ETV Bharat / health

ಡೆಂಗ್ಯೂ ರೀತಿಯ ಅನಾರೋಗ್ಯ ಲಕ್ಷಣಗಳ ಪ್ರಮಾಣದಲ್ಲೂ ಗಣನೀಯ ಏರಿಕೆ: ಡಾ.ನಸೀರ್​ - Dengue Like Symptoms

author img

By ETV Bharat Karnataka Team

Published : Jul 12, 2024, 2:27 PM IST

Updated : Jul 12, 2024, 4:03 PM IST

ಪರೀಕ್ಷೆಯಲ್ಲಿ ನೆಗೆಟಿವ್ ಬಂದಿರುವ ಪ್ರಕರಣಗಳಲ್ಲಿ ಡೆಂಗ್ಯೂ ರೀತಿಯ ಆರೋಗ್ಯ ಸಮಸ್ಯೆಗಳ ಪ್ರಮಾಣ ಗಣನೀಯವಾಗಿ ಏರಿಕೆ ಕಂಡಿದೆ ಎಂದು ಡಾ. ನಸೀರ್​ ತಿಳಿಸಿದರು.

Mosquito and Dr. Naseer
ಡೆಂಗ್ಯೂ ಪ್ರಕರಣಗಳು (ETV Bharat)

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಡೆಂಗ್ಯೂ ಪ್ರಕರಣಗಳು ಸಾಕಷ್ಟು ಹೆಚ್ಚಾಗಿದ್ದು, ಜೂನ್ ಕೊನೆಯ ವಾರದಿಂದ ಜುಲೈ ಮೊದಲ ವಾರದವರೆಗೆ ಗಣನೀಯ ಏರಿಕೆ ಕಂಡಿದೆ. ಈ ಬಾರಿ ಡೆಂಗ್ಯೂ ಲಕ್ಷಣಗಳಲ್ಲಿ ಸಾಕಷ್ಟು ಬದಲಾವಣೆಗಳೂ ಕಂಡು ಬರುತ್ತಿದೆ.

ಡಾ.ನಸೀರ್​ (ETV Bharat)

ರೋಗಿಗಳಲ್ಲಿ ಜ್ವರದ ಪ್ರಮಾಣ ಹೆಚ್ಚಾಗಿದ್ದು, 104 ಡಿಗ್ರಿಯವರೆಗೆ ಕಂಡು ಬರುತ್ತಿದೆ. ತಲೆನೋವು, ಮೈ ಕೈ ನೋವು, ಸಂಧಿ ನೋವು ಹೆಚ್ಚಾಗಿದೆ. ರೋಗಿಗಳು ಗುಣಮುಖರಾಗುವ ಸಮಯ ಕೂಡ ಜಾಸ್ತಿಯಾಗಿದೆ. ಕಳೆದ ಕೆಲವು ವರ್ಷಗಳಿಗೆ ಹೋಲಿಸಿದರೆ ರೋಗಿಗಳಲ್ಲಿ ಪ್ಲೇಟ್ಲೆಟ್​ ಸಂಖ್ಯೆ ಕಡಿಮೆಯಿರುವುದು ಗೋಚರಿಸಿದೆ. ನೆಗೆಟಿವ್ ಬಂದಿರುವ ಪ್ರಕಣಗಳಲ್ಲಿ ಡೆಂಗ್ಯೂ ರೀತಿಯ ಆರೋಗ್ಯ ಸಮಸ್ಯೆಗಳ ಪ್ರಮಾಣ ಗಣನೀಯ ಏರಿಕೆಯಾಗಿದೆ.

ಈ ಕುರಿತು 'ಈಟಿವಿ ಭಾರತ' ಜೊತೆ ಮಾತನಾಡಿರುವ ಫೋರ್ಟಿಸ್ ಆಸ್ಪತ್ರೆಯ ಕನ್ಸಲ್ಟೆಂಟ್ ಫಿಸಿಷಿಯನ್, ಡೈಬೆಟೋಲೊಜಿಸ್ಟ್ ಡಾ.ನಸೀರ್, "ಎನ್.ಎಸ್ 1, ಐ.ಜಿ.ಎಂ ಟೆಸ್ಟ್​ಗಳನ್ನು ಡೆಂಗ್ಯೂ ಗುಣಲಕ್ಷಣ ಕಂಡುಬರುತ್ತಿರುವ ರೋಗಿಗಳಿಗೆ ಮಾಡಲಾಗುತ್ತಿದೆ. ಅದರಲ್ಲಿ ಅತಿ ಹೆಚ್ಚು ಪ್ರಕರಣಗಳು ಧೃಢಪಡದಿದ್ದರೂ ಡೆಂಗ್ಯೂ ರೀತಿಯ ಅನಾರೋಗ್ಯ ಲಕ್ಷಣಗಳ ಪ್ರಮಾಣ ಕೂಡ ನಮ್ಮಲ್ಲಿ ಬರುತ್ತಿರುವ ರೋಗಿಗಳಲ್ಲಿ ಹೆಚ್ಚಾಗಿದೆ. ಆದರೆ ಆಗಲೂ ಡೆಂಗ್ಯೂ ಮಾದರಿಯಲ್ಲಿ ಚಿಕಿತ್ಸೆ ನೀಡುತ್ತಿದ್ದೇವೆ. ಕಳೆದ ಕೆಲ ವಾರಗಳಿಂದ ಈ ರೀತಿಯ ಪ್ರಕರಣಗಳು ಹೆಚ್ಚು ಕಂಡುಬಂದಿದೆ" ಎಂದರು.

"1 ರಿಂದ 2 ದಿನ ಜ್ವರ ಕಾಣಿಸಿಕೊಂಡರೆ ಹತ್ತಿರದ ವೈದ್ಯರನ್ನು ಕಾಣುವುದು ಸಮಂಜಸ. ಟೆಸ್ಟ್ ಮಾಡಿಸುವಂತೆ ಹೇಳಿದರೆ ತಡ ಮಾಡದೇ ಮಾಡಿಸಿಕೊಳ್ಳಬೇಕು. ತೀವ್ರತರದ ರೋಗಕ್ಕೆ ಡೆಂಗ್ಯೂ ಶಾಕ್ ಸಿನ್ಡ್ರೋಮ್, ಹೆಮ್ಮೋರೇಜಿಕ್ ಫಿವರ್ ಎಂದು ಹೆಸರಿಸಲಾಗುತ್ತದೆ. ಶೇಕಡಾ 1ರಷ್ಟು ರೋಗಿಗಳಲ್ಲಿ ಕಂಡು ಬರುವ ಈ ಗುಣಲಕ್ಷಣಗಳು ಡೆಂಗ್ಯೂ ರೋಗವನ್ನು ಅತಿ ಅಪಾಯಕಾರಿ ಖಾಯಿಲೆಯನ್ನಾಗಿಸಿದೆ. ಮೂಗಿನಿಂದ ರಕ್ತ ಬರುವುದು, ರಕ್ತದೊತ್ತಡ ಕಡಿಮೆಯಾಗಿ ಐಸಿಯುಗೆ ದಾಖಲಾಗುವುದು, ಸೇರಿದಂತೆ ಹಲವು ತೀವ್ರತರದ ರೋಗ ಲಕ್ಷಣಗಳು ಕಂಡು ಬಂದು ಸಾವಿಗೂ ಕಾರಣವಾಗಬಹುದು" ಎಂದು ವಿವರಿಸಿದರು.

"ಯಾವ ಯಾವ ವಯಸ್ಸಿನ ರೋಗಿಗಳಿಗೆ ಹೆಚ್ಚು ಡೆಂಗ್ಯೂ ಖಾಯಿಲೆ ಬಾಧಿಸುತ್ತದೆ ಎನ್ನುವುದನ್ನು ಹೇಳಲಾಗುವುದಿಲ್ಲ. ತುಂಬಾ ಯುವಕರಿಗೆ, ಪ್ಲೇಟ್ಲೆಟ್ ಕಡಿಮೆಯಾಗಿ ಟ್ರಾನ್ಫ್ಯೂಷನ್ ಕೊಡುವ ಹಂತಕ್ಕೆ ಹೋಗುತ್ತದೆ. ಕೆಲ ವಯಸ್ಸಾದ ರೋಗಿಗಳು ಕೂಡ ಆರಾಮಾಗಿ 2 ರಿಂದ 3 ದಿನಗಳಲ್ಲಿ ಸುಧಾರಿಸಿಕೊಂಡು ಆರಾಮವಾಗಿ ಮನೆಗೆ ತೆರಳಿದ ಪ್ರಕರಣಗಳು ಸಾಕಷ್ಟಿವೆ. ಒಟ್ಟಿನಲ್ಲಿ ವೈರಸ್​ಗಳು ವರ್ಷಗಳು ಕಳೆದಂತೆ ಹೊಸ ರೂಪ ಪಡೆಯುತ್ತಿರುವುದು ಇವುಗಳಿಗೆ ಕಾರಣವಾಗಿದೆ" ಎಂದು ಹೇಳಿದರು.

ಇದನ್ನೂ ಓದಿ: ಡೆಂಗ್ಯೂ ಪರೀಕ್ಷೆಗೆ ಹೆಚ್ಚುವರಿ ಹಣ ವಸೂಲಿ: 22 ಲ್ಯಾಬ್​​ಗಳಿಗೆ ಆರೋಗ್ಯ ಇಲಾಖೆ ನೋಟಿಸ್ - Dengue Lab Test

Last Updated : Jul 12, 2024, 4:03 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.