ಬಿಗ್ ಬಾಸ್ ಕನ್ನಡ ಸೀಸನ್ 11 ಫಿನಾಲೆ ಸಮೀಪಿಸುತ್ತಿದ್ದು, ಸ್ಪರ್ಧಿಗಳ ಕಿರುಚಾಟ ಹೆಚ್ಚುತ್ತಲೇ ಇದೆ. ನಾಮಿನೇಷನ್, ಕಳಪೆ, ಅನರ್ಹ ಪಟ್ಟಕ್ಕೆ ಹೆಸರು ಸೂಚಿಸುವ ಸಂದರ್ಭದಿಂದ ಆರಂಭವಾಗುವ ಅಸಮಧಾನಗಳು ಟಾಸ್ಕ್ನಲ್ಲೂ ವ್ಯಕ್ತವಾಗುತ್ತಿವೆ. ನಾಮಿನೇಷನ್ ಅನ್ನು ಆಧಾರವಾಗಿಟ್ಟುಕೊಂಡು ಬಿಗ್ ಬಾಸ್ ಟಾಸ್ಕ್ಗಳನ್ನು ನೀಡುತ್ತಿರುವ ಹಿನ್ನೆಲೆ, ಪ್ರತೀ ಸ್ಪರ್ಧಿಗಳು ಗೆಲ್ಲುವ ಪಣ ತೊಟ್ಟಿದ್ದಾರೆ. ಹಾಗಾಗಿ, ಟಾಸ್ಕ್ ನಡುವೆ ನಡೆಯುವ ಗಲಾಟೆಗಳು ಜೋರಾಗಿವೆ.
'ನಿಲ್ಲುತ್ತಿಲ್ಲ ಮನೆಯವರ ಜೋರು ಸದ್ದು, ಮತ್ತೊಮ್ಮೆ ಈಗ ಟಾಸ್ಕ್ ರದ್ದು!' ಬಿಗ್ ಬಾಸ್ ಕನ್ನಡ ಸೀಸನ್ 11, ಸೋಮ-ಶುಕ್ರ ರಾತ್ರಿ 9:30ಕ್ಕೆ ಪ್ರಸಾರ ಎಂಬ ಕ್ಯಾಪ್ಷನ್ನೊಂದಿಗೆ ಪ್ರೋಮೋ ಅನಾವರಣಗೊಂಡಿದೆ. ಇದರಲ್ಲಿ ಸ್ಪರ್ಧಿಗಳ ನಡುವೆ ಗಲಾಟೆ ಆಗಿರೋದನ್ನು ಕಾಣಬಹುದು. ಹೆಚ್ಚಾಗಿ ಗಲಾಟೆ ಮಾಡದ ಹನುಮಂತು ಮತ್ತು ಧನರಾಜ್ ಕೂಡಾ ಆಕ್ರೋಶಗೊಂಡಿದ್ದಾರೆ. ಸ್ಪರ್ಧಿಗಳ ವರ್ತನೆಗೆ ಬಿಗ್ ಬಾಸ್ ಕೆರಳಿದ್ದು, ಆಟವನ್ನೇ ರದ್ದುಗೊಳಿಸಿದ್ದಾರೆ. ಮುಂದಿನ ಪರಿಣಾಮ ಏನು ಎಂಬ ಭಯದಲ್ಲಿ ಸ್ಪರ್ಧಿಗಳಿದ್ದಾರೆ.
ಇದನ್ನೂ ಓದಿ: ಸಂಜೆ ಅಮೆರಿಕಕ್ಕೆ ತೆರಳಲಿರುವ ನಟ ಶಿವರಾಜ್ಕುಮಾರ್: ಡಿ.24ಕ್ಕೆ ಸರ್ಜರಿ
ಟಿವಿ ಮೇಲೆ ಬರುವ ಪದವನ್ನು ನೋಡಿ, ದಿಂಬು (ಪಿಲ್ಲೋ) ಹುಡುಕಬೇಕು. ಆ ದಿಂಬನ್ನು ತರಬೇಕು ಎಂದು ಬಿಗ್ ಬಾಸ್ ಟಾಸ್ಕ್ ನೀಡಿದ್ದಾರೆ. ಚೈತ್ರಾ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಚೈತ್ರಾ ಸ್ಪರ್ಧಿಗಳ ತಪ್ಪುಗಳನ್ನು ತಿಳಿಸುತ್ತಿದ್ದಂತೆ ಮಾತಿಗೆ ಮಾತು ಬೆಳೆದಿದೆ. ಚೈತ್ರಾ ಮತ್ತು ಹನುಮಂತು ನಡುವೆ ಗಲಾಟೆ ಆಗಿದೆ. ಚೈತ್ರಾ ಜಾಗದಲ್ಲಿ ಗಂಡುಮಕ್ಕಳಿದ್ದಿದ್ರೆ ಕಥೆಯೇ ಬೇರೆ ಆಗುತ್ತಿತ್ತು ಎಂದು ತಿಳಿಸಿದ್ದಾರೆ. ಜೊತೆಗೆ ಧನರಾಜ್ ಅವರೊಂದಿಗೂ ದೊಡ್ಡ ಗಲಾಟೆ ಆಗಿದೆ. ಸ್ಪರ್ಧಿಗಳ ವರ್ತನೆಗೆ ಕೆರಳಿದ ಬಿಗ್ ಬಾಸ್ ಟಾಸ್ಕ್ ಅನ್ನೇ ರದ್ದುಗೊಳಿಸಿದ್ದಾರೆ. ಜೊತೆಗೆ, ಇದಕ್ಕೆ ಪರಿಣಾಮವಾಗಿ.. ಎಂದು ಬಿಗ್ ಬಾಸ್ ಏನೋ ಮಹತ್ವದ ನಿರ್ಧಾರ ಕೈಗೊಂಡಂತಿದೆ.
ಇದನ್ನೂ ಓದಿ: 'ಶ್..ಅಂದಿನಿಂದಲೂ ನನಗೆ ಉಪೇಂದ್ರ ಅಂದ್ರೆ ವಿಶೇಷ ಪ್ರೀತಿ': ಶಿವರಾಜ್ಕುಮಾರ್
ಆಟ ಬದಲಾಗುತ್ತಿದ್ದು, ಆಡುಗರ ವರ್ತನೆ ಕೂಡಾ ಬದಲಾಗುತ್ತಿದೆ. ಎಲ್ಲರಿಗೂ ಗೆಲ್ಲಬೇಕೆಂಬ ಹಠ ಜೋರಾಗೇ ಇದೆ. ಇತ್ತೀಚಿನ ದಿನಗಳಲ್ಲಿ ರಜತ್ ಅವರು ಹೆಚ್ಚಾಗಿ ತಮ್ಮ ದನಿ ಏರಿಸುತ್ತಿದ್ದಾರೆ. ಹಾಗಾಗಿ ರಜತ್ ಜೊತೆಗಿನ ಗಲಾಟೆ ಕೂಡಾ ಹೆಚ್ಚೇ ಎನ್ನಬಹುದು. ಕಳೆದ ದಿನ, ಅವರನ್ನು ನಾಮಿನೇಟ್ ಮಾಡಿರುವ ತ್ರಿವಿಕ್ರಮ್ ಅವರ ತಂಡ, ರಜತ್ ಎಲ್ಲರಿಗೂ ಇಂಡಿವಿಶ್ಯುವಲ್ ಆಗಿ ಆಡಿ ಎಂದು ಪ್ರವೋಕ್ ಮಾಡುತ್ತಿದ್ದಾರೆ. ಅವರನ್ನು ಸುಪೀರಿಯರ್ ಅಂದುಕೊಂಡಿದ್ದಾರೆ ಎಂದು ಕಾರಣಗಳನ್ನು ನೀಡಿದ್ದರು. ಈ ಬಗ್ಗೆ ಪ್ರತಿಕ್ರಿಯೆ ಕೊಟ್ಟಿರುವ ರಜತ್, ಇಂಡಿವಿಶ್ಯುವಲ್ ಆಗಿ ಆಡೋಕೆ ತಾಕತ್ ಇಲ್ವಾ?. ನಾನ್ ಸುಪೀರಿಯರೇ, ನಾನ್ ಖರಾಬೇ, ನಾನ್ ಮಸ್ತೇ. ನಾಮಿನೇಷನ್ ಮಾಡಿ ಬಿಟ್ರೆ ಬದಲಾಗಿ ಬಿಡ್ತೀನಾ ನಾನು. ನಾನಿರೋದೇ ಹೀಗೆ ಎಂದಿದ್ದರು. ಅಲ್ಲದೇ ಗೌತಮಿ, ಮಂಜು, ಧನರಾಜ್ ಮತ್ತು ಚೈತ್ರಾ ಬಳಿ ಕೂಡಾ ಗಲಾಟೆ ನಡೆದಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.