ETV Bharat / entertainment

ಸಿನಿಮಾ ಪ್ರೇಮಿಗಳಿಗೆ ಬಂಪರ್ ಆಫರ್ ಕೊಟ್ಟ ರವಿಕೆ ಪ್ರಸಂಗ ಸಿನಿಮಾ ತಂಡ - ರವಿಕೆ ಪ್ರಸಂಗ ಸಿನಿಮಾ

ಸಿನಿಮಾ ಪ್ರೇಮಿಗಳಿಗೆ ರವಿಕೆ ಪ್ರಸಂಗ ಸಿನಿಮಾ ತಂಡ ಬಂಪರ್ ಆಫರ್ ಕೊಟ್ಟಿದೆ.

ರವಿಕೆ ಪ್ರಸಂಗ ಸಿನಿಮಾ ತಂಡ
ರವಿಕೆ ಪ್ರಸಂಗ ಸಿನಿಮಾ ತಂಡ
author img

By ETV Bharat Karnataka Team

Published : Feb 5, 2024, 6:10 PM IST

ಕನ್ನಡ ಚಿತ್ರರಂಗದಲ್ಲಿ ಕಂಟೆಂಟ್ ಆಧಾರಿತ ಸಿನಿಮಾಗಳು ಬರುತ್ತಿವೆ. ಈ ಸಾಲಿಗೆ ರವಿಕೆ ಪ್ರಸಂಗ ಸಿನಿಮಾವು ಕೂಡ ಸೇರುತ್ತದೆ. ಈಗಾಗಲೇ ಚಿತ್ರೀಕರಣ ಮುಗಿಸಿ, ಈ ಸಿನಿಮಾದ ಟೀಸ‌ರ್ ಹಾಗೂ ಹಾಡುಗಳಿಂದಲೇ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ.

ಇತ್ತೀಚೆಗೆ ರವಿಕೆ ಪ್ರಸಂಗ ಚಿತ್ರದ ಪ್ರೀ ರಿಲೀಸ್ ಇವೆಂಟನ್ನು ಕನಕಪುರ ರಸ್ತೆಯ ಫೋರಮ್ ಮಾಲ್​ನಲ್ಲಿ ನಡೆಸಲಾಗಿತ್ತು. ಸಾವಿರಾರು ಜನರು ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ಅಲ್ಲಿಗೆ ಬಂದಿದ್ದ ಜನರೆಲ್ಲರೂ ರವಿಕೆ ಪ್ರಸಂಗ ಚಿತ್ರದ ಪೋಸ್ಟರ್ ಹಿಡಿದು ಶುಭಕೋರಿದರು. ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ ಅವರು, ಕಥೆಗಾರ್ತಿ ಮತ್ತು ಸಂಭಾಷಣಾಗಾರ್ತಿ ಪಾವನ ಸಂತೋಷ್, ಚಿತ್ರದ ನಾಯಕಿಯಾದ ಗೀತಾಭಾರತಿ ಭಟ್, ಪದ್ಮಜಾರಾವ್, ಜೊತೆಗೆ ಪೋಷಕ ಕಲಾವಿದರು, ಚಿತ್ರದ ಸಂಕಲನಾಕಾರರಾದ ರಘು ಉಪಸ್ಥಿತರಿದ್ದರು.

ರವಿಕೆ ಪ್ರಸಂಗ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ ಗೀತಾಭಾರತಿ ಭಟ್

ಬಹಳ‌ಮುಖ್ಯವಾಗಿ ಗೀತಾಭಾರತಿ ಭಟ್ ಅವರು ಅಲ್ಲಿದ್ದ ನೂರಾರು ಜನರೊಂದಿಗೆ ರವಿಕೆ ಪ್ರಸಂಗ ಚಿತ್ರದ ಹಾಡಿಗೆ ಹೆಜ್ಜೆ ಹಾಕಿದರು. ಬಹಳ ವಿಶೇಷವಾಗಿ ಸ್ಟೇಜ್ ಮೇಲೆ ಕರ್ನಾಟಕದ ಬೆಸ್ಟ್ ಟೈಲರ್​ ಅನ್ನು ಗುರುತಿಸುವ ಕಂಟೆಸ್ಟ್ ಲಾಂಚ್ ಮಾಡಲಾಯಿತು.‌ ಬೆಸ್ಟ್ ಟೈಲರನ್ನು ಗುರುತಿಸಿ ಭರ್ಜರಿ ಬಹುಮಾನ ನೀಡಿ ಸನ್ಮಾನಿಸಲಾಗುವುದು ಎಂದು ಚಿತ್ರತಂಡ ಘೋಷಿಸಿದೆ. ವಿಜೇತರಾದವರಿಗೆ ಹೊಲಿಗೆ ಯಂತ್ರ, ಮೊಬೈಲ್ ಫೋನ್ ಹಾಗೂ ಸಿನಿಮಾ ಟಿಕೆಟ್ ನೀಡಲಾಗುವುದು ಎಂದಿದೆ.

ರವಿಕೆ ಪ್ರಸಂಗ ಸಿನಿಮಾ ತಂಡ
ರವಿಕೆ ಪ್ರಸಂಗ ಸಿನಿಮಾ ತಂಡ

ಬಹಳ ಮುಖ್ಯವಾಗಿ ರಾಜ್ಯದ್ಯಾಂತ 7 ಸಾವಿರಕ್ಕೂ ಹೆಚ್ಚಿನ ಆಟೋ ಪಬ್ಲಿಸಿಟಿ ಮಾಡುತ್ತಿರುವ ರವಿಕೆಪ್ರಸಂಗ ಚಿತ್ರತಂಡ ಆಟೋ ಡ್ರೈವರ್​ಗಳೊಂದಿಗೆ ಒಂದಷ್ಟು ಸಿನಿಮಾದ ಬಗ್ಗೆ ಚರ್ಚಿಸಿ, ಗೀತಾಭಾರತಿ ಭಟ್ ಅವರು ಅನೇಕ ಆಟೋಗಳಿಗೆ ಸ್ಟಿಕ್ಕರ್ ಅಂಟಿಸುವ ಮೂಲಕ ಚಾಲನೆ ನೀಡಿದರು.

ಚಿತ್ರತಂಡ ಭರ್ಜರಿ ಪ್ರಚಾರ ಕಾರ್ಯಕ್ರಮದಲ್ಲಿ ತೊಡಗಿದೆ. ಚಿತ್ರವು ವಿಶೇಷ ಕಥಾಹಂದರ ಹೊಂದಿದ್ದು, ಒಂದು ರವಿಕೆಗೆ ಹುಕ್ ಹೇಗೆ ಮುಖ್ಯವೋ ಹಾಗೆ ಜೀವನದ ಕೆಲವು ಸಂಘರ್ಷಗಳು, ಸಂಬಂಧಗಳು ಅತೀ ಮುಖ್ಯವಾಗುತ್ತವೆ. ರವಿಕೆಯ ಒಂದು ಸಣ್ಣ ವಿಚಾರ ನ್ಯಾಷನಲ್ ಇಶ್ಯೂ ಆಗುವತ್ತ ಹೋಗುವ ಮತ್ತು ಜೀವನದ ಮೌಲ್ಯಗಳ ಅರ್ಥವನ್ನು "ರವಿಕೆ ಪ್ರಸಂಗ" ಚಿತ್ರದ ಮೂಲಕ ನಿಮ್ಮ ಮುಂದೆ ಇಡಲಿದೆ.

ರವಿಕೆ ಪ್ರಸಂಗ ಸಿನಿಮಾ ತಂಡ
ರವಿಕೆ ಪ್ರಸಂಗ ಸಿನಿಮಾ ತಂಡ

ರಾಜ್ಯಾದ್ಯಂತ ವಿವಿಧ ಜಿಲ್ಲೆಗಳಲ್ಲಿ ನಾಳೆಯಿಂದ ಚಿತ್ರ ತಂಡ ಪ್ರೆಸ್​ಮೀಟ್ ಮಾಡಿ ಭರ್ಜರಿ ಪ್ರಚಾರ ಮಾಡಲಿದೆ. ನಿಮ್ಮೆಲ್ಲರ ಹಾರೈಕೆ, ಆಶೀರ್ವಾದ ಚಿತ್ರದ ಮೇಲಿರಲಿ ಎಂದು ಚಿತ್ರದ ನಿರ್ದೇಶಕರಾದ ಸಂತೋಷ್ ಕೊಡೆಂಕೇರಿ ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದಾರೆ.

ರವಿಕೆ ಅಂದರೆ ಬ್ಲೌಸನ್ನು ಪ್ರಮುಖವಾಗಿ ಇಟ್ಟುಕೊಂಡು ಕೌಟುಂಬಿಕ ಕಥಾ ಹಂದರದಿಂದ ಹಾಸ್ಯಭರಿತ ಉತ್ತಮ ಸಂದೇಶವನ್ನು ಸಮಾಜಕ್ಕೆ ತಿಳಿಸುವುದು ರವಿಕೆ ಪ್ರಸಂಗ ಚಿತ್ರದ ತಿರುಳು. ಚಿತ್ರದಲ್ಲಿ ನಾಯಕಿಯಾಗಿ ನಟಿಸಿರುವ ಗೀತಾ ಭಾರತಿ ಭಟ್ ಉತ್ತಮ ಅಭಿನಯದೊಂದಿಗೆ ಹಾಡಿಗೆ ಸಖತ್ ಸ್ಟೆಪ್ ಹಾಕಿ ಡ್ಯಾನ್ಸ್ ಮಾಡಿದ್ದಾರೆ. ಈ ಚಿತ್ರಕ್ಕೆ ಪಾವನಾ ಸಂತೋಷ್ ಕಥೆ ಸಂಭಾಷಣೆ ಬರೆದಿದ್ದಾರೆ. ಸದ್ಯ ಟ್ರೈಲರ್​ನಿಂದ ಟಾಕ್ ಆಗುತ್ತಿರುವ ರವಿಕೆ ಪ್ರಸಂಗ ಚಿತ್ರ ಫೆಬ್ರವರಿ 16 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.

ಇದನ್ನೂ ಓದಿ: ಹೊಸ ಅಲೆಯ ಚಿತ್ರಗಳು ಸರಿಯಾಗಿ ತಲುಪಲು ಸಾಧ್ಯವಾಗುತ್ತಿಲ್ಲ: ಗಿರೀಶ್ ಕಾಸರವಳ್ಳಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.