ETV Bharat / health

ನಿದ್ರೆ ವೇಳೆ ಗೊರಕೆ; ಯಾವ ಸಂದರ್ಭದಲ್ಲಿ ಬೇಕು ವೈದ್ಯಕೀಯ ಚಿಕಿತ್ಸೆ? - Snoring association with sleep apnoea

author img

By ETV Bharat Karnataka Team

Published : Jun 10, 2024, 4:32 PM IST

Updated : Jun 10, 2024, 4:47 PM IST

ಗೊರಕೆಯು ನಿದ್ರೆ ಸಂಬಂಧಿ ಉಸಿರಾಟದ ಅಸ್ವಸ್ಥತೆಯಾಗಿದ್ದು, ಅಬ್​ಸ್ಟ್ರಕ್ಟಿವ್​ ಸ್ಲೀಪ್​ ಅಪ್ನೀಯಾದೊಂದಿಗೆ (ಒಎಸ್​ಎ) ಕೂಡ ಸಂಬಂಧ ಹೊಂದಿದೆ.

snoring-association-with-sleep-apnoea-sleep-disorder-that-can-raise-the-risk-of-ncd
ನಿದ್ರೆ ಸಮಸ್ಯೆ (ಸಂಗ್ರಹ ಚಿತ್ರ)

ನವದೆಹಲಿ: ಗೊರಕೆ ಎಂಬುದು ನಿದ್ರೆಯ ಅಸ್ವಸ್ಥತೆಯಾಗಿದ್ದು, ಇದು ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯಾಘಾತ ಮತ್ತು ಪಾರ್ಶ್ವವಾಯುನಂತಹ ಅನೇಕ ಸಾಂಕ್ರಾಮಿಕೇತರ ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ತಜ್ಞರು ಎಚ್ಚರಿಸಿದ್ದಾರೆ.

ಗೊರಕೆಯು ನಿದ್ರೆ ಸಂಬಂಧಿ ಉಸಿರಾಟದ ಅಸ್ವಸ್ಥತೆಯಾಗಿದ್ದು, ಅಬ್​ಸ್ಟ್ರಕ್ಟಿವ್​​ ಸ್ಲೀಪ್​ ಅಪ್ನೀಯಾದೊಂದಿಗೆ (ಒಎಸ್​ಎ) ಕೂಡ ಸಂಬಂಧ ಹೊಂದಿದೆ. ಇಂದು 12 ಕೋಟಿಗಿಂತ ಹೆಚ್ಚು ಜನರು ಈ ಒಎಸ್​ಎ ಯಿಂದ ಬಳಲುತ್ತಿದ್ದಾರೆ.

ಗೊರಕೆಯೆಂಬುದು ನಿದ್ರೆ ಸಮಯದಲ್ಲಿ ಉಸಿರಾಡುವಾಗ ಉಸಿರೆಳೆಯುವ ಸಂದರ್ಭದಲ್ಲಿ ಉಂಟಾಗುವ ವ್ಯತ್ಯಾಸವಾಗಿದೆ. ಇದನ್ನು ಅಪ್ನೀಯಸ್​ ಅಥವಾ ಹೈಪೊಪ್ನೀಸ್​ ಎಂದು ಕರೆಯಲಾಗುವುದು ಎಂದು ಪುಣೆಯ ಖಾರಡಿಯ ಮಣಿಪಾಲ್​ ಆಸ್ಪತ್ರೆಯ ಶ್ವಾಸಕೋಶತಜ್ಞ ಡಾ ಮನೋಜ್​ ಪವಾರ್​ ತಿಳಿಸಿದ್ದಾರೆ.

ಎಲ್ಲಾ ಗೊರಕೆಗಳು ಅಪಾಯಕಾರಿಯಾಗಿರುವುದಿಲ್ಲ. ವ್ಯಕ್ತಿಯೊಬ್ಬ ಬೆಳಗಿನ ಸಮಯದಲ್ಲಿ ಅಧಿಕ ನಿದ್ರೆ ಸಮಯದ ಬಳಲಿಕೆ ಮೇಲೆ ಇದರ ಕುರಿತು ಕಾಳಜಿ ವಹಿಸಬೇಕಿದೆ. ಬೆಳಗಿನ ಹೊತ್ತಿನ ಅಧಿಕ ನಿದ್ರೆಯ ಪ್ರಮುಖ ಲಕ್ಷಣ ಎಂದರೆ, ರೋಗಿ ಬೆಳಗಿನ ಅವಧಿಯಲ್ಲಿ ಟಿವಿ ನೋಡುತ್ತಾ, ಪೇಪರ್​ ಓದುತ್ತಾ ಮತ್ತು ಕಾರು- ಬೈಕ್​ ಚಾಲನೆ ಮಾಡುವಾಗಲೇ ಸುಲಭವಾಗಿ ನಿದ್ರೆಗೆ ಜಾರುವುದಾಗಿದೆ. ಇದು ಅಪಾಯಕಾರಿಯಾಗಿದೆ ಎನ್ನುತ್ತಾರೆ ವೈದ್ಯರು.

ಇದು ಬೆಳಗಿನ ಸಮಯದ ತಲೆನೋವು, ನಿದ್ರಾಹೀನತೆ, ಏಕಾಗ್ರತೆ ಕೊರತೆ, ಮನಸ್ಥಿತಿ ಬದಲಾವಣೆ, ಪದೇ ಪದೇ ಮೂತ್ರ ವಿಸರ್ಜನೆಯಂತಹ ಸಮಸ್ಯೆಗೆ ಕಾರಣವಾಗುತ್ತದೆ.

ಈ ರೀತಿಯ ಅಡೆತಡೆಗಳು ಗಂಭೀರವಾದಲ್ಲಿ, ದೇಹದ ಅನೇಕ ಅಂಗಾಂಗಗಳಿಗೆ ಆಮ್ಲಜನಕದ ಪೂರೈಕೆ ಮೇಲೆ ಪರಿಣಾಮ ಬೀರುತ್ತದೆ. ಇದು ಅಪ್ನೀಯಾಗೆ ಕಾರಣವಾಗುತ್ತದೆ. ಅಂಗಾಂಗಳಿಗೆ ಆಮ್ಲಜನಕ ಕೊರತೆಯಾಗುವುದರಿಂದ ಸುಸ್ತು, ಬೆಳಗಿನ ಹೊತ್ತು ನಿದ್ರೆ, ಕಿರಿಕಿರಿಯಂತಹ ಲಕ್ಷಣಕ್ಕೆ ಕಾರಣವಾಗುತ್ತದೆ ಎಂದು ಮುಂಬೈನ ಗ್ಲೋಬಲ್​ ಆಸ್ಪತ್ರೆಯ ಹಿರಿಯ ಮನೋವೈದ್ಯರಾದ ಡಾ ಸಂತೋಷ್​ ಬಂಗಾರ್​ ತಿಳಿಸಿದ್ದಾರೆ.

ಈ ಸಮಸ್ಯೆಗಳು ವಿಚ್ಛೇದನ, ರಸ್ತೆ ಅಪಘಾತ ಮತ್ತು ಮಾನಸಿಕ ಮತ್ತು ದೈಹಿಕ ಆರೋಗ್ಯ ಸಂಬಂಧಿತ ಸಮಸ್ಯೆಗೆ ಕಾರಣವಾಗುತ್ತದೆ. ಇದು ಮಧುಮೇಹ, ಅನಿಯಮಿತ ಹೃದಯ ಬಡಿತ, ಹೃದಯಾಘಾತ, ಹಠಾತ್​ ಹೃದಯಾಘಾತ, ಪಾರ್ಶ್ವವಾಯು, ಡೆಮನ್ಶಿಯಾ ಮತ್ತು ಖಿನ್ನತೆಗೆ ಕಾರಣವಾಗಬಹುದು.

ಈ ಸಮಸ್ಯೆ ಹೆಚ್ಚಾಗಿ ಸ್ಥೂಲಕಾಯ ಹೊಂದಿರುವವರಲ್ಲಿ, ವಂಶವಾಹಿನಿ ಹೊಂದಿರುವ ಜನರಲ್ಲಿ ಹೆಚ್ಚಿದೆ.

ಜೀವನಶೈಲಿ ಬದಲಾವಣೆ, ತೂಕ ಇಳಿಕೆ, ನಿಯಮಿತ ವ್ಯಾಯಾಮ, ರಾತ್ರಿ ಕಡಿಮೆ ಆಹಾರ ಸೇವನೆ, ನಿದ್ರೆ ಮಾತ್ರೆ ತಪ್ಪಿಸುವಿಕೆ, ಧೂಮಪಾನ ಮತ್ತು ಆಲ್ಕೋಹಾಲ್​ನಿಂದ ದೂರವಿರುವುದು ಅವಶ್ಯ. ಈ ಸಮಸ್ಯೆ ತಡೆಯುವಲ್ಲಿ ಸಿಪಿಎಪಿ, ನಿರಂತರವಾಗಿ ಸಕಾರಾತ್ಮಕ ಗಾಳಿಯಾಡುವ ಒತ್ತಡ ಅಥವಾ ವಸಡಿನ ಬ್ರೇಸ್​ ಸಹಾಯ ಮಾಡಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಇದನ್ನೂ ಓದಿ: 100ರಲ್ಲಿ 40 ಮಂದಿಗೆ ಗೊರಕೆ ಸಮಸ್ಯೆ: ಪರಿಹಾರಕ್ಕೆ ಏನು ಮಾಡಬೇಕು?

Last Updated : Jun 10, 2024, 4:47 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.