ನವದೆಹಲಿ: ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಇಂದು (ಶುಕ್ರವಾರ) ರಾಜ್ಯದ 14 ಕ್ಷೇತ್ರಗಳಲ್ಲಿ ಆರಂಭವಾಗಿದೆ. ನಿರ್ಮಲಾ ಸೀತಾರಾಮನ್ ಸೇರಿ ವಿವಿಧ ಗಣ್ಯರು ವೋಟ್ ಮಾಡಿದರು.
ಸೀತಾರಾಮನ್ ಜಯನಗರದ ಬಿಇಎಸ್ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾವಣೆ ಮಾಡಿದರು. ಮಹಾರಾಷ್ಟ್ರದ ಲೋಕಸಭೆ ಚುನಾವಣೆಯಲ್ಲಿ ಮತದಾನ ಮಾಡಲು ಅಮರಾವತಿಯ ವದರ್‌ಪುರ ಪ್ರದೇಶದಲ್ಲಿರುವ ಮತಗಟ್ಟೆಗೆ ಆಗಮಿಸಿದ ಮದುವೆ ಉಡುಗೆಯಲ್ಲೇ ಬಂದ ವರನೊಬ್ಬ ಮತದಾನ ಮಾಡಿ ಗಮನ ಸೆಳೆದರು.
ಕೇರಳ ಸಿಎಂ ಪಿಣರಾಯಿ ವಿಜಯನ್ ಕಣ್ಣೂರಿನ ಮತಗಟ್ಟೆ ಸಂಖ್ಯೆ 161ರಲ್ಲಿ ವೋಟ್ ಮಾಡಿದರು. ಕೇರಳದ ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್ ಎರ್ನಾಕುಲಂನ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಉತ್ತರ ಪರವೂರ್‌ನ ಮತಗಟ್ಟೆಯಲ್ಲಿ ಮತದಾರರ ನಡುವೆ ಸಾಲಿನಲ್ಲಿ ನಿಂತು, ಬಳಿಕ ಮತ ಚಲಾಯಿಸಿದರು.
ಬಿಜೆಪಿ ನಾಯಕಿ ವಸುಂಧರಾ ರಾಜೇ ಅವರು ಜಲಾವರ್‌ನ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ರಾಜಸ್ಥಾನದಲ್ಲಿ ಇಂದು 13 ಲೋಕಸಭೆ ಕ್ಷೇತ್ರಗಳಲ್ಲಿ ಮತದಾನ ನಡೆಯುತ್ತಿದೆ.
ನಂತರ ವಸುಂಧರಾ ರಾಜೆ ಮಾತನಾಡಿ, ''ದೇಶವು ಅಭಿವೃದ್ಧಿಯನ್ನು ಬಯಸುತ್ತಿದೆ. ಅದಕ್ಕಾಗಿಯೇ ಬಿಜೆಪಿ ಮತ್ತೆ ಸರ್ಕಾರ ಅಧಿಕಾರಕ್ಕೆ ಬಲಿದೆ. ಪ್ರಧಾನಿ ನರೇಂದ್ರ ಮೋದಿ ಮೂರನೇ ಬಾರಿಗೆ ಗೆಲುವು ಸಾಧಿಸಲಿದ್ದಾರೆ'' ಎಂದು ಅವರು, ''ಜಲಾವರ್ ಸಂಸದ ದುಷ್ಯಂತ್ ಸಿಂಗ್ ಅವರಿಗೆ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಈ ಬಾರಿಯೂ ಅವರು ಇತಿಹಾಸ ಸೃಷ್ಟಿಸುತ್ತಾರೆ ಎಂದು ನಂಬಿಕೆ ನನಗಿದೆ. ನಾವು ಎಂದಿಗೂ ಯಾವುದನ್ನೂ ಲಘುವಾಗಿ ತೆಗೆದುಕೊಳ್ಳಲು ಸಾಧ್ಯವಿಲ್ಲ. ಎಲ್ಲವೂ ದೇವರು ಮತ್ತು ಮತದಾರರ ಕೈಯಲ್ಲಿದೆ" ಎಂದು ಹೇಳಿದರು.
ಇನ್ನು ರಾಜಸ್ಥಾನದಲ್ಲಿ ಮಾಜಿ ಸಿಎಂ ವಸುಂಧರಾ ರಾಜೇ ಹಾಗೂ ಅಶೋಕ್ ಗೆಹ್ಲೋಟ್ ಬೆಳಗ್ಗೆಯೇ ತಮ್ಮ ಹಕ್ಕು ಚಲಾವಣೆ ಮಾಡಿದರು.
ಬಳಿಕ ಅಶೋಕ್ ಗೆಹ್ಲೋಟ್ ಮಾತನಾಡಿ, ''ಪ್ರಜಾಪ್ರಭುತ್ವ ಎತ್ತ ಸಾಗುತ್ತಿದೆ ಎಂಬುದನ್ನು ಗಮನಿಸಿದರೆ ನನಗೆ ತುಂಬಾ ಬೇಸರವಾಗುತ್ತಿದೆ. ಅಭಿವೃದ್ಧಿಯ ಆಧಾರದ ಮೇಲೆ ಚುನಾವಣೆ ನಡೆಯಬೇಕು. ನಿರುದ್ಯೋಗ, ಹಣದುಬ್ಬರ, ಬಡವರು ಮತ್ತು ಶ್ರೀಮಂತರ ನಡುವಿನ ಅಂತರವನ್ನು ಕಡಿಮೆ ಮಾಡುವಂತಹ ವಿಷಯಗಳ ಬಗ್ಗೆ ಗಮಹರಿಸಬೇಕಿದೆ'' ಎಂದು ಹೇಳಿದರು.
''ಮಂಗಳಸೂತ್ರಕ್ಕೂ ಪ್ರಣಾಳಿಕೆಗೂ ಏನು ಸಂಬಂಧ? ಅವರು ಉದ್ದೇಶಪೂರ್ವಕವಾಗಿ ಎಳೆದು ತರುತ್ತಿದ್ದಾರೆ. ಮೊದಲ ಬಾರಿಗೆ ಪ್ರಧಾನಿಯವರ ವಿಶ್ವಾಸಾರ್ಹತೆಗೆ ಹೊಡೆತ ಬಿದ್ದಿದೆ ಎಂದು ನಾನು ಭಾವಿಸುತ್ತೇನೆ. ಇವರು ಸುಳ್ಳು ಹೇಳ್ತಾರೆ ಅನ್ನೋದು ಜನಕ್ಕೆ ಗೊತ್ತಾಯಿತು. ಬಿಜೆಪಿಗೆ ತುಂಬಾ ಕೆಟ್ಟ ಪರಿಸ್ಥಿತಿ ಎದುರಾಗಲಿದೆ. ಇದೀಗ ಕಾಂಗ್ರೆಸ್ ಪರ ವಾತಾವರಣವಿದೆ'' ಎಂದರು.
ಇದನ್ನೂ ಓದಿ: LIVE UPDATE: ಲೇಖಕಿ ಸುಧಾಮೂರ್ತಿ, ರಾಹುಲ್ ದ್ರಾವಿಡ್, ನಟ ಗಣೇಶ್ರಿಂದ ಮತದಾನ - Lokasabha Election 2024