ನವದೆಹಲಿ: ಮಿಷನ್ ದಿವ್ಯಾಸ್ತ್ರ ಅಗ್ನಿ - 5 ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ಯಶಸ್ವಿಯಾದ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರು ಡಿಆರ್‌ಡಿಒ ವಿಜ್ಞಾನಿಗಳನ್ನು ಶ್ಲಾಘಿಸಿದ್ದಾರೆ.
ಈ ಕುರಿತಾಗಿ ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಹಲವು ಗುರಿಗಳನ್ನು ಸ್ವತಂತ್ರವಾಗಿ ಭೇದಿಸಿ ಮತ್ತೆ ವಾಪಸ್ ಆಗುವ ಕ್ಷಿಪಣಿ ವಾಹಕ (ಎಂಐಆರ್‌ವಿ) ತಂತ್ರಜ್ಞಾನದೊಂದಿಗೆ ದೇಶೀಯವಾಗಿ ಅಭಿವೃದ್ಧಿಪಡಿಸಲಾದ ಅಗ್ನಿ - 5 ಕ್ಷಿಪಣಿಯ ಪರೀಕ್ಷೆ ಯಶಸ್ವಿಯಾಗಿದೆ. ಮಿಷನ್ ದಿವ್ಯಾಸ್ತ್ರ ಯಶಸ್ವಿಗೊಳಿಸಿದ ನಮ್ಮ ಡಿಆರ್‌ಡಿಒ ವಿಜ್ಞಾನಿಗಳ ಸಾಧನೆ ಹೆಮ್ಮೆ ತಂದಿದೆ ಎಂದು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ.
ಹಲವು ಗುರಿಗಳನ್ನು ಏಕಕಾಲಕ್ಕೆ ಭೇದಿಸಬಲ್ಲ ಎಂಐಆರ್‌ವಿ ತಂತ್ರಜ್ಞಾನ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿಗೆ ಭಾರತ 6ನೇ ದೇಶವಾಗಿ ಸೇರ್ಪಡೆಗೊಂಡಿದೆ. ಅಗ್ನಿ - 5 ಮಾದರಿಯಲ್ಲಿ ಒಂದೇ ಕ್ಷಿಪಣಿಯಲ್ಲಿ ಹಲವು ಸಿಡಿ ತಲೆಗಳನ್ನು ಇರಿಸಿ ಉಡಾಯಿಸಬಹುದಾಗಿದೆ. ಒಂದೇ ಕ್ಷಿಪಣಿಯು ಹಲವು ಸ್ವತಂತ್ರ ಗುರಿಗಳನ್ನು ಏಕ ಕಾಲದಲ್ಲಿ ಭೇದಿಸುವ ಸಾಮರ್ಥ್ಯ ಹೊಂದಿದೆ.
ಇದನ್ನೂ ಓದಿ: ಬಸ್ ಮೇಲೆ ಬಿದ್ದ 11,000 ವೋಲ್ಟ್ ಕರೆಂಟ್ ವೈರ್: ಐದು ಮಂದಿ ಸಜೀವ ದಹನ