ETV Bharat / business

ಭಾರ್ತಿ ಏರ್ಟೆಲ್ ನಿವ್ವಳ ಲಾಭ ಶೇ 31ರಷ್ಟು ಕುಸಿತ: ಪ್ರತಿ ಷೇರಿಗೆ 8 ರೂ. ಲಾಭಾಂಶ ಘೋಷಣೆ - Airtel Net Profit

ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರ್ತಿ ಏರ್ಟೆಲ್​ನ ಏಕೀಕೃತ ನಿವ್ವಳ ಲಾಭ ಶೇಕಡಾ 31 ರಷ್ಟು ಕುಸಿತವಾಗಿದೆ.

ಭಾರ್ತಿ ಏರ್ಟೆಲ್ ನಿವ್ವಳ ಲಾಭ ಶೇ 31ರಷ್ಟು ಕುಸಿತ
ಭಾರ್ತಿ ಏರ್ಟೆಲ್ ನಿವ್ವಳ ಲಾಭ ಶೇ 31ರಷ್ಟು ಕುಸಿತ (IANS)
author img

By ETV Bharat Karnataka Team

Published : May 15, 2024, 1:57 PM IST

ನವದೆಹಲಿ: 2023-24 ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಭಾರ್ತಿ ಏರ್ಟೆಲ್​ನ ಏಕೀಕೃತ ನಿವ್ವಳ ಲಾಭ ಶೇಕಡಾ 31 ರಷ್ಟು ಕುಸಿತವಾಗಿದೆ. ದೇಶದ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿರುವ ಏರ್ಟೆಲ್​ನ ನಿವ್ವಳ ಲಾಭ ಕುಸಿದು 2,072 ಕೋಟಿ ರೂ.ಗೆ ತಲುಪಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಕಂಪನಿಯ ಏಕೀಕೃತ ನಿವ್ವಳ ಲಾಭ 3,006 ಕೋಟಿ ರೂ. ಆಗಿತ್ತು.

ಸುನಿಲ್ ಮಿತ್ತಲ್ ನೇತೃತ್ವದ ಏರ್ಟೆಲ್ ಈ ತ್ರೈಮಾಸಿಕದಲ್ಲಿ ಕಾರ್ಯಾಚರಣೆಗಳಿಂದ ಬರುವ ಆದಾಯದಲ್ಲಿ ಶೇಕಡಾ 4 ರಷ್ಟು ಹೆಚ್ಚಳ ದಾಖಲಿಸಿದ್ದು, ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ 36,009 ಕೋಟಿ ರೂ.ಗಳಿಂದ 37,599 ಕೋಟಿ ರೂ.ಗೆ ತಲುಪಿದೆ. ಕಂಪನಿಯ ನಿರ್ದೇಶಕರ ಮಂಡಳಿಯು 5 ರೂ. ಮುಖಬೆಲೆಯ ಪ್ರತಿ ಷೇರಿಗೆ 8 ರೂ.ಗಳ ಲಾಭಾಂಶ ನೀಡುವಂತೆ ಶಿಫಾರಸು ಮಾಡಿದೆ.

"ನೈಜೀರಿಯನ್ ಕರೆನ್ಸಿ ನೈರಾ ಅಪಮೌಲ್ಯದಿಂದಾಗಿ ಕಂಪನಿಯ ಏಕೀಕೃತ ಕಾರ್ಯಕ್ಷಮತೆಯ ಮೇಲೆ ಪರಿಣಾಮ ಬೀರಿದೆ. ಗ್ರಾಹಕರ ಸಂಖ್ಯೆ ಮತ್ತು ಹಣಕಾಸು ಲಾಭ ಹೀಗೆ ಎಲ್ಲಾ ವ್ಯವಹಾರಗಳಲ್ಲಿ ನಾವು ಕಳೆದ ವರ್ಷವನ್ನು ಉತ್ತಮ ಕಾರ್ಯಕ್ಷಮತೆಯೊಂದಿಗೆ ಕೊನೆಗೊಳಿಸಿದ್ದೇವೆ. ತ್ರೈಮಾಸಿಕದಲ್ಲಿ ಒಂದು ದಿನ ಕಡಿಮೆ ಇದ್ದರೂ, ಇಬಿಐಟಿಡಿಎ ಮಾರ್ಜಿನ್ ಶೇಕಡಾ 54.1 ಕ್ಕೆ ವಿಸ್ತರಿಸುವುದರೊಂದಿಗೆ ಭಾರತದ ಆದಾಯ (ಬೀಟೆಲ್​ಗೆ ಸರಿಹೊಂದಿಸಲಾಗಿದೆ) ಶೇಕಡಾ 1.7 ರಷ್ಟು ಹೆಚ್ಚಾಗಿದೆ." ಎಂದು ಏರ್ಟೆಲ್ ಎಂಡಿ ಗೋಪಾಲ್ ವಿಠಲ್ ಹೇಳಿದ್ದಾರೆ.

2023-24 ರ ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಕಂಪನಿಗೆ ಹೊಸದಾಗಿ 7.8 ಮಿಲಿಯನ್ ಸ್ಮಾರ್ಟ್​ಫೋನ್ ಗ್ರಾಹಕರು ಸೇರ್ಪಡೆಯಾಗಿದ್ದಾರೆ ಮತ್ತು ಎಆರ್​ಪಿಯು (ಪ್ರತಿ ಬಳಕೆದಾರರಿಗೆ ಸರಾಸರಿ ಆದಾಯ) ಆದಾಯವು 209 ರೂ.ಗೆ ತಲುಪಿದೆ. ಈ ತ್ರೈಮಾಸಿಕದಲ್ಲಿ ಕಂಪನಿಯ ಭಾರತೀಯ ಚಂದಾದಾರರ ಸಂಖ್ಯೆ ಶೇಕಡಾ 2.4 ರಷ್ಟು ಏರಿಕೆಯಾಗಿ 406 ಮಿಲಿಯನ್​ಗೆ ತಲುಪಿದೆ.

ಏರ್ಟೆಲ್ 16 ದೇಶಗಳಲ್ಲಿ ಸುಮಾರು 400 ಮಿಲಿಯನ್ ಚಂದಾದಾರರನ್ನು ಹೊಂದಿರುವ ವಿಶ್ವದ ಮೂರನೇ ಅತಿದೊಡ್ಡ ಟೆಲಿಕಾಂ ಕಂಪನಿಯಾಗಿದೆ. ಇದು ಗ್ರಾಹಕರು ಮತ್ತು ಉದ್ಯಮಗಳಿಗೆ ಮೊಬೈಲ್ ಟೆಲಿಕಾಂ, ಫಿಕ್ಸೆಡ್-ಲೈನ್ ಮತ್ತು ವೈಫೈ ಬ್ರಾಡ್ ಬ್ಯಾಂಡ್, ಧ್ವನಿ, ಡಿಟಿಎಚ್, ಸೇವೆಗಳನ್ನು ಒದಗಿಸುತ್ತದೆ. ಕಂಪನಿಯು ಗ್ರಾಹಕ ಇಂಟರ್ನೆಟ್ ಮತ್ತು ಫಿನ್ ಟೆಕ್ ವಲಯದಲ್ಲಿ ಕೂಡ ಅಸ್ತಿತ್ವ ಸ್ಥಾಪಿಸುತ್ತಿದೆ. ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್, ಏರ್ಟೆಲ್ ಟಿವಿ, ವಿಂಕ್ ಮ್ಯೂಸಿಕ್ ಇತ್ಯಾದಿ ಏರ್ಟೆಲ್​ನ ಇತರ ಸೇವೆಗಳಾಗಿವೆ.

ಇದನ್ನೂ ಓದಿ : ಭಾರತದಲ್ಲಿ 3.40 ಕೋಟಿ ಸ್ಮಾರ್ಟ್​ಫೋನ್ ಮಾರಾಟ: ಶೇ 11.5ರಷ್ಟು ಬೆಳವಣಿಗೆ - INDIAN SMARTPHONE MARKET

ETV Bharat Logo

Copyright © 2024 Ushodaya Enterprises Pvt. Ltd., All Rights Reserved.