ETV Bharat / education-and-career

ಕೊಂಕಣ್​ ರೈಲ್ವೆ ನೇಮಕಾತಿ: ಸ್ಟೇಷನ್​ ಮಾಸ್ಟರ್​ ಸೇರಿದಂತೆ ಹಲವು ಹುದ್ದೆಗಳು - Konkan Railway Jobs

author img

By ETV Bharat Karnataka Team

Published : Aug 20, 2024, 4:12 PM IST

ಐಟಿಐ, ಪದವಿ ಉತ್ತೀರ್ಣಗೊಂಡಿರುವ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು.

Konkan Railway and HAL Recruitment for Technician post
ಸಾಂದರ್ಭಿಕ ಚಿತ್ರ (ETV Bharat)

ಬೆಂಗಳೂರು: ಕೊಂಕಣ ರೈಲ್ವೆ ಕಾರ್ಪೊರೇಷನ್​ ಲಿಮಿಟೆಡ್​ (ಕೆಆರ್​ಸಿಎಲ್​)ನಿಂದ ಟೆಕ್ನಿಷಿಯನ್​ ಮತ್ತು ಪಾಯಿಂಟ್ಸ್‌ಮ್ಯಾನ್​ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಪ್ರಕಟಿಸಿದೆ. ಒಟ್ಟು 190 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಹುದ್ದೆಗಳ ವಿವರ:

  • ಸೀನಿಯರ್​ ಸೆಕ್ಷನ್​ ಇಂಜಿನಿಯರ್​ - 10
  • ಟೆಕ್ನಿಶಿಯನ್​ -3 - 35
  • ಅಸಿಸ್ಟೆಂಟ್​ ಲೋಕೊ ಪೈಲಟ್​ - 15
  • ಟ್ರಾಕ್​ ಮೈನ್ಟೇನರ್​ -35
  • ಸ್ಟೇಷನ್​ ಮಾಸ್ಟರ್​​ - 10
  • ಗೂಡ್ಸ್​ ಟ್ರೈನ್​ ಮ್ಯಾನೇಜರ್​​ - 5
  • ಪಾಯಿಂಟ್ಸ್​ ಮ್ಯಾನ್​​- 60
  • ಇಎಸ್​ಟಿಎಂ - 3 - 15
  • ಕಮರ್ಷಿಯಲ್​ ಸೂಪರ್​ವೈಸರ್​ -5

ವಿದ್ಯಾರ್ಹತೆ: ಸೀನಿಯರ್​ ಸೆಕ್ಷನ್​ ಇಂಜಿನಿಯರ್​ ಮತ್ತು ಕಮರ್ಷಿಯಲ್​ ಸೂಪರ್​ ವೈಸರ್​, ಸ್ಟೇಷನ್​ ಮಾಸ್ಟರ್​​, ಗೂಡ್ಸ್​ ಟ್ರೈನ್​ ಮ್ಯಾನೇಜರ್​ ಹುದ್ದೆಗಳಿಗೆ ಪದವಿ ಪೂರ್ಣಗೊಳಿಸರಬೇಕು. ಇನ್ನುಳಿದ ಹುದ್ದೆಗಳಿಗೆ ಎಸ್​ಎಸ್​ಎಲ್​ಸಿ, ಐಟಿಐ ಪೂರ್ಣಗೊಳಿಸಿರಬೇಕು.

ವಯೋಮಿತಿ: ಕನಿಷ್ಠ 18, ಗರಿಷ್ಠ 36 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3, ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ 10 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

Konkan Railway and HAL Recruitment for Technician post
ಕೊಂಕಣ್​ ರೈಲ್ವೆ ಅಧಿಸೂಚನೆ (ಕೊಂಕಣ್​ ರೈಲ್ವೆ)

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಎಲ್ಲಾ ಅಭ್ಯರ್ಥಿಗಳಿಗೆ 885 ರೂ ಅರ್ಜಿ ಶುಲ್ಕ ನಿಗದಿಪಡಿಸಲಾಗಿದೆ. ಕಂಪ್ಯೂಟರ್​ ಆಧರಿತ ಪರೀಕ್ಷೆ ಮತ್ತು ಸಂದರ್ಶನ ಮೂಲಕ ಆಯ್ಕೆ ಮಾಡಲಾಗುತ್ತದೆ. ಸೆಪ್ಟೆಂಬರ್​ 16ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಶುರುವಾಗಲಿದ್ದು, ಅರ್ಜಿ ಸಲ್ಲಿಸಲು ಕಡೇಯ ದಿನಾಂಕ ಅಕ್ಟೋಬರ್​ 6. ಈ ಕುರಿತು ಹೆಚ್ಚಿನ ಮಾಹಿತಿಗೆ konkanrailway.com ಭೇಟಿ ನೀಡಿ.

HAL ನಲ್ಲಿ166 ಟೆಕ್ನಿಶಿಯನ್​ ಹುದ್ದೆ: ಬೆಂಗಳೂರಿನ ಹಿಂದೂಸ್ತಾನ್​ ಏರೋನಾಟಿಕ್ಸ್​ ಲಿಮಿಟೆಡ್​ನಲ್ಲಿ 166 ಟೆಕ್ನಿಶಿಯನ್​ ಹುದ್ದೆಗೆ ಅಧಿಸೂಚನೆ ಪ್ರಕಟಿಸಲಾಗಿದೆ. ಡಿಪ್ಲೊಮಾ ಟೆಕ್ನಿಶಿಯನ್​ 43, ಟೆಕ್ನಿಶಿಯನ್​ 123 ಹುದ್ದೆಗಳಿವೆ. ಡಿಪ್ಲೊಮಾ ಟೆಕ್ನಿಶಿಯನ್​ ಹುದ್ದೆಗೆ ಡಿಪ್ಲೊಮಾ ಮತ್ತು ಟೆಕ್ನಿಶಿಯನ್​ ಹುದ್ದೆಗೆ ಐಟಿಐ ಪದವಿ ಹೊಂದಿರಬೇಕು.

ವಯೋಮಿತಿ: ಗರಿಷ್ಟ ವಯೋಮಿತಿ 28 ವರ್ಷ. ಒಬಿಸಿ ಅಭ್ಯರ್ಥಿಗಳಿಗೆ 3 ಮತ್ತು ಪ.ಜಾ, ಪ.ಪಂ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಮಾಡಲಾಗಿದೆ.

ಡಿಪ್ಲೊಮಾ ಟೆಕ್ನಿಶಿಯನ್​ ಹುದ್ದೆಗೆ 46,764 ರೂ ಮತ್ತು ಟೆಕ್ನಿಶಿಯನ್​ ಹುದ್ದೆಗೆ 44,796 ರೂ ಮಾಸಿಕ ವೇತನವಿದೆ.

ಅರ್ಜಿ ಸಲ್ಲಿಕೆ: ಆನ್​ಲೈನ್​ ಮೂಲಕ ಅರ್ಜಿ ಸಲ್ಲಿಸಬಹುದು. ಪ.ಜಾ, ಪ.ಪಂ ಮತ್ತು ವಿಶೇಷಚೇತನ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ಮಾಡಲಾಗಿದೆ. ಇತರೆ ಅಭ್ಯರ್ಥಿಗಳಿಗೆ 200 ರೂ ಅರ್ಜಿ ಶುಲ್ಕವಿದೆ.

ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

ಆಗಸ್ಟ್​ 14ರಿಂದ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಿದ್ದು, ಅರ್ಜಿ ಸಲ್ಲಿಸಲು ಕಡೇಯ ದಿನಾಂಕ ಆಗಸ್ಟ್​ 28.

ಈ ಕುರಿತ ಹೆಚ್ಚಿನ ಮಾಹಿತಿಗೆ ಅಭ್ಯರ್ಥಿಗಳು hal-india.co.in ಭೇಟಿ ನೀಡಬಹುದು.

ಇದನ್ನೂ ಓದಿ: ಪದವಿ ಆದವರಿಗೆ ಇಂಡಿಯನ್​ ಬ್ಯಾಂಕ್​ನಲ್ಲಿದೆ ಉದ್ಯೋಗವಕಾಶ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.