ETV Bharat / entertainment

ಒಟಿಟಿಗೆ ಎಂಟ್ರಿ ಕೊಟ್ಟ 'ಸಪ್ತಸಾಗರದಾಚೆ ಎಲ್ಲೋ ಸೈಡ್​​ ಬಿ' - ಸಪ್ತಸಾಗರದಾಚೆ ಎಲ್ಲೋ ಸೈಡ್​ ಬಿ

'ಸಪ್ತಸಾಗರದಾಚೆ ಎಲ್ಲೋ ಸೈಡ್​ ಬಿ' ಒಟಿಟಿ ಪ್ಲಾಟ್​​ಫಾರ್ಮ್ ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಲಭ್ಯವಿದೆ.

Sapta Saagaradaache Ello Side B
ಸಪ್ತಸಾಗರದಾಚೆ ಎಲ್ಲೋ ಸೈಡ್​ ಬಿ
author img

By ETV Bharat Karnataka Team

Published : Jan 27, 2024, 10:03 AM IST

ಕನ್ನಡ ಚಿತ್ರರಂಗದ ಹೆಸರಾಂತ ನಟ ರಕ್ಷಿತ್​ ಶೆಟ್ಟಿ ಕೊನೆಯದಾಗಿ ಕಾಣಿಸಿಕೊಂಡಿರೋ ಸಿನಿಮಾ 'ಸಪ್ತಸಾಗರದಾಚೆ ಎಲ್ಲೋ ಸೈಡ್​ ಬಿ'. ರಕ್ಷಿತ್​ ಶೆಟ್ಟಿ ಮತ್ತು ರುಕ್ಮಿಣಿ ವಸಂತ್​​ ಮುಖ್ಯಭೂಮಿಕೆಯ ಈ ಸಿನಿಮಾ ಪ್ರೇಕ್ಷಕರನ್ನು ರಂಜಿಸುವಲ್ಲಿ ಯಶಸ್ಸು ಕಂಡಿತ್ತು. ಚಿತ್ರಮಂದಿರಗಳಲ್ಲಿ ಸಿನಿಮಾ ವೀಕ್ಷಿಸದವರು ಯಾವಾಗ 'ಸಪ್ತಸಾಗರದಾಚೆ ಎಲ್ಲೋ ಸೈಡ್​ ಬಿ' ಒಟಿಟಿಗೆ ಬರಲಿದೆ? ಎಂದು ಕಾತುರದಿಂದ ಕಾಯುತ್ತಿದ್ದರು. ಅಂತಿಮವಾಗಿ ಸಿನಿಮಾ ಒಟಿಟಿಗೆ ಎಂಟ್ರಿ ಕೊಟ್ಟಿದೆ. ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಈ ಯಶಸ್ವಿ ಚಿತ್ರ ಲಭ್ಯವಿದೆ. ಸಿನಿಪ್ರಿಯರು ಸಂತಸ ವ್ಯಕ್ತಪಡಿಸಿದ್ದಾರೆ.

2023ರ ಸೆಪ್ಟೆಂಬರ್​​ 1ರಂದು 'ಸಪ್ತಸಾಗರದಾಚೆ ಎಲ್ಲೋ ಸೈಡ್​​ ಎ' ಚಿತ್ರ ತೆರೆಕಂಡಿತ್ತು. ನಿರೀಕ್ಷಿಸಿದಂತೆ ಈ ಸಿನಿಮಾ ಯಶಸ್ವಿ ಆಗಿತ್ತು. ನಿರ್ದೇಶಕ ಹೇಮಂತ್​ ಎಂ ರಾವ್​ ಆ್ಯಕ್ಷನ್​ ಕಟ್​ ಹೇಳಿದ್ದ ಈ ಚಿತ್ರದಲ್ಲಿ ರಕ್ಷಿತ್​ ಶೆಟ್ಟಿ ಜೊತೆ ರುಕ್ಮಿಣಿ ವಸಂತ್​​​ ಮುಖ್ಯಭೂಮಿಕೆಯಲ್ಲಿ ನಟಿಸಿದ್ದರು. ಈ ಜೋಡಿ ಮನು ಮತ್ತು ಪ್ರಿಯಾ ಪಾತ್ರಗಳಿಗೆ ಜೀವ ತುಂಬಿದ್ದರು. ಭಾಗ ಎರಡರಲ್ಲಿ ಚೈತ್ರಾ ಜೆ ಆಚಾರ್​ ಎಂಟ್ರಿ ಕೊಟ್ಟಿದ್ದರು. ಭಾಗ ಎರಡು ಅಂದರೆ 'ಸಪ್ತಸಾಗರದಾಚೆ ಎಲ್ಲೋ ಸೈಡ್​ ಬಿ' ಇದೀಗ ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಲಭ್ಯವಿದೆ.

ಪ್ರೇಮಕಥೆಗಳುಳ್ಳ ಸಾವಿರಾರು ಸಿನಿಮಾಗಳು ನಮ್ಮ ಕಣ್ಣೆದುರು ಇವೆ. ಆದ್ರೆ, ಕೆಲ ಸಿನಿಮಾಗಳು ವಿಭಿನ್ನ ಕಥಾಹಂದರದ ಮೂಲಕ ಪ್ರೇಕ್ಷಕರ ಮನಸ್ಸಲ್ಲಿ ಜಾಗ ಗಿಟ್ಟಿಸಿಕೊಂಡಿವೆ. ಅಂಥ ಸಾಲಿನಲ್ಲಿ 'ಸಪ್ತಸಾಗರದಾಚೆ ಎಲ್ಲೋ....' ಸಿನಿಮಾವಿದೆ. ವಿಭಿನ್ನ ಮಧುರ ಪ್ರೇಮಕಥೆಯೊಂದಿಗೆ ಜನಮನ ಸೆಳೆದಿದೆ. ಬಾಕ್ಸ್ ಆಫೀಸ್​ ವಿಚಾರದಲ್ಲೂ ಉತ್ತಮ ಅಂಕಿಅಂಶಗಳನ್ನು ಒಳಗೊಂಡಿದೆ.

ಇದನ್ನೂ ಓದಿ: ಬಿಗ್​ ಬಾಸ್​ ಫಿನಾಲೆ ಮೆರುಗು ಹೆಚ್ಚಿಸಿದ ಮಾಜಿ ಸ್ಪರ್ಧಿಗಳು: ಮಿನುಗುವ ವೇದಿಕೆಯಲ್ಲಿ ಭರ್ಜರಿ ಪರ್ಫಾಮೆನ್ಸ್

ರಕ್ಷಿತ್​ ಶೆಟ್ಟಿ ಸಿನಿಮಾ ಎಂದ ಮೇಲೆ ಅದರಲ್ಲೊಂದು ಹೊಸತನ ಇದ್ದೇ ಇರುತ್ತದೆ. ವಿಭಿನ್ನವಾಗಿ ಕಥೆ ಪ್ರಸ್ತುಪಡಿಸುವ ಶೈಲಿಯನ್ನು ರಕ್ಷಿತ್​ ಶೆಟ್ಟಿ ಹೊಂದಿದ್ದಾರೆ. ಒಂದೊಳ್ಳೆ ಕಂಟೆಂಟ್​ ಅನ್ನು ಪ್ರೇಕ್ಷಕರಿಗೆ ಬಹಳ ಸಿಂಪಲ್​​ ಆಗಿ ಮನಮುಟ್ಟುವಂತೆ ಹೇಳುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಅಭಿನಯ ಅಮೋಘ ಅಂತಾರೆ ಅಭಿಮಾನಿಗಳು. ಈ ಹಿನ್ನೆಲೆಯಲ್ಲೇ ಬಂದ 'ಸಪ್ತಸಾಗರದಾಚೆ ಎಲ್ಲೋ....' ಸಿನಿಮಾಗಳು ಕೂಡ ಯಶಸ್ವಿ ಆಗಿವೆ.

ಇದನ್ನೂ ಓದಿ: ಬಿಗ್​ ಬಾಸ್ ಫಿನಾಲೆಗೆ ಕ್ಷಣಗಣನೆ: ಗೆಲುವಿನ ನಗೆ ಬೀರೋರು ಯಾರು?

ಅತಿ ಕಡಿಮೆ ಅವಧಿಯಲ್ಲಿ ಸಿನಿಮಾವೊಂದರ ಎರಡೂ ಭಾಗಗಳು ತೆರೆಕಂಡಿರುವ ಹೆಗ್ಗಳಿಕೆಯನ್ನು ರಕ್ಷಿತ್​ ಶೆಟ್ಟಿ ಅವರ ಸಿನಿಮಾಗಳು ಹೊಂದಿವೆ. ಸೈಡ್​ ಎ ಸೆಪ್ಟೆಂಬರ್ 1ಕ್ಕೆ ತೆರೆಕಂಡು ಯಶಸ್ವಿಯಾಗಿತ್ತು. ಸೈಡ್​ ಬಿ ನವೆಂಬರ್ 17ಕ್ಕೆ ತೆರೆಕಂಡಿತ್ತು. ಕೇವಲ ಎರಡೂವರೆ ತಿಂಗಳ ಅಂತರದಲ್ಲಿ ಸೀಕ್ವೆಲ್​ ತೆರೆಗಪ್ಪಳಿಸಿ ಪ್ರೇಕ್ಷಕರ ಮನ ಮುಟ್ಟಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.