ETV Bharat / entertainment

ಆ.1ಕ್ಕೆ 'ಸಿಟಾಡೆಲ್' ಅಪ್ಡೇಟ್ಸ್: ಅಭಿಮಾನಿಗಳ ಕುತೂಹಲ ಹೆಚ್ಚಿಸಿದ ಸಮಂತಾ, ವರುಣ್​ ಧವನ್​​ - Citadel Announcement - CITADEL ANNOUNCEMENT

ಆಗಸ್ಟ್ 1ರಂದು ಬಹುನಿರೀಕ್ಷಿತ 'ಸಿಟಾಡೆಲ್: ಹನಿ ಬನಿ' ಸೀರಿಸ್​ಗೆ ಸಂಬಂಧಿಸಿದ ಅಪ್​ಡೇಟ್ಸ್ ಹೊರಬೀಳುವ ಸಾಧ್ಯತೆ ಇದೆ.

Varun Dhawan And Samantha Ruth Prabhu
ವರುಣ್​ ಧವನ್​​ - ಸಮಂತಾ ರುತ್ ಪ್ರಭು (ANI)
author img

By ETV Bharat Karnataka Team

Published : Jul 25, 2024, 7:46 PM IST

ಟಾಲಿವುಡ್ ನಟಿ ಸಮಂತಾ ರುತ್ ಪ್ರಭು 'ಸಿಟಾಡೆಲ್: ಹನಿ ಬನಿ' ಎಂಬ ಹಿಂದಿ ವೆಬ್ ಸೀರಿಸ್​ ಮೂಲಕ ಚಿತ್ರರಂಗಕ್ಕೆ ಮರಳಲು ಸಜ್ಜಾಗಿದ್ದಾರೆ. ಅಲ್ಲದೇ, ಆರೋಗ್ಯಕ್ಕಾಗಿ ಸಮಯ ಮೀಸಲಿಟ್ಟಿದ್ದ ದಕ್ಷಿಣದ ಜನಪ್ರಿಯ ನಟಿಯ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ನಿರ್ದೇಶಕ ಜೋಡಿಯಾದ ರಾಜ್ ಮತ್ತು ಡಿಕೆ ಆ್ಯಕ್ಷನ್​ ಕಟ್​ ಹೇಳಿರುವ ಈ ಸರಣಿಯಲ್ಲಿ ಬಾಲಿವುಡ್ ನಟ ವರುಣ್ ಧವನ್ ನಟಿಸಿದ್ದು, ವೆಬ್ ಸರಣಿ ಕ್ಷೇತ್ರಕ್ಕೆ ಪದಾರ್ಪಣೆ ಮಾಡಲಿದ್ದಾರೆ. ಇಂದು, ಸಮಂತಾ ಮತ್ತು ವರುಣ್ ತಮ್ಮ ಇನ್​ಸ್ಟಾಗ್ರಾಮ್​​​ ಸ್ಟೋರಿಗಳಲ್ಲಿ ರಾಜ್ ಮತ್ತು ಡಿಕೆ ಹಂಚಿಕೊಂಡ ಪೋಸ್ಟ್ ಅನ್ನು ರೀಶೇರ್ ಮಾಡುವ ಮೂಲಕ ಅಭಿಮಾನಿಗಳ ಕುತೂಹಲ ಕೆರಳಿಸಿದ್ದಾರೆ.

Samantha Ruth Prabhu IG Story
ಸಮಂತಾ ರುತ್​ ಪ್ರಭು ಇನ್​ಸ್ಟಾಗ್ರಾಮ್​ ಸ್ಟೋರಿ (Samantha Instagram)

ಪೋಸ್ಟ್‌ನಲ್ಲಿ "01.08" ಎಂದು ಬರೆಯಲಾಗಿದೆ. ಇದು 'ಸಿಟಾಡೆಲ್'​ಗೆ ಸಂಬಂಧಿಸಿದಂತೆ ತೋರುತ್ತಿದೆ. ಆಗಸ್ಟ್ 1ರಂದು ಸೀರಿಸ್​ಗೆ ಸಂಬಂಧಿಸಿದ ಏನಾದರೂ ಅನಾವರಣಗೊಳ್ಳುವ ಸಾಧ್ಯತೆಯಿದೆ. ಈ ಬಗ್ಗೆ ಹಲವು ನಿರೀಕ್ಷೆಗಳನ್ನಿಟ್ಟುಕೊಂಡಿರುವ ಅಭಿಮಾನಿಗಳಲ್ಲಿ ಹಲವು ಊಹಾಪೋಹಗಳೆದ್ದಿವೆ. ಸರಣಿಗೆ ಸಂಬಂಧಿಸಿದ ಅಪ್ಡೇಟ್ಸ್​​​ಗಾಗಿ ಕುತೂಹಲದಿಂದ ಕಾಯುತ್ತಿರುವ ಪ್ರೇಕ್ಷಕರು, ಸರಣಿ ಬಿಡುಗಡೆ ದಿನಾಂಕ ಅನಾವರಣಗೊಳ್ಳುವ ಸಾಧ್ಯತೆ ಇದೆ ಎಂದು ನಂಬಿದ್ದಾರೆ.

Varun Dhawan IG Story
ವರುಣ್​ ಧವನ್​​ ಇನ್​ಸ್ಟಾಗ್ರಾಮ್​ ಸ್ಟೋರಿ (Varun Dhawan Instagram)

'ಸಿಟಾಡೆಲ್: ಹನಿ ಬನಿ' ಜನಪ್ರಿಯ ಅಮೆರಿಕನ್ ಸೀರಿಸ್​​ ಸಿಟಾಡೆಲ್‌ನ ಭಾರತೀಯ ರೂಪಾಂತರ. ಮೂಲ ಪ್ರಾಜೆಕ್ಟ್​ನಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು ರಿಚರ್ಡ್ ಮ್ಯಾಡೆನ್ ನಟಿಸಿದ್ದಾರೆ. ಅಮೆಜಾನ್ ಪ್ರೈಮ್ ವಿಡಿಯೋದಲ್ಲಿ ಬಿಡುಗಡೆ ಆಗಲಿರುವ ಈ ಸೀರಿಸ್​​​ ಹಿಂದಿ ಮತ್ತು ತೆಲುಗು ವರ್ಷನ್​ನಲ್ಲಿ ಲಭ್ಯವಿರಲಿದೆ. ಈ ಸೀರಿಸ್​​ ಮನರಂಜನೆ ಜೊತೆಗೆ ರೋಮಾಂಚಕ ಅನುಭವ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ. ಸರಣಿಯಲ್ಲಿ ಸಿಕಂದರ್ ಖೇರ್, ಎಮ್ಮಾ ಕ್ಯಾನಿಂಗ್, ಕೇ ಕೇ ಮೆನನ್ ಮತ್ತು ಸಾಕಿಬ್ ಸಲೀಮ್ ಕೂಡ ನಟಿಸಿದ್ದಾರೆ. ಪ್ರತಿಯೊಬ್ಬರೂ ತಮ್ಮದೇ ಆ ಪ್ರಮುಖ ಪಾತ್ರಗಳನ್ನು ನಿರ್ವಹಿಸುತ್ತಿದ್ದಾರೆ. ಸಮಂತಾ ರುತ್​​ ಪ್ರಭು ಮತ್ತು ವರುಣ್​ ಧವನ್ ಮುಖ್ಯಭೂಮಿಕೆಯಲ್ಲಿದ್ದಾರೆ.​​

ಇದನ್ನೂ ಓದಿ: ಲಂಡನ್‌ನಲ್ಲಿ ಅಂಬಾನಿ ಗ್ರ್ಯಾಂಡ್​​​ ಪ್ರೋಗ್ರಾಮ್​: ಸೆಪ್ಟೆಂಬರ್​ವರೆಗೆ ಸೆವೆನ್ ಸ್ಟಾರ್ ಹೋಟೆಲ್​ ರಿಸರ್ವೇಶನ್ - Anant Radhika

ಒಟಿಟಿ ಪ್ರಾಜೆಕ್ಟ್​​​ ವಿಚಾರಕ್ಕೆ ಬಂದರೆ, ರಾಜ್ ಮತ್ತು ಡಿಕೆ ನಿರ್ದೇಶನದ 'ದಿ ಫ್ಯಾಮಿಲಿ ಮ್ಯಾನ್'ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡಿರುವ ಸಮಂತಾ ಈ ಪ್ರಾಜೆಕ್ಟ್​​ ಮೂಲಕ ಒಟಿಟಿಗೆ ಮರಳಲು ರೆಡಿಯಾಗಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್' ವಿಮರ್ಶಾತ್ಮಕವಾಗಿ ಮೆಚ್ಚುಗೆ ಪಡೆದಿದೆ. ಇದೀಗ ಮತ್ತೊಮ್ಮೆ ಯಶಸ್ವಿ ನಿರ್ದೇಶಕರ ಜೊತೆಗೆ ಸಮಂತಾ ಕೈ ಜೋಡಿಸಿದ್ದು, ಸೀರಿಸ್​​ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ. ಇದಲ್ಲದೇ, ರಾಜ್ ಮತ್ತು ಡಿಕೆ ಅವರೊಂದಿಗೆ ಸಮಂತಾ ಮತ್ತೊಂದು ಸಿರಿಸ್​ ಅನ್ನೂ ಹೊಂದಿದ್ದಾರೆ.

ಇದನ್ನೂ ಓದಿ: ಡ್ಯಾನ್ಸ್​​ ಮಾಡುತ್ತಲೇ ಬಿದ್ದ ಅಕ್ಷಯ್​ ಕುಮಾರ್​​: ಕಿಲಾಡಿಯ ವಿಡಿಯೋ ವೈರಲ್​​ - Akshay Kumar

ವರುಣ್ ಧವನ್ ವೃತ್ತಿಜೀವನ ಗಮನಿಸುವುದಾದರೆ, 'ಸಿಟಾಡೆಲ್: ಹನಿ ಬನಿ' ಅವರ ವೃತ್ತಿಜೀವನದಲ್ಲೇ ಮಹತ್ವದ ಮೈಲಿಗಲ್ಲಾಗಲಿದೆ. ಏಕೆಂದರೆ ಇದು ನಟನ ಚೊಚ್ಚಲ ವೆಬ್ ಸರಣಿ ಸಾಹಸ. ಕಥಾವಸ್ತು ಪತ್ತೇದಾರಿ, ಆ್ಯಕ್ಷನ್ ಥ್ರಿಲ್ಲರ್‌ನ ಸುತ್ತ ಕೇಂದ್ರೀಕೃತವಾಗಿದೆ. ಹೆಚ್ಚಿನ ಆ್ಯಕ್ಷನ್ ಸೀಕ್ವೆನ್ಸ್‌ಗಳು ಪ್ರೇಕ್ಷಕರನ್ನು ಆಕರ್ಷಿಸಲಿದೆ ಎಂಬ ಭರವಸೆ ಚಿತ್ರತಂಡಕ್ಕಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.