ETV Bharat / health

ಗಂಟೆಗಟ್ಟಲೇ ಕಾಯಬೇಕಾಗಿಲ್ಲ: ಮಟನ್​ ಬೇಗ ಬೇಯಿಸಲು ಈ ಸಿಂಪಲ್​ ಟಿಪ್ಸ್​​ ಫಾಲೋ ಮಾಡಿದ್ರೆ ಸಾಕು!

ಮಟನ್​ ಅನ್ನು ಸರಿಯಾಗಿ ಬೇಯಿಸಬೇಕು ಇಲ್ಲದಿದ್ದರೆ ಸಾಂಬಾರ್​ ರುಚಿಯೇ ಸಂಪೂರ್ಣವಾಗಿ ಹಾಳಾಗಿ ಬಿಡುತ್ತದೆ. ಆದ್ದರಿಂದ ಮಾಂಸವನ್ನು ಬೇಯಿಸಲು ಈ ಟಿಪ್ಸ್​ ಅನುಸರಿಸಿ. ಈ ರೀತಿಯಲ್ಲಿ ಮಾಂಸವನ್ನು ಬೇಯಿಸುವುದರಿಂದ ಮಾಂಸ ಎಷ್ಟೇ ಗಟ್ಟಿಯಾಗಿದ್ದರೂ ಮೃದುವಾಗಿ ಬೇಯುತ್ತದೆ.

author img

By ETV Bharat Karnataka Team

Published : 1 hours ago

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (ETV Bharat)

ಚಿಕನ್, ಮಟನ್, ಮೀನು, ಸೀಗಡಿ ಸೇರಿದಂತೆ ನಾನ್​ವೆಜ್​ ಅಡುಗೆ ಮಾಡುವುದು ಅಷ್ಟು ಸುಲಭವಲ್ಲ. ಇನ್ನು ಮಟನ್ ಬಗ್ಗೆ ಹೇಳಬೇಕಾಗಿಲ್ಲ. ಕುಕ್ಕರ್ ನಲ್ಲಿ ಹಾಕಿ ಎಷ್ಟು ವಿಜಿಲ್​ ಹಾಕಿಸಿದರೂ ಮಟನ್ ಇನ್ನೂ​ ಗಟ್ಟಿಯಾಗಿಯೇ ಇರುತ್ತದೆ. ಕೆಲವು ಸರಳ ಟಿಪ್ಸ್​ ಅನುಸರಿಸಿದರೆ ಮಟನ್ ಅನ್ನು ಸುಲಭವಾಗಿ ಬೇಯಿಸಬಹುದು. ಇದರಿಂದ ಗ್ಯಾಸ್ ಕೂಡ ಉಳಿತಾಯವಾಗುತ್ತದೆ. ಆ ಸಲಹೆಗಳೇನು ಎಂದು ಇಲ್ಲಿ ತಿಳಿದುಕೋಳ್ಳೋಣ.

ಕಲ್ಲು ಉಪ್ಪು: ಮಟನ್ ​ನನ್ನು ಚೆನ್ನಾಗಿ ತೊಳೆದು ಬಳಿಕ ಅದರಲ್ಲಿ ನೀರು ಉಳಿಯದಂತೆ ಹಿಂಡಿಕೊಳ್ಳಬೇಕು. ಅನಂತರ ಆ ಮಟನ್​ಗೆ ಸ್ವಲ್ಪ ಕಲ್ಲುಪ್ಪು ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಒಂದು ಗಂಟೆ ನೆನೆಸಿಡಿ. ನಂತರ ​ಬೇಯಿಸಿದರೆ ಮಟನ್ ಬೇಗ ಬೇಯುತ್ತದೆ.

ಟೀ: ಮಟನ್​ ಬೇಯಿಸುವ ಮೊದಲು, ಟೀ ಡಿಕಾಕ್ಷನ್ ಅನ್ನು ಸಕ್ಕರೆ ಹಾಕದೆ ತಯಾರಿಸಿ ಅದನ್ನು ಈಗಾಗಲೇ ತೊಳೆದು ಇಟ್ಟುಕೊಂಡ ಮೆಟಲ್​ ಮೇಲೆ ಸುರಿದು ಒಂದು ಗಂಟೆ ಬಿಡಿ. ಬಳಿಕ ಬಿಸಿ ಮಾಡಿದರೆ ಮಟನ್ ಬೇಗನೆ ಬೇಯುತ್ತದೆ. ಟೀಯಲ್ಲಿರುವ ಟ್ಯಾನಿನ್‌ಗಳು ಮಟನ್ ಅನ್ನು ತ್ವರಿತವಾಗಿ ಮತ್ತು ಮೃದುವಾಗಿ ಬೇಯುವಂತೆ ಮಾಡಲು ಸಹಾಯ ಮಾಡುತ್ತವೆ.

ವಿನೆಗರ್ ಅಥವಾ ನಿಂಬೆ ರಸ: ಮಟನ್ ಅನ್ನು ತ್ವರಿತವಾಗಿ ಬೇಯಿಸಲು ವಿನೆಗರ್ ಅಥವಾ ನಿಂಬೆ ರಸವನ್ನು ಸಹ ಬಳಸಬಹುದು. ಅವು ಆಮ್ಲೀಯ ಗುಣಗಳನ್ನು ಹೊಂದಿರುವುದರಿಂದ, ಮಟನ್ ಅನ್ನು ತ್ವರಿತವಾಗಿ ಬೇಯಿಸಲು ಸಹಾಯ ಮಾಡುತ್ತದೆ ಮತ್ತು ಮಟನ್​ ಕರಿಗೆ ಉತ್ತಮ ಪರಿಮಳವನ್ನು ನೀಡುತ್ತದೆ.

ಟೊಮೆಟೊ: ಟೊಮೆಟೊ ಕೂಡ ಆಮ್ಲೀಯ ಗುಣ ಹೊಂದಿದೆ. ಟೊಮೆಟೊ ಪೇಸ್ಟ್ ಅಥವಾ ಟೊಮೆಟೊ ಸಾಸ್‌ ಹಾಕಿದರೂ ಮಟನ್​ ಚೆನ್ನಾಗಿ ಬೇಯುತ್ತದೆ. ತೆಲಂಗಾಣ ರಾಜ್ಯದಲ್ಲಿ ಬಹುತೇಕರು ನಾನ್​ವೆಜ್​ಗೆ ಟೊಮೆಟೊ ಅನ್ನು ಸಾಮಾನ್ಯವಾಗಿ ಬಳಸುತ್ತಾರೆ. ಆದರೆ ಎಲ್ಲರೂ ನೇರವಾಗಿ ಟೊಮೆಟೊ ಕತ್ತರಿಸಿ ಮಟನ್​ ಕರಿಗೆ ಹಾಕುತ್ತಾರೆ. ಮತ್ತೆ ಕೆಲವರು ಸಾಸ್ ಹಾಕುತ್ತಾರೆ. ಆದರೆ ಒಗ್ಗರಣೆ ಹಾಕುವ ಮೊದಲೇ ಟೊಮೆಟೊ ಹಾಕುವುದರಿಂದ ಮಟನ್​ ಬೇಗ ಬೇಯುತ್ತದೆ.

ಪಪ್ಪಾಯಿ ಎಲೆ: ಮಟನ್ ಅನ್ನು ಮೃದುವಾಗಿ ಬೇಯಿಸಲು ಪಪ್ಪಾಯಿ ಎಲೆ ಅಥವಾ ಹಸಿರು ಪಪ್ಪಾಯಿಯನ್ನು ಬಳಸಬಹುದು. ಇದರಲ್ಲಿರುವ ಪೆಪೈನ್ ಎಂಬ ಅಂಶ ಇದ್ದು, ಇದು ಮಾಂಸ ಮೃದುವಾಗುವಂತೆ ಮಾಡುವುದಕ್ಕೆ ಸಹಕಾರಿಯಾಗಿದೆ.

ಶುಂಠಿ: ಶುಂಠಿಯಲ್ಲಿರುವ ಕೆಲವು ಎಂಜೈಮ್​ (ಕಿಣ್ವ)ಗಳಿಂದಾಗಿ ಮಟನ್ ತ್ವರಿತವಾಗಿ ಮತ್ತು ಮೃದುವಾಗಿ ಬೇಯುತ್ತದೆ. ಸಾಮಾನ್ಯವಾಗಿ ನಾವು ಮಟನ್​ ಸಾರು ಮಾಡುವಾಗ ಶುಂಠಿ - ಬೆಳ್ಳುಳ್ಳಿ ಪೇಸ್ಟ್ ಅನ್ನು ತಪ್ಪದೇ ಬಳಸುತ್ತೇವೆ. ಹಾಗೇ ಮಾಡದೆ ಮೊದಲು ಶುಂಠಿ ಪೇಸ್ಟ್ ಹಾಕಿ ಮಟನ್ ಬೆಂದ ನಂತರ ಬೆಳ್ಳುಳ್ಳಿ ಪೇಸ್ಟ್ ಹಾಕಿದರೆ ಮಟನ್ ಬೇಗ ಕುಕ್​ ಆಗುತ್ತದೆ.

ಮೊಸರು: ಅಡುಗೆ ಮಾಡುವ ಮೊದಲು ಮಟನ್​ ಅನ್ನು ಒಂದು ಗಂಟೆ ಮೊಸರಿನಲ್ಲಿ ನೆನೆಸಿಟ್ಟರೆ ಮಟನ್ ಬೇಗನೆ ಬೇಯುತ್ತದೆ. ನೀವು ಮೊಸರು ಇಲ್ಲದಿದ್ದರೆ ಮಜ್ಜಿಗೆ ಬಳಸಬಹುದು. ಈ ಮೊಸರು, ಮಜ್ಜಿಗೆಯಿಂದ ನಮ್ಮ ದೇಹಕ್ಕೆ ಕ್ಯಾಲ್ಸಿಯಂ ಕೂಡ ಲಭಿಸುತ್ತದೆ.

ಹಣ್ಣುಗಳು: ಮಟನ್​ ಮೃದುವಾಗಿ ಬೇಯಲು ಹಣ್ಣುಗಳನ್ನು ಸಹ ಬಳಸಬಹುದು. ಕಿವಿ, ಅನಾನಸ್ ಮತ್ತು ಪಪ್ಪಾಯಿಯಂತಹ ಹಣ್ಣುಗಳಲ್ಲಿನ ಕಿಣ್ವಗಳು ಮಟನ್ ತ್ವರಿತವಾಗಿ ಬೇಯಲು ಸಹಾಯ ಮಾಡುತ್ತದೆ. ಈ ಹಣ್ಣುಗಳಲ್ಲಿ ಯಾವುದಾದರೂ ಒಂದು ಹಣ್ಣನ್ನು ಪೇಸ್ಟ್ ಮಾಡಿಕೊಂಡು ಸ್ವಲ್ಪ ಪ್ರಮಾಣದಲ್ಲಿ ಮಟನ್​ಗೆ ಹಾಕಿದರೆ ಸಾಕು. ಈ ರೀತಿಯ ಹಣ್ಣಿನ ಮಟನ್ ಕರಿಯನ್ನು ತುಂಬಾ ಇಷ್ಟಪಟ್ಟು ಸವಿಯುವ ಜನರೂ ಇದ್ದಾರೆ.

ಇದನ್ನೂ ಓದಿ: ರಾತ್ರಿಯ ಅನ್ನ ಬೆಳಗ್ಗೆ ತಿನ್ನಲಾಗದಿದ್ದರೆ ಪುದೀನಾ ಪಲಾವ್ ಟ್ರೈ ಮಾಡಿ: ಎಲ್ಲರಿಗೂ ಇಷ್ಟವಾಗುತ್ತೆ ನೋಡಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.