ETV Bharat / entertainment

ವಿಷ್ಣು​, ಉಪ್ಪಿ, ಶ್ರುತಿ ಜನ್ಮದಿನ: 'ಸಾಹಸಸಿಂಹ ಕರುಣಾಮಯಿಯ ಜನ್ಮದಿನ ಹಂಚಿಕೊಂಡ ನಾನು ಪುಣ್ಯವಂತ'ವೆಂದ ರಿಯಲ್​ ಸ್ಟಾರ್ - UI Poster Release - UI POSTER RELEASE

ಇಂದು ಸಾಹಸಸಿಂಹ ವಿಷ್ಣುವರ್ಧನ್​, ರಿಯಲ್​ ಸ್ಟಾರ್​ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಹುಟ್ಟಿದ ದಿನ. ಬುದ್ಧಿವಂತ ನಟನ ಜನ್ಮದಿನ ಹಿನ್ನೆಲೆ ಬಹುನಿರೀಕ್ಷಿತ ಚಿತ್ರ 'ಯುಐ'ನ ಪೋಸ್ಟರ್ ಅನಾವರಣಗೊಂಡಿದೆ.

Vishnuvardhan, Shruti, Upendra Rao
ವಿಷ್ಣುವರ್ಧನ್, ಶ್ರುತಿ, ಉಪೇಂದ್ರ (ETV Bharat)
author img

By ETV Bharat Entertainment Team

Published : Sep 18, 2024, 1:19 PM IST

ಹೈದರಾಬಾದ್​: ಸೆಪ್ಟೆಂಬರ್​​ 18, ಕನ್ನಡ ಚಿತ್ರರಂಗದಲ್ಲಿ ವಿಶೇಷ ದಿನ ಅಂತಲೇ ಹೇಳಬಹುದು. ಇಂದು ಮೂವರು ಗಣ್ಯಾತಿಗಣ್ಯರ ಜನ್ಮದಿನದ ಸಂಭ್ರಮ. ಹೌದು, ಸಾಹಸಸಿಂಹ ವಿಷ್ಣುವರ್ಧನ್​, ರಿಯಲ್​ ಸ್ಟಾರ್​ ಉಪೇಂದ್ರ ಹಾಗೂ ಹಿರಿಯ ನಟಿ ಶ್ರುತಿ ಹುಟ್ಟಿದ ದಿನ. ವಿಷ್ಣುದಾದಾ ನಮ್ಮೊಂದಿಗಿಲ್ಲದಿದ್ದರೂ ಅವರ ನೆನಪು ಮಾತ್ರ ಸದಾ ಜೀವಂತ. ಈ ವಿಶೇಷ ದಿನವನ್ನು ಅಪಾರ ಸಂಖ್ಯೆಯ ಅಭಿಮಾನಿಗಳು ವಿಭಿನ್ನ ರೀತಿಯಲ್ಲಿ ಆಚರಿಸುತ್ತಾ ಸಂಭ್ರಮಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಜನ್ಮದಿನದ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

'ಯುಐ' ಪೋಸ್ಟರ್ ರಿಲೀಸ್​: ಕನ್ನಡ ಚಿತ್ರರಂಗದಲ್ಲಿ ಬುದ್ಧಿವಂತ ನಟ ನಿರ್ದೇಶಕ ಎಂದೇ ಪ್ರಸಿದ್ಧಿ​ ಆಗಿರುವ ರಿಯಲ್​ ಸ್ಟಾರ್​ ಉಪೇಂದ್ರ 56ನೇ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ನಟನ ಮುಂದಿನ ಬಹುನಿರೀಕ್ಷಿತ ಚಿತ್ರ 'ಯುಐ' ಪೋಸ್ಟರ್ ಅನಾವರಣಗೊಳಿಸಿ ನಟನಿಗೆ ವಿಶೇಷವಾಗಿ ಶುಭಾಶಯ ಕೋರಿದೆ. ಪೋಸ್ಟರ್​​ನಲ್ಲಿ ನಟ ಕುದುರೆಯೇರಿ ಕುಳಿತಿದ್ದು, ಅಭಿಮಾನಿಗಳ ಸಿನಿಮಾ ನೋಡುವ ಕುತೂಹಲವನ್ನು ಹೆಚ್ಚಿಸಿದೆ. ಪೋಸ್ಟ್​ಗೆ, ''ಯುಐ - ಹಿಸ್ಟರಿ ಇನ್​ ದಿ ಮೇಕಿಂಗ್​​, ಅಕ್ಟೋಬರ್​​​​ಗೆ ಸಿನಿಮಾ ಬಿಡುಗಡೆ'' ಎಂಬ ಕ್ಯಾಪ್ಷನ್​​ ಕೊಡಲಾಗಿದೆ. ಬಹು ನಿರೀಕ್ಷಿತ ಚಿತ್ರ ಅಕ್ಟೋಬರ್​ಗೆ ತೆರೆಕಾಣಲಿದ್ದು, ಸಿನಿಪ್ರಿಯರು ಸಾಕಷ್ಟು ಕುತೂಹಲ ವ್ಯಕ್ತಪಡಿಸಿದ್ದಾರೆ.

ಇಂದು ಸಾಹಸಸಿಂಹ ವಿಷ್ಣುವರ್ಧನ್ ಜನ್ಮದಿನ ಕೂಡಾ ಹೌದು. ಮೇರುನಟನ ಅದ್ಭುತ ಫೋಟೋ ಹಂಚಿಕೊಂಡಿರುವ ಉಪೇಂದ್ರ, ''ಕರುನಾಡ ಸಿಂಹ, ಸಾಹಸಸಿಂಹ ಕರುಣಾಮಯಿ ನಿಮ್ಮ ಜನುಮದಿನ ಹಂಚಿಕೊಂಡ ನಾನು ಪುಣ್ಯವಂತ. ನಿಮ್ಮ ನೆನಪು ಸದಾ ನಮ್ಮೊಂದಿಗೆ'' ಎಂದು ಬರೆದುಕೊಂಡಿದ್ದಾರೆ.

ಅಭಿಮಾನಿಗಳ ಹೃದಯದಲ್ಲಿ 'ದಾದಾ' ಜೀವಂತ: ಕನ್ನಡ ಚಿತ್ರರಂಗ ಕಂಡ ಅತ್ಯದ್ಭುತ ನಟ ವಿಷ್ಣುವರ್ಧನ್ ಅವರ ಜನ್ಮದಿನವನ್ನು ಅಭಿಮಾನಿಗಳು ನಾನಾ ರೀತಿಯಲ್ಲಿ ಆಚರಿಸಿ ಸಂಭ್ರಮಿಸುತ್ತಿದ್ದಾರೆ. ಸಾಹಸಸಿಂಹ ಬಿರುದಾಂಕಿತ ನಟ ವಿಷ್ಣುವರ್ಧನ್​ ನಮ್ಮೊಂದಿಗಿದ್ದಿದ್ದರೆ ಇಂದು 74ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದ್ರೆ ವಿಷ್ಣು 2009ರ ಡಿಸೆಂಬರ್ 30ರಲ್ಲಿ ನಿಧನರಾದರು. ಹಿರಿಯ ನಟ ಇಹಲೋಕ ತ್ಯಜಿಸಿ 15 ವರ್ಷಗಳಾಗಿವೆ. ಅವರು ಚಿತ್ರರಂಗಕ್ಕೆ ಕೊಟ್ಟ ಕೊಡುಗೆ ಮಾತ್ರ ಅಪಾರ.

ಇದನ್ನೂ ಓದಿ: 'ಬುದ್ಧಿವಂತ'ನಿಗೆ ಇಂದು ಹುಟ್ಟುಹಬ್ಬದ ಸಂಭ್ರಮ: 'ಯುಐ' ಸಿನಿಮಾ ಬಗ್ಗೆ ಉಪೇಂದ್ರ ಸಂದರ್ಶನ - Upendra Birthday

ನಟಿ ಶ್ರುತಿ ಬರ್ತ್‌ಡೇ: ಸ್ಯಾಂಡಲ್​ವುಡ್​ನಲ್ಲಿ ಅಮೋಘ ಅಭಿನಯದ ಮೂಲಕ ತಮ್ಮದೇ ಸ್ಟಾರ್​ಡಮ್​​ ಹೊಂದಿರುವ ನಟಿ ಶ್ರುತಿ ಕೂಡಾ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 49ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ನಟಿಗೆ ಶುಭಾಶಯಗಳ ಮಹಾಪೂರ ಹರಿದುಬರುತ್ತಿದೆ. ಕನ್ನಡ ಸೇರಿದಂತೆ ಬಹು ಭಾಷಾ ಸಿನಿಮಾಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾರೆ.

ಇದನ್ನೂ ಓದಿ: ದರ್ಶನ್ ಅನುಪಸ್ಥಿತಿಯಲ್ಲಿ ಅಂಬಿ ಸೊಸೆ ಸೀಮಂತ: ಅಭಿಷೇಕ್ ಅಂಬರೀಶ್​​ - ಅವಿವಾ ಬಿದ್ದಪ್ಪ ಫೋಟೋಗಳಿಲ್ಲಿವೆ - Abishek Ambareesh Aviva Biddappa

ETV Bharat Logo

Copyright © 2025 Ushodaya Enterprises Pvt. Ltd., All Rights Reserved.