ETV Bharat / entertainment

ಬಿಗ್​ ಬಾಸ್​ ಫಿನಾಲೆ ಮೆರುಗು ಹೆಚ್ಚಿಸಿದ ಮಾಜಿ ಸ್ಪರ್ಧಿಗಳು: ಮಿನುಗುವ ವೇದಿಕೆಯಲ್ಲಿ ಭರ್ಜರಿ ಪರ್ಫಾಮೆನ್ಸ್ - ಬಿಗ್​ ಬಾಸ್​ ಫಿನಾಲೆ

''ಈ ದಿನವೇ ಸುದಿನ!'' ಎಂಬ ಶೀರ್ಷಿಕೆಯಡಿ ಬಿಗ್​ ಬಾಸ್​ ಪ್ರೋಮೋ ಅನಾವರಣಗೊಂಡಿದೆ.

Bigg boss Finale
ಬಿಗ್​ ಬಾಸ್​ ಫಿನಾಲೆ
author img

By ETV Bharat Karnataka Team

Published : Jan 27, 2024, 8:50 AM IST

Updated : Jan 27, 2024, 1:07 PM IST

ಕನ್ನಡದ ಅತ್ಯಂತ ಜನಪ್ರಿಯ ಕಾರ್ಯಕ್ರಮ ಬಿಗ್​ ಬಾಸ್​ ಸೀಸನ್​ 10 ಅಂತಿಮ ಘಟ್ಟದಲ್ಲಿದೆ. ಬಹುನಿರೀಕ್ಷಿತ ಫಿನಾಲೆಗೆ ಕ್ಷಣಗಣನೆ ಶುರುವಾಗಿದೆ. ಹೆಚ್ಚಿನ ಸಂಖ್ಯೆಯ ಪ್ರೇಕ್ಷಕರನ್ನು ಸಂಪಾದಿಸಿರುವ ಈ ಕಿರುತೆರೆ ಕಾರ್ಯಕ್ರಮದ ವಿಜೇತರು ಯಾರೆಂಬುದು ಇನ್ನೇನು ಕೆಲವೇ ಕ್ಷಣಗಳಲ್ಲಿ ಗೊತ್ತಾಗಲಿದೆ. ಈ ಕ್ಷಣಕ್ಕಾಗಿ ಅಭಿಮಾನಿಗಳು ಕಾತುರರಾಗಿದ್ದಾರೆ.

ಬಿಗ್​ ಬಾಸ್ ಪ್ರೋಮೋ​: ''ಈ ದಿನವೇ ಸುದಿನ!'' ಎಂಬ ಶೀರ್ಷಿಕೆಯಡಿ ಕಲರ್ಸ್ ಕನ್ನಡ ಪ್ರೋಮೋ ಅನಾವರಣಗೊಳಿಸಿದೆ. ಮಾಜಿ ಸ್ಪರ್ಧಿಗಳು ಕುಣಿದು ಕುಪ್ಪಳಿಸಿದ್ದಾರೆ. ಮಿನುಗುವ ವೇದಿಕೆಯಲ್ಲಿ ಭರ್ಜರಿ ಪರ್ಫಾಮೆನ್ಸ್ ಕೊಟ್ಟಿದ್ದು, ಫಿನಾಲೆ ವೀಕ್ಷಿಸುವ ಪ್ರೇಕ್ಷಕರ ಕುತೂಹಲ ಮತ್ತಷ್ಟು ಹೆಚ್ಚಳಗೊಂಡಿದೆ.

ಶನಿವಾರ - ಭಾನುವಾರ ಫಿನಾಲೆ ಸಂಚಿಕೆಗಳು ಪ್ರಸಾರ: ಅಭಿನಯ ಚಕ್ರವರ್ತಿ ಸುದೀಪ್​ ನಿರೂಪಣೆಯಲ್ಲಿ ಮೂಡಿಬರುವ 'ಬಿಗ್​ ಬಾಸ್' ಈವರೆಗೆ 9 ಸೀಸನ್​ಗಳನ್ನು ಯಶಸ್ವಿಯಾಗಿ ಪೂರೈಸಿದೆ. ಮೊದಲ ಸೀಸನ್​ನಿಂದಲೂ ಕಿಚ್ಚ ಸುದೀಪ್​ ಅವರೇ ಸಾರಥ್ಯ ವಹಿಸಿದ್ದಾರೆ. ಇದೀಗ 10ನೇ ಸೀಸನ್​ ಕೂಡ ಯಶಸ್ವಿಯಾಗಿ ಪೂರ್ಣಗೊಳ್ಳುವ ಕ್ಷಣದಲ್ಲಿದೆ. ಇಂದು ಮತ್ತು ನಾಳೆ ಸಂಜೆ 7:30ಕ್ಕೆ ಫಿನಾಲೆ ಸಂಚಿಕೆಗಳು ಪ್ರಸಾರವಾಗಲಿವೆ. ಅದ್ಧೂರಿಯಾಗಿ ಫಿನಾಲೆ ನಡೆದಿದ್ದು, ಸಂಪೂರ್ಣ ಸಂಚಿಕೆ ವೀಕ್ಷಿಸಲು ಅಭಿಮಾನಿಗಳು ಕಾತುರರಾಗಿದ್ದಾರೆ.​

ಇದನ್ನೂ ಓದಿ: ಬಿಗ್​ ಬಾಸ್ ಫಿನಾಲೆಗೆ ಕ್ಷಣಗಣನೆ: ಗೆಲುವಿನ ನಗೆ ಬೀರೋರು ಯಾರು?

2023ರ ಕೊನೆಯಲ್ಲಿ ಕನ್ನಡ ಬಿಗ್​ ಬಾಸ್​ ಸೀಸನ್​ 10 ಪ್ರಾರಂಭವಾಯಿತು. ಒಟ್ಟು 19 ಸ್ಪರ್ಧಿಗಳು ಮನೆಯೊಳಗೆ ಎಂಟ್ರಿ ಕೊಟ್ಟಿದ್ದರು. 16 ವಾರಗಳ ಕಾರ್ಯಕ್ರಮ ಪ್ರಸಾರ ಆಗಿದೆ. ಶನಿವಾರ ಮತ್ತು ಭಾನುವಾರ ಫಿನಾಲೆ ಸಂಚಿಕೆಗಳು ಪ್ರಸಾರವಾಗಲಿವೆ. ಒಟ್ಟು ಆರು ಜನ ಸ್ಪರ್ಧಿಗಳು ಫೈನಲಿಸ್ಟ್​​ಗಳಾಗಿ ಹೊರಹೊಮ್ಮಿದ್ದಾರೆ. ಕಳೆದ ವಾರ ತನಿಷಾ, ನಮ್ರತಾ ಇಬ್ಬರು ಎಲಿಮಿನೇಟ್​ ಆಗುವ ಮೂಲಕ 6 ಮಂದಿ ಫಿನಾಲೆ ಪ್ರವೇಶಿಸಿದ್ದರು.

ಇದನ್ನೂ ಓದಿ: 'ಬಿಗ್​​ ಬಾಸ್​ ಗೆಲ್ಲೋರು ಯಾರು'? ಎಲಿಮಿನೇಟ್ ಆದ ಸ್ಪರ್ಧಿಗಳು ಏನಂತಾರೆ!

ಫೈನಲಿಸ್ಟ್​​ಗಳು: ಫಿನಾಲೆ ವಾರಕ್ಕೆ ಎಂಟ್ರಿ ಪಡೆದಿರುವ ಸ್ಪರ್ಧಿಗಳೆಂದರೆ ಸಂಗೀತಾ, ವಿನಯ್, ವರ್ತೂರ್ ಸಂತೋಷ್, ಪ್ರತಾಪ್​​, ಕಾರ್ತಿಕ್​​, ತುಕಾಲಿ ಸಂತೋಷ್​. ಈ ಎಲ್ಲರೂ ಪ್ರಬಲ ಸ್ಪರ್ಧಿಗಳೇ. ಪ್ರತಿಯೋರ್ವರು ತಮ್ಮದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಪ್ರತೀ ಸ್ಪರ್ಧಿಗಳ ಅಭಿಮಾನಿಗಳು ತಮ್ಮ ಮೆಚ್ಚಿನ ಸ್ಪರ್ಧಿ ಗೆಲ್ಲಲಿ ಎಂದು ಶುಭ ಹಾರೈಸುತ್ತಿದ್ದಾರೆ. ಯಾರು ಗೆಲ್ಲಬಹುದು ಎಂಬ ಚರ್ಚೆ ಸೋಷಿಯಲ್​ ಮೀಡಿಯಾದಲ್ಲಿ ಜೋರಾಗೇ ನಡೆಯುತ್ತಿದೆ. ಅಭಿಮಾನಿಗಳು ತಮ್ಮ ಅಚ್ಚುಮೆಚ್ಚಿನ ಸ್ಪರ್ಧಿಗಳ ಪರವಾಗಿ ಬ್ಯಾಟಿಂಗ್​​ ಮಾಡುತ್ತಿದ್ದಾರೆ. ಎಲ್ಲಾ ಕುತೂಹಲಗಳಿಗೂ ನಾಳೆ ಸಂಜೆ ತೆರೆಬೀಳಲಿದೆ. ನಿರೂಪಕ ಸುದೀಪ್​ ಅವರು ಓರ್ವ ಸ್ಪರ್ಧಿಯ ಕೈಯನ್ನು ಮೇಲೆತ್ತುವ ಮೂಲಕ ವಿಜೇತರ ಹೆಸರು ಘೋಷಿಸಲಿದ್ದಾರೆ.

Last Updated : Jan 27, 2024, 1:07 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.