ಮುಂಬೈ (ಮಹಾರಾಷ್ಟ್ರ): ನ್ಯಾಶನಲ್ ಸ್ಟಾಕ್ ಎಕ್ಸ್ಚೇಂಜ್ (NSE) ಮೇಲೆ ವಹಿವಾಟು ಮಾಡುವ ಗಿಫ್ಟ್ ನಿಫ್ಟಿ ಜೂನ್ 27 ರಂದು $95.55 ಶತಕೋಟಿ (ಅಂದಾಜು ರೂ. 7,97,714 ಕೋಟಿ) ಸಾರ್ವಕಾಲಿಕ ಗರಿಷ್ಠ ಮಾಸಿಕ ವಹಿವಾಟು ಸಾಧಿಸುವ ಮೂಲಕ ಹೊಸ ಮೈಲಿಗಲ್ಲನ್ನು ದಾಖಲಿಸಿದೆ. ಇದು ಮೇ ತಿಂಗಳಲ್ಲಿ ಅದರ ಹಿಂದಿನ ದಾಖಲೆಯಾದ $91.73 ಶತಕೋಟಿಯನ್ನು ಮೀರಿಸಿದೆ. ಜೂನ್‌ನಲ್ಲಿ ಬೆಂಚ್‌ಮಾರ್ಕ್ ತನ್ನ ಅತ್ಯಧಿಕ ಮಾಸಿಕ ವಹಿವಾಟು 21,23,014 ಒಪ್ಪಂದಗಳನ್ನು ಸಾಧಿಸಿದೆ.
"ಈ ಮೈಲಿಗಲ್ಲು ಭಾರತದ ಬೆಳವಣಿಗೆಯ ಮಾನದಂಡವಾಗಿ GIFT ನಿಫ್ಟಿಯಲ್ಲಿ ಹೆಚ್ಚುತ್ತಿರುವ ಜಾಗತಿಕ ಆಸಕ್ತಿ ಮತ್ತು ವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ" ಎಂದು NSE ಹೇಳಿದೆ. "ಗಿಫ್ಟ್ ನಿಫ್ಟಿಯ ಯಶಸ್ಸನ್ನು ನೋಡಲು ನಾವು ಸಂತೋಷಪಡುತ್ತೇವೆ. ಈ ಯಶಸ್ಸಿನಲ್ಲಿ ಭಾಗಿಯಾದವರಿಗೆ ನಾವು ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ" ಎಂದು ಎನ್ಎಸ್ಇ ಹೇಳಿದೆ. ಜುಲೈ 3, 2023 ರಂದು GIFT ನಿಫ್ಟಿಯ ಪೂರ್ಣ-ಪ್ರಮಾಣದ ಕಾರ್ಯಾಚರಣೆಗಳು ಪ್ರಾರಂಭವಾದಾಗಿನಿಂದ NSE IX ನಲ್ಲಿ ವ್ಯಾಪಾರ ವಹಿವಾಟು ವೇಗವಾಗಿ ಬೆಳೆಯುತ್ತಿದೆ.
ಓದಿ: ಅನಂತ್-ರಾಧಿಕಾ ಮದುವೆ ಸಂಭ್ರಮ: ಸಾಮೂಹಿಕ ವಿವಾಹ ಆಯೋಜಿಸಿದ ಅಂಬಾನಿ ಕುಟುಂಬ - Anant Ambani Radhika wedding