ಲಂಡನ್: ಪ್ರಾಣಿಗಳಿಂದ ಮಾನವರಿಗೆ ಹೆಚ್ಚಿನ ಸೋಂಕು ತಗಲುತ್ತದೆ ಎಂಬ ನಂಬಿಕೆ ಸಾಮಾನ್ಯ. ಆದರೆ ಹೊಸ ಅಧ್ಯಯನದ ಅನುಸಾರ ಮಾನವನೇ ವನ್ಯ ಮತ್ತು ಸಾಕು ಪ್ರಾಣಿಗಳಿಗೆ ವೈರಸ್ ಹರಡುತ್ತಾನೆ. ಇದು ಸೋಂಕಿನ ಅಪಾಯ ಹೆಚ್ಚಿಸುತ್ತದೆ. ಮಾನವರು 'ಸೋಂಕಿನ ಸಿಂಕ್' ಆಗಿರುತ್ತಾರೆ ಎಂಬ ದೀರ್ಘಕಾಲದ ಸಿದ್ದಾಂತಕ್ಕೆ ಈ ಅಧ್ಯಯನ ಸವಾಲು ಹಾಕಿದೆ.
ಮಾನವರನ್ನು ಎಂದಿಗೂ ವೈರಸ್‌ನ ಮೂಲ ಎಂದು ಪರಿಗಣಿಸಿಲ್ಲ. ಅಷ್ಟೇ ಅಲ್ಲ, ಮನುಷ್ಯರಿಂದ ಪ್ರಾಣಿಗಳಿಗೆ ಸೋಂಕು ಹರಡುವಿಕೆಯ ಅಂಶದ ಬಗ್ಗೆ ವಿಶೇಷ ಗಮನ ಹರಿಸಲಾಗಿಲ್ಲ ಎಂದು ಯೂನಿವರ್ಸಿಟಿ ಕಾಲೇಜ್ ಲಂಡನ್‌ನ ಸಂಶೋಧಕರು ವೈರಲ್ ಜೀನೋಮ್‌ಗಳ ವಿಶ್ಲೇಷಣೆಯಲ್ಲಿ ತಿಳಿಸಿದ್ದಾರೆ.
ಪ್ರಾಣಿಗಳು ಮನುಷ್ಯರಿಂದ ಸೋಂಕು ಹೊಂದಿದರೆ, ಇದು ಕೇವಲ ಅಪಾಯ ಮಾತ್ರವೇ ಅಲ್ಲ, ಪ್ರಾಣಿ ಮತ್ತು ಅವುಗಳ ತಳಿಗಳ ಸಂರಕ್ಷಣೆಯೂ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಮಾನವರ ಆಹಾರ ಭದ್ರತೆಯ ಹೊಸ ಬಿಕ್ಕಟ್ಟು ಸೃಷ್ಟಿಸುತ್ತದೆ. ಪ್ರಾಣಿಗಳಲ್ಲಿ ಸಾಮಾನ್ಯವಾಗಿ ಸಾಂಕ್ರಾಮಿಕ ಸೋಂಕು ಕಂಡುಬಂದರೆ, ಅವುಗಳು ಹರಡದಂತೆ ನಾಶ ಮಾಡಲಾಗುವುದು. ಇತ್ತೀಚಿಗೆ ಎಚ್1ಎನ್1 ಹಕ್ಕಿ ಜ್ವರ ಬಂದಾಗ ಪಕ್ಷಿಗಳ ಸಾಮೂಹಿಕ ಹರಣ ಮಾಡಲಾಯಿತು. ಈ ಮೂಲಕ ಇದು ಮಾನವರ ಆಹಾರದ ಪೂರೈಕೆ ಸರಪಳಿಯ ಮೇಲೂ ಪರಿಣಾಮ ಹೊಂದಿದೆ ಎಂದು ಫ್ರಾನ್ಸಿಸ್ ಕ್ರಿಕ್ ಇನ್‌ಸ್ಟಿಟ್ಯೂಟ್‌ನ ಡಾಕ್ಟರೇಟ್ ವಿದ್ಯಾರ್ಥಿ ಹಾಗೂ ಅಧ್ಯಯನದ ಪ್ರಮುಖ ಲೇಖಕ ಸೆಡ್ರಿಲ್ ಟಾನ್ ಹೇಳಿದ್ದಾರೆ.
ಮಾನವರಿಂದ ಪ್ರಾಣಿಗಳಿಗೆ ಹೊರಡುವ ಹೊಸ ಸೋಂಕು ಮನುಷ್ಯರಲ್ಲಿ ನಿರ್ಮೂಲನೆಗೊಂಡರೂ ಪ್ರಾಣಿಗಳಲ್ಲಿ ಹಾಗೇ ಇರಲಿದೆ. ಪ್ರಾಣಿಗಳಲ್ಲಿ ಇರುವ ಸೋಂಕು ರೂಪಾಂತರಗೊಂಡು ಮತ್ತೆ ಮನುಷ್ಯರಿಗೆ ಹರಡುವ ಸಾಧ್ಯತೆ ಇದೆ. ಈ ಅಧ್ಯಯನ ಮೂಲಕ ಸೋಂಕುಗಳು ಹೇಗೆ ಮತ್ತು ಏಕೆ ವಿಕಸನಗೊಳ್ಳುತ್ತವೆ?. ಹೇಗೆ ಹೊಸ ರೋಗಗಳು ಪ್ರಾಣಿ ಮತ್ತು ಮಾನವರಲ್ಲಿ ವಿಕಸನವಾಗುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲಾಗಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.
ಅಧ್ಯಯನ ವರದಿ ನೇಚರ್ ಎಕಾಲಜಿ ಆ್ಯಂಡ್ ಎವಲ್ಯೂಷನ್ನಲ್ಲಿ ಪ್ರಕಟವಾಗಿದೆ. ಸಂಶೋಧಕರು ಸರಿಸುಮಾರು 12 ಮಿಲಿಯನ್ ಸೋಂಕಿನ ಜೀನೋಮ್‌ಗಳನ್ನು ಮೆಥಾಡಾಲಾಜಿಕಲ್ ಟೂಲ್ ಬಳಕೆ ಮಾಡಿ ಅಧ್ಯಯನ ಮಾಡಿದ್ದಾರೆ. ಅಧ್ಯಯನದ ಫಲಿತಾಂಶದ ಅನುಸಾರ ಸೋಂಕುಗಳು ಮನುಷ್ಯರಿಂದ ಪ್ರಾಣಿಗಳಿಗೆ ಹರಡುತ್ತದೆ. ಈ ಮಾದರಿಗಳು ಬಹುತೇಕ ಸೋಂಕಿನ ಕುಟುಂಬದೆಲ್ಲೆಡೆ ಪರಿಗಣಿಸಬಹುದಾಗಿದೆ. ಇದರ ಜೊತೆಗೆ ಮನುಷ್ಯರ ಹೊರತಾಗಿ ಪ್ರಾಣಿಗಳಿಂದ ಪ್ರಾಣಿಗಳಿಗೆ ಸೋಂಕು ಹರಡುವುದನ್ನು ಕಂಡುಕೊಂಡಿದ್ದಾರೆ.(ಐಎಎನ್ಎಸ್)
ಇದನ್ನೂ ಓದಿ: ಮಕ್ಕಳಲ್ಲಿ ಮಾರಣಾಂತಿಕ ಟಿಬಿ ತಡೆಯುವಲ್ಲಿ ಬಿಸಿಜಿ ಲಸಿಕೆಯ ಪಾತ್ರ - BCG VACCINE