ಕಠ್ಮಂಡು(ನೇಪಾಳ): ಪೈಲಟ್ ಹಾಗೂ ಸಿಬ್ಬಂದಿ ಸೇರಿ 19 ಪ್ರಯಾಣಿಕರಿದ್ದ ವಿಮಾನವೊಂದು ರನ್ವೇನಿಂದ ಜಾರಿ ಪತನಗೊಂಡಿರುವ ಘಟನೆ ನೇಪಾಳದ ಕಠ್ಮಂಡು ವಿಮಾನ ನಿಲ್ದಾಣದಲ್ಲಿ ಇಂದು ಬೆಳಗ್ಗೆ ಸಂಭವಿಸಿತು. ಈ ದುರಂತದಲ್ಲಿ 18 ಜನ ಪ್ರಯಾಣಿಕರು ದುರ್ಮರಣ ಹೊಂದಿದ್ದಾರೆ. ಸ್ಥಳಕ್ಕೆ ತುರ್ತು ಸೇವೆಗಳ ಸಿಬ್ಬಂದಿ ದೌಡಾಯಿಸಿದ್ದು, ರಕ್ಷಣಾ ಕಾರ್ಯ ಕೈಗೊಂಡಿದ್ದಾರೆ.
मिति २०८१।०४।०९ गते त्रिभुवन अन्तर्राष्ट्रिय विमानस्थल, गौचर काठमाण्डौमा भएको सौर्य एयरलाइन्सको विमान दुर्घटना पश्चात उद्धार कार्यमा नेपाल प्रहरी pic.twitter.com/0t2OAh2DZK
— Nepal Police (@NepalPoliceHQ) July 24, 2024
ಇಲ್ಲಿನ ತ್ರಿಭುವನ್ ಏರ್ಪೋರ್ಟ್ನಿಂದ ದೇಶಿಯ ಶೌರ್ಯ ವಿಮಾನಯಾನ ಸಂಸ್ಥೆಗೆ ಸೇರಿದ ವಿಮಾನ ಬೆಳಗ್ಗೆ ಪೋಖಾರಾಕ್ಕೆ ತೆರಳಲು ಟೇಕ್ಆಫ್ ಆಗುತ್ತಿತ್ತು. ಈ ವೇಳೆ, 11:15ರ ಸುಮಾರಿಗೆ ದಿಢೀರ್ ರನ್ವೇನಿಂದ ಜಾರಿ ಪಕ್ಕದ ತಗ್ಗು ಪ್ರದೇಶಕ್ಕೆ ನುಗ್ಗಿ ಪತನಗೊಂಡು ಭಾರೀ ಬೆಂಕಿ ಹೊತ್ತಿಕೊಂಡಿದೆ. ತಕ್ಷಣವೇ ವಿಮಾನ ನಿಲ್ದಾಣದಲ್ಲಿ ಭದ್ರತೆಗೆ ನಿಯೋಜನೆಗೊಂಡಿದ್ದ ಭದ್ರತಾ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡರು.
#WATCH | Plane crashes at the Tribhuvan International Airport in Nepal's Kathmandu
— ANI (@ANI) July 24, 2024
Details awaited pic.twitter.com/DNXHSvZxCz