ETV Bharat / entertainment

ಐಶ್ವರ್ಯಾ ರೈ ಕೈಗೆ ಗಾಯ: ಮಗಳೊಂದಿಗೆ ಏರ್​​ಪೋರ್ಟ್​​​ನಲ್ಲಿ ಕಾಣಿಸಿಕೊಂಡ ಚೆಲುವೆ - Aishwarya Rai Injured - AISHWARYA RAI INJURED

ಐಶ್ವರ್ಯಾ ರೈ ಬಚ್ಚನ್ ಅವರ ಬಲಗೈಗೆ ಗಾಯವಾಗಿದ್ದು, ವಿಡಿಯೋ ವೈರಲ್​ ಆಗಿದೆ.

Aaradhya, Aishwarya
ಆರಾಧ್ಯ, ಐಶ್ವರ್ಯಾ (ANI)
author img

By ETV Bharat Karnataka Team

Published : May 16, 2024, 8:25 AM IST

ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಆಗಾಗ್ಗೆ ಕಾಣಿಸಿಕೊಳ್ಳುವ ಮಾಜಿ ವಿಶ್ವಸುಂದರಿ ಐಶ್ವರ್ಯಾ ರೈ ಬಚ್ಚನ್ ಬುಧವಾರ ತಡರಾತ್ರಿ ಮಗಳು ಆರಾಧ್ಯ ಜೊತೆ ಮುಂಬೈ ಅಂತಾರಾಷ್ಟ್ರೀಯ ಏರ್​ಪೋರ್ಟ್​​​ನಲ್ಲಿ ಕಾಣಿಸಿಕೊಂಡರು. ನಟಿ ತನ್ನ ಬಲಗೈಗೆ ಆರ್ಮ್ ಸ್ಲಿಂಗ್​ ಧರಿಸಿದ್ದು, ಪಾಪರಾಜಿಗಳು ಶೇರ್ ಮಾಡಿರುವ ವಿಡಿಯೋ ವೈರಲ್​​ ಆಗಿದೆ. ಐಶ್ವರ್ಯಾಗೆ ಏನಾಯ್ತು? ಎಂದು ಅಭಿಮಾನಿಗಳು ಆತಂಕಕ್ಕೊಳಗಾಗಿದ್ದಾರೆ.

ಐಶ್ವರ್ಯಾ ಎಂದಿನಂತೆ ಆಕರ್ಷಕ ಏರ್‌ಪೋರ್ಟ್ ಔಟ್​​ಫಿಟ್ ಧರಿಸಿದ್ದರು. ಬ್ಲ್ಯಾಕ್​​​​ ಪ್ಯಾಂಟ್‌, ಬ್ಲ್ಯೂ ಓವರ್ ಕೋಟ್‌ನಲ್ಲಿ ಕಂಗೊಳಿಸಿದರು. ಆರಾಧ್ಯ ಬಿಳಿ ಸ್ವೆಟ್‌ಶರ್ಟ್ ಮತ್ತು ಬ್ಲ್ಯಾಕ್​​ ಪ್ಯಾಂಟ್​ನಲ್ಲಿ ಮುದ್ದಾಗಿ ಕಾಣುತ್ತಿದ್ದರು. ವಿಮಾನ ನಿಲ್ದಾಣ ಪ್ರವೇಶಿಸುವ ಮುನ್ನ ಐಶ್ವರ್ಯಾ, ಪಾಪರಾಜಿಗಳತ್ತ ಕೈ ಬೀಸಿದ್ದು, ಆರಾಧ್ಯ ಕೂಡ ಬಾಯ್​​ ಮಾಡಿ ಗಮನ ಸೆಳೆದರು.

ಏರ್​ಪೋರ್ಟ್ ವಿಡಿಯೋ ವೈರಲ್​ ಆಗುತ್ತಿದ್ದು, ಅಭಿಮಾನಿಗಳು, ನೆಟ್ಟಿಗರು ಪ್ರತಿಕ್ರಿಯಿಸುತ್ತಿದ್ದಾರೆ. ನಟಿಯ ಕೈ ಗಾಯ ನೋಡಿದ ಅಭಿಮಾನಿಗಳು ಶೀಘ್ರ ಚೇತರಿಕೆಗೆ ಪ್ರಾರ್ಥಿಸಿದ್ದಾರೆ. ಉಳಿದಂತೆ, ತಾಯಿ ಮಗಳ ಸೌಂದರ್ಯ, ಸರಳತೆಯ ಗುಣಗಾನ ನಡೆಯುತ್ತಿದೆ. ಪಾಪರಾಜಿಗಳು ವಿಮಾನ ನಿಲ್ದಾಣದಿಂದ ಶೇರ್ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಜಾಗ ಪಡೆದಿದೆ.

ಐಶ್ವರ್ಯಾ ರೈ ಬಚ್ಚನ್ ಮೊದಲ ಬಾರಿ 2002ರಲ್ಲಿ ಕೇನ್ಸ್ ಫಿಲ್ಮ್ ಫೆಸ್ಟಿವಲ್‌ನಲ್ಲಿ ಪಾಲ್ಗೊಂಡಿದ್ದರು. 1994ರ ಈ ವಿಶ್ವ ಸುಂದರಿ ನೀತಾ ಲುಲ್ಲಾ ವಿನ್ಯಾಸಗೊಳಿಸಿದ ಸೀರೆ ಧರಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದ್ದರು. ಕಳೆದ ವರ್ಷ, ಕೇನ್ಸ್​ ರೆಡ್ ಕಾರ್ಪೆಟ್‌ನಲ್ಲಿ ಗೌನ್‌ ಧರಿಸಿ ಅದ್ಭುತ ನಗು ಬೀರಿದ್ದರು. ಪ್ರತೀ ಬಾರಿಯೂ ಅತ್ಯದ್ಭುತ ಸೌಂದರ್ಯದ ಮೂಲಕ ಎಲ್ಲರ ಹೃದಯ ಗೆಲ್ಲುವಲ್ಲಿ ಯಶಸ್ವಿಯಾಗುತ್ತಿದ್ದಾರೆ. ಹಾಗಾಗಿ ಈ ಬಾರಿ ನಟಿಯ ನೋಟ ಹೇಗಿರಲಿದೆ ಎಂಬುದು ಅಭಿಮಾನಿಗಳ ಕುತೂಹಲ.

ಇದನ್ನೂ ಓದಿ: ಆಂಧ್ರಪ್ರದೇಶದ ಪ್ರಸಿದ್ಧ ದೇಗುಲಕ್ಕೆ ₹12.5 ಲಕ್ಷ ದೇಣಿಗೆ ನೀಡಿದ ಜೂ.ಎನ್​ಟಿಆರ್​ - Jr NTR

ಊರ್ವಶಿ ರೌಟೇಲಾ ಈಗಾಗಲೇ ಕೇನ್ಸ್​ ಕಾರ್ಪೆಟ್​ ಮೇಲೆ ಹೆಜ್ಜೆ ಹಾಕಿದ್ದಾರೆ. ಇನ್ನುಳಿದಂತೆ ಕಿಯಾರಾ ಅಡ್ವಾಣಿ, ಶೋಭಿತಾ ಧೂಳಿಪಾಲ, ಜಾಕ್ವೆಲಿನ್ ಫರ್ನಾಂಡಿಸ್ ಮತ್ತು ಅದಿತಿ ರಾವ್ ಹೈದರಿ ಸೇರಿದಂತೆ ಅನೇಕ ಬಾಲಿವುಡ್ ಸೆಲೆಬ್ರಿಟಿಗಳು ಈ ವರ್ಷ ವಿಶ್ವ ಪ್ರತಿಷ್ಠಿತ ಚಲನಚಿತ್ರೋತ್ಸವದಲ್ಲಿ ಮನಮೋಹಕ ನೋಟ ಬೀರಲಿದ್ದಾರೆ.

ಇದನ್ನೂ ಓದಿ: ಲೋಕ ಸಮರದಲ್ಲಿ ಕಂಗನಾ ಫುಲ್ ಬ್ಯುಸಿ: 'ಎಮರ್ಜೆನ್ಸಿ' ಬಿಡುಗಡೆ ಮತ್ತೆ ಮುಂದೂಡಿಕೆ - Emergency Movie

ಫ್ರೆಂಚ್ ರಿವೇರಿಯಾದಲ್ಲಿ ನಡೆಯುತ್ತಿರುವ 77ನೇ ಆವೃತ್ತಿಯ ಕೇನ್ಸ್​​ ಚಿತ್ರೋತ್ಸವದಲ್ಲಿ ನಟಿ ಶೋಭಿತಾ ಧೂಳಿಪಾಲ ಕೂಡ ಕಾಣಿಸಿಕೊಳ್ಳಲಿದ್ದು, ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ನಟಿಯ ವಿಡಿಯೋ ವೈರಲ್​​ ಆಗುತ್ತಿದ್ದು, ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಕೇನ್ಸ್ ಫಿಲ್ಮ್ ಫೆಸ್ಟಿವಲ್ ಮಂಗಳವಾರ ಪ್ರಾರಂಭವಾಗಿದ್ದು, ಮೇ. 25ರವರೆಗೆ ನಡೆಯಲಿದೆ. ಭಾರತೀಯ ನಟಿಮಣಿಯರ ನೋಟ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರರಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.