ETV Bharat / health

ಕಡಿಮೆ ಮಳೆ, ಅಧಿಕ ಇಂಗಾಲದಿಂದ ಭಾರತದ ಜೀವವೈವಿಧ್ಯ ತಾಣಗಳ ಮೇಲೆ ಪರಿಣಾಮ; ವರದಿ - Indias biodiversity hotspots

ಭಾರತದಲ್ಲಿ ಮಳೆ ಪ್ರಮಾಣ ಕಡಿಮೆ ಆಗುತ್ತಿರುವ ಬಗ್ಗೆ ಹೊಸ ಅಧ್ಯಯನವೊಂದು ಮಹತ್ವದ ವಿಚಾರವನ್ನು ತಿಳಿಸಿದೆ.

author img

By ETV Bharat Karnataka Team

Published : Jul 6, 2024, 3:47 PM IST

low-rainfall-and-high-co2-can-replace-indias-biodiversity-hotspots
ಸಾಂದರ್ಭಿಕ ಚಿತ್ರ (ಐಎಎನ್​ಎಸ್​)

ನವದೆಹಲಿ: ಹಸಿರು ಮನೆ ಅನಿಲ (ಕಾರ್ಬನ್​ ಡೈ ಆಕ್ಸೆಡ್​ -co2) ಹೆಚ್ಚಾದಂತೆ ಇದು ಸಮಭಾಜಕ ಪ್ರದೇಶದಲ್ಲಿ ಮಳೆ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಇದು ಭಾರತದ ಜೀವವೈವಿಧ್ಯದ ತಾಣಗಳ ಮೇಲೆ ಪರಿಣಾಮ ಬೀರುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ.

ಭಾರತದ ಜೀವವೈವಿಧ್ಯತೆಯ ತಾಣಗಳು​ ಆದ ಪಶ್ಚಿಮ ಘಟ್ಟಗಳು, ಈಶಾನ್ಯ ಭಾರತ ಮತ್ತು ಅಂಡಮಾನ್‌ಗಳಲ್ಲಿನ ನಿತ್ಯಹರಿದ್ವರ್ಣ ಕಾಡುಗಳನ್ನು ಒಳಗೊಂಡಿದೆ. ಇದು ಅದರ ಮೇಲೆ ಹೆಚ್ಚಿನ ಪರಿಣಾಮ ಬೀರಿ ಅದರನ್ನು ಬದಲಾಯಿಸುತ್ತದೆ ಎಂದು ಅಧ್ಯಯನ ತೋರಿಸಿದೆ. ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಸ್ವಾಯತ್ತ ಸಂಸ್ಥೆಯಾದ ಬಿರ್ಬಲ್ ಸಾಹ್ನಿ ಇನ್‌ಸ್ಟಿಟ್ಯೂಟ್ ಆಫ್ ಪ್ಯಾಲಿಯೋಸೈನ್ಸ್ ನ ಸಂಶೋಧಕರ ತಂಡ ಈ ಅಧ್ಯಯನ ನಡೆಸಿದೆ. ಎಚ್​1 ಎಂದು ಕರೆಯುವ ಇಯೊಸೀನ್ ಥರ್ಮಲ್ ಮ್ಯಾಕ್ಸಿಮಮ್-2ನಿಂದ ಪಳೆಯುಳಿಕೆ ಪರಾಗ ಮತ್ತು ಕಾರ್ಬನ್ ಐಸೊಟೋಪ್ ಡೇಟಾವನ್ನು ಅಧ್ಯಯನಕ್ಕೆ ಬಳಸಿದ್ದಾರೆ.

ಇದು ಸುಮಾರು 54 ಮಿಲಿಯನ್ ವರ್ಷಗಳ ಹಿಂದೆ ಸಂಭವಿಸಿದ ಜಾಗತಿಕ ತಾಪಮಾನದ ಅವಧಿಯಾಗಿದೆ. ಜಾಗತಿಕ ತಾಪಮಾನದ ಜೊತೆಗೆ, ಈ ಅವಧಿಯಲ್ಲಿ ಭಾರತದ ದಕ್ಷಿಣದಿಂದ ಉತ್ತರ ಗೋಳಾರ್ಧದ ಮೇಲೆ ಸಮಭಾಜಕ ರೇಖೆ ಸಾಗುತ್ತದೆ.

ಇದು ಭಾರತವನ್ನು ಸಂಪೂರ್ಣ ನೈಸರ್ಗಿಕ ಪ್ರಯೋಗಾಲಯವನ್ನಾಗಿ ಮಾಡುತ್ತದೆ, ಈ ಸಮಯದಲ್ಲಿ ಇಟಿಎಂ 2 ಸಮಭಾಜಕದ ಬಳಿಯ ಸಸ್ಯವರ್ಗದಲ್ಲಿ ಹವಾಮಾನ ಸಂಬಂಧ ತಿಳಿಯಲು ಅವಕಾಶ ನೀಡುತ್ತದೆ ಎಂದು ಸಂಶೋಧಕರು ಹೇಳಿದ್ದಾರೆ.

ಇಟಿಎಂ 2 ಪಳೆಯುಳಿಕೆ ಲಭ್ಯತೆಯ ಆಧಾರದ ಮೇಲೆ ಗುಜರಾತ್‌ನ ಕಚ್‌ನ ಪನಾಂಧ್ರೋ ಲಿಗ್ನೈಟ್ ಮೈನ್ ಸಂಶೋಧನೆಗೆ ಬಳಕೆ ಮಾಡಲಾಗಿದೆ. ಜಿಯೋಸೈನ್ಸ್ ಫ್ರಾಂಟಿಯರ್ಸ್ ಜರ್ನಲ್‌ನಲ್ಲಿ ಈ ಅಧ್ಯಯನ ಪ್ರಕಟಿಸಲಾಗಿದೆ. ಪ್ಯಾಲಿಯೋ-ಸಮಭಾಜಕದ ಬಳಿ ಪರಿಮಾಣದ ಮೂಲಕ ವಾಯುಮಂಡಲದ ಇಂಗಾಲದ ಡೈಆಕ್ಸೈಡ್ 1000 ಭಾಗಗಳಿಗಿಂತ ಹೆಚ್ಚು ಆದಾಗ ಮಳೆಯು ಗಣನೀಯವಾಗಿ ಕಡಿಮೆ ಆಗಿ, ಅರಣ್ಯದ ಮೇಲೆ ಪರಿಣಾಮ ಬೀರುತ್ತದೆ.

ಹೆಚ್ಚಿದ ಇಂಗಾಲದ ಹೊರಸೂಸುವಿಕೆಯ ಉಷ್ಣವಲಯದ ಮಳೆಕಾಡುಗಳು ಮತ್ತು ಜೀವವೈವಿಧ್ಯದ ಹಾಟ್‌ಸ್ಪಾಟ್‌ಗಳ ಉಳಿವಿನ ಬಗ್ಗೆ ಅಧ್ಯಯನ ಪ್ರಮುಖವಾಗಿ ಗಮನಹರಿಸಿದೆ. ಇದು ಇಂಗಾಲ ಮತ್ತು ಜಲವಿಜ್ಞಾನದ ಚಕ್ರದ ನಡುವಿನ ಸಂಬಂಧವನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಜೀವ ವೈವಿಧ್ಯದತೆಯ ಹಾಟ್‌ಸ್ಪಾಟ್‌ಗಳ ಭವಿಷ್ಯದ ಸಂರಕ್ಷಣೆಯಲ್ಲಿ ನೆರವಾಗುತ್ತದೆ. (ಐಎಎನ್​ಎಸ್​)

ಇದನ್ನೂ ಓದಿ : ಅಚ್ಚರಿಯಾದ್ರೂ ನಿಜ.. 2.3 ಕೋಟಿ ವರ್ಷಗಳಲ್ಲಿ ಇರದಷ್ಟು ಇಂಗಾಲದ ಡೈಆಕ್ಸೈಡ್​ ಮಧ್ಯೆ ನಮ್ಮ ಬದುಕು!!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.