ETV Bharat / entertainment

ಎನ್​ಟಿಆರ್​ ಅಭಿಮಾನಿಗಳಿಗೆ ಗುಡ್​ನ್ಯೂಸ್​: ನಿಗದಿತ ದಿನಕ್ಕೂ ಮೊದಲೇ ಬಿಡುಗಡೆಯಾಗುತ್ತಿದೆ ದೇವರ ಸಿನಿಮಾ - J NTRs Devara movie release - J NTRS DEVARA MOVIE RELEASE

ಅಕ್ಟೋಬರ್​ 10ರಂದು ದೇವರ ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಇದೀಗ ಚಿತ್ರ ಈ ನಿಗದಿತ ದಿನಾಂಕಕ್ಕೆ ಮೊದಲೇ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ.

junior-ntrs-devara-movie-releasing-in-september-instead-of-october
'ದೇವರ' ಸಿನಿಮಾದಲ್ಲಿ ಜೂ ಎನ್​ಟಿಆರ್​ (ಸಂಗ್ರಹ ಚಿತ್ರ)
author img

By ETV Bharat Karnataka Team

Published : Jun 13, 2024, 12:21 PM IST

ಹೈದರಾಬಾದ್​: ಸಾಮಾನ್ಯವಾಗಿ ಸ್ಟಾರ್​ ನಟರ ಸಿನಿಮಾ ಬಿಡುಗಡೆ ನಿಗದಿತ ದಿನಾಂಕಕ್ಕಿಂತ ವಿಳಂಬವಾಗುವುದು ಸಾಮಾನ್ಯ. ಇದರಿಂದ ಅವರ ಅಭಿಮಾನಿಗಳಲ್ಲಿ ಕೊಂಚ ಬೇಸರವೂ ವ್ಯಕ್ತವಾಗಿ, ಕಾಯುವಿಕೆ ಅವಧಿ ದೀರ್ಘ ಆಗುತ್ತದೆ. ಆದರೆ, ಈ ಮಾತು ದೇವರ ಸಿನಿಮಾದಲ್ಲಿ ವಿರುದ್ಧವಾಗಿದೆ. ಜೂ ಎನ್​ಟಿಆರ್​​​ ಪ್ರಮುಖ ಭೂಮಿಕೆಯಲ್ಲಿ ನಟಿಸಿರುವ ಪ್ಯಾನ್​ ಇಂಡಿಯಾ ಸಿನಿಮಾ 'ದೇವರ -ಭಾಗ 1' ಸಿನಿಮಾ ಇದೀಗ ನಿಗದಿತ ದಿನಾಂಕಕ್ಕೂ ಮುನ್ನವೇ ಬಿಡುಗಡೆಗೆ ಸಜ್ಜಾಗಿದ್ದು, ಅಭಿಮಾನಿಗಳಲ್ಲಿ ಹರ್ಷ ಮೂಡಿಸಿದೆ.

ಆರಂಭದಲ್ಲಿ ಬೇಸಿಗೆಯಲ್ಲಿ ಅಂದರೆ ಏಪ್ರಿಲ್​ನಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ ಎನ್ನಲಾಗಿತ್ತಾದರೂ ಬಳಿಕ ಅಕ್ಟೋಬರ್​ 10ರಂದು 'ದೇವರ' ಸಿನಿಮಾ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ, ಇದೀಗ ಚಿತ್ರ ಈ ನಿಗದಿತ ದಿನಾಂಕಕ್ಕೆ ಮೊದಲೇ ಬೆಳ್ಳಿತೆರೆಗೆ ಬರಲು ಸಜ್ಜಾಗಿದ್ದು, ಸೆಪ್ಟೆಂಬರ್​ 27ಕ್ಕೆ ಚಿತ್ರ ಬಿಡುಗಡೆ ಮಾಡುವ ಗುರಿಯನ್ನು ಚಿತ್ರತಂಡ ಹೊಂದಿದೆ. ಅವಧಿಗೆ ಮುನ್ನ ಚಿತ್ರ ಬಿಡುಗಡೆಯಾಗಲು ಕಾರಣ ಪವನ್​ ಕಲ್ಯಾಣ್​ 'ಒಜಿ' ಸಿನಿಮಾ ಕೂಡ ಅಕ್ಟೋಬರ್​ನಲ್ಲಿ ಬಿಡುಗಡೆಯಾಗಲಿದೆ.

ಇಬ್ಬರು ಸ್ಟಾರ್​ ನಟರ ಸಿನಿಮಾಗಳ ನಡುವಿನ ಸ್ಪರ್ಧೆ ತಪ್ಪಿಸುವ ಉದ್ದೇಶದಿಂದ ದೇವರ ಸಿನಿಮಾ ಶೀಘ್ರ ಬಿಡುಗಡೆಗೆ ತಂಡ ನಿರ್ಧರಿಸಿದೆ. ಇದಕ್ಕಾಗಿ ಚಿತ್ರ ಕೆಲಸಗಳಿಗೆ ವೇಗ ಕೂಡ ನೀಡಲಾಗಿತ್ತು. ತಂಡ ಇತ್ತೀಚೆಗಷ್ಟೇ ಗೋವಾದಲ್ಲಿ ಶೂಟಿಂಗ್​​ ಮುಗಿಸಿ ಮರಳಿದೆ.

ಕೊರಟಾಲಾ ಶಿವ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಎನ್​ಟಿಆರ್​ ಮತ್ತು ಜಾನ್ವಿ ಕಪೂರ್​ ಕಾಣಿಸಲಿದ್ದಾರೆ. ಚಿತ್ರ ಎರಡು ಭಾಗದಲ್ಲಿ ಬಿಡುಗಡೆಯಾಲಿದೆ. ಚಿತ್ರಕ್ಕೆ ಸುಧಾಕರ್​ ಮಿಕ್ಕಿಲಿನೆನಿ ಮತ್ತು ಕೊಸರಾಜು ಹರಿಕೃಷ್ಣ ಬಂಡವಾಳ ಹೂಡಿದ್ದಾರೆ. ಎನ್​ಟಿಆರ್​ ಆರ್ಟ್ಸ್​​ ಇದರ ಪ್ರಸ್ತುತಿ ಮಾಡಿದೆ.

ಚಿತ್ರದಲ್ಲಿ ಬಾಲಿವುಡ್​ ನಟ ಸೈಫ್​ ಆಲಿ ಖಾನ್​ ಕೂಡ ಬಣ್ಣ ಹಚ್ಚಿದ್ದು, ವಿಲನ್​ ಆಗಿ ಅವರು ಕಾಣಿಸಿಕೊಳ್ಳಲಿದ್ದು, ನಟ ಪ್ರಕಾಶ್​ ರೈ ಕೂಡ ಸಿನಿಮಾದ ಭಾಗವಾಗಿದ್ದಾರೆ. ನಿಮಾ ತೆಲುಗು, ತಮಿಳು, ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲಿ ಬಿಡುಗಡೆಯಾಗಲಿದೆ. ಅನಿರುದ್ಧ್ ರವಿಚಂದರ್ ಜೊತೆಗೆ ಸಂತೋಷ್ ವೆಂಕಿ ಕೂಡ ಸಂಗೀತ ನಿರ್ದೇಶನ ನೀಡಿದ್ದಾರೆ.

ಇದೀಗ ಸಿನಿಮಾ ನಿರೀಕ್ಷೆಗೆ ಮುಂಚೆಯೇ ಬಿಡುಗಡೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಭಿಮಾನಿಗಳಲ್ಲಿ ಹರ್ಷ ವ್ಯಕ್ತವಾಗಿದ್ದು, ಸಂಭ್ರಮಾಚರಣೆಗೆ ಕಾರಣವಾಗಿದೆ.

ಇದನ್ನೂ ಓದಿ: ದೇವರ 'ಭಯ'ವಿಲ್ಲದ ಹಾಡು ಬಿಡುಗಡೆ: ಎನ್​ಟಿಆರ್​ ಜನ್ಮದಿನಕ್ಕೆ ಸಿನಿಮಾ ತಂಡದಿಂದ ಭರ್ಜರಿ ಗಿಫ್ಟ್​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.