ETV Bharat / entertainment

ಪೊಲೀಸರು ವರದಿ ಕೊಟ್ಟ ಮೇಲೆ ದರ್ಶನ್ ಬ್ಯಾನ್ ವಿಚಾರ ನಿರ್ಧಾರ: ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ - Actor Darshan Arrest Case - ACTOR DARSHAN ARREST CASE

ನಟ ದರ್ಶನ್ ಬಂಧನ ವಿಚಾರವಾಗಿ ಇಂದು ಕರ್ನಾಟಕ ಫಿಲ್ಮ್ ಚೇಂಬರ್ ಸಭೆ ಕರೆದು ಚರ್ಚೆ ನಡೆಸಿತು. ಕಾನೂನಿನಡಿ ಪೊಲೀಸರು ವರದಿ ಕೊಟ್ಟ ಮೇಲೆ ದರ್ಶನ್ ಬ್ಯಾನ್ ವಿಚಾರವಾಗಿ ನಿರ್ಧಾರ ಮಾಡ್ತೀವಿ ಎಂದು ಫಿಲ್ಮ್ ಚೇಂಬರ್ ಅಧ್ಯಕ್ಷರು ತಿಳಿಸಿದರು.

ಫಿಲ್ಮ್ ಚೇಂಬರ್​ನಲ್ಲಿ ಸಭೆ
ಫಿಲ್ಮ್ ಚೇಂಬರ್​ನಲ್ಲಿ ಸಭೆ (ETV Bharat)
author img

By ETV Bharat Karnataka Team

Published : Jun 13, 2024, 6:08 PM IST

Updated : Jun 13, 2024, 8:52 PM IST

ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ (ETV Bharat)

ಬೆಂಗಳೂರು: ಚಿತ್ರದುರ್ಗದ ಯುವಕ ರೇಣುಕಾಸ್ವಾಮಿ ಕೊಲೆ ಆರೋಪದಡಿ ನಟ ದರ್ಶನ್ ಬಂಧನ ವಿಚಾರವಾಗಿ ಇಂದು ಚಿತ್ರರಂಗದ ಅಂಗಸಂಸ್ಥೆಯಾಗಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಲ್ಲಿ ಸಭೆ ನಡೆಯಿತು. ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ನೇತೃತ್ವದಲ್ಲಿ ನಡೆದ ಪದಾಧಿಕಾರಿಗಳ ಈ ಸಭೆಯಲ್ಲಿ ಮಾಜಿ ಫಿಲ್ಮ್ ಚೇಂಬರ್ ಅಧ್ಯಕ್ಷರಾದ ಕೆ.ವಿ.ಚಂದ್ರಶೇಖರ್, ಚಿನ್ನೇಗೌಡ, ಥಾಮಸ್‌ ಡಿಸೋಜಾ, ಸಾ.ರಾ.ಗೋವಿಂದ್ ಹಾಗೂ ಫಿಲ್ಮ್ ಚೇಂಬರ್ ಪದಾಧಿಕಾರಿಗಳಾದ ಜಯಸಿಂಹ ಮುಸುರಿ, ಕರಿಸುಬ್ಬು ಭಾಗಿಯಾಗಿ ಚರ್ಚಿಸಿದರು.

ರೇಣುಕಾಸ್ವಾಮಿ ಕುಟುಂಬಕ್ಕೆ ಧನಸಹಾಯ: ಸಭೆ ಬಳಿಕ ಫಿಲ್ಮ್ ಚೇಂಬರ್ ಅಧ್ಯಕ್ಷ ಎನ್.ಎಂ.ಸುರೇಶ್ ಮಾತನಾಡಿ, "ಕಳೆದ ಎರಡು ದಿನಗಳಿಂದ ಮಾಧ್ಯಮಗಳಲ್ಲಿ ಬರ್ತಿರುವ ಸುದ್ದಿಗಳನ್ನು ನೋಡ್ತಿದ್ದೀವಿ. ಈ ಅನ್ಯಾಯವನ್ನು ಖಂಡಿಸಲೇಬೇಕು. ಹೀಗಾಗಿ ಮೊದಲು ನಾವು ಮೃತ ರೇಣುಕಾಸ್ವಾಮಿ ಮನೆಗೆ ಫಿಲ್ಮ್ ಚೇಂಬರ್ ವತಿಯಿಂದ ಹೋಗಿ ಅವರ ಕಷ್ಟ ಸುಖಗಳನ್ನು ವಿಚಾರಿಸಿ, ಕುಟುಂಬಕ್ಕೆ ಸಾಂತ್ವನದ ಜೊತೆಗೆ ಧನಸಹಾಯ ಮಾಡುವ ಉದ್ದೇಶ ಹೊಂದಿದ್ದೇವೆ" ಎಂದರು.

ಪೊಲೀಸರ ವರದಿ ನಂತರ ಬ್ಯಾನ್‌ ನಿರ್ಧಾರ: "ದರ್ಶನ್ ಒಬ್ಬ ದೊಡ್ಡ ನಟ. ನಾವು ಚಿತ್ರರಂಗದಿಂದ ಬ್ಯಾನ್ ಮಾಡಲು ಬರೋದಿಲ್ಲ. ಸದ್ಯ ಪೊಲೀಸರು ತನಿಖೆ ಮಾಡ್ತಿದ್ದಾರೆ. ಕಾನೂನಿನಡಿ ಪೊಲೀಸರು ವರದಿ ಕೊಟ್ಟ ಮೇಲೆ ನಾವು ಬ್ಯಾನ್ ವಿಚಾರವಾಗಿ ನಿರ್ಧಾರ ಮಾಡ್ತೀವಿ" ಎಂದು ತಿಳಿಸಿದರು.

"ಇದು ಕೊಲೆ ವಿಚಾರ. ತುಂಬಾ ಸೂಕ್ಷ್ಮವಾಗಿದೆ. ಬ್ಯಾನ್ ವಿಚಾರ ಕುರಿತಾಗಿ ಕಲಾವಿದರ ಸಂಘದಲ್ಲಿ ಎಲ್ಲಾ ಕಲಾವಿದರೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳುತ್ತೇವೆ. 2011ರಲ್ಲಿ ನಾವು ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮೀ ಅವರನ್ನು ಮಾತಾಡಿಸಿ ಸರಿ ಮಾಡಿದ್ವಿ. ಆದರೆ ಈಗ ಹಾಗೆ ಆಗಲ್ಲ. ಇದಕ್ಕೆ ಕಾನೂನಿನ‌ ತೊಡಕಿದೆ" ಎಂದು ಎನ್.ಎಂ.ಸುರೇಶ್ ಪ್ರತಿಕ್ರಿಯಿಸಿದರು.

"ದರ್ಶನ್ ಅಭಿನಯಿಸುತ್ತಿದ್ದ ಚಿತ್ರಗಳಲ್ಲಿ ನಿರ್ಮಾಪಕರು ಕೋಟ್ಯಂತರ ರೂಪಾಯಿ ಹಣ ಹಾಕಿದ್ದಾರೆ. ನಿರ್ಮಾಪಕರ ಆರ್ಥಿಕ ಸ್ಥಿತಿ ನೋಡಬೇಕಾಗುತ್ತದೆ. ಮೊದಲ ಹಂತದ ಶೂಟಿಂಗ್​​ನಲ್ಲಿ ದರ್ಶನ್ ಭಾಗಿಯಾಗಿದ್ದಾರೆ. ಆ ನಿರ್ಮಾಪಕರನ್ನು ಕರೆಸಿ, ಅವರಿಗೆ ಸಾಧ್ಯವಿರುವ ಸಹಾಯ ಮಾಡುತ್ತೇವೆ. ನಾವು ರಾಜಿಯಾಗಿ ಸೇಫ್ ಮಾಡುವ ಪ್ರಮೇಯ ಇಲ್ಲ. ಆಗಿರೋದು ಕೊಲೆ. ಇಲ್ಲಿ ಯಾವುದೇ ಮುಚ್ಚುಮರೆಯಿಲ್ಲ. ಮುಂದಿನ ನಾಲ್ಕೈದು ದಿನಗಳಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುತ್ತೇವೆ" ಎಂದು ತಿಳಿಸಿದರು.

"ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳು ಹುಚ್ಚು ಹುಚ್ಚಾಗಿ ನಡೆದುಕೊಳ್ಳಬಾರದು" ಎಂದು ಇದೇ ವೇಳೆ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ.ಸುರೇಶ್ ಸಲಹೆ ನೀಡಿದರು.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್, ಅವರ ಗೆಳತಿ ಪವಿತ್ರಾ ಗೌಡ ಸೇರಿದಂತೆ 11 ಜನರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ನಟ ದರ್ಶನ್ ಘಟನೆ ಬೆಳವಣಿಗೆ ಫಿಲ್ಮ್ ಚೇಂಬರ್ ಅಧ್ಯಕ್ಷರ ಗಮನದಲ್ಲಿದೆ : ಉಮೇಶ್ ಬಣಕಾರ್ - Umesh Bankar

ದರ್ಶನ್​ ಬಂಧನ: ಅನ್ನಪೂರ್ಣೇಶ್ವರಿ ನಗರ ಠಾಣೆಯ 200 ಮೀಟರ್​ ವ್ಯಾಪ್ತಿಯಲ್ಲಿ 144 ಸೆಕ್ಷನ್ ಜಾರಿ - Section 144 enforced

Last Updated : Jun 13, 2024, 8:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.