ಹೈದರಾಬಾದ್: ಹೈಪಟೈಟಿಸ್ ಎ ಎಂಬುದು ಯಕೃತ್ ಅನ್ನು ಹಾನಿ ಮಾಡುವ ಸೋಂಕು ಆಗಿದ್ದು, ಈ ರೋಗ ತಡೆಯುವ ನಿಟ್ಟಿನಲ್ಲಿ ಇಂಡಿಯನ್ ಇಮ್ಯೂನೋಲಾಜಿಕಲ್ಸ್ ಅಭಿವೃದ್ಧಿಪಡಿಸಿರುವ ದೇಶಿಯ ಲಸಿಕೆ ಹ್ಯಾವಿಶರ್ ಅನ್ನು ಬಿಡುಗಡೆ ಮಾಡಲಾಗಿದೆ.
ಹ್ಯಾವಿಶರ್ ಎಂಬ ಎರಡು ಡೋಸ್ನ ಲಸಿಕೆಯು ಭಾರತದಲ್ಲಿ ಸೋಂಕಿನ ವಿರುದ್ಧದ ಹೋರಾಟದಲ್ಲಿ ಹೆಪಟೈಟಿಸ್ ಎ ತಡೆಯುವ ನಿಟ್ಟಿನಲ್ಲಿ ಗಮನಾರ್ಹ ಹೆಜ್ಜೆಯಾಗಿದೆ.
ಹೆಪಟೈಟಸ್ ಎ ಎಂಬುದು ವೈರಲ್ ಸೋಂಕು ಆಗಿದ್ದು, ಕಲುಷಿತ ಆಹಾರ, ನೀರಿನಿಂದ ಪ್ರಸರಣವಾಗುತ್ತದೆ. ಇದು ಪ್ರಾಥಮಿಕವಾಗಿ ಮೌಖಿಕ ಮತ್ತು ಮಲದ ಮಾರ್ಗದಲ್ಲಿ ಹರಡುತ್ತದೆ. ಇದು ದೇಹ ಪ್ರಮುಖ ಭಾಗವಾಗಿರುವ ಯಕೃತ್ ಕಾರ್ಯಾಚರಣೆ ಮೇಲೆ ಪರಿಣಾಮವನ್ನು ಬೀರುತ್ತದೆ.
ಈ ಲಸಿಕೆಗೆ ಡಿಸಿಜಿಐ ಅನುಮೋದನೆ ನೀಡಿದ್ದು, ರೋಗವನ್ನು ತಡೆಯುವ ನಿಟ್ಟಿನಲ್ಲಿ ಈ ಲಸಿಕೆಯನ್ನು ಮಕ್ಕಳಿಗೆ ನಿಯಮಿತವಾಗಿ ನೀಡುವ ಲಸಿಕೆಯಲ್ಲಿ ಸೇರಿಸುವಂತೆ ಶಿಫಾರಸು ಮಾಡಲಾಗಿದೆ ಎಂದು ಹೈದರಾಬಾದ್ ಮೂಲದ ಕಂಪನಿ ತಿಳಿಸಿದೆ. ಈ ಲಸಿಕೆ ಮೊದಲ ಡೋಸ್ ಅನ್ನು 12 ತಿಂಗಳ ಮೇಲ್ಪಟ್ಟ ಮಕ್ಕಳಿಗೆ ನೀಡಲಾಗುವುದು. ಎರಡನೇ ಡೋಸ್ ಮೊದಲ ಡೋಸ್ ಪಡೆದ ಆರು ತಿಂಗಳ ಬಳಿಕ ನೀಡಲಾಗುವುದು.
ಅಲ್ಲದೇ ಹೆಪಟೈಟಿಸ್ ಎ ತೀವ್ರವಾಗಿರುವ ಪ್ರದೇಶದಲ್ಲಿ ಪ್ರವಾಸ ಮತ್ತು ಆ ಪ್ರದೇಶಕ್ಕೆ ತೆರೆದುಕೊಳ್ಳುವವರಲ್ಲಿ ಈ ಸೋಂಕಿನ ಅಪಾಯ ಹೆಚ್ಚಿದ್ದು, ಅವರಿಗೆ ಲಸಿಕೆಯನ್ನು ಶಿಫಾರಸು ಮಾಡಲಾಗಿದೆ. ಹಾಗೇ ದೀರ್ಘ ಯಕೃತ್ ಸಮಸ್ಯೆಯಿಂದ ಬಳಲುವ ಅಪಾಯ ಹೊಂದಿರುವವರಿಗೆ ಈ ಲಸಿಕೆಯ ಅವಶ್ಯಕತೆ ಇದೆ.
ಪ್ರಸ್ತುತ ಹೆಪಟೈಟಿಸ್ ಎ ಲಸಿಕೆಯನ್ನು ಬೇರೆ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಆತ್ಮನಿರ್ಭರ್ ಭಾರತ್ನಿಂದಾಗಿ ಮೊದಲ ಬಾರಿಗೆ ಭಾರತದಲ್ಲಿ ಹೆಪಟೈಟಿಸ್ ಎ ಲಸಿಕೆಯನ್ನು ಅಭಿವೃದ್ಧಿಪಡಿಸುವ ಪ್ರಯತ್ನ ನಡೆಸಲಾಗಿದೆ ಎಂದು ಇಂಡಿಯನ್ ಇಮ್ಯೂಲೋಜಿಕಲ್ಸ್ನ ನಿರ್ವಹಣಾ ನಿರ್ದೇಶಕ ಕೆ ಆನಂದ್ ಕುಮಾರ್ ತಿಳಿಸಿದ್ದಾರೆ.
ಈ ಲಸಿಕೆಯನ್ನು ಎಂಟು ಕೇಂದ್ರದಲ್ಲಿ ಹಲವು ಭಾರೀ ಕ್ಲಿನಿಕಲ್ ಪ್ರಯೋಗ ನಡೆಸಲಾಗಿದೆ. ಈ ವೇಳೆ ಇದು ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎಂದು ಸಾಬೀತಾಗಿದೆ ಎಂದರು.
ಹೆಪಟೈಟಿಸ್ ಎ ಲಸಿಕೆಯ ಬೇಡಿಕೆ ಅನುಗುಣವಾಗಿ ಕಂಪನಿಯು ಇದರ ಉತ್ಪಾದನೆ ಬೆಳವಣಿಗೆ ನಡೆಸಲಿದೆ ಎಂದು ಸಂಸ್ಥೆಯ ಉಪ ನಿರ್ವಹಣಾ ನಿರ್ದೇಶಕರಾದ ಪ್ರಿಯಬ್ರತಾ ಪಟ್ನಾಯಕ್ ತಿಳಿಸಿದರು. (ಐಎಎನ್ಎಸ್)
ಇದನ್ನೂ ಓದಿ: ಐದು ವರ್ಷದೊಳಗಿನ ಶೇ. 60 ಮಕ್ಕಳಲ್ಲಿ ಸೂಕ್ಷ್ಮ ಪೋಷಕಾಂಶ ಕೊರತೆ; ಶೇ. 40 ಮಕ್ಕಳಲ್ಲಿ ರಕ್ತಹೀನತೆ