು ಲೇಖನಗಳನ್ನು ಪರಿಶೀಲಿಸಿದ್ದೇವೆ. ಅದರಲ್ಲಿ ಎರಡೂ ಉಗ್ರ ಸಂಘಟನೆಗಳ ಬಗ್ಗೆ ಪತ್ರಿಕೆಗಳ ಭಿನ್ನವಾದ ನಿಲುವುಗಳನ್ನು ಹೊಂದಿವೆ ಎಂದು ಹೇಳಿದ್ದಾರೆ.

ಆಶ್ಚರ್ಯಕರ ಸಂಗತಿ ಎಂದರೆ, ಅಮೆರಿಕದ ಪತ್ರಿಕೆಗಳು ತಾಲಿಬಾನ್ ನಡೆಸಿದ ದೌರ್ಜನ್ಯವನ್ನು ಅತಿ ಕಡಿಮೆ ಪ್ರಕಟಿಸುತ್ತವೆ. ಅದೇ ಮಾಧ್ಯಮಗಳು ಐಸಿಸ್ ನಡೆಸಿದ ದೌರ್ಜನ್ಯಗಳನ್ನು ವಿಜೃಂಭಿಸುತ್ತವೆ. ತಾಲಿಬಾನ್​ ಉಗ್ರ ಸಂಘಟನೆಯ ಬಗ್ಗೆ ಹೆಚ್ಚಿನ ವಿರೋಧಿ ನಿಲುವು ಇಲ್ಲ. ಐಸಿಸ್​ ಉಗ್ರ ಸಂಘಟನೆಯ ಬಗ್ಗೆ ಪ್ರಖರ ವಿರೋಧ ಹೊಂದಿವೆ ಎಂದು ಅವರು ತಿಳಿಸಿದ್ದಾರೆ.

ಎರಡೂ ಭಯೋತ್ಪಾದಕ ಸಂಘಟನೆಗಳು ತಮ್ಮ ನಿಯಂತ್ರಣದಲ್ಲಿರುವ ಪ್ರದೇಶದಲ್ಲಿ ಇಸ್ಲಾಮಿಕ್​ ಆಡಳಿತವನ್ನು ಸ್ಥಾಪಿಸುವ ಗುರಿ ಹೊಂದಿವೆ. ಆದರೆ, ತಾಲಿಬಾನ್​ನ ಧರ್ಮಾಂಧತೆಯನ್ನು ಐಸಿಸ್​ಗಿಂತ ಕಡಿಮೆ ಎಂದು ಭಾವಿಸುತ್ತವೆ. ಐಸಿಸ್​ ಸಂಘಟನೆಯನ್ನು ಮಾತ್ರ ಮಾರಕ ಎಂಬುದಾಗಿ ಬಿಂಬಿಸುತ್ತಿವೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ.

ಅತ್ತ ಐಸಿಸ್​ ವಿರುದ್ಧ ಹೋರಾಟ, ಇತ್ತ ತಾಲಿಬಾನ್​ಗೆ ಮಣೆ: ಅಮೆರಿಕದ ಮಾಧ್ಯಮಗಳು ದೇಶದ ವಿದೇಶಾಂಗ ನೀತಿಯನ್ನು ಬೆಂಬಲಿಸುತ್ತವೆ. ರಕ್ತಪಾತ ಸೃಷ್ಟಿಸಿದ್ದ ಐಸಿಸ್​ ವಿರುದ್ಧ ಅಮೆರಿಕನ್​ ಪಡೆಗಳು ಹೋರಾಡುತ್ತಿದ್ದರೆ, ಇತ್ತ ಅಫ್ಘಾನಿಸ್ಥಾನದಲ್ಲಿ ಉಗ್ರ ಸಂಘಟನೆಯಾದ ತಾಲಿಬಾನ್​ಗೆ ದೇಶವನ್ನೇ ಬಳುವಳಿಯಾಗಿ ನೀಡಿತು. ಇದನ್ನು ಮಾಧ್ಯಮಗಳು ಕೂಡ ಒಪ್ಪಿತ ರೀತಿಯಲ್ಲಿ ವರದಿ ಪ್ರಕಟಿಸಿವೆ. ತಾಲಿಬಾನ್​ ಬಗ್ಗೆ ಮೃಧು ಧೋರಣೆ ಹೊಂದಿವೆ ಎಂಬುದು ಅಧ್ಯಯನದಲ್ಲಿ ತಿಳಿದುಬಂದಿದ್ದಾಗಿ ಅವರು ಹೇಳಿದರು.

ಅಚ್ಚರಿಯ ಸಂಗತಿ ಎಂದರೆ, ತಾಲಿಬಾನ್ ಬಗ್ಗೆ ಮೃಧು ಧೋರಣೆ ಹೊಂದಿರುವ ಅಮೆರಿಕದ ಮಾಧ್ಯಮಗಳು ಅಲ್​ಖೈದಾ ಮತ್ತು ಐಸಿಸ್​ ಬಗ್ಗೆ ಕಟು ನೀತಿ ತಾಳಿವೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ರಚನೆಯಾದ ಬಗ್ಗೆ ಹೆಚ್ಚು ವರದಿಗಳನ್ನು ಪ್ರಕಟಿಸಿವೆ. ಆದರೆ ಮಧ್ಯಪ್ರಾಚ್ಯದಲ್ಲಿ ಐಸಿಸ್​ ಆಡಳಿತದ ಬಗ್ಗೆ ಹೆಚ್ಚು ವರದಿಗಳನ್ನು ಮಾಡಿಲ್ಲ. ತಾಲಿಬಾನ್​ಗೆ ಅಧಿಕಾರ ಹಸ್ತಾಂತರಿಸುವುದನ್ನು ಅಲ್ಲಿನ ಮಾಧ್ಯಮಗಳು ಬೆಂಬಲಿಸಿದ್ದರೆ, ಐಸಿಸ್​ ಆಡಳಿಯವನ್ನು ಕಟುವಾಗಿ ಟೀಕಿಸಿವೆ ಎಂಬುದು ಅಧ್ಯಯನದಲ್ಲಿ ಹೇಳಲಾಗಿದೆ.

ಅಮೆರಿಕದ ಮಾಧ್ಯಮಗಳು ದೇಶದ ವಿದೇಶಾಂಗ ನೀತಿಯನ್ನು ಅತಿಯಾಗಿ ಬೆಂಬಲಿಸುತ್ತವೆ. ಇದು ಪತ್ರಿಕಾ ಸ್ವಾತಂತ್ರ್ಯಕ್ಕೆ ಒಳ್ಳೆಯದಲ್ಲ ಎಂಬುದು ಸಂಶೋಧಕರ ಅಭಿಪ್ರಾಯವಾಗಿದೆ.

ಇದನ್ನೂ ಓದಿ: ಕದನ ವಿರಾಮ ಪ್ರಸ್ತಾವನೆ ಒಪ್ಪಿಕೊಳ್ಳುವಂತೆ ಇಸ್ರೇಲ್-ಹಮಾಸ್​ಗೆ ಕತಾರ್, ಈಜಿಪ್ಟ್​, ಯುಎಸ್​ ಒತ್ತಾಯ - Israel Hamas ceasefire proposal

ETV Bharat Logo

Copyright © 2024 Ushodaya Enterprises Pvt. Ltd., All Rights Reserved.