ETV Bharat / bharat

ವೇಗವಾಗಿ ಬಂದು ಹಲವರಿಗೆ ಡಿಕ್ಕಿ ಹೊಡೆದ ಕಾರು: ಓರ್ವ ಸಾವು, ನಾಲ್ವರಿಗೆ ಗಾಯ - ರಸ್ತೆ ಅಪಘಾತ

ವೇಗವಾಗಿ ಬಂದಿರುವ ಕಾರ್​ವೊಂದು ಹಲವರಿಗೆ ಡಿಕ್ಕಿ ಹೊಡೆದಿರುವ ಘಟನೆ ಲೂಧಿಯಾನ 200 ಅಡಿ ರಸ್ತೆ ಬಳಿಯ ತ್ರಿಕ್ಕೆ ರೋಡ್​​​​​ನಲ್ಲಿ ಸಂಭವಿಸಿದ್ದು, ಓರ್ವ ಸಾವನ್ನಪ್ಪಿದ್ದು, ನಾಲ್ವರು ಗಾಯಗೊಂಡಿದ್ದಾರೆ.

Ludhiana police  ಹಲವರಿಗೆ ಡಿಕ್ಕಿ ಹೊಡೆದ ಕಾರು  ಲೂಧಿಯಾನ ಪೊಲೀಸ್  ರಸ್ತೆ ಅಪಘಾತ  Thrikke Road
ವೇಗವಾಗಿ ಬಂದು ಹಲವರಿಗೆ ಡಿಕ್ಕಿ ಹೊಡೆದ ಕಾರು: ಓರ್ವ ಸಾವು, ನಾಲ್ವರಿಗೆ ಗಾಯ
author img

By ETV Bharat Karnataka Team

Published : Feb 6, 2024, 11:50 AM IST

ಲೂಧಿಯಾನ (ಪಂಜಾಬ್​): ಲೂಧಿಯಾನ 200 ಅಡಿ ರಸ್ತೆ ಬಳಿಯ ತ್ರಿಕ್ಕೆ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ನಾಲ್ವರು ಗಾಯಗೊಂಡಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿದೆ. ರಸ್ತೆ ಅಪಘಾತದ ನಂತರ ಸ್ಥಳಕ್ಕಾಗಮಿಸಿದ ಪೊಲೀಸರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

''ಒಂದು ವೆರ್ನಾ ಮತ್ತು ಇನ್ನೊಂದು ಬಲೆನೋ ಎಂಬ 2 ಕಾರುಗಳಲ್ಲಿ ಸವಾರಿ ಮಾಡುತ್ತಿದ್ದವರು ಪರಸ್ಪರ ರೇಸ್​​​​ಗೆ ಇಳಿದಿದ್ದರು. ಇದರಿಂದ ಈ ರಸ್ತೆ ಅಪಘಾತ ಸಂಭವಿಸಿದೆ'' ಎಂದು ಸ್ಥಳೀಯರು ತಿಳಿಸಿದ್ದಾರೆ. ಅತಿವೇಗದ ಕಾರಣ ಒಂದು ಕಾರು ಚಾಲಕನ ನಿಯಂತ್ರಣ ತಪ್ಪಿದೆ. ಇದರ ಪರಿಣಾಮ ಸಮೀಪದ ಹಳ್ಳಕ್ಕೆ ಡಿಕ್ಕಿ ಹೊಡೆದಿದೆ. ಇಲ್ಲಿ ಕುಳಿತ ಹಲವರಿಗೆ ಗಾಯಗಳಾಗಿವೆ. ಗಂಭೀರವಾಗಿ ಗಾಯಗೊಂಡಿದ್ದ ವೃದ್ಧನೊಬ್ಬ ಸಾವನ್ನಪ್ಪಿದ್ದಾರೆ. ನಂತರ ಸ್ಥಳೀಯರು ರಸ್ತೆ ತಡೆದು ನ್ಯಾಯಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಕಾರು ಅತಿವೇಗವಾಗಿ ಚಾಲನೆ ಮಾಡುತ್ತಿದ್ದರಿಂದ ಈ ಅಪಘಾತ ಸಂಭವಿಸಿದೆ. ಆ ಕಾರಿನಲ್ಲಿ ಒಬ್ಬ ಹುಡುಗಿ ಮತ್ತು ಹುಡುಗ ಇದ್ದರು. ನಿರ್ಲಕ್ಷ್ಯದಿಂದ ವಾಹನ ಚಲಾಯಿಸಿದ್ದರಿಂದ ದುರ್ಘಟನೆ ನಡೆದಿದೆ ಎಂದು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಆರೋಪಿಗಳು ಓಡಿ ಹೋಗುತ್ತಿರುವ ವಿಡಿಯೋಗಳನ್ನು ಸ್ಥಳೀಯರು ರೆಕಾರ್ಡ್ ಮಾಡಿದ್ದಾರೆ. ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ಕೊಡಿಸಿದ್ದಾರೆ.

ನಿನ್ನೆ (ಸೋಮವಾರ) ಸಂಜೆ ವೇಳೆಗೆ ಅಪಘಾತ ಸಂಭವಿಸಿದ್ದು, ಆ್ಯಂಬುಲೆನ್ಸ್​​​​ಗೆ ಕರೆ ಮಾಡಿ ಬಹಳ ಹೊತ್ತಾದರೂ ಯಾರೊಬ್ಬರೂ ಸ್ಥಳಕ್ಕೆ ಬರಲಿಲ್ಲ. ಅಪಘಾತದ ವೇಳೆ ಒಬ್ಬರ ಕಾಲು ಮುರಿದು ಬಿದ್ದಿದೆ. ಎಲ್ಲ ಗಾಯಾಳುಗಳನ್ನು ಸಮೀಪದ ರಘುನಾಥ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ರಸ್ತೆಯಲ್ಲಿ ಸಂಚರಿಸುತ್ತಿದ್ದ ವಾಹನದ ಚಾಲಕರಲ್ಲಿ ಮನವಿ ಮಾಡಲಾಯಿತು. ಅವರ ನೆರವಿನಿಂದ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಲಾಯಿತು. ಗಂಭೀರವಾಗಿ ಗಾಯಗೊಂಡವರನ್ನು ಪೊಲೀಸರು ಸಿವಿಲ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಅಪಘಾತದ ನಂತರ ಆ ಭಾಗದ ಜನರು ರಸ್ತೆ ತಡೆ ನಡೆಸಿ, ಈ ಘಟನೆ ಕಾರಣರಾದ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಕಾರಿನ ವೇಗವು ತುಂಬಾ ಹೆಚ್ಚಿತ್ತು. ಕಾರು ಡಿಕ್ಕಿ ಹೊಡೆದಿರುವ ರಭಸಕ್ಕೆ ಏರ್ ಬ್ಯಾಗ್‌ಗಳು ಸಹ ಓಪನ್ ಆಗಿವೆ. ಕಾರಿನ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ಕಾರು ಚಾಲಕ ಹಾಗೂ ಇತರರು ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಕಳ್ಳನನ್ನು ಪತ್ತೆ ಹಚ್ಚಿ ಹಿಡಿದುಕೊಟ್ಟ ಗೂಗಲ್​ ಮ್ಯಾಪ್​; ಹೇಗಿತ್ತು ಗೊತ್ತಾ ಆ ಕಾರ್ಯಾಚರಣೆ?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.