ETV Bharat / health

ಮಧುಮೇಹಿಗಳಿಗೆ ಇಲ್ಲಿದೆ ಗುಡ್ ನ್ಯೂಸ್- ಇನ್ಸುಲಿನ್ ಅಗತ್ಯವಿಲ್ಲ!: ಸಂಶೋಧನೆ - TYPE 2 DIABETES NEW RESEARCH

ಇತ್ತೀಚಿನ ಸಂಶೋಧನೆಯಲ್ಲಿ ಹೊಸ ಚಿಕಿತ್ಸಾ ವಿಧಾನದ ಆವಿಷ್ಕಾರವಾಗಿದ್ದು, ಇದರಿಂದ ಮಧುಹೇಹಿಗಳಿಗೆ ಗುಡ್ ನ್ಯೂಸ್ ಲಭಿಸಿದೆ. ಸಂಶೋಧನೆಯಲ್ಲಿ ಯಾವೆಲ್ಲಾ ಅಂಶಗಳು ಪತ್ತೆಯಾಗಿವೆ ಎಂಬುದನ್ನು ತಿಳಿಯೋಣ..

TYPE 2 DIABETES TREATMENT
ಮಧುಮೇಹಿಗಳಿಗೆ ಗುಡ್ ನ್ಯೂಸ್ (ANI)
author img

By ETV Bharat Health Team

Published : Oct 31, 2024, 5:00 AM IST

Type 2 Diabetes New Research: ಟೈಪ್ 2 ಡಯಾಬಿಟಿಸ್ ರೋಗಿಗಳಿಗೆ ಉತ್ತಮ ಸುದ್ದಿ. ಇನ್ಸುಲಿನ್ ಅಗತ್ಯವಿಲ್ಲದೇ ಮಧುಮೇಹವನ್ನು ಕಡಿಮೆ ಮಾಡುವ ಚಿಕಿತ್ಸಾ ವಿಧಾನವನ್ನು ಸಂಶೋಧಕರು ಕಂಡುಹಿಡಿದಿದ್ದಾರೆ. semaglutide ಅನ್ನು ReCET (Re-Cellularization via Electroporation Therapy) ನೊಂದಿಗೆ ಸಂಯೋಜಿಸಿ, ಈ ಹೊಸ ಚಿಕಿತ್ಸಾ ವಿಧಾನವನ್ನು ಕಂಡುಹಿಡಿಯಲಾಯಿತು.

ಟೈಪ್ 2 ಡಯಾಬಿಟಿಸ್ ರೋಗಿಗಳ ಮೇಲೆ ನಡೆಸಿದ ಈ ಸಂಶೋಧನೆಯಲ್ಲಿ... 86 ರಷ್ಟು ಜನರು ಸಕಾರಾತ್ಮಕ ಫಲಿತಾಂಶಗಳನ್ನು ಕಂಡಿದ್ದಾರೆ ಎಂದು ವಿಜ್ಞಾನಿಗಳು ಬಹಿರಂಗಪಡಿಸಿದ್ದಾರೆ. ಈ ಹೊಸ ಚಿಕಿತ್ಸಾ ವಿಧಾನವನ್ನು 'UEG ವೀಕ್ 2024' ಎಂಬ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಲಾಗಿದೆ. ಈ ಸಂಶೋಧನೆಯ ಫಲಿತಾಂಶಗಳು ಬಹಳ ರೋಚಕವಾಗಿವೆ ಎಂದು ಅಧ್ಯಯನದಲ್ಲಿ ಭಾಗವಹಿಸಿದ್ದ ಡಾ.ಸೆಲಿನ್ ಬುಶ್ ಹೇಳಿದ್ದಾರೆ.

ReCET ಚಿಕಿತ್ಸಾ ವಿಧಾನವು ತುಂಬಾ ಸುರಕ್ಷಿತವಾಗಿದೆ. ಮತ್ತು ಯಾವುದೇ ಅಡ್ಡ ಪರಿಣಾಮಗಳನ್ನು ಹೊಂದಿಲ್ಲ. ಹೆಚ್ಚುವರಿಯಾಗಿ, ಸೆಮಾಗ್ಲುಟೈಡ್ ಅನ್ನು ಸೇರಿಸುವುದು ಅತ್ಯುತ್ತಮ ಫಲಿತಾಂಶಗಳನ್ನು ತೋರಿಸಿದೆ. ಇವುಗಳನ್ನು ಸಂಯೋಜನೆಯಲ್ಲಿ ಬಳಸಿದರೆ ಇನ್ಸುಲಿನ್ ಥೆರಪಿ ಅನಾವಶ್ಯಕವಾಗುತ್ತದೆ. ಈ ಸಂಶೋಧನೆಯು ಪ್ರಸ್ತುತ ಪ್ರಯೋಗದಲ್ಲಿದೆ ಎಂದು ಅವರು ಹೇಳಿದರು. ಪೂರ್ಣ ಪ್ರಮಾಣದ ಫಲಿತಾಂಶಗಳನ್ನು ಶೀಘ್ರದಲ್ಲೇ ಬಹಿರಂಗಪಡಿಸಲಾಗುವುದು. ಹೆಚ್ಚಿನ ಪರೀಕ್ಷೆಗಳನ್ನು ವ್ಯಾಪಕ ಪ್ರಮಾಣದಲ್ಲಿ ನಡೆಸಲು ಪ್ರಯತ್ನಿಸಲಾಗುವುದು. ಪ್ರಸ್ತುತ ಲಭ್ಯವಿರುವ ಚಿಕಿತ್ಸೆಗಳಿಗಿಂತ ಇದು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

ಈ ಸಂಶೋಧನೆಯ ಭಾಗವಾಗಿ, 28-75 ಮತ್ತು 24-40 kg/m2 BMI (ಬಾಡಿ ಮಾಸ್ ಇಂಡೆಕ್ಸ್) ನಡುವಿನ 14 ಜನರ ಮೇಲೆ ಪ್ರಯೋಗಗಳನ್ನು ನಡೆಸಲಾಯಿತು. ಇದರಲ್ಲಿ ಪ್ರತಿಯೊಬ್ಬರಿಗೂ ಅರಿವಳಿಕೆ ನೀಡಿ ReCET ಚಿಕಿತ್ಸೆಗೆ ಒಳಪಡಿಸಲಾಯಿತು. ಫಲಿತಾಂಶವು ಅದ್ಭುತವಾಗಿದೆ ಎಂದು ಸಂಶೋಧಕರು ಹೇಳಿದ್ದಾರೆ. ಈ ಚಿಕಿತ್ಸೆಯಿಂದ ದೇಹವು ಇನ್ಸುಲಿನ್ ಅನ್ನು ತಾನಾಗಿಯೇ ಉತ್ಪಾದಿಸುತ್ತದೆ ಎಂದು ವಿವರಿಸಲಾಗಿದೆ. 2 ವಾರಗಳ ದ್ರವ ಆಹಾರದ ನಂತರ. ಸೆಮಾಗ್ಲುಟೈಡ್ ಮಟ್ಟವು ಕ್ರಮೇಣ ಕಡಿಮೆಯಾಗಿದೆ ಎಂದು ಬಹಿರಂಗಪಡಿಸಿತು. 6-12 ವಾರಗಳ ನಂತರ, 86 ಪ್ರತಿಶತ ರೋಗಿಗಳಿಗೆ ಇನ್ಸುಲಿನ್ ಚಿಕಿತ್ಸೆಯ ಅಗತ್ಯವಿಲ್ಲ. 24 ವಾರಗಳ ನಂತರ, ಎಲ್ಲರೂ ಗ್ಲೈಸೆಮಿಕ್ ನಿಯಂತ್ರಣವನ್ನು ಹೊಂದಿದ್ದರು, HbA1c ಮಟ್ಟವು 7.5 ಪ್ರತಿಶತದಷ್ಟು ಕಡಿಮೆಯಾಗಿದೆ.

ವಿಶ್ವಾದ್ಯಂತ ಅಂದಾಜು 422 ಮಿಲಿಯನ್ ಜನರು ಟೈಪ್ 2 ಮಧುಮೇಹದಿಂದ ಬಳಲುತ್ತಿದ್ದಾರೆ. ಅವರಿಗೆ ಬಳಸುವ ಪ್ರಮುಖ ಚಿಕಿತ್ಸೆಗಳಲ್ಲಿ ಇನ್ಸುಲಿನ್ ಚಿಕಿತ್ಸೆಯು ಒಂದು. ಇದು ರೋಗಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿಡುತ್ತದೆ. ಆದರೆ, ಈ ವಿಧಾನವು ಬೊಜ್ಜಿನಂತಹ ಅನೇಕ ಅಡ್ಡ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ತಜ್ಞರು ಈಗಾಗಲೇ ಹೇಳಿದ್ದಾರೆ. ಈ ಹೊಸ ಚಿಕಿತ್ಸಾ ವ್ಯವಸ್ಥೆ ಬಂದರೆ, ಶುಗರ್ ಪೀಡಿತರಿಗೆ ಇನ್ಸುಲಿನ್ ತೊಂದರೆ ದೂರವಾಗಲಿದೆ ಎನ್ನಲಾಗಿದೆ.

ಓದುಗರಿಗೆ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಹಾಗೂ ಸಲಹೆಗಳು ನಿಮ್ಮ ತಿಳುವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ಪರಿಣಿತ ವೈದ್ಯರ ಸಲಹೆಗಳನ್ನು ಪಡೆಯುವುದು ಒಳ್ಳೆಯದು.

ಇವುಗಳನ್ನು ಓದಿ:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.