ETV Bharat / business

ಪ್ರವಾಸೋದ್ಯಮ ಕ್ಷೇತ್ರದಲ್ಲಿ ವರ್ಷಾಂತ್ಯಕ್ಕೆ 39 ಮಿಲಿಯನ್ ಉದ್ಯೋಗ ಸೃಷ್ಟಿ: ಎನ್ಎಲ್​ಬಿ ವರದಿ - Jobs in Tourism Sector

author img

By ETV Bharat Karnataka Team

Published : 12 hours ago

ಭಾರತದ ಪ್ರವಾಸೋದ್ಯಮ ಕ್ಷೇತ್ರದಲ್ಲಿ ವರ್ಷಾಂತ್ಯಕ್ಕೆ 39 ಮಿಲಿಯನ್ ಉದ್ಯೋಗಗಳು ಸೃಷ್ಟಿಯಾಗುವ ನಿರೀಕ್ಷೆಯಿದೆ.

ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ (IANS)

ನವದೆಹಲಿ: ಭಾರತದ ಪ್ರವಾಸೋದ್ಯಮ ಕ್ಷೇತ್ರವು ಈ ವರ್ಷದ ಅಂತ್ಯದ ವೇಳೆಗೆ ಸರಿಸುಮಾರು 39.5 ಮಿಲಿಯನ್ ಉದ್ಯೋಗಗಳನ್ನು ಸೃಷ್ಟಿಸಲಿದ್ದು, ಇದು 2025 ರ ವೇಳೆಗೆ 42.3 ಮಿಲಿಯನ್ ಉದ್ಯೋಗಾವಕಾಶಗಳಿಗೆ ಏರಿಕೆಯಾಗುವ ಸಾಧ್ಯತೆಯಿದೆ ಎಂದು ವರದಿಯೊಂದು ಗುರುವಾರ ತೋರಿಸಿದೆ. ಟೂರ್ ಗೈಡ್ಸ್, ಹೋಟೆಲ್ ಸಿಬ್ಬಂದಿ ಮತ್ತು ಟೂರ್ ಆಪರೇಟರ್​ಗಳಂತಹ ಉದ್ಯೋಗಗಳು ಸೇರಿದಂತೆ ಈ ವಲಯಗಳಲ್ಲಿ ಶೇ 31ರಷ್ಟು ನೇರ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ತಂತ್ರಜ್ಞಾನ ಮತ್ತು ಡಿಜಿಟಲ್ ಟ್ಯಾಲೆಂಟ್ ಸಲ್ಯೂಷನ್ಸ್ ಪ್ರೊವೈಡರ್ ಎನ್ಎಲ್​ಬಿ ಸರ್ವೀಸಸ್ ತಿಳಿಸಿದೆ.

ಏತನ್ಮಧ್ಯೆ ಸ್ಥಳೀಯ ಕುಶಲಕರ್ಮಿಗಳು, ಲಾಜಿಸ್ಟಿಕ್ಸ್ ಮತ್ತು ಸಾರಿಗೆ ನಿರ್ವಾಹಕರು, ಪೂರೈಕೆ ಸರಪಳಿ ಕಾರ್ಮಿಕರು, ಆನ್ ಲೈನ್ ಬುಕಿಂಗ್​ಗಾಗಿ ಐಟಿ ಬೆಂಬಲ, ಡೇಟಾ ವಿಶ್ಲೇಷಣೆ ಮತ್ತು ಲ್ಯಾಂಡ್​ಸ್ಕೇಪ್ ನಿರ್ವಹಣೆಯಂತಹ ಕ್ಷೇತ್ರಗಳಲ್ಲಿ ಶೇ 69ರಷ್ಟು ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ ಎಂದು ಎನ್ಎಲ್​ಬಿ ಸರ್ವೀಸಸ್​ನ ಸಿಇಒ ಸಚಿನ್ ಅಲುಗ್ ಹೇಳಿದ್ದಾರೆ.

ಮುಂದಿನ ದಶಕದಲ್ಲಿ ಭಾರತದ ಪ್ರಯಾಣ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಜಿಡಿಪಿ ವಾರ್ಷಿಕವಾಗಿ ಶೇಕಡಾ 7.1 ರ ದರದಲ್ಲಿ ಬೆಳವಣಿಗೆಯಾಗಲಿದೆ ಎಂದು ವಿಶ್ವ ಪ್ರಯಾಣ ಮತ್ತು ಪ್ರವಾಸೋದ್ಯಮ ಮಂಡಳಿ (ಡಬ್ಲ್ಯುಟಿಟಿಸಿ) ಮುನ್ಸೂಚನೆ ನೀಡಿದೆ.

ಪ್ರವಾಸೋದ್ಯಮವು ಆರ್ಥಿಕತೆಯ ಮೇಲೆ ಗಮನಾರ್ಹವಾಗಿ ಪರಿಣಾಮ ಬೀರುತ್ತದೆ. ಈ ವಲಯವು ಜಿಡಿಪಿಗೆ ಸರಿಸುಮಾರು $ 199.6 ಬಿಲಿಯನ್ ಕೊಡುಗೆ ನೀಡುತ್ತಿದೆ. ಕೇಂದ್ರ ಬಜೆಟ್​ನಲ್ಲಿ ಸರ್ಕಾರವು 2025 ರ ಹಣಕಾಸು ವರ್ಷದಲ್ಲಿ ಪ್ರವಾಸೋದ್ಯಮಕ್ಕಾಗಿ 2,479 ಕೋಟಿ ರೂ.ಗಳನ್ನು ನಿಗದಿಪಡಿಸಿದೆ. ಇದು ಈ ಕ್ಷೇತ್ರಕ್ಕೆ ಮತ್ತಷ್ಟು ಉತ್ತೇಜನ ನೀಡಲಿದೆ.

ಅಡುಗೆ ಪ್ರವಾಸೋದ್ಯಮ, ಸಾಹಸ ಮತ್ತು ಸ್ವಾಸ್ಥ್ಯ ಪ್ರವಾಸೋದ್ಯಮ ಹೀಗೆ ಈ ವಲಯದಲ್ಲಿ ಹೊಸ ಟ್ರೆಂಡ್​ಗಳು ಕಂಡು ಬರುತ್ತಿವೆ. ವಾರಾಣಸಿ, ಹೃಷಿಕೇಶ್ ಮತ್ತು ಬೋಧ್ ಗಯಾದಂತಹ ನಗರಗಳಿಗೆ ದೇಶೀಯ ಮತ್ತು ಅಂತಾರಾಷ್ಟ್ರೀಯ ಪ್ರವಾಸಿಗರನ್ನು ಆಕರ್ಷಿಸುವ ಆಧ್ಯಾತ್ಮಿಕ ಪ್ರವಾಸೋದ್ಯಮವು ಬಹಳ ಆಕರ್ಷಣೆ ಪಡೆದುಕೊಳ್ಳುತ್ತಿದೆ.

2020-2021 ರ ವೈದ್ಯಕೀಯ ಪ್ರವಾಸೋದ್ಯಮ ಸೂಚ್ಯಂಕದಲ್ಲಿ (ಎಂಟಿಐ) ಭಾರತವು ಜಾಗತಿಕವಾಗಿ 10 ನೇ ಸ್ಥಾನದಲ್ಲಿದೆ ಮತ್ತು ಮುಂಬರುವ ವರ್ಷಗಳಲ್ಲಿ ಇದು ಇನ್ನೂ ಹೆಚ್ಚಾಗುವ ನಿರೀಕ್ಷೆಯಿದೆ. ಇದು ದಾದಿಯರ ಸಂಖ್ಯೆಯಲ್ಲಿ ಶೇಕಡಾ 12 ರಷ್ಟು, ವೈದ್ಯರು ಶೇಕಡಾ 10 ರಷ್ಟು ಮತ್ತು ಇತರ ಆರೋಗ್ಯ ಸಿಬ್ಬಂದಿಯಲ್ಲಿ ಶೇಕಡಾ 15 ರಷ್ಟು ಹೆಚ್ಚಳಕ್ಕೆ ದಾರಿ ಮಾಡಿಕೊಡಲಿದೆ.

ಇದನ್ನೂ ಓದಿ : ಇವರಿಗೆ ಇರುವುದೇ 10 ಸಾವಿರ ಸಂಬಳ: ಈ ವ್ಯಕ್ತಿಗೀಗ 2 ಕೋಟಿ ರೂ. ಆದಾಯ ತೆರಿಗೆ ನೋಟಿಸ್ - Income Tax Notice

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.