ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಹಾಗೂ ಉಸ್ತಾದ್ ರಾಮ್ ಪೋತಿನೇನಿ ಕಾಂಬಿನೇಶನ್ನ ಬಹುನಿರೀಕ್ಷಿತ ಸಿನಿಮಾ 'ಡಬಲ್ ಇಸ್ಮಾರ್ಟ್'. ಇಸ್ಮಾರ್ಟ್ ಶಂಕರ್ ಚಿತ್ರದ ಸೀಕ್ವೆಲ್ ಆಗಿರುವ 'ಡಬಲ್ ಇಸ್ಮಾರ್ಟ್'ನ ಅಧಿಕೃತ ಟೀಸರ್ ಇಂದು ಅನಾವರಣಗೊಂಡಿದ್ದು, ಪ್ರೇಕ್ಷಕರ ಗಮನ ಸೆಳೆಯುವಲ್ಲಿ ಯಶಸ್ವಿ ಆಗಿದೆ.
ಡೈನಾಮಿಕ್ ಸ್ಟಾರ್ ರಾಮ್ ಪೋತಿನೇನಿ ಜನ್ಮದಿನದ ಸಂಭ್ರಮದಲ್ಲಿದ್ದಾರೆ. 36ನೇ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಸೌತ್ ಸ್ಟಾರ್ಗೆ ಕುಟುಂಬ ಸದಸ್ಯರು, ಸಿನಿ ಸ್ನೇಹಿತರೂ ಸೇರಿದಂತೆ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ನಟನ ಸಿನಿ ಸಾಧನೆ ಕೊಂಡಾಡುತ್ತಿರುವ ಫ್ಯಾನ್ಸ್, ಮುಂದಿನ ಚಿತ್ರಗಳ ಮೇಲಿರುವ ತಮ್ಮ ಕುತೂಹಲವನ್ನು ವ್ಯಕ್ತಪಡಿಸುತ್ತಿದ್ದಾರೆ.
ರಾಮ್ ಪೋತಿನೇನಿ ಜನ್ಮದಿನಕ್ಕೆ 'ಡಬಲ್ ಇಸ್ಮಾರ್ಟ್' ಚಿತ್ರತಂಡ ಟೀಸರ್ ಅನಾವರಣಗೊಳಿಸುವ ಮೂಲಕ ವಿಶೇಷವಾಗಿ ಶುಭಾಶಯ ಕೋರಿದೆ. ಈ ಮೂಲಕ ಅಭಿಮಾನಿಗಳಿಗೆ ರಾಮ್ ಪೋತಿನೇನಿ ಬರ್ತ್ಡೇ ಗಿಫ್ಟ್ ಸಿಕ್ಕಿದೆ. ಜನ್ಮದಿನಕ್ಕೆ ಬಿಡುಗಡೆ ಮಾಡಲಾಗಿರೋ ಈ ಟೀಸರ್ನಲ್ಲಿ ಭರ್ಜರಿ ಆ್ಯಕ್ಷನ್ ಮೂಲಕ ರಾಮ್ ಅಬ್ಬರಿಸಿದ್ದಾರೆ. ಸದ್ಯ ಟೀಸರ್ ಸೋಷಿಯಲ್ ಮೀಡಿಯಾದಲ್ಲಿ ಸಕತ್ ಸದ್ದು ಮಾಡುತ್ತಿದೆ.
- " class="align-text-top noRightClick twitterSection" data="">
ಮಾಸ್, ಆ್ಯಕ್ಷನ್-ಪ್ಯಾಕ್ಡ್ ಟೀಸರ್ನಲ್ಲಿ ರಾಮ್ ಪೋತಿನೇನಿ ಸಖತ್ ಸ್ಟೈಲಿಶ್ ಆಗಿ ಕಾಣಿಸಿಕೊಂಡಿದ್ದಾರೆ. ಕಾವ್ಯಾ ಥಾಪರ್ ನಾಯಕಿಯಾಗಿ ನಟಿಸಿದ್ದು, ಸಂಜಯ್ ದತ್ ಖಳನಾಯಕನಾಗಿ ತೊಡೆ ತಟ್ಟಿದ್ದಾರೆ. 1.26 ಸೆಕೆಂಡ್ ಇರುವ ಟೀಸರ್ನಲ್ಲಿ ರಾಮ್ ಹಾಗೂ ಸಂಜು ಬಾಬ ಜುಗಲ್ಬಂದಿ ನೋಡುಗರಿಗೆ ಕಿಕ್ ಕೊಡ್ತಿದೆ.
ಇದನ್ನೂ ಓದಿ: ನೂತನ ಸಂಸತ್ ಭವನಕ್ಕೆ ರೋಹಿತ್ ಶೆಟ್ಟಿ ಭೇಟಿ: ಖ್ಯಾತ ನಿರ್ದೇಶಕ ಹೇಳಿದ್ದಿಷ್ಟು - Rohit Shetty Visits Parliament
ಡಬಲ್ ಆ್ಯಕ್ಷನ್, ಡಬಲ್ ಎನರ್ಜಿ ಮತ್ತು ಡಬಲ್ ಫನ್ ಕೊಡುವ 'ಡಬಲ್ ಇಸ್ಮಾರ್ಟ್' ಟೀಸರ್ ಕ್ಲೈಮ್ಯಾಕ್ಸ್ ಸೀನ್ಸ್ ಸಿನಿಮಾ ಮೇಲಿನ ನಿರೀಕ್ಷೆಯನ್ನು ಹೆಚ್ಚಿಸಿದೆ. ತೆಲುಗು, ತಮಿಳು, ಕನ್ನಡ, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ಚಿತ್ರ ಮೂಡಿ ಬರಲಿದೆ. ಮಣಿ ಶರ್ಮಾ ಅವರ ಸಂಗೀತ ಈ ಚಿತ್ರಕ್ಕಿದೆ. ಕ್ರೇಜಿ ಪ್ಯಾನ್ ಇಂಡಿಯನ್ ಪ್ರಾಜೆಕ್ಟ್ ಡಬಲ್ ಇಸ್ಮಾರ್ಟ್ ಸಿನಿಮಾವನ್ನು ಪುರಿ ಕನೆಕ್ಟ್ ಬ್ಯಾನರ್ ಅಡಿ ಪುರಿ ಜಗನ್ನಾಥ್, ಚಾರ್ಮಿ ಕೌರ್ ನಿರ್ಮಾಣ ಮಾಡಿದ್ದು, ಚಿತ್ರ ಅದ್ಧೂರಿಯಾಗಿ ಮೂಡಿಬರಲಿದೆ.
ಬರುವ ತಿಂಗಳು ಜೂನ್ 14ರಂದು ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ರಾಮ್ ಪೋತಿನೇನಿ ದಕ್ಷಿಣದ ಬಹುಬೇಡಿಕೆ ನಟರಲ್ಲೋರ್ವರಾಗಿ ಗುರುತಿಸಿಕೊಂಡಿದ್ದು, ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರ ಸಿನಿಮಾ ನೋಡಲು ಅಭಿಮಾನಿಗಳು, ಸಿನಿಪ್ರಿಯರು ಕಾತರರಾಗಿರುತ್ತಾರೆ. ಅದರಂತೆ ಈ ಚಿತ್ರದ ಮೇಲೂ ಸಾಕಷ್ಟು ನಿರೀಕ್ಷೆಗಳಿದ್ದು, ಸಿನಿಮಾ ಎಷ್ಟರ ಮಟ್ಟಿಗೆ ಗೆಲ್ಲಲಿದೆ ಅನ್ನೋದು ಇನ್ನೊಂದು ತಿಂಗಳಲ್ಲೇ ಗೊತ್ತಾಗಲಿದೆ.