ETV Bharat / bharat

ಪತ್ನಿಯ ಶಿರಚ್ಛೇದ; ದೇಹದ ಭಾಗಗಳನ್ನು ಕತ್ತರಿಸಿ ಬಿಸಾಡಿದ್ದ ಪತಿ ಬಂಧನ - Wife Beheaded In Gonda - WIFE BEHEADED IN GONDA

ಇತ್ತೀಚಿಗೆ ಉತ್ತರ ಪ್ರದೇಶದಲ್ಲಿ ಬೆಚ್ಚಿಬೀಳಿಸುವ ಪ್ರಕರಣವೊಂದು ನಡೆದಿತ್ತು. ಪತಿಯೇ ತನ್ನ ಪತ್ನಿಯ ಶಿರಚ್ಛೇದ ಮಾಡಿದ್ದಲ್ಲದೇ, ಆಕೆಯ ದೇಹದ ಭಾಗಗಳನ್ನು ತುಂಡು ತುಂಡಾಗಿ ಕತ್ತರಿಸಿ ಬಿಸಾಡಿದ್ದ. ಆತನನ್ನು ಪತಿಯನ್ನು ಬಂಧಿಸಿದ್ದಾರೆ.

UP: Man from Gonda Arrested For Beheading Wife, Chopping Up Body Parts & Dumping Them
ಸಾಂದರ್ಭಿಕ ಚಿತ್ರ (File)
author img

By ETV Bharat Karnataka Team

Published : Aug 29, 2024, 4:01 PM IST

ಬಲರಾಂಪುರ್ (ಉತ್ತರ ಪ್ರದೇಶ): ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯನ್ನು ಬರ್ಬರವಾಗಿ ಕೊಚ್ಚಿ, ಆಕೆಯ ದೇಹವನ್ನು ಹಲವು ತುಂಡುಗಳನ್ನಾಗಿ ಮಾಡಿ ಬಿಸಾಡಿರುವ ಭಯಾನಕ ಕೃತ್ಯ ಇತ್ತೀಚೆಗೆ ಬಲರಾಂಪುರ್ ವ್ಯಾಪ್ತಿಯ ಗೊಂಡಾದಲ್ಲಿ ನಡೆದಿದ್ದು, ಆರೋಪಿ ಪತಿಯನ್ನು ಪೊಲೀಸರು ಇದೀಗ ಬಂಧಿಸಿದ್ದಾರೆ.

ಗುಡಿಯಾ ಅಲಿಯಾಸ್ ನೀತು ಕೊಲೆಗೀಡಾದ ಗೃಹಿಣಿ. ಶಂಕರ್ ದಯಾಳ್ ಗುಪ್ತಾ ಕೊಲೆಗೈದ ಪತಿ. ಮಹಿಳೆಯ ದೇಹದ ಒಂದು ಭಾಗ ಬಲರಾಂಪುರದಲ್ಲಿ ಪತ್ತೆಯಾಗಿದ್ದು, ತನಿಖೆ ವೇಳೆ ಆರೋಪಿಯು ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಆದರೆ, ಆತ ನಡೆಸಿದ ಕೃತ್ಯ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.

''ಹಣಕಾಸಿನ ವಿಚಾರದಲ್ಲಿ ದಂಪತಿ ನಡುವೆ ಆಗಾಗ ಸಣ್ಣ-ಪುಟ್ಟ ಮನಸ್ತಾಪಗಳು ನಡೆಯುತ್ತಿದ್ದವು. ಆದರೆ, ಇದೇ ಜಗಳ ವಿಕೋಪಕ್ಕೆ ತಿರುಗಿದ್ದು, ಕೋಪದ ಭರದಲ್ಲಿ ಶಂಕರ್ ತನ್ನ ಪತ್ನಿ ನೀತುಳನ್ನು ಆಗಸ್ಟ್ 1 ರಂದು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಕೊಲೆ ಬಳಿಕ ಅನುಮಾನ ಬರಬಾರದೆಂದು ಮಾರುಕಟ್ಟೆಯಲ್ಲಿ ಖರೀದಿಸಿದ್ದ ಎಲೆಕ್ಟ್ರಿಕ್ ಗರಗಸ ಮತ್ತು ಕಟ್ಟರ್ ಯಂತ್ರದಿಂದ ಆಕೆಯ ಮೃತದೇಹವನ್ನು ತುಂಡು ತುಂಡಾಗಿ ಕತ್ತರಿಸಿ ಬೇರೆ ಬೇರೆ ಕಡೆ ಎಸೆದು ಬಂದಿದ್ದಾನೆ. ತಲೆಯನ್ನು ಒಂದೆಡೆ ಎಸೆದರೆ, ಅಂಗೈ ಮತ್ತು ದೇಹದ ಉಳಿದ ಭಾಗಗಳನ್ನು ಬೇರೆ ಬೇರೆ ಸ್ಥಳಗಳಲ್ಲಿ ಎಸೆದಿದ್ದ. ಆಕೆಯ ತಲೆ ಸರಯು ನದಿಯ ದಡದಲ್ಲಿ ಪತ್ತೆಯಾಗಿದ್ದು, ಉಳಿದ ಭಾಗಗಳು ಅಜಬ್ ನಗರ ಗ್ರಾಮದ ಪೊದೆಯಲ್ಲಿ ಎಸೆದಿದ್ದನು. ಇದೆಲ್ಲವೂ ತನಿಖೆ ವೇಳೆ ತಿಳಿದು ಬಂದಿದ್ದು, ಶವ ತುಂಡರಿಸಲು ಕ್ಲೀವರ್ ಮತ್ತು ಎಲೆಕ್ಟ್ರಿಕ್ ಗರಗಸವನ್ನು ಬಳಸಿರುವುದು ಕೂಡ ಪತ್ತೆಯಾಗಿದೆ'' ಎಂದು ಪೊಲೀಸರು ತಿಳಿಸಿದ್ದಾರೆ.

''ಜುಲೈ 30 ರಂದು ಇಬ್ಬರ ನಡುವೆ ಜಗಳ ನಡೆದಿದ್ದು, ಆಗಸ್ಟ್ 1 ರಂದು ಪತ್ನಿಯನ್ನು ಕೊಲೆ ಮಾಡಿರುವುದು ತನಿಖೆಯಿಂದ ತಿಳಿದು ಬಂದಿತ್ತು. ಮಾತಿಗೆ ಮಾತು ಬೆಳೆದಿದ್ದರಿಂದ ಕೋಪದಲ್ಲಿ ತಾನು ಮಾಡಿದ ಕೃತ್ಯದ ಬಗ್ಗೆ ಹಾಗೂ ಪತ್ನಿಯ ದೇಹವನ್ನು ತುಂಡರಿಸಿದ್ದರ ಬಗ್ಗೆ ಆರೋಪಿ ಶಂಕರ್ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆಗೆ ಉಪಯೋಗಿಸಿದ ವಸ್ತುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ'' ಎಂದು ಬಲರಾಂಪುರ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್ ಇಂದು ಮಾಧ್ಯಮಗೋಷ್ಟಿ ನಡೆಸಿ ಈ ಬಗ್ಗೆ ವಿಸ್ತೃತ ಮಾಹಿತಿ ನೀಡಿದರು.

''ಕೊಲೆಯ ತನಿಖೆ ಆರಂಭದಲ್ಲಿ ಸವಾಲಾಗಿತ್ತು. ಕೊಲೆ ಬಳಿಕ ಆರೋಪಿ ನಾಪತ್ತೆಯಾಗಿದ್ದ. ಮಹಿಳೆಯ ದೇಹದ ಭಾಗಗಳು ಅಲ್ಲಿಲ್ಲಿ ಪತ್ತೆಯಾಗಿದ್ದರಿಂದ ಪ್ರಕರಣ ತಲೆಬಿಸಿ ಮಾಡಿತ್ತು. ಹಾಗಾಗಿ 15 ಜಿಲ್ಲೆಗಳಲ್ಲಿ ದಾಖಲಾಗಿರುವ ಸುಮಾರು 500 ಮಹಿಳೆಯರ ನಾಪತ್ತೆಯಾದ ವ್ಯಕ್ತಿಗಳ ತನಿಖೆ ಮಾಡಲಾಗಿದೆ. ಆತನ ಪತ್ತೆಗಾಗಿ 300ಕ್ಕೂ ಅಧಿಕ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿಲಾಯಿತು. ಆಗ್ರಾಹ್ವಾ ಛೇದಕದಲ್ಲಿ ಅಳವಡಿಸಲಾದ ಸಿಸಿಟಿವಿ ದೃಶ್ಯಾವಳಿಯಲ್ಲಿ, ಆಗಸ್ಟ್ 6 ರಂದು ಬೆಳಗ್ಗೆ ವ್ಯಕ್ತಿಯೊಬ್ಬರು ಮೋಟಾರ್ ಸೈಕಲ್‌ನಲ್ಲಿ ಬಿಳಿ ಗೋಣಿಚೀಲವನ್ನು ಹೊತ್ತುಕೊಂಡು ಹೋಗುತ್ತಿರುವುದು ಕಂಡುಬಂದಿತು. ನಂತರ ದ್ವಿಚಕ್ರವಾಹನ ನಂಬರ್ ಆಧರಿಸಿ ಮನೆ ಪತ್ತೆ ಮಾಡಿದೆವು. ಪೊಲೀಸರು ಬೈಕ್ ಸವಾರನ ಮನೆಗೆ ತಲುಪಿದಾಗ ಬೀಗ ಹಾಕಿರುವುದು ಕಂಡು ಬಂದಿತ್ತು. ಹಲವು ದಿನಗಳಿಂದ ಮನೆಗೆ ಬೀಗ ಹಾಕಲಾಗಿದ್ದು, ಮನೆಯೊಳಗಿಂದ ದುರ್ವಾಸನೆ ಬರುತ್ತಿರುವುದು ನೆರೆಹೊರೆಯವರು ಗಮನಿಸಿದ್ದರು. ಪತಿ ಮೇಲೆ ಅನುಮಾನ ಮೂಡಿದ್ದರಿಂದ ಆತನ ಮೇಲೆ ನಿಗಾ ಇಡಲಾಗಿತ್ತು. ಮೊಬೈಲ್ ಕಣ್ಗಾವಲಿನ ಸಹಾಯದಿಂದ ಆರೋಪಿ ಶಂಕರ್ ದಯಾಳ್ ಗುಪ್ತಾನನ್ನು ಬಂಧಿಸಲಾಗಿದ್ದು, ಸ್ಥಳದಲ್ಲಿಯೇ ಕೊಲೆಗೆ ಬಳಸಿದ ಚಾಕು ಮತ್ತು ಮಹಿಳೆಯ ದೇಹವನ್ನು ತುಂಡರಿಸಲು ಬಳಸಿದ್ದ ಕಟರ್ ಯಂತ್ರ, ಮೊಬೈಲ್, ಕಬ್ಬಿಣದ ಗರಗಸ, ಮೋಟಾರ್ ಸೈಕಲ್ ವಶಪಡಿಸಿಕೊಳ್ಳಲಾಗಿದೆ. ಆತನನ್ನು ಕರೆತಂದು ವಿಚಾರಣೆ ಮಾಡಿದಾಗ ತಾನೇ ಈ ಕೃತ್ಯ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಅಲ್ಲದೇ ಹಾಲಿವುಡ್ ಸಿನಿಮಾ ನೋಡಿ ಮೃತದೇಹವನ್ನು ವಿಲೇವಾರಿ ಮಾಡುವ ಆಲೋಚನೆ ಬಂತು'' ಎಂದು ಸಹ ತನಿಖೆ ವೇಳೆ ಬಾಯ್ಬಿಟ್ಟಿರುವುದಾಗಿ ಎಸ್​ಪಿ ತಿಳಿಸಿದ್ದಾರೆ.

ಇದನ್ನೂ ಓದಿ: ಬೆಂಗಳೂರು: ಪ್ರೀತಿಸಿ ಮದುವೆಯಾಗಿದ್ದ ಪತ್ನಿಯನ್ನೇ ಕೊಂದ ಪತಿ - Husband Kills Wife

ETV Bharat Logo

Copyright © 2025 Ushodaya Enterprises Pvt. Ltd., All Rights Reserved.