ETV Bharat / health

ಹಾಲಿನಲ್ಲಿ ಸಕ್ಕರೆ ಮಿಕ್ಸ್​ ಮಾಡಿ ಕುಡಿಯುತ್ತಿದ್ದೀರಾ?, ನಿಮ್ಮ ದೇಹದಲ್ಲಿ ಏನಾಗುತ್ತಿದೆ ಎಂದು ನಿಮಗೆ ತಿಳಿದಿದೆಯೇ? - Drinking Milk with Honey - DRINKING MILK WITH HONEY

Drinking Milk with Honey: ರಾತ್ರಿ ಹಾಲು ಕುಡಿಯುವ ಅಭ್ಯಾಸ ಅನೇಕರಿಗೆ ಇರುತ್ತದೆ. ಆದರೆ.. ಹೆಚ್ಚಿನವರು ಆ ಹಾಲಿಗೆ ಸಕ್ಕರೆ ಸೇರಿಸಿ ಕುಡಿಯುತ್ತಾರೆ. ಹೀಗೆ ಹಾಲಿಗೆ ಸಕ್ಕರೆ ಹಾಕಿ ಕುಡಿದರೆ ಏನಾಗುತ್ತೆ ಗೊತ್ತಾ?? ಇಲ್ಲಿದೆ ಮಾಹಿತಿ..

HEALTH BENEFITS  DRINKING MILK WITH HONEY
ನಿಮ್ಮ ದೇಹದಲ್ಲಿ ಏನಾಗುತ್ತಿದೆ ಎಂದು ನಿಮಗೆ ತಿಳಿದಿದೆಯೇ? (ಕೃಪೆ: ETV Bharat)
author img

By ETV Bharat Karnataka Team

Published : May 22, 2024, 7:07 PM IST

Health Benefits of Drinking Milk with Honey: ನಾವು ಆರೋಗ್ಯವಾಗಿರಲು ಸಮತೋಲಿತ ಆಹಾರ ಅತ್ಯಗತ್ಯ. ಈ ಕ್ರಮದಲ್ಲಿ ರಾತ್ರಿ ಮಲಗುವ ಮುನ್ನ ಒಂದು ಲೋಟ ಬೆಚ್ಚಗಿನ ಹಾಲನ್ನು ಕುಡಿಯಲು ತಜ್ಞರು ಸಲಹೆ ನೀಡುತ್ತಾರೆ. ಹಾಲಿನಲ್ಲಿರುವ ಪೋಷಕಾಂಶಗಳು ಅನೇಕ ಪ್ರಯೋಜನಗಳನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ. ಹಲವರು ಅದಕ್ಕೆ ಸಕ್ಕರೆ ಮಿಕ್ಸ್​ ಮಾಡಿಯೇ ಕುಡಿಯುತ್ತಾರೆ. ಹಾಲಿಗೆ ಸಕ್ಕರೆ ಹಾಕಿ ಸೇವನೆ ಮಾಡುವುದರಿಂದ ಹಲವು ಸಮಸ್ಯೆಗಳು ಎದುರಾಗುತ್ತವೆ ಎನ್ನಲಾಗಿದೆ. ಹಾಗಾಗಿ.. ಹಾಲಿನಲ್ಲಿ ಸಕ್ಕರೆಯ ಬದಲು ಒಂದು ಚಮಚ ಜೇನುತುಪ್ಪ ಸೇರಿಸಿ ಕುಡಿಯುವುದು ಒಳ್ಳೆಯದು. ಇದರಿಂದ ಅನೇಕ ಪ್ರಯೋಜನಗಳು ಉಂಟು ಎಂದು ತಜ್ಞರು ಸಲಹೆ ನೀಡಿದ್ದಾರೆ.

ಪೋಷಕಾಂಶಗಳ ಪವರ್‌ಹೌಸ್: ಹಾಲಿನಲ್ಲಿ ಕ್ಯಾಲ್ಸಿಯಂ, ವಿಟಮಿನ್ ಡಿ, ಪ್ರೊಟೀನ್ ಮತ್ತು ರಂಜಕದಂತಹ ಅನೇಕ ಪ್ರಮುಖ ಪೋಷಕಾಂಶಗಳಿವೆ. ಅಲ್ಲದೇ, ಜೇನುತುಪ್ಪವು ಉತ್ಕರ್ಷಣ ನಿರೋಧಕಗಳು, ಬ್ಯಾಕ್ಟೀರಿಯಾ ವಿರೋಧಿ ಗುಣಗಳು, ಪೊಟ್ಯಾಸಿಯಮ್, ಮೆಗ್ನೀಸಿಯಮ್, ವಿಟಮಿನ್ ಬಿ 6 ನಂತಹ ಪೋಷಕಾಂಶಗಳನ್ನು ಒಳಗೊಂಡಿದೆ. ಈ ಎರಡನ್ನೂ ಒಟ್ಟಿಗೆ ತೆಗೆದುಕೊಂಡರೆ ಅದ್ಭುತಗಳನ್ನು ಮಾಡುತ್ತದೆ ಎಂದು ಹೇಳಲಾಗುತ್ತದೆ.

ಉತ್ತಮ ನಿದ್ರೆ: ಹಾಲಿನಲ್ಲಿ ಟ್ರಿಪ್ಟೊಫಾನ್ ಎಂಬ ಅಮೈನೋ ಆಮ್ಲವಿದೆ. ಇದು ದೇಹದಲ್ಲಿ ಮೆಲಟೋನಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ನಿದ್ರೆಯನ್ನು ನಿಯಂತ್ರಿಸುವ ಹಾರ್ಮೋನ್ ಸಹ ಆಗಿದೆ. ಜೇನುತುಪ್ಪವು ಆಂಟಿ - ಆಕ್ಸಿಡೆಂಟ್​ಗಳು, ಆಂಟಿಇನ್ಫ್ಲಮೆಟರಿ ಲಕ್ಷಣಗಳನ್ನೂ ಸಹ ಹೊಂದಿದೆ. ಆದರೆ ಈ ಎರಡರಲ್ಲಿರುವ ಪೋಷಕಾಂಶಗಳು ಒತ್ತಡವನ್ನು ಕಡಿಮೆ ಮಾಡಲು ಮತ್ತು ನಿದ್ರೆಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

2009 ರಲ್ಲಿ ಜರ್ನಲ್ ಆಫ್ ಕ್ಲಿನಿಕಲ್ ಸ್ಲೀಪ್ ಮೆಡಿಸಿನ್‌ನಲ್ಲಿ ಪ್ರಕಟವಾದ ಅಧ್ಯಯನದ ಪ್ರಕಾರ, ರಾತ್ರಿ ಮಲಗುವ ಮೊದಲು ಬೆಚ್ಚಗಿನ ಹಾಲನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ನಿದ್ರೆ ಸುಧಾರಿಸುತ್ತದೆ. ಈ ಸಂಶೋಧನೆಯಲ್ಲಿ, ಕ್ಲಿನಿಕಲ್ ಮನಶ್ಶಾಸ್ತ್ರಜ್ಞ, ಯುನೈಟೆಡ್ ಕಿಂಗ್‌ಡಂನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ. ಡೇವಿಡ್ ಸಿ. ಆಷ್ಟನ್ ಭಾಗವಹಿಸಿದ್ದರು. ಈ ಎರಡರಲ್ಲಿರುವ ಪೋಷಕಾಂಶಗಳು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತದೆ ಎಂದು ಅವರು ಹೇಳುತ್ತಾರೆ.

ಜೀರ್ಣಕ್ರಿಯೆ ಸುಧಾರಣೆ: ಹಾಲು ಪ್ರೋಬಯಾಟಿಕ್ಸ್ ಎಂಬ ಪ್ರಯೋಜನಕಾರಿ ಬ್ಯಾಕ್ಟೀರಿಯಾವನ್ನು ಹೊಂದಿರುತ್ತದೆ ಎಂದು ತಜ್ಞರು ಹೇಳುತ್ತಾರೆ. ಜೇನುತುಪ್ಪವು ಜೀರ್ಣಕಾರಿ ಕಿಣ್ವಗಳನ್ನು ಹೊಂದಿರುತ್ತದೆ. ಇವುಗಳಲ್ಲಿರುವ ಪೋಷಕಾಂಶಗಳು ಆಹಾರವನ್ನು ಒಡೆಯಲು, ಪೋಷಕಾಂಶಗಳನ್ನು ಹೀರಿಕೊಳ್ಳಲು ಮತ್ತು ಗ್ಯಾಸ್ ಮತ್ತು ಮಲಬದ್ಧತೆಯಂತಹ ಜೀರ್ಣಕಾರಿ ಸಮಸ್ಯೆಗಳನ್ನು ತಡೆಯಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಶೀತ ಮತ್ತು ಕೆಮ್ಮು ನಿವಾರಣೆ: ಹಾಲಿನಲ್ಲಿ ಆಂಟಿಇನ್ಫ್ಲಮೆಟರಿ ಗುಣವಿದೆ. ಜೇನುತುಪ್ಪವು ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿವೈರಲ್ ಗುಣಗಳನ್ನು ಹೊಂದಿದೆ. ಈ ಕಾರಣಕ್ಕಾಗಿ ಗಂಟಲು ನೋವು, ಕೆಮ್ಮು ಇತ್ಯಾದಿಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಮತ್ತು ನೆಗಡಿಗೆ ಕಾರಣವಾಗುವ ಸೋಂಕುಗಳ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಮೂಳೆಗಳನ್ನು ಗಟ್ಟಿಗೊಳಿಸುತ್ತದೆ: ಹಾಲಿನಲ್ಲಿ ಮೂಳೆಗಳಿಗೆ ಅಗತ್ಯವಾದ ಕ್ಯಾಲ್ಸಿಯಂ ಇದೆ. ಜೇನುತುಪ್ಪದೊಂದಿಗೆ ಸೇವಿಸುವುದರಿಂದ ದೇಹವು ಈ ಕ್ಯಾಲ್ಸಿಯಂ ಅನ್ನು ಉತ್ತಮವಾಗಿ ಹೀರಿಕೊಳ್ಳುತ್ತದೆ. ವಯಸ್ಸಾದವರಿಗೆ ಇದು ತುಂಬಾ ಒಳ್ಳೆಯದು ಎಂದು ತಜ್ಞರು ಹೇಳುತ್ತಾರೆ.

ಒತ್ತಡವನ್ನು ಕಡಿಮೆ ಮಾಡುತ್ತದೆ: ಹಾಲು ಮತ್ತು ಜೇನುತುಪ್ಪವನ್ನು ಒಟ್ಟಿಗೆ ಕುಡಿಯುವುದರಿಂದ ದೇಹದಲ್ಲಿ ಸಿರೊಟೋನಿನ್ ಎಂಬ ಹಾರ್ಮೋನ್ ಬಿಡುಗಡೆಯಾಗುತ್ತದೆ. ಈ ಹಾರ್ಮೋನ್ ಒತ್ತಡವನ್ನು ಕಡಿಮೆ ಮಾಡುತ್ತದೆ. ಇದಲ್ಲದೇ, ಒತ್ತಡವನ್ನು ಉಂಟುಮಾಡುವ ಕಾರ್ಟಿಸೋಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ತಜ್ಞರು ಹೇಳುತ್ತಾರೆ.

ಚರ್ಮದ ಆರೋಗ್ಯಕ್ಕೆ ಉತ್ತಮ: ಹಾಲಿನಲ್ಲಿ ಲ್ಯಾಕ್ಟಿಕ್ ಆಮ್ಲ ಮತ್ತು ಜೇನುತುಪ್ಪದಲ್ಲಿ ಆ್ಯಂಟಿಆಕ್ಸಿಡೆಂಟ್ ಇದೆ ಎಂದು ಹೇಳಲಾಗುತ್ತದೆ. ಇದು ಫ್ರೀ ರಾಡಿಕಲ್‌ಗಳಿಂದ ಉಂಟಾಗುವ ಹಾನಿಯಿಂದ ಚರ್ಮವನ್ನು ರಕ್ಷಿಸಲು ಸಹಾಯ ಮಾಡುತ್ತದೆ. ಇದು ಚರ್ಮವನ್ನು ತೇವ ಮತ್ತು ಮೃದುವಾಗಿಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಸೂಚನೆ : ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆಯನ್ನು ಆಧರಿಸಿ ನಾವು ಈ ಮಾಹಿತಿಯನ್ನು ಒದಗಿಸುತ್ತಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ನಿಮ್ಮ ವೈಯಕ್ತಿಕ ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

ಓದಿ: ಯಾವುದೂ ನೆನಪಾಗುತ್ತಿಲ್ಲವೇ? ಮರೆವು ಕ್ಷಣಕ್ಷಣಕ್ಕೂ ಕಾಡುತ್ತಿದೆಯಾ?: ಈ ಐದು ಕೆಲಸ ಮಾಡಿ ಮರೆವಿಗೆ ಬೈಬೈ ಹೇಳಿ! - Tips For Increase Memory Power

ETV Bharat Logo

Copyright © 2025 Ushodaya Enterprises Pvt. Ltd., All Rights Reserved.