ETV Bharat / entertainment

'ಮೈದಾನ್‌' ವಿಡಿಯೋ ಹಂಚಿಕೊಂಡ ಅಜಯ್ ದೇವ್​​​ಗನ್; ಹೆಚ್ಚಿದ ಸಿನಿಪ್ರಿಯರ ಕುತೂಹಲ - Ajay Devgn

ಅಜಯ್ ದೇವ್​​​ಗನ್ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ 'ಮೈದಾನ್‌' ಶಾರ್ಟ್ ಗ್ಲಿಂಪ್ಸ್ ಹಂಚಿಕೊಂಡಿದ್ದಾರೆ.

Maidaan
ಮೈದಾನ್‌
author img

By ETV Bharat Karnataka Team

Published : Mar 6, 2024, 2:46 PM IST

ಬಾಲಿವುಡ್​ ನಟ ಅಜಯ್ ದೇವ್​​​ಗನ್ ಮುಖ್ಯಭೂಮಿಕೆಯ ಮುಂದಿನ ಬಹುನಿರೀಕ್ಷಿತ ಸಿನಿಮಾ ''ಮೈದಾನ್‌''. ಪ್ರೇಕ್ಷಕರು, ಇದೇ ಸಾಲಿನಲ್ಲಿ ಬಿಡುಗಡೆ ಆಗಲಿರುವ ಈ ಚಿತ್ರದ ಟ್ರೇಲರ್​​​ ನಿರೀಕ್ಷಿಸುತ್ತಿದ್ದಾರೆ. ಹೀಗಿರುವಾಗ ನಾಯಕ ನಟ ಸಿನಿಮಾದ ಸಣ್ಣ ವಿಡಿಯೋವೊಂದನ್ನು ಹಂಚಿಕೊಂಡು ಸಿನಿಪ್ರಿಯರ ಕುತೂಹಲ ಹೆಚ್ಚಿಸಿದ್ದಾರೆ.

ಸೂಪರ್​ ಸ್ಟಾರ್ ಅಜಯ್ ದೇವ್​​​ಗನ್ ತಮ್ಮ ಅಧಿಕೃತ ಇನ್​ಸ್ಟಾಗ್ರಾಮ್​ನಲ್ಲಿ 'ಮೈದಾನ್‌' ಶಾರ್ಟ್ ಗ್ಲಿಂಪ್ಸ್ ಶೇರ್ ಮಾಡಿದ್ದಾರೆ. ಪೋಸ್ಟ್​ಗೆ, "ಮೈದಾನಕ್ಕೆ ಬನ್ನಿ. ಭಾರತೀಯ ಫುಟ್‌ಬಾಲ್‌ನ ಸುವರ್ಣ ಯುಗದ ನೈಜ ಕಥೆಯನ್ನು ಪ್ರಸ್ತುತಪಡಿಸಲು ಸಿದ್ಧರಿದ್ದೇವೆ" ಎಂಬ ಆಕರ್ಷಕ ಕ್ಯಾಪ್ಷನ್​ ಕೊಟ್ಟಿದ್ದಾರೆ.

ಮೈದಾನ್​​ ವಿಡಿಯೋದಲ್ಲೇನಿದೆ? ಮಕ್ಕಳು ಮಳೆಯಲ್ಲಿ, ಬರಿಗಾಲಿನಲ್ಲಿ ಫುಟ್​ಬಾಲ್​​ ಆಡುತ್ತಿರುವ ದೃಶ್ಯದೊಂದಿಗೆ ವಿಡಿಯೋ ಪ್ರಾರಂಭವಾಗುತ್ತದೆ. ಮಕ್ಕಳು ಆಡುತ್ತಾ, ಫುಟ್‌ಬಾಲ್‌ ಅನ್ನು ರೈಲು ಹಳಿಯ ಇನ್ನೊಂದು ಬದಿಗೆ ಸಾಗಿಸಿದ್ದಾರೆ. ಆಗ ನಾಯಕ ನಟ ಅಜಯ್ ದೇವ್​ಗನ್​ ಅವರ ಎಂಟ್ರಿಯಾಗುತ್ತೆ. ನಟ ರೈಲು ಹಳಿಯ ಮತ್ತೊಂದು ಬದಿಯಲ್ಲಿರುತ್ತಾರೆ. ರೈಲು ಸಾಗುವ ಮುನ್ನ ಆ ಫುಟ್‌ಬಾಲ್‌ ಅನ್ನು ಒದ್ದು, ಮಕ್ಕಳಿಗೆ ತಲುಪುವಂತೆ ಮಾಡಿದ ದೃಶ್ಯದೊಂದಿಗೆ ಈ ವಿಡಿಯೋ ಪೂರ್ಣಗೊಳ್ಳುತ್ತದೆ. ಅಜಯ್ ದೇವ್​ಗನ್​ ಫುಟ್​ಬಾಲ್​ ಅನ್ನು ಹ್ಯಾಂಡಲ್​​ ಮಾಡಿದ ರೀತಿ ಬಹಳ ಆಕರ್ಷಕವಾಗಿದ್ದು, ಸಿನಿಮಾ ನೋಡುವ ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ.

'ಮೈದಾನ್' ಶೀರ್ಷಿಕೆಯ ಸ್ಪೋರ್ಟ್ ಡ್ರಾಮಾವನ್ನು ಅಮಿತ್ ರವೀಂದ್ರನಾಥ್ ಶರ್ಮಾ ನಿರ್ದೇಶಿಸಿದ್ದಾರೆ. ಬೋನಿ ಕಪೂರ್ ಮತ್ತು ಜೆಡ್ ಸ್ಟುಡಿಯೋಸ್ ಈ ಚಿತ್ರವನ್ನು ನಿರ್ಮಿಸಿದೆ. ಈ ಚಿತ್ರ ಭಾರತೀಯ ಫುಟ್‌ಬಾಲ್‌ನ ಅತ್ಯುತ್ತಮ ದಿನಗಳನ್ನು ಮೆಲುಕು ಹಾಕಲಿದೆ. ಭಾರತೀಯ ಫುಟ್‌ಬಾಲ್‌ನ ದಿಗ್ಗಜ, ಕೋಚ್ ಸೈಯದ್ ಅಬ್ದುಲ್ ರಹೀಮ್ ಅವರ ಪಾತ್ರವನ್ನು ಅಜಯ್ ದೇವ್​ಗನ್​ ನಿರ್ವಹಿಸಿದ್ದಾರೆ. ಚಿತ್ರದಲ್ಲಿ ಪ್ರಿಯಾಮಣಿ, ಗಜರಾಜ್ ರಾವ್ ಮತ್ತು ಬಂಗಾಳಿ ನಟ ರುದ್ರನೀಲ್ ಘೋಷ್ ಕೂಡ ಪ್ರಮುಖ ಪಾತ್ರಗಳನ್ನು ನಿರ್ವಹಿಸಿದ್ದಾರೆ.

ಇದನ್ನೂ ಓದಿ: 'ಗೂಗ್ಲಿ' ಬೆಡಗಿ ಕೃತಿ ಖರಬಂದ ಮದುವೆ: ಸೋಷಿಲ್​ ಮೀಡಿಯಾದಲ್ಲಿ ಆಮಂತ್ರಣ ಪತ್ರಿಕೆ ವೈರಲ್​​

ಮೈದಾನ್​ ಸಿನಿಮಾದ ಕೆಲಸ 2020ರಲ್ಲೇ ಪ್ರಾರಂಭವಾಗಿತ್ತು. ಆದ್ರೆ ಹಲವು ಕಾರಣಗಳಿಂದ ಸಿನಿಮಾ ವಿಳಂಬವಾಯಿತು. 2024ರ ಈದ್​ ಸಂದರ್ಭ ಸಿನಿಮಾ ತೆರೆಗಪ್ಪಳಿಸಲು ಸಜ್ಜಾಗಿದೆ. ಹಿಂದಿ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ ಸಿನಿಮಾ ಮೂಡಿಬರಲಿದೆ. ಚಿತ್ರ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ 'ಬಡೇ ಮಿಯಾನ್ ಚೋಟೆ ಮಿಯಾನ್' ಜೊತೆ ಬಾಕ್ಸ್​​ ಆಫೀಸ್​ನಲ್ಲಿ ಪೈಪೋಟಿ ನಡೆಸಲಿದೆ.

ಇದನ್ನೂ ಓದಿ: ಜಾಹ್ನವಿ ಜನ್ಮದಿನ: ರಾಮ್​​ ಚರಣ್​ ಜೊತೆ ಹೊಸ ಸಿನಿಮಾ- ಅಧಿಕೃತ ಘೋಷಣೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.