ETV Bharat / bharat

ಗಗಗನಕ್ಕೇರಿದ ತರಕಾರಿ ಬೆಲೆ; ಗ್ರಾಹಕರ ಜೇಬಿಗೆ ಕತ್ತರಿ, ವ್ಯಾಪಾರಿಗಳಿಗೆ ವ್ಯವಹಾರದ ಚಿಂತೆ - Vegetable Prices Skyrocket - VEGETABLE PRICES SKYROCKET

ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ತರಕಾರಿ ಬೆಲೆ ಏರಿಕೆ ಕಂಡರೂ, ಮಳೆಗಾಲ ಆರಂಭವಾಗುತ್ತಿದ್ದಂತೆ ಇಳಿಕೆ ಕಾಣುತ್ತಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಬೇರೆಯಾಗಿದೆ.

vegetable-prices-skyrocket-in-hyderabad-consumers-traders-says-govt-should-interfere
ತರಕಾರಿ ಬೆಲೆ ಏರಿಕೆ (ಈಟಿವಿ ಭಾರತ್​​)
author img

By ETV Bharat Karnataka Team

Published : Jun 14, 2024, 11:08 AM IST

ಹೈದರಾಬಾದ್​: ಕಳೆದ ಆರು ತಿಂಗಳಿಂದ ನಿಗದಿತ ದರ 20 ರೂನಂತೆ ಕೆಜಿಗೆ ಸಿಗುತ್ತಿದ್ದ ಈರುಳ್ಳಿ ಇದೀಗ ಏಕಾ ಏಕಿ ಬೆಲೆ ಏರಿಸಿಕೊಂಡು ಗ್ರಾಹಕರಲ್ಲಿ ಕಣ್ಣೀರು ತರಿಸಲು ಮುಂದಾಗಿದೆ. ಇದಕ್ಕೆ ಕಾರಣ ಈರುಳ್ಳಿ ಆಮದು ಕೊರತೆ. ಈ ಹಿಂದೆ ಹೈದರಾಬಾದ್​ ನಗರಕ್ಕೆ 8 ಸಾವಿರ ಕ್ವಿಂಟಾಲ್​ ಈರುಳ್ಳಿ ಬರುತ್ತಿತ್ತು. ಆದರೆ, ಇದೀಗ ಮಾರುಕಟ್ಟೆಗೆ ಕೇವಲ 5 ರಿಂದ 6 ಸಾವಿರ ಕ್ವಿಂಟಾಲ್​ ಬರುತ್ತಿದೆ. ಮಾರುಕಟ್ಟೆಗೆ ಅಗತ್ಯವಾದ ಸರಕು ಬಂದರೆ, ಮತ್ತೆ ಈರುಳ್ಳಿ ದರ ಕೆಜಿಗೆ 20 -25ರೂ ಆಗಲಿದೆ ಎಂದು ಮಾರುಕಟ್ಟೆ ಅಧಿಕಾರಿಗಳು ತಿಳಿಸಿದ್ದಾರೆ.

ಸಾಮಾನ್ಯವಾಗಿ ಬೇಸಿಗೆ ಸಮಯದಲ್ಲಿ ತರಕಾರಿ ಬೆಲೆ ಏರಿಕೆ ಕಂಡರೂ, ಮಳೆಗಾಲ ಆರಂಭವಾಗುತ್ತಿದ್ದಂತೆ ಇಳಿಕೆ ಕಾಣುತ್ತಿತ್ತು. ಆದರೆ, ಈ ಬಾರಿ ಪರಿಸ್ಥಿತಿ ಬೇರೆಯಾಗಿದೆ. ಬೇಸಿಗೆಯಲ್ಲಿ ನಿಯಂತ್ರಣದಲ್ಲಿದ್ದ ಬೆಲೆಗಳು ಇದೀಗ ಮಳೆಗಾಲ ಆರಂಭದಲ್ಲಿ ಅದರಲ್ಲೂ 15ದಿನದಲ್ಲಿ ಈ ಏರಿಕೆ ಕಾಣುತ್ತಿದೆ. ರೈತ ಮಾರುಕಟ್ಟೆಗೆ ಹೋಲಿಕೆ ಮಾಡಿದಾಗ ತೆರೆದ ಮಾರುಕಟ್ಟೆಯಲ್ಲಿ ದರಗಳು ಶೇ 30 ರಿಂದ 40ರಷ್ಟು ಏರಿಕೆ ಕಂಡಿದೆ. ಮೇ 20ರಂದು 20 ರೂ ಇದ್ದ ಈರುಳ್ಳಿ ಬೆಲೆ ಇದೀಗ 40 ರೂ ಆಗಿದೆ. ಜೂನ್​ ಆರಂಭದಲ್ಲಿ 25 ರೂ ಇದ್ದ ಟೊಮೆಟೊ ಬೆಲೆ ಇದೀಗ 50 ರೂ ದಾಟಿದೆ. ಬದನೆಕಾರಿ 40 ರೂ, ಹಸಿರು ಮೆಣಸಿನಕಾಯಿ 80 ರೂನಂತೆ ಮಾರಾಟವಾಗುತ್ತಿದೆ. ಬೀನ್ಸ್​​, ಕ್ಯಾರೆಟ್​, ಬೀಟ್​ರೂಟ್​, ದೊಡ್ಡ ಮೆಣಸಿನಕಾಯಿ, ಹಗಲಕಾಯಿ, ಮೆಂತ್ಯೆ, ಕೊತ್ತಂಬರಿ, ಇತರೆ ಸೊಪ್ಪಿನ ಬೆಲೆ ದುಪ್ಪಟ್ಟಾಗಿದೆ.

ರಾಜ್ಯದಲ್ಲಿ ಕೇವಲ 3.11 ಲಕ್ಷ ಎಕರೆಯಲ್ಲಿ ಕೃಷಿ: ತೆಲಂಗಾಣದ ಜನಸಂಖ್ಯೆಗೆ ಪ್ರತಿವರ್ಷ 38.54 ಲಕ್ಷ ಟನ್​ ತರಕಾರಿ ಬೇಕು. ಸದ್ಯ ರಾಜ್ಯದಲ್ಲಿ ಕೇವಲ 19.54 ಟನ್​ ತರಕಾರಿ ಉತ್ಪಾದಿಸಲಾಗುತ್ತಿದೆ. ರಾಜ್ಯದ 1.30 ಕೋಟಿ ಪ್ರದೇಶದಲ್ಲಿ ಎಲ್ಲ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಇದರಲ್ಲಿ ತರಕಾರಿ ಕೇವಲ 3.11 ಲಕ್ಷ ಎಕರೆಯಲ್ಲಿ ಬೆಳೆಯಲಾಗುತ್ತಿದೆ. ಇದರಿಂದ 19 ಲಕ್ಷ ಟನ್​ ಬೆಳೆಗಳಿಗಾಗಿ ಇತರೆ ರಾಜ್ಯವನ್ನು ಅವಲಂಬಿಸುವಂತೆ ಆಗಿದೆ.

ಬೇಗ ಕೊಳೆಯುವ ಸಮಸ್ಯೆ: ಬೇಸಿಗೆಯಲ್ಲಿ ಸ್ಥಳೀಯ ತರಕಾರಿಗಳ ಉತ್ಪಾದನೆಯಲ್ಲಿ ಶೇ 20ರಷ್ಟು ಕುಂಠಿತವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಬೇಡಿಕೆಗೆ ಅನುಗುಣವಾಗಿ ವ್ಯಾಪಾರಿಗಳು ದೊಡ್ಡ ಪ್ರಮಾಣದಲ್ಲಿ ತರಕಾರಿ ಆಮದು ಮಾಡಿಕೊಂಡಿದ್ದಾರೆ. ಮೇ ವರೆಗೂ ಈ ತರಕಾರಿಗಳ ಬೆಲೆ ನಿಯಂತ್ರಣದಲ್ಲಿತ್ತು. ಆದರೆ, ಈ ತಿಂಗಳ ಆರಂಭ ಆಗಿ ವಾರ ಕಳೆದ ಬಳಿಕ ಬೆಲೆ ಹೆಚ್ಚಳ ಉಂಟಾಗಿದೆ. ಬೇರೆ ರಾಜ್ಯಗಳಿಂದ ತರಕಾರಿ ತರಲು ಮಳೆ ಜೊತೆ ತರಕಾರಿ ಕೊಳೆಯುವ ಪರಿಸ್ಥಿತಿ ಉಂಟಾಗಿದೆ. ಇದರಿಂದ ಆಮದು ಕಡಿಮೆ ಮಾಡಲಾಗಿದೆ. ಹೈದರಾಬಾದ್​ ನಗರ ಜನತೆಗೆ ದಿನಕ್ಕೆ 3,300 ತರಕಾರಿ ಬೇಕು. ಆದರೆ, ಈ ವಾರ ಹೋಲ್​ಸೇಲ್​ ಮಾರುಕಟ್ಟೆಗೆ 2,800 ಟನ್​ಗಳಷ್ಟು ಮಾತ್ರ ತರಕಾರಿ ಬಂದಿದೆ.

ನಮ್ಮ ಬೆಳೆ ಬಂದಾಗಲೇ ಪರಿಹಾರ: ತಿಂಗಳ ಹಿಂದೆ ನಮ್ಮ ರಾಜ್ಯದಲ್ಲಿ ಬಾವಿಗಳು ಮತ್ತು ಬೋರ್​ವೆಲ್​ಗಳಲ್ಲಿ ತರಕಾರಿ ಬೆಳೆ ಬೆಳೆಯಲಾಗಿದೆ. ಈ ತಿಂಗಳಾಂತ್ಯದಲ್ಲಿ ಕೆಲವು ಬೆಳೆ ಪಡೆಯಬಹುದು. ಮಳೆಗಾಲದ ಋತುಮಾನಗಳು ಬೆಳೆಗಳ ಕೃಷಿ ಕೂಡ ಆರಂಭವಾಗಿದೆ. ಈ ಬೆಳೆಗಳು ಜುಲೈ ಮತ್ತು ಆಗಸ್ಟ್​ನಲ್ಲಿ ಕೈಗೆ ಸಿಗಲಿದೆ. ಬಳಿಕ ಮಾರುಕಟ್ಟೆಯಲ್ಲಿ ತರಕಾರಿಗಳ ಬೆಲೆ ಇಳಿಕೆಯಾಗಲಿದೆ ಎಂದು ಮಾರುಕಟ್ಟೆ ಅಧಿಕಾರಿಗಳು ಬಂದಿದ್ದಾರೆ.

ತರಕಾರಿ ಬೆಲೆ ಹೆಚ್ಚಳದ ಹೊರೆ ಹೆಚ್ಚಿದ್ದು, ಸರ್ಕಾರ ತಕ್ಷಣಕ್ಕೆ ಬೆಲೆ ನಿಯಂತ್ರಣ ಯೋಜನೆ ಅಳವಡಿಕೆಗೆ ಮುಂದಾಗಬೇಕು ಎಂದು ಗ್ರಾಹಕರು ಮನವಿ ಮಾಡಿದ್ದಾರೆ.

ಬೆಲೆ ಏರಿಕೆಯಿಂದ ಬಹಳಷ್ಟು ನಷ್ಟಕ್ಕೆ ಒಳಗಾಗುತ್ತಿದ್ದು, ಇದೀಗ ಯಾರು ಬೀನ್ಸ್​ ಮತ್ತು ಕ್ಯಾರೆಟ್​ ಖರೀದಿಸುತ್ತಿಲ್ಲ. ಫಲಿತಾಂಶವಾಗಿ ತರಕಾರಿಗಳು ಹಾಳುತ್ತಿದೆ ಎಂದಿದ್ದಾರೆ.

ಇದನ್ನೂ ಓದಿ: ಬೆಣ್ಣೆನಗರಿಯಲ್ಲಿ ಗಗನಕ್ಕೇರಿದ ತರಕಾರಿ ಬೆಲೆ: ಗ್ರಾಹಕರ ಜೇಬಿಗೆ ಕತ್ತರಿ; ಲಾಭವಿಲ್ಲದೇ ವ್ಯಾಪಾರಿಗಳು ಕಂಗಾಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.