ಗಾಂಧಿನಗರ (ಗುಜರಾತ್): ನಟರಾದ ಆದಿತ್ಯ ರಾವಲ್ ಮತ್ತು ಅಲಿಜೆ ಅಗ್ನಿಹೋತ್ರಿ ಅವರು ಭಾನುವಾರ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅತ್ಯುತ್ತಮ ಚೊಚ್ಚಲ (ಪುರುಷ) ಮತ್ತು ಅತ್ಯುತ್ತಮ ಚೊಚ್ಚಲ (ಮಹಿಳೆ) ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ಹನ್ಸಲ್ ಮೆಹ್ತಾ ಅವರ ಥ್ರಿಲ್ಲರ್ ಚಲನಚಿತ್ರ 'ಫರಾಜ್' ನಲ್ಲಿನ ಅಭಿನಯಕ್ಕಾಗಿ ಆದಿತ್ಯ ಅವರು ಪ್ರಶಸ್ತಿ ಪಡೆದಿದ್ದಾರೆ. ಅಲಿಜೆ ಅವರು 'ಫ್ಯಾರಿ' ಗಾಗಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ. ಆದಿತ್ಯ, ಹೆಸರಾಂತ ನಟ ಪರೇಶ್ ರಾವಲ್ ಅವರ ಪುತ್ರ. ಮತ್ತೊಂದೆಡೆ, ಅಲಿಜೆ ಅವರು ನಿರ್ಮಾಪಕ ಅತುಲ್ ಅಗ್ನಿಹೋತ್ರಿ ಅವರ ಪುತ್ರಿ. ಮತ್ತು ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಸೊಸೆ.
ಭೂಷಣ್ ಕುಮಾರ್ ನಿರ್ಮಿಸಿದ 'ಫರಾಜ್' ಕುರಿತು ಮಾತನಾಡಿ, ''ಈ ಚಲನಚಿತ್ರವು ಜುಲೈ 1, 2016ರ ರಾತ್ರಿ ಢಾಕಾದಲ್ಲಿ ನಡೆದ ಘಟನೆಗಳನ್ನು ತೋರಿಸುತ್ತದೆ. ಅಲ್ಲಿ ಐವರು ಉಗ್ರಗಾಮಿಗಳು ಪ್ರಸಿದ್ಧ ಕೆಫೆಯನ್ನು ಧ್ವಂಸಗೊಳಿಸಿದ್ದು ಮತ್ತು ಸುಮಾರು 12 ಗಂಟೆಗಳ ಕಾಲ 50 ಜನರನ್ನು ಒತ್ತೆಯಾಳುಗಳಾಗಿ ಇರಿಸಿದ ಕುರಿತ ಕಥಾ ಹಂದರವನ್ನು ಈ ಸಿನಿಮಾ ಹೊಂದಿದೆ" ಎಂದು ತಿಳಿಸಿದರು.
ಈ ಹಿಂದೆ ಮಾತನಾಡಿದ್ದ ನಿರ್ದೇಶಕ ಹನ್ಸಲ್ ಮೆಹ್ತಾ ಅವರು, "ನಾವು ಫರಾಜ್ ನಂತಹ ಚಿತ್ರವನ್ನು ಮಾಡಲು ನಿರ್ಧರಿಸಲು ಮುಖ್ಯ ಕಾರಣವೆಂದರೆ ಗಡಿಯನ್ನು ಮೀರಿದ ಕಥೆಯನ್ನು ತಿಳಿಸಲು. ಭಯೋತ್ಪಾದನೆಯ ವಿರುದ್ಧ ಹೋರಾಟಕ್ಕೆ ಬಂದಾಗ, ಅದು ಹೇಗೆ ಒಂದು ಕಡೆ ಮಾನವೀಯತೆ ಮತ್ತು ಇನ್ನೊಂದು ಕಡೆ ಭಯೋತ್ಪಾದನೆಯಾಗಿದೆ ಎಂಬುದಕ್ಕೆ ಫರಾಜ್ ಕಥೆಯು ಒಂದು ಪ್ರಮುಖ ಉದಾಹರಣೆಯಾಗಿದೆ" ಎಂದು ಹೇಳಿದರು.
'ಫ್ಯಾರಿ' ಮಾನವ ಅನುಭವಗಳ ಸಂಕೀರ್ಣತೆಗಳು, ಭಾವನೆಗಳು ಮತ್ತು ಸವಾಲಿನ ಸಂದರ್ಭಗಳನ್ನು ಎದುರಿಸಿದಾಗ ಜನರು ಮಾಡುವ ಆಯ್ಕೆಗಳನ್ನು ತಿಳಿಸುವ ಸಿನಿಮಾ ಆಗಿದೆ. ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ಮಾಪಕ ಸೌಮೇಂದ್ರ ಪಾಧಿ ಈ ಸಿನಿಮಾನವನ್ನು ನಿರ್ದೇಶಿಸಿದ್ದಾರೆ ಮತ್ತು ಅಲಿಜ್, ಝೈನ್ ಶಾ, ಸಾಹಿಲ್ ಮೆಹ್ತಾ, ಪ್ರಸನ್ನ ಬಿಷ್ಟ್, ರೋನಿತ್ ಬೋಸ್ ರಾಯ್ ಮತ್ತು ಜೂಹಿ ಬಬ್ಬರ್ ಸೋನಿ ಚಿತ್ರದಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: 'ರಾಹ' ಪೋಷಕರಿಗೆ ಅತ್ಯುತ್ತಮ ನಟ, ನಟಿ ಫಿಲ್ಮ್‌ಫೇರ್ ಅವಾರ್ಡ್