ETV Bharat / entertainment

ಮಗ ಜನಿಸಿದ ಬಳಿಕ ಮೊದಲ ಬಾರಿ ಕ್ರಿಕೆಟ್‌ ಸ್ಟೇಡಿಯಂಗೆ ಬಂದ ಅನುಷ್ಕಾ: ವಿರುಷ್ಕಾ ಕ್ಷಣಗಳು - Anushka Sharma - ANUSHKA SHARMA

ನಟಿ, ವಿರಾಟ್​ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ, ಮಗ ಅಕಾಯ್ ಕೊಹ್ಲಿ ಹುಟ್ಟಿದ ನಂತರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.

Virat and Anushka
ವಿರಾಟ್ ಕೊಹ್ಲಿ ಅನುಷ್ಕಾ ಶರ್ಮಾ (ANI image)
author img

By ETV Bharat Karnataka Team

Published : May 5, 2024, 1:57 PM IST

ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಹಿಂದಿ ಅಭಿನೇತ್ರಿ ಅನುಷ್ಕಾ ಶರ್ಮಾ ದಂಪತಿ ಫೆಬ್ರವರಿ 15ರಂದು ಎರಡನೇ ಮಗುವಿಗೆ ಪೋಷಕರಾಗಿದ್ದಾರೆ. ಮಗ ಅಕಾಯ್ ಕೊಹ್ಲಿ ಜನಿಸಿದ ನಂತರ, ಬಾಲಿವುಡ್​ ನಟಿ ಮೊದಲ ಬಾರಿಗೆ ಬೆಂಗಳೂರಿನ ಕ್ರಿಕೆಟ್ ಸ್ಟೇಡಿಯಂನಲ್ಲಿ ಸಾರ್ವಜನಿಕವಾಗಿ ಕಾಣಿಸಿಕೊಂಡರು. ನಿನ್ನೆ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ರೋಚಕ ಐಪಿಎಲ್​​ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಿದ ವಿರಾಟ್​ ಕೊಹ್ಲಿ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರನ್ನು ಹುರಿದುಂಬಿಸಿದರು.

ಅನುಷ್ಕಾ ಅವರ ಉತ್ಸಾಹಭರಿತ ಫೋಟೋ, ವಿಡಿಯೋಗಳು ವಿವಿಧ ಸೋಷಿಯಲ್​ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಶರವೇಗದಲ್ಲಿ ವೈರಲ್ ಆಗಿವೆ. ಐಪಿಎಲ್​​ ಮ್ಯಾಚ್​ ಸಂದರ್ಭ ಅನುಷ್ಕಾರನ್ನು ಮಿಸ್​ ಮಾಡಿಕೊಂಡಿದ್ದ ಫ್ಯಾನ್ಸ್​​​ ಫುಲ್​ ಖುಷ್​​ ಆಗಿದ್ದಾರೆ. ಪ್ರಪಂಚದಾದ್ಯಂತ ಇರುವ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿ, ಮೆಚ್ಚುಗೆ ಸೂಚಿಸಿದ್ದಾರೆ.

ಸ್ಟ್ಯಾಂಡ್‌ನಲ್ಲಿದ್ದ ನಟಿಯ ನಡೆ ಐಪಿಎಲ್ ಪಂದ್ಯದ ಉತ್ಸಾಹವನ್ನು ಹೆಚ್ಚಿಸಿತ್ತು. ಅವರ ಪ್ರತಿಕ್ರಿಯೆಗಳು, ವಿಶೇಷವಾಗಿ ವಿರಾಟ್ ಸಿಕ್ಸರ್‌ ಬಾರಿಸಿದಾಗ, ರನ್ ಔಟ್‌ನಿಂದ ಪಾರಾದಾಗಿನ ಕ್ಷಣಗಳು ವ್ಯಾಪಕವಾಗಿ ವೈರಲ್ ಆಗಿದೆ. ಇಬ್ಬರೂ ಪ್ರಪಂಚದಾದ್ಯಂತ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆಯ ಮ್ಯಾಚ್​ ಹೆಚ್ಚು ವಿಶೇಷವಾಗಿತ್ತು.

ಕಳೆದೆರಡು ದಿನಗಳ ಹಿಂದಷ್ಟೇ ಅನುಷ್ಕಾ ಬರ್ತ್​ಡೇ ಸೆಲೆಬ್ರೇಶನ್​ ಫೋಟೋಗಳು ವೈರಲ್​ ಆಗಿದ್ದವು. ಫೋಟೋ ಸಿಕ್ಕಿತಾದರೂ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದು ಇದೇ ಮೊದಲು.

ಇದನ್ನೂ ಓದಿ: ಬೆಂಗಳೂರಿನಲ್ಲಿ ಅನುಷ್ಕಾ ಶರ್ಮಾ ಬರ್ತ್​​ಡೇ: ಫೋಟೋ ಹಂಚಿಕೊಂಡ ಕೊಹ್ಲಿ - Anushka Birthday Celebration

ನಟಿ ಮೇ.1 ರಂದು 36ನೇ ಜನ್ಮದಿನ ಆಚರಿಸಿಕೊಂಡರು. ಪತಿ, ಸ್ಟಾರ್ ಕ್ರಿಕೆಟರ್​​ ವಿರಾಟ್ ಕೊಹ್ಲಿ ಮತ್ತು ಅವರ ಆರ್​ಸಿಬಿ ತಂಡದ ಸಹೋದ್ಯೋಗಿಗಳೊಂದಿಗೆ ಡಿನ್ನರ್​​ ಪಾರ್ಟಿಯಲ್ಲಿ ಭಾಗಿಯಾದರು. ಬೆಂಗಳೂರಿನಲ್ಲೇ ಜನ್ಮದಿನ ಆಚರಿಸಿಕೊಂಡಿದ್ದಾರೆ ಎಂಬುದು ಮತ್ತೊಂದು ವಿಶೇಷ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರ ಫಾಫ್ ಡು ಪ್ಲೆಸಿಸ್ ಪಾರ್ಟಿಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಅನುಷ್ಕಾ-ವಿರಾಟ್​ ಕೂಡ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿನಲ್ಲಿ ಒಂದೆರಡು ಚಿತ್ರಗಳನ್ನು ಹಂಚಿಕೊಂಡಿದ್ದರು. ಇದು ಆತ್ಮೀಯರೊಂದಿಗೆ ಆಚರಿಸಿಕೊಂಡ ಖಾಸಗಿ ಕಾರ್ಯಕ್ರಮವಾಗಿತ್ತು.

ಇದನ್ನೂ ಓದಿ: 'ನೀ ನನ್ನ ಜಗದ ಬೆಳಕು': ಮುದ್ದಿನ ಮಡದಿ ಅನುಷ್ಕಾ ಬರ್ತ್​ಡೇಗೆ ವಿರಾಟ್​​ ಸ್ಪೆಷಲ್​ ವಿಶ್​​ - Anushka Sharma Birthday

ವಿರುಷ್ಕಾ ಪ್ರೇಮ್​ಕಹಾನಿ 2013ರಲ್ಲಿ ಶಾಂಪೂ ಜಾಹೀರಾತಿನ ಸಂದರ್ಭದಲ್ಲಿ ಆರಂಭವಾಯಿತು. 2017ರಲ್ಲಿ ಹಸೆಮಣೆ ಏರಿದರು. 2021ರಲ್ಲಿ ಪುತ್ರಿ ವಾಮಿಕಾ ಜನಿಸಿದರೆ, ಈ ವರ್ಷಾರಂಭದಲ್ಲಿ ಮಗ ಅಕಾಯ್​ ಜನಿಸಿದ್ದಾನೆ. 2018ರ ಡಿಸೆಂಬರ್​ನಲ್ಲಿ ಬಿಡುಗಡೆಯಾದ ಝೀರೋ ಸಿನಿಮಾದಲ್ಲಿ ಅನುಷ್ಕಾ ಕೊನೆಯದಾಗಿ ಕಾಣಿಸಿಕೊಂಡರು. ಮುಂದಿನ ಚಿತ್ರ ಚಕ್ಡಾ ಎಕ್ಸ್ಪ್ರೆಸ್ ಬಿಡುಗಡೆಗೆ ಸಿದ್ಧತೆ ನಡೆಸುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.