ETV Bharat / entertainment

ಅನಂತ್​ - ರಾಧಿಕಾ ಅರಿಶಿಣ ಶಾಸ್ತ್ರ ಸಮಾರಂಭಕ್ಕೆ ತಾರಾ ಮೆರಗು: ಸಲ್ಮಾನ್​ಖಾನ್​ನಿಂದ ನಿರ್ದೇಶಕ ಆಟ್ಲಿವರೆಗೆ ಹಲವರು ಭಾಗಿ - Ahead of Anant Radhika Wedding - AHEAD OF ANANT RADHIKA WEDDING

ಈ ಸಂಭ್ರಮದಲ್ಲಿ ಬಾಲಿವುಡ್​ ತಾರಾ ಮೆರಗು ಕೂಡ ಕಂಡು ಬಂದಿದೆ. ನಟ ಸಲ್ಮಾನ್​ ಖಾನ್​, ರಣವೀರ್​ ಸಿಂಗ್​, ಜಾನ್ವಿ ಕಪೂರ್, ಸಾರಾ ಆಲಿ ಖಾನ್​, ಅನನ್ಯಾ ಪಾಂಡೆ ಸೇರಿದಂತೆ ಹಲವರು ಹಾಜರಿದ್ದರು.

Ahead of Anant-Radhika Wedding
ಅನಂತ್​- ರಾಧಿಕಾ ಮದುವೆ ಸಂಭ್ರಮ (ಈಟಿವಿ ಭಾರತ್​​)
author img

By ETV Bharat Karnataka Team

Published : Jul 9, 2024, 4:23 PM IST

ಮುಂಬೈ​: ಅನಂತ್​ ಮತ್ತು ರಾಧಿಕಾ ಅದ್ದೂರಿ ವಿವಾಹಕ್ಕೆ ಇನ್ನು ದಿನಗಣನೆ ಶುರುವಾಗಿದೆ. ಈಗಾಗಲೇ ಮದುವೆಯ ಸಂಪ್ರದಾಯ ಆರಂಭವಾಗಿದ್ದು, ಅದರಂತೆ ಸೋಮವಾರ ಅರಿಶಿಣ ಶಾಸ್ತ್ರ ನಡೆಸಲಾಗಿದೆ. ಈ ಸಂಭ್ರಮದಲ್ಲಿ ಬಾಲಿವುಡ್​ ತಾರಾ ಮೆರಗು ಕೂಡ ಕಂಡು ಬಂದಿದೆ. ನಟ ಸಲ್ಮಾನ್​ ಖಾನ್​, ರಣವೀರ್​ ಸಿಂಗ್​, ಜಾನ್ವಿ ಕಪೂರ್, ಸಾರಾ ಆಲಿ ಖಾನ್​, ಅನನ್ಯಾ ಪಾಂಡೆ ಸೇರಿದಂತೆ ಹಲವರು ಹಾಜರಿದ್ದರು.

ಈ ಅರಿಶಿಣ ಶಾಸ್ತ್ರದಲ್ಲಿ ಸಲ್ಮಾನ್​ ಖಾನ್​ರಿಂದ ದಕ್ಷಿಣ ನಿರ್ದೇಶಕ ಆಟ್ಲಿವರೆಗೆ ಅನೇಕ ಸೆಲೆಬ್ರಿಟಿಗಳು ಭಾಗಿಯಾಗಿದ್ದಾರೆ. ನಟ ಸಲ್ಮಾನ್​ ಖಾನ್​ ಕಪ್ಪು ಬಣ್ಣದ ಪಠಾನಿ ಕುರ್ತಾದಲ್ಲಿ ಮೊದಲಿಗೆ ಕಾಣಿಸಿಕೊಂಡರು ಬಳಿಕ ಅವರು ಹಳದಿ ಬಣ್ಣದ ಕುರ್ತಾದಲ್ಲಿ ಮಿಂಚಿದರು. ಇದಕ್ಕೂ ಮುನ್ನ ಪ್ಯಾಪಾರಾಜಿಗಳ ಫೋಟೋಗೆ ಕಂಡು ಬಂದರು. ಸದ್ಯ ನಟ ಸಲ್ಮಾನ್​ ಖಾನ್​ ಎಆರ್​ ಮುರುಗದಾಸ್​ ನಿರ್ದೇಶನ ಸಿಂಕಂದರ್​ ಚಿತ್ರದಲ್ಲಿ ನಟಿಸುತ್ತಿದ್ದಾರೆ.

ನಟ ರಣವೀರ್​ ಸಿಂಗ್​ ಕೂಡ ಅರಿಶಿಣ ಶಾಸ್ತ್ರದಲ್ಲಿ ಭಾಗಿಯಾಗಿದ್ದರು. ಎಂದಿನಂತೆ ಸ್ಟೈಲೀಶ್​ ಅವತಾರದಲ್ಲಿ ಕಂಡ ಅವರು, ಹಳದಿ ಕುರ್ತಾಗೆ ಪಲಾಜೊ ಪ್ಯಾಂಟ್​​ ಧರಿಸಿದ್ದರು. ನಟಿ ಜನ್ವಾ ಕಪೂರ್​ ಕೂಡ ಹಳದಿ ಬಣ್ಣದ ಸೀರೆಯಲ್ಲಿ ಕಂಡರು. ಈ ವೇಳೆ ಅವರು ಆಪ್ತ ಗೆಳೆಯ ಶಿಖರ್​ ಪಹರಿಯ ಮತ್ತು ಅವರ ಸಹೋದರ ವೀರ್​ ಪಹರಿಯ ಕಾಣಿಸಿಕೊಂಡರು. ಜಾನ್ವಿ ಸಮಕಾಲೀನ ನಟಿಯರಾದ ಸಾರಾ ಆಲಿ ಖಾನ್​ ಮತ್ತು ಅನನ್ಯಾ ಪಾಂಡೆ ಕೂಡ ಕಾರ್ಯಕ್ರಮದಲ್ಲಿ ಹಾಜರಾದರು. ನಟಿ ಸಾರಾ ಲೆಹಾಂಗಾದಲ್ಲಿ ಕಂಡರೆ, ನಟಿ ಅನನ್ಯಾ ತಿಳಿ ಗುಲಾಬಿ ಬಣ್ಣದ ಗೌನ್​ ತೊಟ್ಟು ಫೋಟೋಗೆ ಫೋಸ್​​ ನೀಡಿದರು.

ಇವರ ಹೊರತಾಗಿ ನಟಿ ಮಾನುಷಿ ಚಿಲ್ಲರ್​, ರಾಹುಲ್​ ವೈದ್ಯ, ದಿಶಾ ಪರ್ಮಾರ್​, ಒರಿ, ನಿರ್ದೇಶಕ ಆಟ್ಲಿ, ಮುಖೇಶ್​ ಅಂಬಾನಿ ಸಹೋದರ ಅನಿಲ್​ ಅಂಬಾನಿ ಮತ್ತು ಟೀನಾ ಅಂಬಾನಿ ಕೂಡ ಗಮನ ಸೆಳೆದರು. ಇದಕ್ಕೂ ಹಿಂದಿನ ದಿನ ಅನಂತ್ ಅಂಬಾನಿ​ ಮತ್ತು ರಾಧಿಕ ಮರ್ಚೆಂಟ್​​ ಗೃಹ ಶಾಂತಿ ಪೂಜಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ಸಮಾರಂಭದಲ್ಲಿ ಸಂಪ್ರದಾಯಿಕ ಉಡುಗೆಯಲ್ಲಿ ರಾಧಿಕಾ ಕಂಡಿದ್ದರು. ಇವರ ವಿವಾಹ ಜುಲೈ 12 ರಂದು ನಡೆಯಲಿದೆ. ಮುಂಬೈನ ಬಾಂದ್ರಾ ಕುರ್ಲಾ ಕಾಂಪ್ಲೆಕ್ಸ್‌ನಲ್ಲಿರುವ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್ ಇದಕ್ಕೆ ವೇದಿಕೆಯಾಗಲಿದೆ.

ಇದನ್ನೂ ಓದಿ: ಅನಂತ್​ ಅಂಬಾನಿ - ರಾಧಿಕಾ ಮರ್ಚೆಂಟ್​ ಸಂಗೀತ್​ಲ್ಲಿ ಪಾಪ್​ಸ್ಟಾರ್​ ಜಸ್ಟೀನ್​ ಬೀಬರ್​ ಅದ್ಭುತ ಪ್ರದರ್ಶನ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.