ETV Bharat / health

ರಾತ್ರಿ ಪದೇ ಪದೆ ಮೂತ್ರ ವಿಸರ್ಜನೆ ಮಾಡುತ್ತಿದ್ದೀರಾ?; ಇದು ಕೇವಲ ಸಕ್ಕರೆ ಕಾಯಿಲೆ ಲಕ್ಷಣ ಮಾತ್ರವಲ್ಲ, ಅಪಾಯಕಾರಿ ರೋಗದ ಲಕ್ಷಣವೂ ಹೌದು - HIGH BLOOD PRESSURE SYMPTOMS

HYPERGLYCEMIA WARNING SIGNS: ರಾತ್ರಿ ವೇಳೆ ಮೂತ್ರ ವಿಸರ್ಜನೆ ಕಾಮನ್​. ನೀವು ಆಗಾಗ್ಗೆ ಶೌಚಾಲಯಕ್ಕೆ ಹೋದರೆ, ನಿಮಗೆ ಮಧುಮೇಹವಿದೆ ಎಂದೇ ಹಲವರ ಭಾವನೆ. ಆದಾಗ್ಯೂ, ಈ ರೋಗಲಕ್ಷಣವು ಮಧುಮೇಹದ ಏಕೈಕ ಲಕ್ಷಣವಲ್ಲ ಅಂತಾರೆ ತಜ್ಞರು.

author img

By ETV Bharat Karnataka Team

Published : Jun 13, 2024, 9:49 AM IST

Warning signs of high blood pressure
ರಾತ್ರಿ ಅತಿಯಾದ ಮೂತ್ರ ವಿಸರ್ಜನೆ ಮಾಡುತ್ತಿದ್ದೀರಾ?; ಇದು ಕೇವಲ ಸಕ್ಕರೆ ಕಾಯಿಲೆ ಲಕ್ಷಣ ಮಾತ್ರವಲ್ಲ, ಅಪಾಯಕಾರಿ ರೋಗದ ಲಕ್ಷಣವೂ ಹೌದು (IANS/ETV Bharat)

Warning signs of high blood pressure: ಅತಿಯಾದ ಮೂತ್ರ ವಿಸರ್ಜನೆ ವಿಚಾರವನ್ನು ಅಷ್ಟು ಸುಲಭವಾಗಿ ನಿರ್ಲಕ್ಷ್ಯ ಮಾಡುವಂತಿಲ್ಲ. ಯಾಕೆಂದರೆ, ಇದು ಯಾವುದೋ ಒಂದು ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು. ಕೆಲವರು ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುತ್ತಲೇ ಇರುತ್ತಾರೆ. ವಿಶೇಷವಾಗಿ ರಾತ್ರಿಯಲ್ಲಿ ಪದೇ ಪದೆ ಮೂತ್ರ ವಿಸರ್ಜನೆ ಮಾಡಿದರೆ, ಅನೇಕರು ಇದನ್ನು ಮಧುಮೇಹದ ಲಕ್ಷಣವೆಂದು ಪರಿಗಣಿಸುತ್ತಾರೆ. ಆದರೆ, ಇದು ಸಕ್ಕರೆ ಕಾಯಿಲೆಯ ಲಕ್ಷಣ ಮಾತ್ರವಷ್ಟೇ ಅಲ್ಲ, ಇದು ಮತ್ತೊಂದು ಅಪಾಯಕಾರಿ ಆರೋಗ್ಯ ಸಮಸ್ಯೆಯ ಎಚ್ಚರಿಕೆಯ ಸಂಕೇತವೂ ಹೌದು ಅಂತಾರೆ ಆರೋಗ್ಯ ತಜ್ಞರು.

ಹೆಚ್ಚಿನ ಜನರು ರಾತ್ರಿ ವೇಳೆ ಅತಿಯಾದ ಮೂತ್ರ ವಿಸರ್ಜನೆ ಮಾಡುವುದನ್ನು ಮಧುಮೇಹದ ಸಂಕೇತ ಎಂದು ತಿಳಿದುಕೊಂಡಿರುತ್ತಾರೆ. ಆದರೆ, ಮಧುಮೇಹ ಮಾತ್ರವಲ್ಲ.. 'ಅಧಿಕ ರಕ್ತದೊತ್ತಡ' ದಿಂದಲೂ ಸಹ ರಾತ್ರಿ ಮೂತ್ರ ವಿಸರ್ಜನೆ ಮಾಡಬೇಕಾಗುತ್ತದೆಯಂತೆ. ಏಕೆಂದರೆ.. ರಕ್ತದೊತ್ತಡದ ಮಟ್ಟದಲ್ಲಿ ಅಸಮತೋಲನ ಉಂಟಾದಾಗ ಕಿಡ್ನಿಗಳ ಮೇಲೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಇದರಿಂದಾಗಿ ಮೂತ್ರಪಿಂಡಗಳು ಹೆಚ್ಚು ಮೂತ್ರವನ್ನು ಉತ್ಪತ್ತಿ ಮಾಡುತ್ತವೆ. ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆ ಮಾಡುವಂತೆ ಪ್ರಚೋದಿಸುತ್ತದೆ ಅಂತಾರೆ ವೈದ್ಯರು.

ಹಾಗಾಗಿ, ಈ ಲಕ್ಷಣ ಕಂಡುಬಂದಲ್ಲಿ ಮಧುಮೇಹ ಪರೀಕ್ಷೆಯ ಜೊತೆಗೆ ಬಿಪಿ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಜ್ಞರು ಸಲಹೆ ನೀಡುತ್ತಾರೆ. ನೀವು ಅಧಿಕ ರಕ್ತದೊತ್ತಡ ಹೊಂದಿದ್ದರೆ, ಆರಂಭಿಕ ಪತ್ತೆ ಮತ್ತು ಚಿಕಿತ್ಸೆ ಪಡೆಯುವ ಮೂಲಕ ನಿಮ್ಮ ಆರೋಗ್ಯದ ರಕ್ಷಣೆ ಮಾಡಿಕೊಳ್ಳಬಹುದು. ಇಲ್ಲದೇ ಹೋದರೆ ಅಧಿಕ-ಬಿಪಿಯಿಂದಾಗಿ ಅಪಧಮನಿಗಳು ಹಾನಿಗೊಳಗಾಗುತ್ತವೆ. ಪರಿಣಾಮವಾಗಿ ಹೃದಯಾಘಾತ ಅಥವಾ ಪಾರ್ಶ್ವವಾಯು ಅಪಾಯವು ಹೆಚ್ಚಾಗುತ್ತದೆ. ಮೇಲಾಗಿ ಅಧಿಕ ರಕ್ತದೊತ್ತಡದ ಸಮಸ್ಯೆ ತಡೆಯದೇ ಬಿಟ್ಟರೆ ಹೃದಯದ ಸಮಸ್ಯೆಗಳಲ್ಲದೇ ಮೂತ್ರಪಿಂಡದ ಕಾರ್ಯಚಟುವಟಿಕೆಯೂ ಹಾಳಾಗುತ್ತದೆ, ದೃಷ್ಟಿದೋಷ, ಜ್ಞಾಪಕ ಶಕ್ತಿ ನಷ್ಟವೂ ಉಂಟಾಗುತ್ತದೆ ಎಂದು ತಜ್ಞರು ಸಲಹೆ ನೀಡುತ್ತಾರೆ. ಅದಕ್ಕಾಗಿಯೇ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಪತ್ತೆಹಚ್ಚುವುದು ಮತ್ತು ನಿಯಂತ್ರಿಸುವುದು ಬಹಳ ಮುಖ್ಯ.

2016 ರಲ್ಲಿ ನಿಯತಕಾಲಿಕವೊಂದರಲ್ಲಿ ಪ್ರಕಟವಾದ ವರದಿ ಪ್ರಕಾರ ಅಧಿಕ ರಕ್ತದೊತ್ತಡ ಹೊಂದಿರುವ ಜನರು ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜಿಸುವ ಸಾಧ್ಯತೆಯಿದೆ ಎಂಬುದನ್ನು ಹೇಳಿದೆ. ಈ ಸಂಶೋಧನೆಯಲ್ಲಿ ಮಿನ್ನೇಸೋಟ ವಿಶ್ವವಿದ್ಯಾನಿಲಯದ ಪ್ರಮುಖ ಮೂತ್ರಪಿಂಡಶಾಸ್ತ್ರಜ್ಞ ಡಾ.ರಾಬರ್ಟ್ ಎಸ್. ರೋಜನ್ ಭಾಗವಹಿಸಿದ್ದರು. ರಾತ್ರಿಯಲ್ಲಿ ಆಗಾಗ್ಗೆ ಮೂತ್ರ ವಿಸರ್ಜನೆಯು ಅಧಿಕ ರಕ್ತದೊತ್ತಡದ ಸಾಮಾನ್ಯ ಲಕ್ಷಣವಾಗಿದೆ ಎಂದು ಅವರು ಗಮನಿಸಿದ್ದಾರೆ.

ಅಧಿಕ ರಕ್ತದೊತ್ತಡದ ಸಮಸ್ಯೆ ಇದ್ದರೆ ರಾತ್ರಿಯಲ್ಲಿ ಅತಿಯಾದ ಮೂತ್ರ ವಿಸರ್ಜನೆ ಮಾತ್ರವಲ್ಲ, ಇತರ ರೋಗಲಕ್ಷಣಗಳೂ ಇವೆ ಎಂದು ತಜ್ಞರು ಹೇಳುತ್ತಾರೆ. ಅಂದರೆ, ಅವರು ಯಾವುದೇ ದೈಹಿಕ ಚಟುವಟಿಕೆಯನ್ನು ಮಾಡದಿದ್ದರೂ ಮತ್ತು ಯಾವಾಗಲೂ ದಣಿಯದಿದ್ದರೂ ಎಚ್ಚರವಾಗಿರಲು ಬಯಸುತ್ತಾರೆ. ಏಕೆಂದರೆ ಇದು ಅಧಿಕ ರಕ್ತದೊತ್ತಡದ ಆರಂಭಿಕ ಲಕ್ಷಣ ಎಂದೇ ಹೇಳಬಹುದು. ಅಲ್ಲದೇ ಬಿಪಿ ಜಾಸ್ತಿಯಾದರೆ, ಪಾದ, ಕಾಲುಗಳಲ್ಲಿ ಊತ ಕಾಣಿಸಿಕೊಳ್ಳುತ್ತದೆ ಎನ್ನುತ್ತಾರೆ ವೈದ್ಯರು. ಉಸಿರಾಟದ ತೊಂದರೆ ಇದ್ದರೂ ನಿರ್ಲಕ್ಷ್ಯ ಮಾಡಬೇಡಿ.

ವಿಶೇಷ ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರವೇ ನೀಡಲಾಗಿದೆ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನೀವು ನಿಮ್ಮ ಆಪ್ತ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಇದನ್ನು ಓದಿ:ನಿಮ್ಮ ದೃಷ್ಟಿ ಮಂದವಾಗುತ್ತಿದೆಯಾ? ಈ ವ್ಯಾಯಾಮ ಮಾಡಿ ನೋಡಿ ಸ್ಪಷ್ಟವಾಗಿ ಕಾಣಿಸುತ್ತೆ..!!, ನೀವೂ ಒಮ್ಮೆ ಟ್ರೈ ಮಾಡಿ! - HOW TO IMPROVE EYE VISION

ನಿದ್ರೆ ವೇಳೆ ಗೊರಕೆ; ಯಾವ ಸಂದರ್ಭದಲ್ಲಿ ಬೇಕು ವೈದ್ಯಕೀಯ ಚಿಕಿತ್ಸೆ? - Snoring association with sleep apnoea

ETV Bharat Logo

Copyright © 2024 Ushodaya Enterprises Pvt. Ltd., All Rights Reserved.