ETV Bharat / business

ಅಲ್ಪ ಏರಿಕೆ ಕಂಡ ಷೇರು ಮಾರುಕಟ್ಟೆ: ಸೆನ್ಸೆಕ್ಸ್ 17 & ನಿಫ್ಟಿ 33 ಅಂಕ ಹೆಚ್ಚಳ - STOCK MARKET - STOCK MARKET

ಸೋಮವಾರದ ವಹಿವಾಟಿನಲ್ಲಿ ಭಾರತದ ಷೇರು ಮಾರುಕಟ್ಟೆಗಳು ಅಲ್ಪ ಏರಿಕೆ ಕಂಡಿವೆ.

Sensex up 17 points Nifty up 33 points
Sensex up 17 points Nifty up 33 points ((image : ians))
author img

By ETV Bharat Karnataka Team

Published : May 6, 2024, 7:17 PM IST

ಮುಂಬೈ: ಆರಂಭಿಕ ವಹಿವಾಟಿನಲ್ಲಿ ಏರಿಕೆಯಲ್ಲಿ ವಹಿವಾಟು ನಡೆಸಿದ ನಂತರ, ಭಾರತೀಯ ಬೆಂಚ್ ಮಾರ್ಕ್ ಸೂಚ್ಯಂಕಗಳು ಲಾಭ ಕಳೆದುಕೊಂಡು ಅಲ್ಪ ಕುಸಿತದೊಂದಿಗೆ ಕೊನೆಗೊಂಡವು. ಸೋಮವಾರದ ವಹಿವಾಟಿನಲ್ಲಿ ಸೆನ್ಸೆಕ್ಸ್ 17.39 ಪಾಯಿಂಟ್ ಅಥವಾ ಶೇಕಡಾ 0.02 ರಷ್ಟು ಏರಿಕೆ ಕಂಡು 73,895.54 ಕ್ಕೆ ತಲುಪಿದ್ದರೆ, ನಿಫ್ಟಿ 33.15 ಪಾಯಿಂಟ್ ಅಥವಾ ಶೇಕಡಾ 0.15 ರಷ್ಟು ಕುಸಿದು 22,442.70 ಕ್ಕೆ ತಲುಪಿದೆ.

ವಲಯ ಸೂಚ್ಯಂಕಗಳ ಪೈಕಿ ಆಟೋ, ಐಟಿ, ಫಾರ್ಮಾ, ಎಫ್ ಎಂಸಿಜಿ, ರಿಯಾಲ್ಟಿ, ಹೆಲ್ತ್ ಕೇರ್ ಏರಿಕೆಯಲ್ಲಿ ಕೊನೆಗೊಂಡರೆ, ಪಿಎಸ್ ಯು ಬ್ಯಾಂಕ್, ಲೋಹ, ಇಂಧನ, ಮಾಧ್ಯಮಗಳು ಇಳಿಕೆಯಲ್ಲಿ ಕೊನೆಗೊಂಡವು. ಬ್ರಿಟಾನಿಯಾ ಷೇರುಗಳು ನಿಫ್ಟಿಯಲ್ಲಿ ಹೆಚ್ಚಿನ ಲಾಭ ಗಳಿಸಿದರೆ, ಟೈಟಾನ್ ಷೇರುಗಳು ನಾಲ್ಕನೇ ತ್ರೈಮಾಸಿಕ ಫಲಿತಾಂಶದ ನಂತರ ಹೆಚ್ಚು ಕುಸಿದವು.

ಆದಾಗ್ಯೂ, ವಿಶಾಲ ಮಾರುಕಟ್ಟೆಗಳು ದುರ್ಬಲ ಪ್ರವೃತ್ತಿಗಳನ್ನು ಪ್ರದರ್ಶಿಸಿದವು. ನಿಫ್ಟಿ ಮಿಡ್ ಕ್ಯಾಪ್ -100 - 300 ಪಾಯಿಂಟ್​ಗಳಷ್ಟು ಕುಸಿದು 50,600 ರ ಗಡಿಯ ಸಮೀಪದಲ್ಲಿ ವಹಿವಾಟು ನಡೆಸಿತು. ನಿಫ್ಟಿ ಸ್ಮಾಲ್ ಕ್ಯಾಪ್-100 ಸಹ ಶೇಕಡಾ 1.50 ರಷ್ಟು ಕುಸಿದು 16,683.15 ಕ್ಕೆ ತಲುಪಿದೆ.

ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್ಐಐ) ಶುಕ್ರವಾರ ಬಂಡವಾಳ ಮಾರುಕಟ್ಟೆಗಳಲ್ಲಿ ನಿವ್ವಳ ಮಾರಾಟಗಾರರಾಗಿ ಮಾರ್ಪಟ್ಟಿದ್ದು, 3,408.88 ಕೋಟಿ ರೂ.ಗಳ ಷೇರುಗಳನ್ನು ಹಿಂತೆಗೆದುಕೊಂಡಿದ್ದಾರೆ ಎಂದು ವಿನಿಮಯ ಕೇಂದ್ರದ ಅಂಕಿ ಅಂಶಗಳು ತಿಳಿಸಿವೆ.

ಡಾಲರ್ ಎದುರು ರೂಪಾಯಿ ಮೌಲ್ಯ 5 ಪೈಸೆ ಕುಸಿತ: ಡಾಲರ್ ಎದುರು ರೂಪಾಯಿ ಮೌಲ್ಯ 5 ಪೈಸೆ ಕುಸಿತ ಕಂಡು 83.43 ಕ್ಕೆ ತಲುಪಿದೆ. ವಿದೇಶದಲ್ಲಿ ಯುಎಸ್ ಕರೆನ್ಸಿಯ ಬಲ ಮತ್ತು ದೇಶೀಯ ಈಕ್ವಿಟಿ ಮಾರುಕಟ್ಟೆಗಳಿಂದ ವಿದೇಶಿ ಹೂಡಿಕೆಗಳನ್ನು ಹಿಂತೆಗೆದುಕೊಳ್ಳುವ ಕಾರಣದಿಂದ ರೂಪಾಯಿ ಕುಸಿತವಾಗಿದೆ.

ಇಂಟರ್ ಬ್ಯಾಂಕ್ ವಿದೇಶಿ ವಿನಿಮಯದಲ್ಲಿ, ಡಾಲರ್ ವಿರುದ್ಧ ರೂಪಾಯಿ 83.39 ಕ್ಕೆ ಪ್ರಾರಂಭವಾಯಿತು ಮತ್ತು ನಂತರ 83.43 ಕ್ಕೆ ಇಳಿಯಿತು. ಇದು ಹಿಂದಿನ ಮುಕ್ತಾಯದ 83.38 ಕ್ಕೆ ಹೋಲಿಸಿದರೆ 5 ಪೈಸೆ ನಷ್ಟವಾಗಿದೆ. ಆರು ಕರೆನ್ಸಿಗಳ ವಿರುದ್ಧ ಡಾಲರ್ ಶಕ್ತಿಯನ್ನು ಅಳೆಯುವ ಡಾಲರ್ ಸೂಚ್ಯಂಕವು ಶೇಕಡಾ 0.05 ರಷ್ಟು ಏರಿಕೆ ಕಂಡು 105.86 ಕ್ಕೆ ತಲುಪಿದೆ. ಏತನ್ಮಧ್ಯೆ, ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕ್ರೂಡ್ ಫ್ಯೂಚರ್ಸ್​ ಶೇಕಡಾ 0.92 ರಷ್ಟು ಕುಸಿತ ಕಂಡಿದ್ದು, ಬ್ಯಾರೆಲ್​ಗೆ 88.68 ಡಾಲರ್​ಗೆ ಇಳಿಕೆಯಾಗಿದೆ.

ಇದನ್ನೂ ಓದಿ: ಈ ವಾರ 340 ಮಿಲಿಯನ್ ಡಾಲರ್​ ಫಂಡಿಂಗ್ ಸಂಗ್ರಹಿಸಿದ 27 ಸ್ಟಾರ್ಟ್​ಅಪ್​ಗಳು - startup funding

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.