ETV Bharat / entertainment

ನಟ ಜಯಸೂರ್ಯ ಸೇರಿ 7 ಜನರ ವಿರುದ್ಧ ಲೈಂಗಿಕ ಕಿರುಕುಳ ಆರೋಪ: ನಟಿಯರ ಹೇಳಿಕೆ ದಾಖಲು - Sexual Allegations Against Actors

author img

By ETV Bharat Karnataka Team

Published : Aug 28, 2024, 6:39 PM IST

ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಮಲಯಾಳಂ ಚಿತ್ರರಂಗದಲ್ಲಿ ಸಂಚಲನ ಸೃಷ್ಟಿಸಿದೆ. ನಟ ಜಯಸೂರ್ಯ, ನಟ ಸಿದ್ದಿಕ್ ವಿರುದ್ಧ ಪ್ರಕರಣಗಳು ದಾಖಲಾಗಿವೆ. ನಟ ಮತ್ತು ಶಾಸಕ ಮುಖೇಶ್ ಅವರು ಫಿಲ್ಮ್ ಪಾಲಿಸಿ ಮೇಕಿಂಗ್​ ಕಮಿಟಿಯ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಇದೀಗ ತನಿಖಾ ತಂಡ ನಟಿಯರಿಂದ ಹೇಳಿಕೆಗಳನ್ನು ಪಡೆದುಕೊಂಡಿದೆ.

Sexual allegations against 7 people
ನಟರ ವಿರುದ್ಧ ಲೈಂಗಿಕ ಕಿರುಕುಳ ಆರೋಪ (Facebook Official)

ಮಲಯಾಳಂ ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಆರೋಪಗಳು ಜೋರಾಗೇ ಕೇಳಿಬರುತ್ತಿವೆ. ಇದೀಗ ಪ್ರಮುಖ ನಟರ ವಿರುದ್ಧ ಕಿರುಕುಳದ ಆರೋಪ ಮಾಡಿರುವ ನಟಿಮಣಿಯರ ಹೇಳಿಕೆಗಳನ್ನು ತೆಗೆದುಕೊಳ್ಳಲಾಗಿದೆ. ವಿಶೇಷ ತನಿಖಾ ತಂಡದ ಜಿ.ಪೂಂಗುಡಲಿ ಮತ್ತು ಅಜೀತಾ ಬೇಗಂ (Poonkuzhali, Ajeetha Begum) ಅವರು ನಟಿಯರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದಾರೆ. ತನಿಖಾ ತಂಡ ಆಲುವಾದಲ್ಲಿರುವ ಫ್ಲ್ಯಾಟ್​​ ಒಂದಕ್ಕೆ ಆಗಮಿಸಿ ಕೆಲ ನಟಿಯರಿಂದ ಹೇಳಿಕೆಗಳನ್ನು ಪಡೆದುಕೊಂಡಿದೆ.

ಮಲಯಾಳಂ ಚಿತ್ರರಂಗದ ಪ್ರಮುಖ ನಟರು ಮತ್ತು ತಂಡದ ಸದಸ್ಯರ ವಿರುದ್ಧ ನಟಿಯರು ಗಂಭೀರ ಆರೋಪ ಮಾಡಿದ್ದಾರೆ. ನಟರಾದ ಮುಖೇಶ್, ಜಯಸೂರ್ಯ, ಮಣಿಯನ್​​​ಪಿಳ್ಳ ರಾಜು, ಇಡವೆಲ್​​ ಬಾಬು, ಚಂದ್ರಶೇಖರನ್, ಪ್ರೊಡಕ್ಷನ್​​ ಟೀಮ್​ನ ನೋಬಲ್ ಮತ್ತು ವಿಚು ವಿರುದ್ಧ ಆರೋಪಗಳು ಕೇಳಿಬಂದಿವೆ.

ಸಾಮಾಜಿಕ ಜಾಲತಾಣಗಳ ಮೂಲಕ ಆರೋಪಗಳ ಸುರಿಮಳೆಗೈದಿದ್ದ ನಟಿಯೋರ್ವರು ವಿಶೇಷ ತನಿಖಾ ತಂಡಕ್ಕೆ ಇ-ಮೇಲ್ ಮೂಲಕ ದೂರು ಸಲ್ಲಿಸಿದ್ದಾರೆ. 2013ರಲ್ಲಿ ಕೆಟ್ಟ ಅನುಭವ ಎದುರಿಸಬೇಕಾಯಿತು. ಅವರ ಬೇಡಿಕೆಗಳನ್ನು ಈಡೇರಿಸಲು ನಾನು ಸಿದ್ಧಳಾಗದ ಕಾರಣ ಚಿತ್ರರಂಗವನ್ನು ತೊರೆಯಬೇಕಾಯಿತು ಎಂದು ದೂರಿದ್ದಾರೆ. 2013ರಲ್ಲಿ ಕೆಲಸ ಮಾಡುವಾಗ, ಈ ವ್ಯಕ್ತಿಗಳಿಂದ ದೈಹಿಕ ಮತ್ತು ಮಾತಿನ ನಿಂದನೆಗೊಳಗಾಗಿದ್ದೆ. ಕಿರುಕುಳ ಅಸಹನೀಯವೆನಿಸಿದಾಗ ಮಲಯಾಳಂ ಚಿತ್ರರಂಗ ತೊರೆಯಬೇಕಾಯಿತು ಎಂದು ನಟಿ ಆರೋಪಿಸಿದ್ದಾರೆ.

ಇದನ್ನೂ ಓದಿ: ಜಯಸೂರ್ಯ, ಸಿದ್ದಿಕ್​ ವಿರುದ್ಧ ದೂರು: ಮಲಯಾಳಂ ಫಿಲ್ಮ್ ಪಾಲಿಸಿ ಕಮಿಟಿಯಿಂದ ಕೆಳಗಿಳಿದ ಶಾಸಕ ಮುಖೇಶ್​​ - Case Against Actor Jayasurya

ನ್ಯಾಯಮೂರ್ತಿ ಹೇಮಾ ಸಮಿತಿ ವರದಿ ಹೊರಬಿದ್ದ ಬೆನ್ನಲ್ಲೇ ಮಲಯಾಳಂ ಚಿತ್ರರಂಗದ ಹಲವು ನಟಿಯರು ನಟರ ವಿರುದ್ಧ ಗಂಭೀರ ಆರೋಪಗಳನ್ನು ಹೊರಿಸಿದ್ದಾರೆ. ಆರೋಪ, ಆಕ್ರೋಶ, ಅಸಮಾಧಾನ ಮುಂದುವರಿದಿದೆ. ಈ ಬಗ್ಗೆ ದೊಡ್ಡ ಮಟ್ಟಿನ ಚರ್ಚೆ ನಡೆಯುತ್ತಿದೆ. ಈ ವಿಚಾರವಾಗಿ ಎರಡು ದಿನಗಳ ಕಾಲ 'ಅಮ್ಮ' ಸಂಘ ಮೌನ ವಹಿಸಿತ್ತು. ನಂತರ ಅಮ್ಮ ಪ್ರಧಾನ ಕಾರ್ಯದರ್ಶಿಯಾಗಿದ್ದ ಸಿದ್ದಿಕ್ ಮಾಧ್ಯಮಗೋಷ್ಟಿ ನಡೆಸಿ ತಮ್ಮ ನಿಲುವು ಪ್ರಕಟಿಸಿದ್ದರು.

ಇದನ್ನೂ ಓದಿ: ಮಲಯಾಳಂ ನಟ ಸಿದ್ದಿಕ್​ ವಿರುದ್ದ ಅತ್ಯಾಚಾರ ಪ್ರಕರಣ ದಾಖಲು! - Rape Case against Actor Siddique

ಸಿದ್ದಿಕ್ ಆರೋಪಗಳನ್ನು ನಿರಾಕರಿಸಿದರು. ಆದ್ರೆ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡುವುದಾಗಿ ಘೋಷಿಸಿದರು. ಸಿದ್ದಿಕಿ ರಾಜೀನಾಮೆ ನಂತರ ಜಂಟಿ ಕಾರ್ಯದರ್ಶಿ ಬಾಬು ರಾಜ್ ತಾತ್ಕಾಲಿಕವಾಗಿ ಉಸ್ತುವಾರಿ ವಹಿಸಿದ್ದರು. ಆದರೆ ಕಿರಿಯ ಕಲಾವಿದರೊಬ್ಬರು ಬಾಬು ರಾಜ್ ವಿರುದ್ಧವೂ ದೂರು ನೀಡಲು ಮುಂದಾದಾಗ, ಅಮ್ಮನ ಸ್ಥಿತಿ ಹದಗೆಟ್ಟಿತು. ಇದರೊಂದಿಗೆ ನಟರಾದ ಮುಖೇಶ್, ಜಯಸೂರ್ಯ, ಮಣಿಯನಪಿಳ್ಳ ರಾಜು, ಇಡವೆಲ್​​ ಬಾಬು ಸೇರಿದಂತೆ ಮತ್ತಿತರರ ವಿರುದ್ಧ ಲೈಂಗಿಕ ದೌರ್ಜನ್ಯದ ದೂರುಗಳು ಬಂದ ಹಿನ್ನೆಲೆ 'ಅಮ್ಮ' ಸಂಘಟನೆ ಮುಂದುವರೆಯಲು ಸಾಧ್ಯವಾಗಲಿಲ್ಲ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.