ETV Bharat / entertainment

'ಕಾಂತಾರ'ದ ದಟ್ಟ ಕಾಡಿಗೆ ಎಂಟ್ರಿ ಕೊಟ್ಟ ಫೇಮಸ್ ಸ್ಟಂಟ್​ ಮಾಸ್ಟರ್ಸ್ ರಾಮ್-ಲಕ್ಷ್ಮಣ್ - Kantara - KANTARA

ದಕ್ಷಿಣ ಚಿತ್ರರಂಗದ ಖ್ಯಾತ ಸ್ಟಂಟ್ ಮಾಸ್ಟರ್​ಗಳಾದ ರಾಮ್​ ಲಕ್ಷ್ಮಣ್ 'ಕಾಂತಾರ' ಚಿತ್ರತಂಡದ ಭಾಗವಾಗಿದ್ದಾರೆ.

Stunt masters Ram Laxman
ಸ್ಟಂಟ್​ ಮಾಸ್ಟರ್ಸ್ ರಾಮ್-ಲಕ್ಷ್ಮಣ್ (ETV Bharat)
author img

By ETV Bharat Karnataka Team

Published : May 4, 2024, 6:41 PM IST

ಡಿವೈನ್ ಸ್ಟಾರ್ ರಿಷಬ್ ಶೆಟ್ಟಿ ಕಾಂತಾರ ಪ್ರೀಕ್ವೆಲ್​ ಕಥೆ ಹೊತ್ತು ಮತ್ತೆ ದೇಶ ಪರ್ಯಟನೆ ಮಾಡಲು ಸಜ್ಜಾಗಿರೋದು ನಿಮಗೆ ಗೊತ್ತೇ ಇದೆ. ಈ ಬಾರಿ ಮೊದಲ ಚಿತ್ರದಂತೆ 16 ಕೋಟಿ ರೂಪಾಯಿಯ ಬಜೆಟ್​ನಲ್ಲಿ ಸಿನಿಮಾ ಮಾಡುತ್ತಿಲ್ಲ. ಬರೋಬ್ಬರಿ 120 ಕೋಟಿ ರೂ. ಬಂಡವಾಳ ಹಾಕಿ ಅದ್ಧೂರಿ ಮೇಕಿಂಗ್ ಮತ್ತು ದೊಡ್ಡ ಮಟ್ಟದ ತಾರಾಗಣದ ಜೊತೆ ಬರುತ್ತಿದ್ದಾರೆ ಡಿವೈನ್​ ಸ್ಟಾರ್. ಇಷ್ಟಿದ್ಮೇಲೆ ಸಿನಿಮಾದ ತಾಂತ್ರಿಕ ವರ್ಗ ಕೂಡ ಅಷ್ಟೇ ಸ್ಟ್ರಾಂಗ್ ಇರಬೇಕಲ್ವಾ?. ಹಾಗಿದ್ದಾಗ ಮಾತ್ರ ಸಿನಿಮಾ ಅತ್ಯದ್ಭುತ ಅನುಭವ ನೀಡಲಿದೆ. ಹಾಗಾಗಿ ರಿಷಬ್ ಅದ್ಧೂರಿ ತಾರಾಗಣದ ಜೊತೆ ಪ್ರತಿಭಾನ್ವಿತರ ತಾಂತ್ರಿಕ ತಂಡವನ್ನು ಕಟ್ಟಿದ್ದಾರೆ.

'ಕಾಂತಾರ' ಮೊದಲ ಭಾಗ ದೈವಿಕ ಅಂಶಗಳ ಜೊತೆಗೆ ಜಾತಿ ಪದ್ಧತಿ, ಪರಿಸರ ಕಾಳಜಿ, ಕಂಬಳ ಮತ್ತು ಅದ್ಧೂರಿ ಆ್ಯಕ್ಷನ್​ ದೃಶ್ಯಗಳನ್ನು ಒಳಗೊಂಡಿತ್ತು.​ ಸಿನಿಮಾದ ಕ್ಲೈಮ್ಯಾಕ್ಸ್​​​ ನೋಡಿದವ್ರು ರಿಷಬ್ ಶೆಟ್ಟಿ ಹೀಗೂ ಆ್ಯಕ್ಷನ್ ಮಾಡುತ್ತಾರಾ? ಅಂತಾ ಸಿನಿಪ್ರಿಯರು ಹುಬ್ಬೇರಿಸಿದ್ರು. ಅಷ್ಟೇ ಅಲ್ಲ, ರಿಷಬ್ ಶೆಟ್ಟಿಯ ಫೈಟ್ ನೋಡಿ ಫುಲ್ ಮಾರ್ಕ್ಸ್​ ಕೂಡ ಕೊಟ್ಟಿದ್ರು. ಇದೀಗ ಪ್ರೀಕ್ವೆಲ್ ಕಥೆ ಹೇಳೋಕೆ ಹೊರಟಿದ್ದಾರೆ ರಿಷಬ್ ಶೆಟ್ಟಿ.

Stunt masters Ram Laxman
ಕಾಂತಾರಕ್ಕೆ ಸ್ಟಂಟ್​ ಮಾಸ್ಟರ್ಸ್ ರಾಮ್-ಲಕ್ಷ್ಮಣ್ ಎಂಟ್ರಿ (ETV Bharat)

ಇದು ಬನವಾಸಿಯ ಕದಂಬರ ಕಾಲಘಟ್ಟದ ದೈವಾರಾಧನೆಯ ಕಥೆಯನ್ನು ಒಳಗೊಂಡಿದೆ. ಹೀಗಾಗಿ ಆ ಕಾಲಘಟದ್ದ ಆ್ಯಕ್ಷನ್ ದೃಶ್ಯಗಳು ಈ ಸಿನಿಮಾದಲ್ಲಿರಲಿವೆ. ಅದಕ್ಕಾಗಿ ಈಗ ಕಾಂತಾರದ ದಟ್ಟ ಕಾಡಿನೊಳಕ್ಕೆ ಸೌತ್ ಸಿನಿಮಾ ಇಂಡಸ್ಟ್ರಿಯ ಪ್ರಖ್ಯಾತ ಸ್ಟಂಟ್ ಮಾಸ್ಟರ್​ಗಳಾದ ರಾಮ್​ ಲಕ್ಷ್ಮಣ್ ಎಂಟ್ರಿ ಕೊಟ್ಟಿದ್ದಾರಂತೆ.

ಹೌದು, ರಾಮ್ ಲಕ್ಷ್ಮಣ್​​ ಕನ್ನಡಕ್ಕೆ ಹೊಸಬರೇನಲ್ಲ. ಪುನೀತ್ ರಾಜ್​​ಕುಮಾರ್​ ಅವ​ರ ಹಲವು ಸಿನಿಮಾಗಳಿಗೆ ಸ್ಟಂಟ್​ ಡೈರೆಕ್ಷನ್ ಮಾಡಿದ್ದಾರೆ. ಮಾಸ್ ಹೀರೋ ಧ್ರುವ ಸರ್ಜಾರ ಎಲ್ಲಾ ಸಿನಿಮಾವದಲ್ಲೂ ರಾಮ್ ಲಕ್ಷ್ಮಣ್ ಕೈ ಚಳಕ ಇರುತ್ತದೆ. ದರ್ಶನ್ ಸಿನಿಮಾಗಳಲ್ಲೂ ಕೆಲಸ ಮಾಡಿದ್ದಾರೆ. ಯಶ್ ಸೇರಿದಂತೆ ಬಹುತೇಕ ಕನ್ನಡದ ಬಿಗ್ ಸ್ಟಾರ್​ಗಳಿಗೆ ಫೈಟ್ ಕಂಪೋಸ್ ಮಾಡಿರೋ ಕೀರ್ತಿ ಈ ಅಣ್ತಮ್ಮಂದಿರದ್ದು. ಸದ್ಯ ಕಾಂತಾರದ ಪ್ರೀಕ್ವೆಲ್ ಸ್ಟೋರಿಯಲ್ಲಿ ರಿಷಬ್ ಶೆಟ್ಟಿ ಜೊತೆ ಕೆಲಸಕ್ಕೆ ಇಳಿದಿದ್ದಾರೆ. 12 ದಿನಗಳ ಕಾಲ ಆ್ಯಕ್ಷನ್ ದೃಶ್ಯದ ಚತ್ರೀಕರಣ ನಡೆಯಲಿದೆ. ಅದಕ್ಕಾಗಿ ಕುಂದಾಪುರುದ ಕೆರಾಡಿಯಲ್ಲಿ ಅಖಾಡ ರೆಡಿಯಾಗಿದೆ.

ಇದನ್ನೂ ಓದಿ: ತ್ರಿಶಾ ಬರ್ತ್​ಡೇ: ಮಕ್ಕಳಿಗೆ ಆಹಾರ ಹಂಚಿದ ಅಭಿಮಾನಿಗಳು - ವಿಡಿಯೋ ನೋಡಿ - Trisha Krishnan

ಇನ್ನೂ, ರಿಷಬ್ 20 ದಿನಗಳ ಕಾಲ ಮೊದಲ ಹಂತದ ಚಿತ್ರೀಕರಣ ನಡೆಸುತ್ತಿದ್ದಾರೆ. ಅದಕ್ಕಾಗಿ ಕುಂದಾಪುರದಲ್ಲಿ ಅದ್ಧೂರಿ ಸೆಟ್ ನಿರ್ಮಿಸಲಾಗಿದೆ. ಕಾಂತಾರ ಪ್ರೀಕ್ವೆಲ್ ಸಿನಿಮಾ ಶೂಟಿಂಗ್ ಮೊದಲೇ ಕೋಟಿ ಕೋಟಿ ಬಾಚಿಕೊಂಡಿದೆ. ಈಗಾಗ್ಲೇ ಡಿಜಿಟಲ್ ರೈಟ್ಸ್ ಭಾರಿ ಮೊತ್ತಕ್ಕೆ ಬಿಕರಿಯಾಗಿದ್ದು, ನಿರ್ಮಾಪಕರು ಸೇಫ್ ಆಗಿದ್ದಾರೆ. ಹೀಗಾಗಿ ಹೊಂಬಾಳೆ ಫಿಲ್ಮ್ಸ್ ಸಾರಥಿ ವಿಜಯ್ ಕಿರಗಂದೂರು ಕ್ವಾಲಿಟಿ ಸಿನಿಮಾ ಕೊಡಬೇಕೆಂದು ಯಾವುದೇ ವಿಚಾರಕ್ಕೂ ಕಾಂಪ್ರಮೈಸ್ ಆಗದೇ 'ಕಾಂತಾರ ಚಾಪ್ಟರ್ 1'ಗಾಗಿ ಕೋಟ್ಯಂತರ ರೂಪಾಯಿ ಹಣ ಖರ್ಚು ಮಾಡುತ್ತಿದ್ದಾರೆ. ಟೈಟಲ್ ಟೀಸರ್ ಬಿಟ್ಟು ಪ್ಯಾನ್ ಇಂಡಿಯಾ ಪ್ರೇಕ್ಷಕರನ್ನು ಹುಬ್ಬೇರಿಸಿರುವ ಶೆಟ್ರು ಈಗ ಶೂಟಿಂಗ್​​ ಕಡೆ ಗಮನ ಹರಿಸಿದ್ದಾರೆ. ಎಲ್ಲಾ ಅಂದುಕೊಂಡಂತೆ ನಡೆದರೆ ಈ ವರ್ಷವೇ ಕಾಂತಾರದ ಮೊದಲ ಅಧ್ಯಾಯವನ್ನು ನೋಡಬಹುದು.

ಇದನ್ನೂ ಓದಿ: 'ಈ ಹಿಂದೆ ಯಾರೂ ಪ್ರಯತ್ನಿಸದ ವಿಶಿಷ್ಟ ಪರಿಕಲ್ಪನೆಯನ್ನು ಈ ಚಿತ್ರ ಹೊಂದಿದೆ': ಕಲ್ಕಿ ಬರಹಗಾರ - Kalki 2898 AD

ETV Bharat Logo

Copyright © 2024 Ushodaya Enterprises Pvt. Ltd., All Rights Reserved.