ETV Bharat / international

'ಭಾರತದೊಂದಿಗೆ ಸಂಬಂಧ ಸರಿಪಡಿಸಿಕೊಳ್ಳಲು ಇದು ಸಕಾಲ': ಚೀನಾದ ಸರ್ಕಾರಿ ಮಾಧ್ಯಮ ಅಚ್ಚರಿಯ ಹೇಳಿಕೆ - India China Relations

ಭಾರತ ಮತ್ತು ಚೀನಾಗಳು ತಮ್ಮ ದ್ವಿಪಕ್ಷೀಯ ಸಂಬಂಧ ಸುಧಾರಿಸಿಕೊಳ್ಳಲು ಈ ಸಮಯ ಸೂಕ್ತವಾಗಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮ ಅಚ್ಚರಿಯ ಹೇಳಿಕೆ ನೀಡಿದೆ.

ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ (ಸಂಗ್ರಹ ಚಿತ್ರ)
ಪ್ರಧಾನಿ ಮೋದಿ ಮತ್ತು ಚೀನಾ ಅಧ್ಯಕ್ಷ ಕ್ಸಿ ಜಿನ್​ಪಿಂಗ್ (ಸಂಗ್ರಹ ಚಿತ್ರ) (IANS)
author img

By ETV Bharat Karnataka Team

Published : Jun 6, 2024, 4:14 PM IST

ನವದೆಹಲಿ: ಚೀನಾ ಮತ್ತು ಭಾರತ ದೇಶಗಳ ದ್ವಿಪಕ್ಷೀಯ ಸಂಬಂಧವನ್ನು ಮತ್ತೆ ಸರಿದಾರಿಗೆ ತರಲು ಇದು ಸೂಕ್ತ ಸಮಯವಾಗಿದೆ ಎಂದು ಚೀನಾದ ಪ್ರಮುಖ ಇಂಗ್ಲಿಷ್ ಭಾಷಾ ಪತ್ರಿಕೆ ವರದಿ ಮಾಡಿದೆ. ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಬಿಜೆಪಿ ನೇತೃತ್ವದ ಎನ್​ಡಿಎ ಸತತ ಮೂರನೇ ಬಾರಿಗೆ ಸರ್ಕಾರ ರಚಿಸಲು ಸಜ್ಜಾಗಿರುವ ಸಮಯದಲ್ಲಿ ಚೀನಾ ಮಾಧ್ಯಮದ ಹೇಳಿಕೆ ಕುತೂಹಲ ಮೂಡಿಸಿದೆ.

"ಉಭಯ ದೇಶಗಳು ಉತ್ತಮ ನಂಬಿಕೆಯೊಂದಿಗೆ ಮಾತುಕತೆಗಳ ಮೂಲಕ ವಿವಾದವನ್ನು ಪರಿಹರಿಸುವ ಬುದ್ಧಿವಂತಿಕೆಯನ್ನು ಪ್ರದರ್ಶಿಸಬೇಕು. ಆ ಉದ್ದೇಶ ಸಾಧನೆಗಾಗಿ ರಾಜತಾಂತ್ರಿಕ ಮತ್ತು ಮಿಲಿಟರಿ ಮಾರ್ಗಗಳ ಮೂಲಕ ತಮ್ಮ ನಿಕಟ ಸಂಪರ್ಕವನ್ನು ಮುಂದುವರೆಸಿಕೊಂಡು ಹೋಗಬೇಕು ಮತ್ತು ತಮ್ಮ ಗಡಿ ವಿವಾದದ ಲಾಭ ಪಡೆಯಲು ಯಾವುದೇ ಬಾಹ್ಯ ಶಕ್ತಿಗೆ ಅವಕಾಶ ನೀಡಬಾರದು" ಎಂದು ಸರ್ಕಾರಿ ಸ್ವಾಮ್ಯದ 'ಚೀನಾ ಡೈಲಿ' ತನ್ನ ಸಂಪಾದಕೀಯದಲ್ಲಿ ಉಲ್ಲೇಖಿಸಿದೆ.

ಎರಡೂ ನೆರೆಹೊರೆಯ ದೇಶಗಳಾಗಿದ್ದು, ಅತಿದೊಡ್ಡ ಅಭಿವೃದ್ಧಿಶೀಲ ರಾಷ್ಟ್ರಗಳಾಗಿ ಚೀನಾ ಮತ್ತು ಭಾರತಗಳು ಭಿನ್ನಾಭಿಪ್ರಾಯಗಳಿಗಿಂತ ಹೆಚ್ಚು ಸಾಮಾನ್ಯ ಹಿತಾಸಕ್ತಿಗಳನ್ನು ಹೊಂದಿವೆ ಎಂದು ಒತ್ತಿ ಹೇಳಿರುವ ಸಂಪಾದಕೀಯವು ನವದೆಹಲಿ ಮತ್ತು ಬೀಜಿಂಗ್ ನಡುವೆ ಬಿರುಕು ಮೂಡಿಸಲು ಕೆಲ ಪಾಶ್ಚಿಮಾತ್ಯ ದೇಶಗಳು ಪ್ರಯತ್ನಿಸುತ್ತಿವೆ ಎಂದು ದೂಷಿಸಿದೆ.

"ಗಡಿ ವಿವಾದ ಭುಗಿಲೆದ್ದಿರುವ ಮಧ್ಯೆ ಭಾರತ ಸರ್ಕಾರವು 2020 ರಿಂದ ಚೀನಾದ ಕಂಪನಿಗಳು, ಹೂಡಿಕೆಗಳು ಮತ್ತು ಆಮದುಗಳನ್ನು ಗುರಿಯಾಗಿಸಿಕೊಂಡು ರಕ್ಷಣಾತ್ಮಕ ಕ್ರಮಗಳನ್ನು ಜಾರಿಗೆ ತರುತ್ತಿದ್ದರೂ ದ್ವಿಪಕ್ಷೀಯ ವ್ಯಾಪಾರ ಪ್ರಮಾಣವು ಗಣನೀಯ ಮತ್ತು ಸ್ಥಿರವಾಗಿದೆ. ಇದು ಕಳೆದ ಮೂರು ವರ್ಷಗಳಲ್ಲಿ 120 ಬಿಲಿಯನ್ ಡಾಲರ್ ಮತ್ತು 130 ಬಿಲಿಯನ್ ಡಾಲರ್ ನಡುವೆಯೇ ಸ್ಥಿರವಾಗಿದೆ. ಇದನ್ನು ನೋಡಿದರೆ ನವದೆಹಲಿಯು ಪಾಶ್ಚಿಮಾತ್ಯ ರಾಷ್ಟ್ರಗಳ ಮಾತನ್ನು ಕಿವಿಗೆ ಹಾಕಿಕೊಳ್ಳಬಾರದು ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು" ಎಂದು ಅದು ಹೇಳಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಲೋಕಸಭಾ ಚುನಾವಣೆಗಳು ಭಾರತಕ್ಕೆ ತನ್ನ ಹಿಂದಿನ ಚೀನಾ ನೀತಿಯನ್ನು ಮರುಹೊಂದಿಸಲು ಮತ್ತು ಚೀನಾ-ಭಾರತ ಸಂಬಂಧಗಳ ಸಾಮರ್ಥ್ಯವನ್ನು ಮತ್ತಷ್ಟು ಬಳಸಿಕೊಳ್ಳಲು ಅವಕಾಶ ನೀಡುತ್ತದೆ ಎಂದು ಹೇಳಿರುವ ಸಂಪಾದಕೀಯವು, ಎರಡೂ ಕಡೆಯವರು ಪರಸ್ಪರ ಬೆಂಬಲಕ್ಕೆ ನಿಲ್ಲಬೇಕು ಮತ್ತು ಪರಸ್ಪರರ ಯಶಸ್ಸಿಗೆ ಕೊಡುಗೆ ನೀಡಬೇಕು, ಪರಸ್ಪರರನ್ನು ಅನುಮಾನದಿಂದ ನೋಡುವ ಮತ್ತು ಪರಸ್ಪರರನ್ನು ದುರ್ಬಲಗೊಳಿಸುವ ಬದಲು ಯಶಸ್ಸಿಗೆ ಕೊಡುಗೆ ನೀಡಬೇಕು ಎಂದು ಉಲ್ಲೇಖಿಸಿದೆ.

ಚೀನಾದ ಅಭಿವೃದ್ಧಿಯು ಭಾರತಕ್ಕೆ ಅಪಾಯ, ಅನಿಶ್ಚಿತತೆ ಅಥವಾ ಬೆದರಿಕೆಗಳನ್ನು ಉಂಟು ಮಾಡುವುದಿಲ್ಲ. ಬದಲಿಗೆ ಅದು ಭಾರತಕ್ಕೆ ಬೆಳವಣಿಗೆ, ಅಭಿವೃದ್ಧಿ ಮತ್ತು ಅವಕಾಶಗಳನ್ನು ನೀಡುತ್ತದೆ ಎಂದು ಅದು ಹೇಳಿದೆ. ಹಾಗೆಯೇ ಭಾರತದ ಬೆಳವಣಿಗೆಯು ಚೀನಾಕ್ಕೆ ಪೂರಕ ಅವಕಾಶಗಳನ್ನು ನೀಡುತ್ತದೆ ಎಂದು ಸಂಪಾದಕೀಯ ತಿಳಿಸಿದೆ.

"ಎರಡೂ ದೇಶಗಳ ಒಟ್ಟಾರೆ ಜನಸಂಖ್ಯೆಯು ಜಾಗತಿಕ ಜನಸಂಖ್ಯೆಯ ಶೇಕಡಾ 37.5ರಷ್ಟಿದೆ. ಹೀಗಾಗಿ ಎರಡೂ ನೆರೆಹೊರೆಯ ದೇಶಗಳು ಪರಸ್ಪರರ ಅಭಿವೃದ್ಧಿಗೆ ಮುಕ್ತ ಮನಸನ್ನು ಹೊಂದಿರಬೇಕು ಮತ್ತು ದ್ವಿಪಕ್ಷೀಯ ಸಂಬಂಧಗಳನ್ನು ಕಾರ್ಯತಂತ್ರದ ಮತ್ತು ದೀರ್ಘಕಾಲೀನ ದೃಷ್ಟಿಕೋನದಿಂದ ಸಂಪರ್ಕಿಸಲು ಜಂಟಿ ಪ್ರಯತ್ನಗಳನ್ನು ಮಾಡಬೇಕು." ಎಂದು ಸಂಪಾದಕೀಯ ಸಲಹೆ ನೀಡಿದೆ.

ಇದನ್ನೂ ಓದಿ : ಗಾಜಾದ ಶಾಲೆಯ ಮೇಲೆ ಇಸ್ರೇಲ್ ದಾಳಿ: ಮಹಿಳೆಯರು, ಮಕ್ಕಳು ಸೇರಿ 30 ಸಾವು - Israel Hamas War

ETV Bharat Logo

Copyright © 2024 Ushodaya Enterprises Pvt. Ltd., All Rights Reserved.