ಜೆಹಾನಾಬಾದ್, ಬಿಹಾರ: ಪತಿಯೊಬ್ಬ ತನ್ನ ಪತ್ನಿಯನ್ನು ಕೊಂದು ಶವವನ್ನು ಬಳಕೆಯಾಗದ ಬೋರ್‌ವೆಲ್‌ಗೆ ಎಸೆದಿರುವ ಘಟನೆ ಜಿಲ್ಲೆಯ ವಿಷುಂಗಂಜ್ ಒಪಿ ಪ್ರದೇಶದ ಪಂಚಮೈ ಗ್ರಾಮದಲ್ಲಿ ನಡೆದಿದೆ. ಮೃತರನ್ನು ಶೋಭಾ ಕುಮಾರಿ ಎಂದು ಗುರುತಿಸಲಾಗಿದೆ.
ಮೂಲಗಳ ಪ್ರಕಾರ, ಈ ಪ್ರದೇಶದ ರೈತರೊಬ್ಬರು ಭಾನುವಾರ ಬೆಳಗ್ಗೆ ಹೊಲಕ್ಕೆ ಹೋದಾಗ ಬಳಕೆಯಾಗದ ಬೋರ್‌ವೆಲ್‌ನಲ್ಲಿ ದೇಹದ ಭಾಗ ಕಂಡುಬಂದಿದೆ. ಇದನ್ನು ನೋಡಿ ಬೆಚ್ಚಿಬಿದ್ದ ರೈತ, ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಿದ್ದರು. ಸುದ್ದಿ ತಿಳಿದ ಪೊಲೀಸರು ಸ್ಥಳಕ್ಕಾಗಮಿ ಮಹಿಳೆಯ ದೇಹದ ಭಾಗಗಳನ್ನು ಜೆಸಿಬಿ ಬಳಸಿ ಬೋರ್‌ವೆಲ್‌ನಿಂದ ಹೊರಗೆ ತೆಗೆದಿದ್ದಾರೆ.
ಗಂಡನಿಂದ ನಡೀತಾ ದುಷ್ಕೃತ್ಯ?: ಕತ್ತರಿಸಿದ ಕೈ ಮೇಲೆ ಯಾರದೋ ಹೆಸರಿನ ಹಚ್ಚೆ ಕಂಡುಬಂದಿದೆ. ನಂತರ ಪೊಲೀಸರು ದೇಹದ ಭಾಗಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಆ ಪ್ರದೇಶದಲ್ಲಿ ಶೋಧ ಕಾರ್ಯ ಆರಂಭಿಸಿದ್ದಾರೆ. ಮೃತಳ ಪತಿ ಪಂಚಮಾಯಿ ಗ್ರಾಮದ ಹರೇ ರಾಮ್ ಯಾದವ್ ಎಂದು ಗುರುತಿಸಲಾಗಿದ್ದು, ಶೋಭಾಳನ್ನು ಕೊಂದು ಶವವನ್ನು ಕೊಚ್ಚಿ ನಂತರ ಬಳಕೆಯಾಗದ ಬೋರ್‌ವೆಲ್‌ಗೆ ಎಸೆದಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ವರ್ಷದ ಹಿಂದೆ ಮದುವೆ: ನಳಂದದ ರಾಹುಯಿ ಪೊಲೀಸ್ ಠಾಣೆ ವ್ಯಾಪ್ತಿಯ ಜಗತ್ ನಂದಪುರ ಗ್ರಾಮದ ನಿವಾಸಿ ಶೋಭಾ ಕುಮಾರಿ ಅವರು ವರ್ಷದ ಹಿಂದೆ ಹರೇ ರಾಮ್ ಯಾದವ್ ಅವರನ್ನು ವಿವಾಹವಾಗಿದ್ದರು. ಇಬ್ಬರೂ ಸಂತೋಷದಿಂದಲೇ ಜೀವನ ಸಾಗಿಸುತ್ತಿದ್ದರು ಎಂಬ ಮಾತು ಸ್ಥಳೀಯ ವಲಯದಲ್ಲಿ ಕೇಳಿ ಬಂದಿದೆ. ಆದ್ರೆ ಕಳೆದ ಶನಿವಾರ ಹರೇ ರಾಮ್ ಯಾದವ್ ತನ್ನ ಪತ್ನಿಯ ಕುಟುಂಬಸ್ಥರಿಗೆ ಕರೆ ಮಾಡಿ ಶೋಭಾ ಕುಮಾರಿ ಮನೆಯಿಂದ ಓಡಿ ಹೋಗಿದ್ದಾಳೆ ಎಂದು ತಿಳಿಸಿದ್ದರು. ಶೋಭಾ ಕುಟುಂಬಸ್ಥರು ತಮ್ಮ ಮಗಳಿಗಾಗಿ ಹುಡುಕಾಟ ಆರಂಭಿಸಿದರು, ಆದರೆ ಆಕೆಯನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮಸ್ಥರ ಆರೋಪವೇನು?: ಹರೇ ರಾಮ್ ಯಾದವ್ ಈ ಹಿಂದೆ 2010 ರಲ್ಲಿ ಒಮ್ಮೆ ಮದುವೆಯಾಗಿದ್ದರು. ಆತನಿಗೆ ಮೊದಲ ಹೆಂಡತಿಯಿಂದ ಒಂದು ಗಂಡು ಮತ್ತು ಹೆಣ್ಣು ಮಗು ಇದೆ. ಮೊದಲ ಪತ್ನಿಯನ್ನೂ ಕೊಲೆ ಮಾಡಿದ್ದಾನೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಘಟನೆಯ ಬಗ್ಗೆ ವಿಷುಂಗಂಜ್ ಒಪಿ ಪೊಲೀಸ್ ಠಾಣೆಯ ಅಧಿಕಾರಿ ಫೂಲಚಂದ್ ಯಾದವ್ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಆರೋಪಿ ತಾಯಿ ವಶಕ್ಕೆ: ಬಳಕೆಯಾಗದ ಬೋರ್‌ವೆಲ್‌ನಿಂದ ಮಹಿಳೆಯ ದೇಹದ ಭಾಗಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಸಂಬಂಧ ಮೃತ ಮಹಿಳೆಯ ಅತ್ತೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಪ್ರಸ್ತುತ ಘಟನೆಯ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ ಎಂದು ಬ್ಲಾಕ್ ಡೆವಲಪ್‌ಮೆಂಟ್ ಅಧಿಕಾರಿ (ಬಿಡಿಒ) ಪ್ರಭಾಕರ ಕುಮಾರ್ ತಿಳಿಸಿದ್ದಾರೆ.
ಓದಿ: ರಾಜ್ಯದಲ್ಲೂ ಭೀಕರ ಕೊಲೆ: ತಂದೆ ದೇಹವನ್ನು 30ಕ್ಕೂ ಹೆಚ್ಚು ಪೀಸ್ ಮಾಡಿ ಕೊಳವೆ ಬಾವಿಗೆ ಎಸೆದ ಮಗ!