ETV Bharat / entertainment

ಅನಿಲ್ ಅಂತ್ಯಸಂಸ್ಕಾರ: ಮಲೈಕಾ ಫ್ಯಾಮಿಲಿ, ಎರಡನೇ ಪತ್ನಿಯೊಂದಿಗೆ ಅರ್ಬಾಜ್ ಖಾನ್ ಅಂತ್ಯಕ್ರಿಯೆಯಲ್ಲಿ​ ಭಾಗಿ - Anil Last Rites - ANIL LAST RITES

ಅನಿಲ್ ಕುಲದೀಪ್​​​ ಮೆಹ್ತಾ ಅವರ ಅಂತಿಮ ಸಂಸ್ಕಾರಕ್ಕೆ ಸಾಂತಾಕ್ರೂಜ್‌ನಲ್ಲಿರುವ ಹಿಂದೂ ಸ್ಮಶಾನಕ್ಕೆ ಕುಟುಂಬ ತಲುಪಿದೆ. ಮಲೈಕಾ, ತಾಯಿ ಜಾಯ್ಸ್, ಸಹೋದರಿ ಅಮೃತಾ, ಮಗ ಅರ್ಹಾನ್ ಖಾನ್, ಮಾಜಿ ಪತಿ ಅರ್ಬಾಜ್ ಖಾನ್ ಮತ್ತು ಅವರ ಎರಡನೇ ಪತ್ನಿ ಶುರಾ ಕಾಣಿಸಿಕೊಂಡರು. ಗೆಳೆಯ ಅರ್ಜುನ್​ ಕಪೂರ್​ ಕೂಡಾ ಉಪಸ್ಥಿತರಿದ್ದರು.

Malaika Arora Family
ಮಲೈಕಾ ಅರೋರಾ ಕುಟುಂಬ (Photo: ANI)
author img

By ETV Bharat Karnataka Team

Published : Sep 12, 2024, 12:42 PM IST

ಮುಂಬೈ (ಮಹಾರಾಷ್ಟ್ರ): ಬಾಲಿವುಡ್​ ನಟಿ, ನೃತ್ಯಗಾರ್ತಿ, ರೂಪದರ್ಶಿ ಮಲೈಕಾ ಅರೋರಾ ಅವರ ತಂದೆ ಅನಿಲ್ ಕುಲ್​​ದೀಪ್​​​ ಮೆಹ್ತಾ (ಮಲತಂದೆ ಎಂದು ಹೇಳಲಾಗಿದೆ) ಮುಂಬೈನಲ್ಲಿ ಬುಧವಾರ ಮುಂಜಾನೆ ಮೃತಪಟ್ಟಿದ್ದಾರೆ. ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಸದ್ಯ ಮುಂಬೈನಲ್ಲಿ ಅನಿಲ್ ಅವರ ಅಂತಿಮ ಸಂಸ್ಕಾರ ನಡೆಯುತ್ತಿದೆ. ಮಲೈಕಾ ಅವರು ತಾಯಿ ಜಾಯ್ಸ್, ಸಹೋದರಿ ಅಮೃತಾ ಮತ್ತು ಮಗ ಅರ್ಹಾನ್ ಖಾನ್ ಅವರೊಂದಿಗೆ ಸಾಂತಾಕ್ರೂಜ್‌ನಲ್ಲಿರುವ ಹಿಂದೂ ಸ್ಮಶಾನಕ್ಕೆ ತಲುಪಿದ್ದಾರೆ.

ಮಲೈಕಾ ಅರೋರಾ ಕುಟುಂಬ (Video: ANI)

ಮಲೈಕಾ ಅರೋರಾ ಅವರ ಮಾಜಿ ಪತಿ ಅರ್ಬಾಜ್ ಖಾನ್ ಅಂತಿಮ ವಿಧಿವಿಧಾನಗಳಲ್ಲೂ ಭಾಗಿಯಾಗಲು ಆಗಮಿಸಿದ್ದಾರೆ. ಎರಡನೇ ಪತ್ನಿ ಶುರಾ ಕೂಡಾ ಜೊತೆಗಿದ್ದರು. ವಿಚ್ಛೇದನದ ಬಳಿಕವೂ ಮಲೈಕಾ ಅವರಿಗೆ ಕುಟುಂಬ ಸಾಥ್ ನೀಡಿದ್ದು, ಉತ್ತಮ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ.

ಅನಿಲ್ ನಿಧನದ ಬಗ್ಗೆ ತಿಳಿದ ಅರ್ಬಾಜ್ ಅವರ ತಂದೆ, ಹಿರಿಯ ಚಿತ್ರಕಥೆಗಾರ ಸಲೀಂ ಖಾನ್ ಅವರು ತಮ್ಮ ಪತ್ನಿಯರಾದ ಸಲ್ಮಾ ಖಾನ್ ಮತ್ತು ಹೆಲೆನ್ ಜೊತೆಗೆ ಮಲೈಕಾ ಅವರ ಪೋಷಕರ ಮನೆಗೆ ಭೇಟಿ ನೀಡಿದರು. ಅರ್ಬಾಜ್ ಸಹೋದರ ಸೋಹೈಲ್ ಖಾನ್, ಅಲ್ವಿರಾ ಖಾನ್ ಅಗ್ನಿಹೋತ್ರಿ ಮತ್ತು ಅರ್ಪಿತಾ ಖಾನ್ ಕೂಡ ಉಪಸ್ಥಿತರಿದ್ದರು.

ಮಲೈಕಾ ಅವರ ಗೆಳೆಯ ಅರ್ಜುನ್ ಕಪೂರ್ (ಮಾಜಿ ರೂಮರ್​ ಬಾಯ್​​​ಫ್ರೆಂಡ್​​ ಎನ್ನಲಾಗಿದೆ) ಕೂಡ ನಟಿಯ ಕುಟುಂಬದೊಂದಿಗೆ ಅಂತಿಮ ವಿಧಿ ವಿಧಾನಗಳಲ್ಲಿ ಭಾಗವಹಿಸಿದ್ದರು. ವಿವಿಧ ವಿಡಿಯೋಗಳು ಇಂಟರ್​ನೆಟ್​ನಲ್ಲಿ ವೈರಲ್​ ಆಗಿವೆ. ಮಲೈಕಾ ಅವರ ತಾಯಿ ಕಣ್ಣೀರಲ್ಲಿ ಮುಳುಗಿದ್ದರು. ಅರ್ಹಾನ್ ಖಾನ್​​ ಅಜ್ಜಿ ಮತ್ತು ತಾಯಿಗೆ ಧೈರ್ಯ ತುಂಬುತ್ತಿರುವುದನ್ನು ಕಾಣಬಹುದು.

62ರ ಹರೆಯದ ಅನಿಲ್ ಮೆಹ್ತಾ ಅವರು ಸೆಪ್ಟೆಂಬರ್ 11ರ ಬೆಳಗ್ಗೆ 9 ಗಂಟೆ ಸುಮಾರಿಗೆ ಬಾಂದ್ರಾದ ಅಲ್ಮೇಡಾ ಪಾರ್ಕ್ ಪ್ರದೇಶದ "ಆಯೇಷಾ ಮ್ಯಾನರ್"ನಲ್ಲಿ ತಮ್ಮ ಪ್ರಾಣ ಕಳೆದುಕೊಂಡಿದ್ದಾರೆ. ಇದು ಆತ್ಮಹತ್ಯೆ ಎಂದು ಹೇಳಲಾಗಿದ್ದು, ತನಿಖೆ ಮುಂದುವರಿದಿದೆ. ಆ ಸಮಯದಲ್ಲಿ ಮಲೈಕಾ ಅರೋರಾ ಪುಣೆಯಲ್ಲಿದ್ದರು. ವಿಷಯ ತಿಳಿದ ಕೂಡಲೇ ಪ್ರಯಾಣ ಬೆಳೆಸಿ ಮನೆ ತಲುಪಿದರು. ಅದಕ್ಕೂ ಮುನ್ನ ಮಾಜಿ ಪತಿ ಅರ್ಬಾಜ್​​ ಖಾನ್​ ಮತ್ತು ಅರ್ಜುನ್​ ಕಪೂರ್​​​ ಸ್ಥಳದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ಮಲೈಕಾ ಅರೋರಾ ತಂದೆ ಆತ್ಮಹತ್ಯೆ: ಮಾಜಿ ಪತಿ ಅರ್ಬಾಜ್​ ಕುಟುಂಬ ಸೇರಿ ಸೆಲೆಬ್ರಿಟಿಗಳ ಆಗಮನ - ಪೊಲೀಸರು ಹೇಳಿದ್ದಿಷ್ಟು - Malaika Arora

ಮಲೈಕಾ ಅರೋರಾ, ಅವರ ತಾಯಿ ಜಾಯ್ಸ್ ಮತ್ತು ಸಹೋದರಿ ಅಮೃತಾ ಸೇರಿದಂತೆ ಮೆಹ್ತಾ ಕುಟುಂಬ ಜಂಟಿ ಹೇಳಿಕೆ ಬಿಡುಗಡೆ ಮಾಡಿದ್ದು, ನಿಧನದ ಬಗ್ಗೆ ತಮ್ಮ ಆಘಾತ ಮತ್ತು ದುಃಖ ವ್ಯಕ್ತಪಡಿಸಿದ್ದಾರೆ. "ನಮ್ಮ ಪ್ರೀತಿಯ ತಂದೆ ಅನಿಲ್ ಮೆಹ್ತಾ ಅವರ ನಿಧನವನ್ನು ಘೋಷಿಸಲು ನಾವು ತೀವ್ರ ದುಃಖಿತರಾಗಿದ್ದೇವೆ. ಅವರು ಸೌಮ್ಯ ಆತ್ಮವುಳ್ಳವರಾಗಿದ್ದರು. ಪ್ರೀತಿಯ ಅಜ್ಜ, ಪತಿ ಮತ್ತು ಆತ್ಮೀಯ ಸ್ನೇಹಿತರಾಗಿದ್ದರು. ಅವರನ್ನು ಕಳೆದುಕೊಂಡ ನಮ್ಮ ಕುಟುಂಬ ಆಘಾತದಲ್ಲಿದೆ" ಎಂದು ತಿಳಿಸಿದ್ದರು.

ಇದನ್ನೂ ಓದಿ: ಮಲೈಕಾ ಅರೋರಾ ತಂದೆ ಅನಿಲ್ ಆತ್ಮಹತ್ಯೆ: ನಟಿಯ ಮನೆಗೆ ಬಂದ ಮಾಜಿ ಪತಿ ಅರ್ಬಾಜ್ ಖಾನ್ - Malaika Arora Father Suicide

ETV Bharat Logo

Copyright © 2024 Ushodaya Enterprises Pvt. Ltd., All Rights Reserved.