ETV Bharat / entertainment

ನಟಿ ಮಲೈಕಾ ಅರೋರಾ ಮಲತಂದೆ ಆತ್ಮಹತ್ಯೆ: ಮರಣೋತ್ತರ ಪರೀಕ್ಷೆಯಲ್ಲೇನಿದೆ? - Malaika Stepfather Autopsy Report - MALAIKA STEPFATHER AUTOPSY REPORT

ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ಮಲತಂದೆ ಅನಿಲ್ ಮೆಹ್ತಾ ಅವರ ಮರಣೋತ್ತರ ಪರೀಕ್ಷೆ ವರದಿ ಹೊರಬಿದ್ದಿದೆ.

Malaika Arora family
ನಟಿ ಮಲೈಕಾ ಅರೋರಾ ಕುಟುಂಬ (Photo: IANS)
author img

By ETV Bharat Karnataka Team

Published : Sep 12, 2024, 7:15 PM IST

Updated : Sep 12, 2024, 7:41 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್ ನಟಿ ಮಲೈಕಾ ಅರೋರಾ ಅವರ ಮಲತಂದೆ ಅನಿಲ್ ಮೆಹ್ತಾ ಕಳೆದ ದಿನ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಪ್ರಾಥಮಿಕವಾಗಿ ಇದನ್ನು ಆತ್ಮಹತ್ಯೆ ಎಂದು ಹೇಳಲಾಗಿದೆ. ಅವರ ಪ್ರಾಥಮಿಕ ಮರಣೋತ್ತರ ವರದಿಯಲ್ಲಿ ಅವರ ತಲೆಗೆ ಗಾಯವಾಗಿದೆ ಎಂದು ಪೊಲೀಸರು ಇಂದು ತಿಳಿಸಿದ್ದಾರೆ.

ಅನಿಲ್ ಮೆಹ್ತಾ (62) ಅವರು ತಮ್ಮ ಪತ್ನಿಯೊಂದಿಗೆ ಬಾಂದ್ರಾದಲ್ಲಿರುವ ಆಯೇಷಾ ಮ್ಯಾನರ್ ಅಪಾರ್ಟ್​​​​​​​ಮೆಂಟ್​ನಲ್ಲಿ ವಾಸವಿದ್ದರು. ಬುಧವಾರ ಬೆಳಗ್ಗೆ ಕಟ್ಟಡದ ಆರನೇ ಮಹಡಿಯಿಂದ ಜಿಗಿದು ತಮ್ಮ ಜೀವನವನ್ನು ಕೊನೆಗೊಳಿಸಿದ್ದಾರೆ. ನಿನ್ನೆ ಸಂಜೆ ಶವಪರೀಕ್ಷೆ ನಡೆಸಲಾಯಿತು.

ತಲೆ, ಕಾಲು ಮತ್ತು ಕೈಗಳಿಗೆ ಅನೇಕ ಗಾಯಗಳಾಗಿದ್ದು, ಅದರಿಂದ ಅವರು ಸಾವನ್ನಪ್ಪಿದ್ದಾರೆ ಎಂದು ಪ್ರಾಥಮಿಕ ವರದಿ ತಿಳಿಸಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಕಟ್ಟಡದ ಆವರಣದಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ಅನಿಲ್ ಮೆಹ್ತಾ ಅವರ ಕುಟುಂಬದ ಸದಸ್ಯರು ಮತ್ತು ಸಾಕ್ಷಿಧಾರರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗ್ತಿದೆ ಎಂದೂ ಸಹ ಪೊಲೀಸ್​ ಅಧಿಕಾರಿ ತಿಳಿಸಿದ್ದಾರೆ.

ಸೆಪ್ಟೆಂಬರ್ 11 ರಂದು ಮುಂಜಾನೆ ಮುಂಬೈ ಪೊಲೀಸರು ಅನಿಲ್ ಮೆಹ್ತಾ ಅವರ ಸಾವು ಆತ್ಮಹತ್ಯೆಯಂತಿದೆ ಎಂದು ತಿಳಿಸಿದರು. ಅದಾಗ್ಯೂ ಎಲ್ಲಾ ಆಯಾಯಗಳಲ್ಲೂ ತನಿಖೆ ನಡೆಯುತ್ತಿದ್ದು, ಸಂಪೂರ್ಣ ವಿಚಾರಣೆ ಬಳಿಕವೇ ಸ್ಪಷ್ಟ ಉತ್ತರ ಸಿಗಲಿದೆ ಎಂದು ತಿಳಿಸಿದ್ದರು.

ಇನ್​ಸ್ಟಾಗ್ರಾಮ್​ ಪೋಸ್ಟ್​ ಮೂಲಕ ಮಲೈಕಾ ಅರೋರಾ ಕುಟುಂಬ ದುಃಖ ವ್ಯಕ್ತಪಡಿಸಿದೆ. "ನಮ್ಮ ಪ್ರೀತಿಯ ತಂದೆ ಅನಿಲ್ ಮೆಹ್ತಾ ಅವರ ನಿಧನವನ್ನು ಘೋಷಿಸಲು ನಾವು ದುಃಖಿತರಾಗಿದ್ದೇವೆ. ಅವರದ್ದು ಸೌಮ್ಯ ಆತ್ಮ. ನಿಷ್ಠಾವಂತ ಅಜ್ಜ, ಪ್ರೀತಿಯ ಪತಿ ಮತ್ತು ನಮ್ಮ ಆತ್ಮೀಯ ಸ್ನೇಹಿತರಾಗಿದ್ದರು. ಅವರನ್ನು ಕಳೆದುಕೊಂಡ ನಮ್ಮ ಕುಟುಂಬ ತೀವ್ರ ಆಘಾತಕ್ಕೊಳಗಾಗಿದ್ದೇವೆ. ಈ ಕಷ್ಟದ ಸಮಯದಲ್ಲಿ ಮಾಧ್ಯಮಗಳು ಮತ್ತು ಹಿತೈಷಿಗಳಲ್ಲಿ ಗೌಪ್ಯತೆ ಗೌರವಿಸುವಂತೆ ಕೇಳಿಕೊಳ್ಳುತ್ತಿದ್ದೇವೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಅನಿಲ್ ಅಂತ್ಯಸಂಸ್ಕಾರ: ಮಲೈಕಾ ಫ್ಯಾಮಿಲಿ, ಎರಡನೇ ಪತ್ನಿಯೊಂದಿಗೆ ಅರ್ಬಾಜ್ ಖಾನ್ ಅಂತ್ಯಕ್ರಿಯೆಯಲ್ಲಿ​ ಭಾಗಿ - Anil Last Rites

ಘಟನೆ ನಡೆದಾಗ ಮಲೈಕಾ ಅರೋರಾ ಅವರು ತಂದೆಯ ಮನೆಯಲ್ಲಿರಲಿಲ್ಲ. ಆ ಸಮಯದಲ್ಲಿ ಅವರು ಪುಣೆಯಲ್ಲಿದ್ದರು ಎಂದು ವರದಿಯಾಗಿದೆ. ದುರಂತ ಸುದ್ದಿ ತಿಳಿದ ಕೂಡಲೇ ಮುಂಬೈಗೆ ಧಾವಿಸಿದರು. ಈ ಸವಾಲಿನ ಸಮಯದಲ್ಲಿ ನಟಿಗೆ ಧೈರ್ಯ ತುಂಬಲು ಮಾಜಿ ಪತಿ ಅರ್ಬಾಜ್ ಖಾನ್ ಮತ್ತು ಅವರ ಸಂಪೂರ್ಣ ಕುಟುಂಬ ಮತ್ತು ರೂಮರ್​ ಬಾಯ್​ಫ್ರೆಂಡ್​ ಅರ್ಜುನ್​ ಕಪೂರ್​ ಜೊತೆಗಿದ್ದರು. ಅಲ್ಲದೇ ಮಾಜಿ ಪತಿ ಅರ್ಬಾಜ್ ಖಾನ್ ಅವರ ಎರಡನೇ ಪತ್ನಿ ಕೂಡಾ ಉಪಸ್ಥಿತರಿದ್ದರು.

ಇದನ್ನೂ ಓದಿ: ಬೃಂದಾವನ ನಟ ವರುಣ್ ವಿರುದ್ಧದ ಪ್ರಕರಣ: ತಪ್ಪು ತಿಳುವಳಿಕೆಯಿಂದ ದೂರು ನೀಡಿದೆ ಎಂದ ಯುವತಿ - Actor Varun Aradya Case

Last Updated : Sep 12, 2024, 7:41 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.