ಬೆಂಗಳೂರು: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್‌ನ (ಐಐಎಸ್‌ಸಿ) ಸೆಂಟರ್ ಫಾರ್ ನ್ಯೂರೋಸೈನ್ಸ್ ವಿಭಾಗದ ಎರಡು ಹೊಸ ಅಧ್ಯಯನಗಳು ಗಮನ ಮತ್ತು ಕಣ್ಣಿನ ಚಲನೆಗಳು ಎಷ್ಟು ನಿಕಟವಾದ ಸಂಬಂಧ ಹೊಂದಿವೆ ಎನ್ನುವುದನ್ನು ಅನ್ವೇಷಿಸಿದೆ. ಈ ಎರಡೂ ಪ್ರಕ್ರಿಯೆಗಳನ್ನು ಮೆದುಳು ಹೇಗೆ ಸಂಯೋಜಿಸುತ್ತದೆ ಎಂಬುದನ್ನು ಅನಾವರಣಗೊಳಿಸಿದೆ.
ಗಮನ ಎನ್ನುವುದು ವಿಶಿಷ್ಟ ವಿದ್ಯಮಾನ. ಅದು ನಮ್ಮ ದೃಶ್ಯವನ್ನು ನಿರ್ದಿಷ್ಟ ವಸ್ತುವಿನ ಮೇಲೆ ಕೇಂದ್ರೀಕರಿಸಲು ಮತ್ತು ಗೊಂದಲ ನಿವಾರಿಸಲು ಅನುವು ಮಾಡಿಕೊಡುತ್ತದೆ. ವಸ್ತುವಿನತ್ತ ಗಮನ ಹರಿಸಿದಾಗ, ನಾವು ಅದರೆಡೆಗೆ ನೋಡುತ್ತೇವೆ. ಇದನ್ನು ಸಕ್ಯಾಡಿಕ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ ನಮ್ಮ ಕಣ್ಣುಗಳು ವಸ್ತುವಿನ ಕಡೆಗೆ ಚಲಿಸುವ ಮುಂಚೆಯೇ, ನಮ್ಮ ಗಮನವು ಅದರ ಮೇಲೆ ಕೇಂದ್ರೀಕರಿಸಿರುತ್ತದೆ. ಪೂರ್ವ-ಸಕ್ಯಾಡಿಕ್ ಗಮನ ಎನ್ನುವುದು ಪ್ರಸಿದ್ಧ ವಿದ್ಯಮಾನವಾಗಿದೆ.
ಸದ್ಯದ ಸೆಂಟರ್ ಫಾರ್ ನ್ಯೂರೋಸೈನ್ಸ್ ಸಂಶೋಧಕರ ಪ್ರಕಾರ, ವಸ್ತುವು ಇದ್ದಕ್ಕಿದ್ದಂತೆ ಬದಲಾದಾಗ ಈ ಗ್ರಹಿಕೆಯ ಪ್ರಯೋಜನ ಕಳೆದುಹೋಗುತ್ತದೆ ಎಂದು ತೋರಿಸಲಾಗಿದೆ. ನಮ್ಮ ನೋಟವು ಅದರ ಮೇಲೆ ಬೀಳುವ ಮೊದಲು ಒಂದು ಸೆಕೆಂಡ್ ವಿಭಜನೆಯಾಗುತ್ತದೆ ಎಂಜು ಹೇಳಿದೆ.
ಸಿಎನ್‌ಎಸ್‌ನ ಸಹಾಯಕ ಪ್ರಾಧ್ಯಾಪಕ ಶ್ರೀಧರನ್ ಅವರು ಲ್ಯಾಬ್‌ನಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿರುವ ಪ್ರಿಯಾಂಕಾ ಗುಪ್ತಾ ಅವರಿಗೆ ಲೈನ್ ಪ್ಯಾಟರ್ನ್ಗಳನ್ನು ನೇರವಾಗಿ ನೋಡದೆ ಮತ್ತು ಸ್ವಲ್ಪ ಓರೆಯಾದಾಗ ವರದಿ ಮಾಡಲು ತರಬೇತಿ ನೀಡಿದರು. ಪೂರ್ವ-ಸಕ್ಯಾಡಿಕ್ ಗಮನ ಮತ್ತು ದೃಶ್ಯ ಪರಿಸರದಲ್ಲಿನ ಬದಲಾವಣೆಗಳ ಪತ್ತೆಯ ನಡುವಿನ ಸಂಬಂಧವನ್ನು ಲ್ಯಾಬ್‌ನಲ್ಲಿ ಅಧ್ಯಯನ ಮಾಡಲಾಯಿತು. ವಸ್ತುವಿನ ಮೇಲೆ ಅವರ ನೋಟ ಬೀಳುವ ಮೊದಲು ಮತ್ತು ನಂತರ ಕಣ್ಣಿನ ಚಲನೆಯನ್ನು ಮೇಲ್ವಿಚಾರಣೆ ಮಾಡಲು ಟ್ರ್ಯಾಕರ್ ಬಳಸಲಾಯಿತು.
ಅನುಸರಣಾ ಪ್ರಯೋಗದಲ್ಲಿ ಕಣ್ಣುಗಳು ಚಲಿಸುವ ಮೊದಲು ಒಂದರ ನಂತರ ಒಂದರಂತೆ ಎರಡು ಗ್ರ್ಯಾಟಿಂಗ್‌ಗಳನ್ನು ಮೇಲ್ವಿಚಾರಣೆ ಮಾಡಲಾಯಿತು. ಈ ವೇಳೆ ಎರಡನೇ ಗ್ರ್ಯಾಟಿಂಗ್‌ನಲ್ಲಿ ದೃಷ್ಟಿಕೋನವು ಇದ್ದಕ್ಕಿದ್ದಂತೆ ಬದಲಾಯಿತು. ಎರಡು ಗ್ರ್ಯಾಟಿಂಗ್‌ಗಳ ದೃಷ್ಟಿಕೋನಗಳನ್ನು ಮಿಶ್ರಣ ಮಾಡಲಾಯಿತು ಮತ್ತು ಗಮನದ ನಷ್ಟ ದಾಖಲಿಸಲಾಯಿತು.
ಸೈನ್ಸ್ ಅಡ್ವಾನ್ಸಸ್‌ನಲ್ಲಿ ಪ್ರಕಟವಾದ ಇನ್ನೊಂದು ಅಧ್ಯಯನ: ಸೈನ್ಸ್ ಅಡ್ವಾನ್ಸಸ್‌ನಲ್ಲಿ ಪ್ರಕಟವಾದ ಇನ್ನೊಂದು ಅಧ್ಯಯನದಲ್ಲಿ, ಸಂಶೋಧಕರು ಅಸಾಮಾನ್ಯ ಪ್ರಯೋಗ ಮಾಡಿದ್ದಾರೆ. ಕಣ್ಣಿನ ಚಲನೆಗಳಿಂದ ಗಮನ ಬೇರ್ಪಡಿಸಿದಾಗ ಕೋತಿಗಳಲ್ಲಿ ಮೆದುಳಿನಲ್ಲಿ ಏನಾಗುತ್ತಿದೆ ಎನ್ನುವುದನ್ನು ಹೇಳಲಾಗಿದೆ.
ಮಾನವನ ಹಾಗೆ ಮಂಗಗಳು ಕಂಪ್ಯೂಟರ್ ಪರದೆಯ ಮೇಲೆ ನೇರವಾಗಿ ನೋಡದೆ ಸ್ವಲ್ಪ ವಾಲಿದಾಗ, ಕೋತಿಗಳು ಅದರ ಮೇಲೆ ಹೆಚ್ಚು ಕೇಂದ್ರೀಕರಿಸುವ ಬದಲು ದೂರ ನೋಡಬೇಕಾಯಿತು. ಇದು ಕೋತಿಯ ಗಮನದ ಸ್ಥಳ ಮತ್ತು ಅದರ ನೋಟವು ಅಂತಿಮವಾಗಿ ಬಿದ್ದ ಸ್ಥಳದಿಂದ ಡಿಲಿಂಕ್ ಮಾಡಲು ಸಂಶೋಧಕರಿಗೆ ಸಹಾಯ ಮಾಡಿದೆ.
ಯು-ಪ್ರೋಬ್ ಬಳಸಿಕೊಂಡು ಕೋತಿಯ ಮಿದುಳಿನಲ್ಲಿರುವ ನಿರ್ದಿಷ್ಟ ಪ್ರದೇಶದ ವಿವಿಧ ಪದರಗಳಾದ್ಯಂತ ನೂರಾರು ನ್ಯೂರಾನ್‌ಗಳ ಸಿಗ್ನಲ್‌ಗಳನ್ನು ರೆಕಾರ್ಡ್ ಮಾಡಲಾಗಿದೆ. ದೃಶ್ಯ ಕಾರ್ಟೆಕ್ಸ್ ಪ್ರದೇಶದಲ್ಲಿ ಅವರು ಕಂಡುಕೊಂಡ ಅಂಶವೆಂದರೆ ಕಾರ್ಟೆಕ್ಸ್‌ನ ಹೆಚ್ಚು ಮೇಲ್ಮೈ ಪದರಗಳಲ್ಲಿನ ನ್ಯೂರಾನ್‌ಗಳು ಗಮನದ ಸಂಕೇತಗಳನ್ನು ಉಂಟುಮಾಡುತ್ತವೆ. ಆದರೆ ಆಳವಾದ ಪದರಗಳಲ್ಲಿನ ನ್ಯೂರಾನ್‌ಗಳು ಕಣ್ಣಿನ ಚಲನೆಯ ಸಂಕೇತಗಳನ್ನು ಉತ್ಪಾದಿಸುತ್ತವೆ.
ಈ ಎರಡೂ ಅಧ್ಯಯನದಲ್ಲಿ ಪೂರ್ವ-ಸಕ್ಯಾಡಿಕ್ ಗಮನವು ಯಾವಾಗಲೂ ಪ್ರಯೋಜನಕಾರಿಯಾಗಿದೆ ಎಂದು ಸೂಚಿಸುತ್ತದೆ. ಇವೆರಡೂ ಮೂಲಭೂತ ವಿಜ್ಞಾನದ ಅಧ್ಯಯನವಾಗಿದೆ. ಒಳನೋಟಗಳು, ವೇಗವಾಗಿ ಬದಲಾಗುತ್ತಿರುವ ಪರಿಸರದಲ್ಲಿ ಅಂದರೆ ಡ್ರೈವಿಂಗ್ ಅಥವಾ ಫ್ಲೈಟ್ ಸಿಮ್ಯುಲೇಟರ್‌ಗಳಲ್ಲಿ ನಾವು ಅನೇಕ ವಸ್ತುಗಳನ್ನು ಹೇಗೆ ಟ್ರ್ಯಾಕ್ ಮಾಡುತ್ತೇವೆ ಎಂಬುದಕ್ಕೆ ಉಪಯುಕ್ತವಾಗಲಿದೆ. ಎಡಿಎಚ್‌ಡಿಯಂತಹ ಅಸ್ವಸ್ಥತೆಯ ಚಿಕಿತ್ಸೆಗೆ ಇಂತಹ ಕಾರ್ಯವಿಧಾನಗಳನ್ನು ಕಂಡುಹಿಡಿಯುವುದು ಅತ್ಯಗತ್ಯ ಎಂದು ಸಿಎನ್‌ಎಸ್‌ನ ಸಹಾಯಕ ಪ್ರಾಧ್ಯಾಪಕ ಮತ್ತು ಅಧ್ಯಯನದ ಲೇಖಕ ದೇವರಾಜನ್ ಶ್ರೀಧರನ್ ವಿವರಿಸಿದ್ದಾರೆ.
ಇದನ್ನೂ ಓದಿ: ಭಾರತದ 12.5 ಮಿಲಿಯನ್ ಮಕ್ಕಳಲ್ಲಿ, ಜಾಗತಿಕವಾಗಿ 8ರಲ್ಲಿ ಒಬ್ಬರಿಗೆ ಸ್ಥೂಲಕಾಯ ಸಮಸ್ಯೆ: ವರದಿ